ಶರದ್ ಪವಾರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಬಂಧಿತರಾದ ನಟಿ ಕೇತಕಿ ಚಿತಾಲೆಗೆ ಜಾಮೀನು; ನಾಳೆ ಜೈಲಿನಿಂದ ಬಿಡುಗಡೆ ಸಾಧ್ಯತೆ
ಕಳೆದ ತಿಂಗಳು ಬಂಧಿಸಲ್ಪಟ್ಟಿದ್ದ ಮರಾಠಿ ನಟ ಕೇತಕಿ ಚಿತಾಲೆ ಅವರಿಗೆ ಥಾಣೆ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ನಾಳೆ ಆಕೆ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.
ಎನ್‌ಸಿಪಿ (NCP) ಮುಖ್ಯಸ್ಥ ಶರದ್ ಪವಾರ್ (Sharad Pawar) ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಮತ್ತು ಆಕ್ಷೇಪಾರ್ಹ ಕವಿತೆ ಪೋಸ್ಟ್ ಮಾಡಿದ ಆರೋಪದಲ್ಲಿ ಕಳೆದ ತಿಂಗಳು ಬಂಧಿಸಲ್ಪಟ್ಟಿದ್ದ ಮರಾಠಿ ನಟಿ ಕೇತಕಿ ಚಿತಾಲೆ (Ketaki Chitale) ಅವರಿಗೆ ಥಾಣೆ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ನಾಳೆ ಆಕೆ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಕೇತಕಿ ತನ್ನ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಮರಾಠಿ ಕವನವನ್ನು ಪೋಸ್ಟ್ ಮಾಡಿದ್ದು ಅದರಲ್ಲಿ ಪವಾರ್ ಎಂಬ ಸರ್ ನೇಮ್ ಮತ್ತು 80 ವಯಸ್ಸು ಎಂಬುದನ್ನು ಉಲ್ಲೇಖಿಸಿದೆ. ಆದರೆ ಇದು 81 ವರ್ಷದ ಎನ್‌ಸಿಪಿ ನಾಯಕ ಅನುಭವಿಸುತ್ತಿರುವ ದೈಹಿಕ ಕಾಯಿಲೆಗಳನ್ನೂ ಲೇವಡಿ ಮಾಡಿದಂತಿದೆ. ಚಿತಾಲೆ ವಿರುದ್ಧ ಪುಣೆ, ಪಿಂಪ್ರಿ ಮತ್ತು ಥಾಣೆಯಲ್ಲಿ ಮೂರು ಎಫ್‌ಐಆರ್‌ಗಳು ದಾಖಲಾಗಿವೆ. ಥಾಣೆ ಕ್ರೈಂ ಬ್ರಾಂಚ್ ಆಕೆಯನ್ನು ಬಂಧಿಸಿತ್ತು. ಈಕೆ ವಿರುದ್ಧ ಥಾಣೆಯಲ್ಲಿ ಐಪಿಸಿ ಸೆಕ್ಷನ್ 500 (ಮಾನನಷ್ಟ), 501 (ಮಾನಹಾನಿಕರ ವಿಷಯವನ್ನು ಮುದ್ರಿಸುವುದು ) ಮತ್ತು 153A (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ.
ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಪೋಸ್ಟ್‌ಗಳಿಗೆ ಹೆಸರುವಾಸಿಯಾಗಿರುವ ಚಿತಾಲೆ ಅವರನ್ನು ನವಿ ಮುಂಬೈನಲ್ಲಿ ಬಂಧಿಸಲಾಗಿತ್ತು ಕಲಾಂಬೋಲಿ ಪೊಲೀಸ್ ಠಾಣೆಯಿಂದ ಆಕೆಯನ್ನು ಪೊಲೀಸ್ ವ್ಯಾನ್‌ನಲ್ಲಿ ಕರೆದೊಯ್ಯುತ್ತಿದ್ದಾಗ, ಎನ್‌ಸಿಪಿ ಕಾರ್ಯಕರ್ತರ ಗುಂಪೊಂದು ಅವಳನ್ನು ಸುತ್ತುವರೆದು ಅವಳ ಮೇಲೆ ಮಸಿ ಎರಚಲು ಪ್ರಯತ್ನಿಸಿತು. ಈ ವೇಳೆ ಚಿತಾಲೆ ಕೈ ಮತ್ತು ಬಟ್ಟೆಯ ಮೇಲೆ ಸ್ವಲ್ಪ ಶಾಯಿ ಬಿದ್ದಿತ್ತು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ