Maharashtra Political Crisis: ನನ್ನನ್ನು ಅಪಹರಿಸಿದ್ದರು, ನಾನು ಎಂದೂ ಠಾಕ್ರೆ ಪರ: ಶಿವಸೇನಾ ಶಾಸಕ
‘‘ ನನ್ನನ್ನು ಅಪಹರಿಸಿದ್ದರು, ನಾನು ಎಂದಿಗೂ ಸಿಎಂ ಉದ್ಧವ್ ಠಾಕ್ರೆಯ ಪರವಾಗಿಯೇ ಇದ್ದೇನೆ’’ಎಂದು ಶಿವಸೇನಾ ಶಾಸಕ ನಿತಿನ್ ದೇಶಮುಖ್ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾಗಿದೆ, 30ಕ್ಕೂ ಹೆಚ್ಚು ಶಾಸಕರು ಏಕನಾಥ್ ಶಿಂಧೆಯವರೊಂದಿಗೆ ಗುಪ್ತ ಸ್ಥಳದಲ್ಲಿದ್ದಾರೆ.
ಮುಂಬೈ: ‘‘ ನನ್ನನ್ನು ಅಪಹರಿಸಿದ್ದರು, ನಾನು ಎಂದಿಗೂ ಸಿಎಂ ಉದ್ಧವ್ ಠಾಕ್ರೆಯ ಪರವಾಗಿಯೇ ಇದ್ದೇನೆ’’ಎಂದು ಶಿವಸೇನಾ ಶಾಸಕ ನಿತಿನ್ ದೇಶಮುಖ್ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾಗಿದೆ, 30ಕ್ಕೂ ಹೆಚ್ಚು ಶಾಸಕರು ಏಕನಾಥ್ ಶಿಂಧೆಯವರೊಂದಿಗೆ ಗುಪ್ತ ಸ್ಥಳದಲ್ಲಿದ್ದಾರೆ. ಮಹಾರಾಷ್ಟ್ರ ಸರ್ಕಾರವೇ ಅಲುಗಾಡುತ್ತಿದೆ.
ಈ ಸಂದರ್ಭದಲ್ಲಿ ವಾಪಸಾದ ಶಾಸಕರೊಬ್ಬರ ಹೇಳಿಕೆಯು ಆಶ್ಚರ್ಯ ಮೂಡಿಸಿದ್ದರೂ ಕೊಂಚ ನೆಮ್ಮದಿಯನ್ನೂ ತಂದಿದೆ. ಬಂಡಾಯ ಶಾಸಕರೊಂದಿಗೆ ತೆರಳಿದ್ದಾರೆ ಎನ್ನಲಾಗಿದ್ದ ಶಾಸಕ ನಿತಿನ್ ದೇಶಮುಖ್ ವಾಪಸಾಗಿದ್ದಾರೆ. ತನ್ನನ್ನು ಅಪಹರಿಸಿ ಗುಜರಾತ್‌ಗೆ ಕರೆದೊಯ್ದಿದ್ರು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೇನೆ, ರಸ್ತೆಯಲ್ಲಿ ನಿಂತಿರುವಾಗ ನೂರಾರು ಪೊಲೀಸರು ಬಂದು ನಿಮಗೆ ಹೃದಯಾಘಾತವಾಗಿದೆ ಎಂದು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿ ತಪಾಸಣೆ ನಡೆಸಿದ್ದಾರೆ. ಆದರೆ ನನಗೆ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ ಎಂದರು.
ದೇಶಮುಖ್ ಅವರ ಪತ್ನಿ ಪೊಲೀಸ್ ಠಾಣೆಗೆ ತೆರಳಿ ಪತಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ದೇಶಮುಖ್ ಅವರು, ಬಾಲಾಪುರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ದೇಶಮುಖ್ ಅವರ ಪತ್ನಿ ಅಲೋಕ ಪೊಲೀಸ್ ಠಾಣೆಗೆ ದೂರು ನೀಡಿ, ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿರುವ ಕುರಿತು ಕೂಡ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವರಾಗಿದ್ದ ಏಕನಾಥ್ ಶಿಂಧೆ ಬಂಡಾಯವೆದ್ದಿದ್ದು, ವಿಧಾನ ಪರಿಷತ್ ಮತ್ತು ರಾಜ್ಯ ಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲೇ ಹತ್ತಕ್ಕೂ ಹೆಚ್ಚು ಸೇನಾ ಶಾಸಕರೊಂದಿಗೆ ಸೂರತ್‌ಗೆ ತೆರಳಿದ್ದರು. ಅಲ್ಲದೇ 26ಕ್ಕೂ ಹೆಚ್ಚು ಶಾಸಕರು ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು, ಶಿಂಧೆ ಜೊತೆ ಗುಜರಾತ್‌ಗೆ ತೆರಳಿದ್ದರು. ಇದೀಗ ರೆಬೆಲ್ ಶಾಸಕರನ್ನ ಸೂರತ್‌ನಿಂದ ಅಸ್ಸಾಂಗೆ ಸ್ಥಳಾಂತರಿಸಲಾಗಿದೆ.
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆ ನಂತರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಆಘಾಡಿ ಸರ್ಕಾರ ಇಕ್ಕಟ್ಟಿಕ್ಕೆ ಸಿಲುಕಿದೆ. ಶಾಸಕರ ಮನವೊಲಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ.
ಉದ್ಧವ್ ಠಾಕ್ರೆ ಶಿವಸೇನಾ ಶಾಸಕರ ಸಭೆ ಕರೆಯಲಾಗಿತ್ತು, ಠಾಕ್ರೆ ನಿವಾಸದಲ್ಲಿ ನಡೆದ ಸಭೆಯ ಬಳಿಕ ಅವರು ಶಾಸಕರನ್ನು ಮುಂಬೈನ ಖಾಸಗಿ ಹೋಟೆಲ್‌ಗೆ ಕಳುಹಿಸಲಾಗಿತ್ತು. ಮತ್ತೆ ಯಾವುದೇ ಶಾಸಕರು ಏಕನಾಥ ಶಿಂಧೆ ಗುಂಪು ಸೇರದಂತೆ ಜಾಗ್ರತೆ ವಹಿಸಲಾಗಿದೆ ಎನ್ನಲಾಗಿದೆ.
ಶಿವಸೇನೆಯ ನಾಯಕ ಏಕನಾಥ ಶಿಂಧೆ ನೇತೃತ್ವದಲ್ಲಿ ಶಿವಸೇನೆಯ ಶಾಸಕರು, 7 ಪಕ್ಷೇತರ ಶಾಸಕರು ಬಂಡಾಯ ಎದ್ದಿದ್ದಾರೆ. ಗುಜರಾತ್‌ನ ಸೂರತ್‌ನ ಹೋಟೆಲ್‌ನಲ್ಲಿದ್ದ ಎಲ್ಲರೂ ಬುಧವಾರ ಬೆಳಗ್ಗೆ ಗುವಾಹಟಿ ತಲುಪಿದ್ದಾರೆ.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:28 pm, Wed, 22 June 22