ವಿಜಯಪುರದಲ್ಲಿ ಮಸೀದಿಗಳಾದ ದೇವಸ್ಥಾನಗಳು‌: ಉತ್ಖನನ ನಡೆಸುವಂತೆ ಪುರಾತತ್ವ ಇಲಾಖೆಗೆ ಯತ್ನಾಳ್ ಪತ್ರ

ಬಾಬ್ರಿ ಮಸೀದಿಯಂತೆ ಭಟ್ಕಳದ ಚಿನ್ನದ ಪಳ್ಳಿ ನಿರ್ನಾಮವಾಗಲಿದೆ ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಜಯಪುರದಲ್ಲೂ ಹಲವು ದೇವಸ್ಥಾನಗಳನ್ನು ಹೊಡೆದು ಮಸೀದಿಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಉತ್ಖನನ ನಡೆಸುವಂತೆ ಪುರಾತತ್ವ ಇಲಾಖೆಗೆ ಪತ್ರ ಬರೆದಿದ್ದಾಗಿ ಹೇಳಿದರು.

ವಿಜಯಪುರದಲ್ಲಿ ಮಸೀದಿಗಳಾದ ದೇವಸ್ಥಾನಗಳು‌: ಉತ್ಖನನ ನಡೆಸುವಂತೆ ಪುರಾತತ್ವ ಇಲಾಖೆಗೆ ಯತ್ನಾಳ್ ಪತ್ರ
ಬಸನಗೌಡ ಪಾಟೀಲ್ ಯತ್ನಾಳ್
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: Rakesh Nayak Manchi

Updated on: Jan 14, 2024 | 4:15 PM

ವಿಜಯಪುರ, ಜ.14: ಬಾಬ್ರಿ ಮಸೀದಿಯಂತೆ ಭಟ್ಕಳದ ಚಿನ್ನದ ಪಳ್ಳಿ ನಿರ್ನಾಮವಾಗಲಿದೆ ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ (Ananth Kumar Hegde) ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal), ಅನಂತ್​ಕುಮಾರ್ ಹೆಗಡೆ ಏನು ಹೇಳಿದ್ದಾರೆಂದು ನಾನು ನೋಡಿಲ್ಲ. ಆದರೆ, ದೇಶದಲ್ಲಿ ಹಿಂದೂ ದೇವಸ್ಥಾನಗಳನ್ನು ನಾಶಪಡಿಸಿ ಮಸೀದಿ ನಿರ್ಮಿಸಿದ್ದಾರೆ. ಹಿಂದೂಗಳ ವಿರುದ್ಧ ಗೆದ್ದಿದ್ದೇವೆ ಎಂಬ ಸಂಕೇತ ನೀಡಲು ಮತಾಂಧರು ಹೀಗೆ ಮಾಡಿದ್ದಾರೆ. ದೇವಸ್ಥಾನಗಳಲ್ಲಿದ್ದ ವಜ್ರ, ವೈಢೂರ್ಯ, ಸಂಪತ್ತನ್ನು ಕೊಳ್ಳೆ ಹೊಡೆದರು ಎಂದರು.

ಅಯೋಧ್ಯ ರಾಮ ಮಂದಿರ ಕಾಶಿ ವಿಶ್ವನಾಥ ದೇವಸ್ಥಾನ ಮುತುರಾಜ ಕೃಷ್ಣ ದೇವಸ್ಥಾನ ಮುಕ್ತಮಾಡುವ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ. ಸದ್ಯ ಶ್ರೀ ರಾಮ ಮಂದಿರ ಉದ್ಘಾಟನೆಯ ಮೂಲಕ ಮುಕ್ತವಾಗುತ್ತಿದೆ. ಕಾನೂನಿನಲ್ಲಿ ನಮಗೆ ವಿಶ್ವಾಸವಿದ್ದು ಕಾಶಿ ವಿಶ್ವನಾಥ ಮಥುರಾ ದೇವಸ್ಥಾನವೂ ಮುಕ್ತವಾಗಲಿದೆ ಎಂದರು.

ಕಾಶಿ ವಿಶ್ವನಾಥ ಮಥುರ ದೇವಸ್ಥಾನದತ್ತ ನಮ್ಮ ಲಕ್ಷ್ಯ ಇದೆ. ವಿಜಯಪುರ ಜಿಲ್ಲೆಯಲ್ಲಿಯೂ ಸಹ ಹಿಂದೂ ದೇವಾಲಯಗಳನ್ನು ನಾಶ ಮಾಡಿ ಮಸೀದಿಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗಿದೆ. ಇಲಾಖೆ ಗಮನಹರಿಸಿದಿದ್ದರೆ ನ್ಯಾಯಾಲಯ ಮೊರೆ ಹೋಗುತ್ತೇವೆ. ಕುತುಬ್ ಮಿನಾರ್ ಸರ್ವೆ ಹಾಗೂ ಉತ್ಖನನ ಮಾಡಬೇಕು ಎಂದು ಒತ್ತಾಯಿಸಿದರು.

ಹಿಂದುತ್ವ ಇಡೀ ಜಗತ್ತನ್ನೇ ಆಳುವ ಕಾಲ ದೂರವಿಲ್ಲ: ಯತ್ನಾಳ್

ಪ್ರಧಾನಿ ಮೋದಿಯವರ ಕಾರಣದಿಂದ ಇಸ್ಲಾಂ ರಾಷ್ಟ್ರಗಳಲ್ಲಿಯೂ ಕೂಡ ಭಾರತದ ಗೌರವ ಹೆಚ್ಚಳವಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಪ್ರಧಾನಿ ಮೋದಿಯವರು ಅಬುದಾಬಿಯಲ್ಲಿ ಲಕ್ಷ್ಮಿ ನಾರಾಯಣ ದೇವಸ್ಥಾನ ಉದ್ಘಾಟನೆ ಮಾಡಲಿದ್ದಾರೆ. ಹಿಂದುತ್ವ ಇಡೀ ಜಗತ್ತನ್ನೇ ಆಳುವ ಕಾಲ ದೂರವಿಲ್ಲ. ಮತಾಂಧ ಶಕ್ತಿಗಳ ಶಕ್ತಿ ಮುಗಿದಿದೆ, ಭಾರತವೇ ಜಗದ್ಗುರುವಾಗಲಿದೆ ಎಂದು ಯತ್ನಾಳ್ ಹೇಳಿದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ಅನಂತ್ ಕುಮಾರ್ ಹೆಗಡೆ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಅನಂತಕುಮಾರ್​ಗೆ ಕಿವಿಮಾತು ಹೇಳುವಷ್ಟು ದೊಡ್ಡವ ನಾನಲ್ಲ. ಅವರ ಸ್ಟೈಲ್ ಬೇರೆ ನನ್ನ ಸ್ಟೈಲೇ ಬೇರೆ. ನಾವೇನು ಹಾಗೆ ಮಾತನಾಡಲ್ಲ. ನಾನು ಗೌರವಾನ್ವಿತವಾಗಿ ಸನ್ಮಾನ್ಯ ಸಿದ್ದರಾಮಯ್ಯ ಎಂದೇ ಮಾತನಾಡುತ್ತೇನೆ ಎಂದರು.

ಇದನ್ನೂ ಓದಿ: ಅನಂತಕುಮಾರ್​ ಹೆಗಡೆ ಹೇಳಿಕೆಯಲ್ಲಿ ತಪ್ಪೇನು ಇಲ್ಲ -ಪ್ರಚೋದನಕಾರಿ ಹೇಳಿಕೆ ಸಮರ್ಥಿಸಿಕೊಂಡ ಕೆಎಸ್ ಈಶ್ವರಪ್ಪ

ಅಯೋಧ್ಯ ರಾಮಮಂದಿರ ಉದ್ಘಾಟನೆಗೆ ನನ್ನ ಕರೆದಿಲ್ಲ ಹೋಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಉದ್ಘಾಟನೆ ಕಾರ್ಯಕ್ರಮ ಮುಗಿದ ನಂತರ ಹೋಗುವುದಾಗಿಯೂ ಸಿದ್ದರಾಮಯ್ಯ ಹೇಳಿದ್ದಾರೆ. ಅಷ್ಟಾದರೂ ಶ್ರೀರಾಮಚಂದ್ರ ಅವರಿಗೆ ಸದ್ಭುದ್ದಿ ನೀಡಿದ್ದಾನೆ. ಅಯೋಧ್ಯೆಗೆ ಹೋದ ಬಳಿಕೆ ಅವರಿಗೂ ಗೊತ್ತಾಗುತ್ತದೆ. ಬಳಕೆ ನಾನು (ಸಿದ್ದರಾಮಯ್ಯ) ಶ್ರೀರಾಮನ ಭಕ್ತನಾಗುತ್ತೇನೆ ಎಂದು ಘೋಷಣೆ ಮಾಡಿದರು ಮಾಡಬಹುದು ಎಂದರು.

ಅನಂತ್ ಕುಮಾರ್ ಏಕವಚನದಲ್ಲಿ ಮಾತನಾಡಿರೋ ಕುರಿತು ಅವರ ಪಕ್ಷ ಹಾಗೆ ಕಳಿಸಿಕೊಡುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಈ ವಿಚಾರವಾಗಿ ಮಾತನಾಡಿದ ಯತ್ನಾಳ್, ನಮ್ಮ ಪಕ್ಷದಲ್ಲಿ ಯಾವುದೇ ಅಂತ ಸಂಸ್ಕೃತಿ ಇಲ್ಲ. ನಮ್ಮ ಪ್ರಧಾನಿ, ಗೃಹ ಸಚಿವರು, ರಾಷ್ಟ್ರೀಯ ಅಧ್ಯಕ್ಷರು ಯಾರು ಹಗುರವಾಗಿ ಮಾತನಾಡಲ್ಲ. ಸಂಸ್ಕೃತಿಗಾಗಿಯೇ ಹೋರಾಟ ಮಾಡುವುದು ಬಿಜೆಪಿ. ಕಾಂಗ್ರೆಸ್​ನಲ್ಲಿ ಸಂಸ್ಕೃತಿ ಇಲ್ಲವೆಂದು ಆರೋಪಿಸಿದರು.

ರಾಮಮಂದಿರ ಉದ್ಘಾಟನೆಗೆ ಹೋಗಬೇಕೆಂದರೆ ಹೈಕಮಾಂಡ್ ಅನುಮತಿ ಬೇಕೆಂದು ಸಚಿವರು ಹೇಳುತ್ತಾರೆ. ಇದು ನಾಚಿಕೆಗೇಡಿ ಹೇಳಿಕೆ. ಸಾಯಬೇಕಾದರೂ ಸೋನಿಯಾ ಗಾಂಧಿಯವರ ಅನುಮತಿ ಕೇಳುತ್ತಾರಾ? ಇದು ಕಾಂಗ್ರೆಸ್ ಗುಲಾಮಗಿರಿಯ ಸಂಕೇತ ಎಂದರು.

ಗಾಂಧಿ ಕುಟುಂಬಕ್ಕೆ ಸಂತರ ಶಾಪವಿದೆ

ಗಾಂಧಿ ಕುಟುಂಬಕ್ಕೆ ಸಂತರ ಶಾಪ ನಿಶ್ಚಿತವಾಗಿಯೂ ಇದೆ ಎಂದ ಯತ್ನಾಳ್, ಇವರು ಗಾಂಧಿ ಕುಟುಂಬವೇ ಅಲ್ಲ. ಇವರು ನಕಲಿ ಗಾಂಧಿ. ಇಂದಿರಾ ಗಾಂಧಿ ಫಿರೋಜ್ ಖಾನ್ ಎಂಬುವನನ್ನು ಮದುವೆಯಾದರೂ ಹಿಂದೂಗಳ ಮತ ಪಡೆಯಲು ಗಾಂಧಿ ಎಂದು ಸೇರಿಸಿಕೊಂಡಿದ್ದಾರೆ. ನೆಹರು ಇಸ್ಲಾಂ ಧರ್ಮದ ಸಮೀಪವಿದ್ದರು. ಬಳಿಕ ರಾಜೀವ್ ಗಾಂಧಿ ಕ್ರಿಶ್ಚಿಯನ್ ಧರ್ಮದ ಕಡೆ ವಾಲಿಸಿದರು. ಗಾಂಧಿ ಕುಟುಂಬ ಹೈಬ್ರಿಡ್ ತಳಿ ಇದ್ದಂತೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್​ಗೆ ಹಸ್ತದ ಗುರುತು ನೀಡಿದವರೇ ಜೈನ ಮುನಿಗಳು. ದೇಶದಲ್ಲಿ ಗೋ ಹತ್ಯೆಯನ್ನು ನಿಷೇಧ ಮಾಡುವುದಾಗಿ ಜೈನ ಮುನಿಗಳಿಗೆ ಇಂದಿರಾಗಾಂಧಿ ಆಶ್ವಾಸನೆ ಕೊಟ್ಟಿದ್ದರು. ಆದರೆ ಅದನ್ನ ಈಡೇರಿಸಲಿಲ್ಲ. ಗೋ ಹತ್ಯೆನಿಷೇಧಕ್ಕಾಗಿ ಜೈನ ಮುನಿಗಳು ದೆಹಲಿಯಲ್ಲಿ ಆಮರಣ ಉಪವಾಸ ಸತ್ಯಾಗ್ರಹ ನಡೆಸಿದರು. ಜೈನ ಮುನಿಗಳ ಮೇಲೆ ಗೋಲಿಬಾರ್ ನಡೆಸಲಾಯಿತು. ಜೇನುಮನಿಗಳು ಉಪವಾಸ ಅಮೃತ ಮಾಡಿ ಪ್ರಾಣ ಅರ್ಪಿಸಿದರು. ಈ ವೇಳೆ ಜೈನ ಮುನಿಗಳು ಗಾಂಧಿ ಕುಟುಂಬಕ್ಕೆ ಶಾಪ ಕೊಟ್ಟರು. ನಮ್ಮನ್ನ ಹೇಗೆ ರಸ್ತೆಯಲ್ಲಿ ಹೊಡೆದರೋ ಅದೇ ರೀತಿ ನಿಮ್ಮ ಕುಟುಂಬದವರಿಗೂ ಆಗಲಿ ಎಂದು ಶಾಪಕೊಟ್ಟರು ಎಂದರು.

ಇದನ್ನೂ ಓದಿ: ವಿವಾದಾತ್ಮಕ ಮಾತುಗಳ ಮೂಲಕ ಪುನಃ ಮುನ್ನೆಲೆಗೆ ಬಂದ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ

ಇಂದಿರಾ ಗಾಂಧಿ ಸಾವು ಹಾಗೂ ರಾಜೀವ್ ಗಾಂಧಿ ಸಾವು ಅದೇ ರೀತಿಯಾಯಿತು. ರಾಹುಲ್ ಗಾಂಧಿ ಮದುವೆ ಇಲ್ಲದೆ ಅಲೆಮಾರಿಯಾದಂತಾಗಿದೆ. ಇದೆಲ್ಲಾ ಶಾಪದ ಪರಿಣಾಮ. ಇದೇ ಶಾಪ ಕ್ರಮೇಣ ಗಾಂಧಿ ಕುಟುಂಬವನ್ನು ನಾಶ ಮಾಡುತ್ತಾ ಬರುತ್ತದೆ. ಭಾರತದಲ್ಲಿ ನಕಲಿ ಗಾಂಧಿ ಕುಟುಂಬ ನಾಶವಾಗುವುದು ನಿಶ್ಚಿತ, ಕಾಂಗ್ರೆಸ್ ಪಕ್ಷ ನಾಶವಾಗುವುದು ನಿಶ್ಚಿತ ಎಂದರು.

ರಾಹುಲ್ ಗಾಂಧಿ ನೇತೃತ್ವದ ನ್ಯಾಯಯಾತ್ರೆ ಬಗ್ಗೆ ಮಾತನಾಡಿದ ಯತ್ನಾಳ್, ಈ ದೇಶಕ್ಕೆ ಅನ್ಯಾಯ ಮಾಡಿದವರು, ದೇಶವನ್ನು ವಿಭಜನೆ ಮಾಡಿದವರು, ದೇಶವನ್ನು ತುಂಡರಿಸಿದವರು, ದೇಶ ವಿಭಜನೆಯಲ್ಲಿ ಕೋಟ್ಯಾಂತರ ಹಿಂದೂಗಳ ಕೊಲೆಗೆ ಕಾರಣವಾಗಿದ್ದೆ ಈ ನಕಲಿ ಗಾಂಧಿ ಕುಟುಂಬ. ಇವರು ಅಧಿಕಾರದಲ್ಲಿದ್ದಾಗ ದೇಶದ ಅಭಿವೃದ್ಧಿ ಆಗಲಿಲ್ಲ. ರಾಹುಲ್ ಗಾಂಧಿ ಸಾವಿರಾರು ಕಿಲೋಮೀಟರ್ ಪಾದಯಾತ್ರೆ ಮಾಡಿದರೇನು, ಆತನ ಒಂದು ಹೇಳಿಕೆ ಕಾಂಗ್ರೆಸ್​ ತನ್ನ ಮತಗಳನ್ನೇ ಕಳೆದುಕೊಳ್ಳುತ್ತದೆ ಎಂದರು.

ಮೋದಿ ಅವರ ಕಾಲದಲ್ಲಿ ಭಾರತ ಐದನೇ ಬಲಾಢ್ಯ ಆರ್ಥಿಕ ರಾಷ್ಟ್ರವಾಗಿದೆ. ಪಾರ್ಕ್ ಆಕ್ರಮಿತ ಕಾಶ್ಮೀರವನ್ನು ನಾವು ಹಿಂಪಡೆಯುತ್ತೇವೆ. ಲೋಪ ಲೋಕಸಭಾ ಚುನಾವಣೆಗೂ ಮುನ್ನವೇ ಪಿಓಕೆಯನ್ನು ಪಡೆಯುತ್ತೇವೆ. ಮುಂದಿನ ಹತ್ತು ವರ್ಷಗಳಲ್ಲಿ ಪಾಕಿಸ್ತಾನವು ಭಾರತದ ಭಾಗವಾಗಲಿದೆ. ಪಾಕಿಸ್ತಾನವು ಭಾರತದ ಒಂದು ರಾಜ್ಯವಾಗಲಿದೆ. ಹಿಂದೂ ಧರ್ಮ ಇಡೀ ಜಗತ್ತನ್ನೇ ಆಳುತ್ತದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್