Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನಿಂದ ಶಾಲೆ ಆರಂಭ: ಮೊದಲ ದಿನವೇ ಸೂಟ್ ಬೂಟ್ ಧರಿಸಿ ಸ್ಕೂಲ್​ಗೆ ಹೋದ ಡಿಕೆ ಶಿವಕುಮಾರ್

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸೂಟ್ ಬೂಟು ಧರಿಸಿ ತಾವು ಕಲಿತಿದ್ದ ಶಾಲೆಗೆ ಭೇಟಿ ನೀಡಿ ಗಮನಸೆಳೆದಿದ್ದಾರೆ. ಇನ್ನು ಈ ಬಗ್ಗೆ ಅವರು ಹೇಳಿದ್ದಿಷ್ಟು.

ಇಂದಿನಿಂದ ಶಾಲೆ ಆರಂಭ: ಮೊದಲ ದಿನವೇ ಸೂಟ್ ಬೂಟ್ ಧರಿಸಿ ಸ್ಕೂಲ್​ಗೆ ಹೋದ ಡಿಕೆ ಶಿವಕುಮಾರ್
Follow us
ರಮೇಶ್ ಬಿ. ಜವಳಗೇರಾ
|

Updated on:May 29, 2023 | 12:46 PM

ಬೆಂಗಳೂರು: 2023-24ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಇಂದಿನಿಂದ ಕರ್ನಾಟಕದಾದ್ಯಂತೆ ಶಾಲೆಗಳು ಪ್ರಾರಂಭವಾಗಿವೆ. ಇದರ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಅವರು ಸೂಟ್ ಬೂಟ್ ಧರಿಸಿ ಶಾಲೆಗೆ (School)ಭೇಟಿ ನೀಡಿ ಎಲ್ಲರ ಗಮನಸೆಳೆದಿದ್ದಾರೆ. ಹೌದು…ಇಂದು(ಮೇ 29) ಬೆಳಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ತಾವು ಓದಿದ್ದ ಬೆಂಗಳೂರಿನ(Bengaluru) ರಾಜಾಜಿನಗರದ ಎನ್​ಪಿಎಸ್​ ಶಾಲೆಗೆ ಭೇಟಿ ನೀಡಿದರು. ರಾಜಾಜಿನಗರದಲ್ಲಿರುವ ಎನ್​ಪಿಎಸ್​ ಶಾಲೆಯಲ್ಲೇ ಡಿಕೆ ಶಿವಕುಮಾರ್ ಹಾಗೂ ಅವರ ಮಕ್ಕಳು ವ್ಯಾಸಂಗ ಮಾಡಿದ್ದರು. ಇದೀಗ ತಾವು ಕಲಿತಿದ್ದ ಶಾಲೆಗೆ ಡಿಕೆ ಶಿವಕುಮಾರ್ ಸೌಹಾರ್ದವಾಗಿ ಭೇಟಿ ನೀಡಿದರು. ಇದೇ ವೇಳೆ ಎನ್​ಪಿಎಸ್​ ಶಾಲೆ ಸಂಸ್ಥಾಪಕ ಅಧ್ಯಕ್ಷ ಗೋಪಾಲಕೃಷ್ಣ ಜತೆ ಚರ್ಚಿಸಿದರು.

ಇದನ್ನೂ ಓದಿ: ಮಧ್ಯಾಹ್ನದ ಊಟದ ಜೊತೆಗೆ ಮಕ್ಕಳಿಗೆ ಸಿಹಿ ಹಂಚಿ; ಶಾಲೆಗಳ ಆರಂಭಕ್ಕೆ ಸರ್ಕಾರದಿಂದ ಮಾರ್ಗಸೂಚಿ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ನಾನು ಪ್ರೈಮರಿ ಶಾಲೆ ಓದಿದ್ದು ಇಲ್ಲೇ. ಭಾರತಕ್ಕೆ ಮೊದಲ ಅಟಾನಾಮಸ್ ಶಾಲೆ ಇದು. ದೊಡ್ಡ ಬೆಂಚ್ ಮಾರ್ಕ್ ಸ್ಥಾಪನೆ ಮಾಡಿದ ಶಾಲೆ ಇದು. ನನ್ನ ಮಕ್ಕಳು ಓದಿದ್ದು ಇದೇ ಶಾಲೆಯಲ್ಲಿ. ಈ ಶಾಲೆ ಬೆಲೆ ಏನು ಅಂತ ನನಗೆ ಗೊತ್ತಿದೆ ಎಂದು ತಾವು ವ್ಯಾಸಾಂಗ ಮಾಡಿದ ಶಾಲೆ ಬಗ್ಗೆ ಕೊಂಡಾಡಿದರು.

ನಮ್ಮ ಪ್ರಣಾಳಿಕೆಯಲ್ಲಿ ಪಂಚಾಯತಿ ಮಟ್ಟದಲ್ಲಿ ನವೋದಯ ಶಾಲೆ ಮಾದರಿಯಲ್ಲಿ ಶಾಲೆ ಸ್ಥಾಪನೆಗೆ ಭಾಷೆ ಕೊಟ್ಟಿದ್ದೇವೆ. ಇದನ್ನ ಯಾವ ರೀತಿ ಮಾಡಬೇಕು ಎಂದು ಗೋಪಾಲಕೃಷ್ಣ ಅವರ ಬಳಿ ಸಲಹೆ ನೀಡಲು ಚರ್ಚೆ ಮಾಡಿದ್ದೇನೆ. ನಾನು ಪರಮೇಶ್ವರ್, ಹೊಸ ಎಜುಕೇಶನ್ ಮಿನಿಸ್ಟರ್ ಇದರ ಬಗ್ಗೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಎಜುಕೇಶನ್ ಸಲುವಾಗಿ ವಲಸೆ ಬರುವ ಮಕ್ಕಳು ಜಾಸ್ತಿ ಇದ್ದಾರೆ. ಹೀಗಾಗಿ ಪಂಚಾಯಿತಿ ಮಟ್ಟದಲ್ಲಿ ಹಳ್ಳಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದು ನಮ್ಮ ಧ್ಯೇಯ. ರೈತರ ಮಕ್ಕಳಿಗೆ ಕ್ವಾಲಿಟಿ ಎಜುಕೇಶನ್ ಕೊಡುವುದು ನಮ್ಮ ಕನಸು. ಇದನ್ನ ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ ಎಂದು ಹೇಳಿದರು.

ಬೆಂಗಳೂರಿಗೆ ಹೊಸ ರೂಪ ಕೊಡೋ ಯೋಚನೆ ಇದೆ. ಉತ್ತಮ ಶಿಕ್ಷಣ ಕೊಡುವುದು ನಮ್ಮ ಧ್ಯೇಯ. ನಮ್ಮ ಬಳಿ ಐಡಿಯಾಗಳು ಇವೆ. 20 ವರ್ಷದ ಕನಸು ನಮ್ಮ ಪ್ರಣಾಳಿಕೆ ಇಟ್ಡಿದ್ದೇವೆ. ಅದನ್ನ ಸಾಕಾರಾ ಮಾಡೋ ರೀತಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

Published On - 12:23 pm, Mon, 29 May 23

ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?