MVA Crisis: ಸಿಎಂ ಅಧಿಕೃತ ನಿವಾಸ ತೊರೆದ ಉದ್ಧವ್ ಠಾಕ್ರೆ, ಶಿವಸೈನಿಕರಿಂದ ಅಭೂತಪೂರ್ವ ಬೆಂಬಲ

ಠಾಕ್ರೆ ಅವರು ರಾಜೀನಾಮೆ ನೀಡುವುದಾಗಿ ಪ್ರಸ್ತಾಪಿಸಿದರೂ ಮಹಾವಿಕಾಸ್ ಅಘಾಡಿ ಸರ್ಕಾರದ ಇತರ ಮೈತ್ರಿ ಪಕ್ಷಗಳಾದ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ ನಾಯಕತು ಒಪ್ಪಿಕೊಂಡಿಲ್ಲ.

MVA Crisis: ಸಿಎಂ ಅಧಿಕೃತ ನಿವಾಸ ತೊರೆದ ಉದ್ಧವ್ ಠಾಕ್ರೆ, ಶಿವಸೈನಿಕರಿಂದ ಅಭೂತಪೂರ್ವ ಬೆಂಬಲ
ಉದ್ಧವ್ ಠಾಕ್ರೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 23, 2022 | 7:31 AM

ಮುಂಬೈ: ಮಹಾರಾಷ್ಟ್ರ ರಾಜಕಾರಣದ ಬಿಕ್ಕಟ್ಟು (Maharashtra Political Crisis) ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಏಕನಾಥ ಶಿಂಧೆ (Eknath Shinde) ನೇತೃತ್ವದಲ್ಲಿ ಬಂಡಾಯವೆದ್ದಿರುವ ಸುಮಾರು 20 ಶಾಸಕರು ಗುಜರಾತ್​ನ ಅಹಮದಾಬಾದ್​ ಮತ್ತು ಗುಜರಾತ್​ಗೆ ತೆರಳಿದ ನಂತರ ಹಲವು ನಾಟಕೀಯ ಬೆಳವಣಿಗೆಗಳು ನಡೆದಿವೆ. ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ (Maha Vikas Aghadi) ಸರ್ಕಾರದಲ್ಲಿ ಬಿರುಕು ಬಿಟ್ಟ ನಂತರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (CM Uddhav Thackeray) ಅಧಿಕೃತ ನಿವಾಸ ‘ವರ್ಷಾ’ ತೊರೆದು, ಖಾಸಗಿ ನಿವಾಸ ‘ಮಾತೋಶ್ರಿ’ಗೆ ತೆರಳಿದರು.

ಠಾಕ್ರೆ ಅವರು ರಾಜೀನಾಮೆ ನೀಡುವುದಾಗಿ ಪ್ರಸ್ತಾಪಿಸಿದರೂ ಮಹಾವಿಕಾಸ್ ಅಘಾಡಿ ಸರ್ಕಾರದ ಇತರ ಮೈತ್ರಿ ಪಕ್ಷಗಳಾದ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ನ ಇತರ ನಾಯಕರು ‘ಸರ್ಕಾರಕ್ಕೆ ಯಾವುದೇ ಆತಂಕವಿಲ್ಲ. ಹೀಗಾಗಿ ರಾಜೀನಾಮೆ ಕೊಡುವ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿವೆ. ಉದ್ಧವ್ ಠಾಕ್ರೆ ಅವರು ತಮ್ಮ ಪತ್ನಿ ರಶ್ಮಿ, ಮಕ್ಕಳಾದ ಆದಿತ್ಯ ಠಾಕ್ರೆ (ಪರಿಸರ, ಪ್ರವಾಸೋದ್ಯಮ ಮತ್ತು ಶಿಷ್ಟಾಚಾರ ಖಾತೆ ಸಚಿವ) ಹಾಗೂ ತೇಜಸ್ (ಪರಿಸರವಾದಿ ಮತ್ತು ಸಂಶೋಧಕ) ಅವರೊಂದಿಗೆ ಅಧಿಕೃತ ನಿವಾಸ ತೊರೆದರು.

ಠಾಕ್ರೆ ಅವರು ಅಧಿಕೃತ ನಿವಾಸದಿಂದ ಹೊರಬರುತ್ತಿರುತ್ತಿದ್ದಂತೆ ಶಿವಸೇನೆ ಕಾರ್ಯಕರ್ತರು ಕಣ್ಣೀರಿಡುತ್ತಾ ತಮ್ಮ ನಾಯಕನ ಪರವಾಗಿ ಘೋಷಣೆಗಳನ್ನು ಕೂಗಿದರು. ಬಂಡುಕೋರ ನಾಯಕ ಏಕನಾಥ ಶಿಂಧೆ ಶೀಘ್ರ ಹಿಂದಿರುಗಬೇಕೆಂದು ವಿನಂತಿಸುತ್ತಿದ್ದುದೂ ಕಂಡುಬಂತು. ಒಂದೇ ಸಮನೆ ಸುರಿಯುತ್ತಿದ್ದ ಮಳೆಯ ನಡುವೆಯೂ ಶಿವಸೈನಿಕರು ರಸ್ತೆ ಬದಿ ನಿಂತು ಘೋಷಣೆಗಳನ್ನು ಕೂಗುತ್ತಲೇ ಇದ್ದರು. ಠಾಕ್ರೆ ಅವರ ವಾಹನ ಖಾಸಗಿ ನಿವಾಸ ‘ಮಾತೋಶ್ರೀ’ಗೆ ತಲುಪಿದಾಗಲೂ ಅವರಿಗೆ ಗೌರವದ ಸ್ವಾಗತ ಕೋರಲಾಯಿತು. ಶಿವಸೇನೆಯ ವಕ್ತಾರ ಮನಿಶಾ ಕಾಯಂಡೆ, ‘ಅದೊಂದು ಭಾವುಕ ಕ್ಷಣ’ ಎಂದು ಹೇಳಿದರು.

ಇದನ್ನೂ ಓದಿ
Image
MVA crisis ಎನ್​​ಸಿಪಿ, ಕಾಂಗ್ರೆಸ್ ಜತೆಗಿನ ಅಸಹಜ ಮೈತ್ರಿಯಿಂದ ಹೊರಬನ್ನಿ ಎಂದು ಶಿವಸೇನಾಗೆ ಶಿಂಧೆ ಸಲಹೆ; ಮಾತೋಶ್ರೀಗೆ ಉದ್ಧವ್ ಠಾಕ್ರೆ ಶಿಫ್ಟ್
Image
Maharashtra Political Crisis ನೀವು ರಾಜೀನಾಮೆ ನೀಡಿ ಎಂದು ಹೇಳಿದರೆ ಸಿಎಂ ಸ್ಥಾನ ತ್ಯಜಿಸಲು ಸಿದ್ಧ: ಉದ್ಧವ್ ಠಾಕ್ರೆ
Image
ಮಧ್ಯಪ್ರದೇಶ, ಕರ್ನಾಟಕದ ಬಳಿಕ ಮಹಾರಾಷ್ಟ್ರದಲ್ಲಿ ಅಪರೇಷನ್ ಕಮಲ; ಶಿವಸೇನಾ ವಿರುದ್ಧ ಬಂಡಾಯ ಎದ್ದ 22 ಶಾಸಕರು
Image
Maharashtra Political Crisis: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಶಿವಸೇನೆ ಶಾಸಕರ ಬಂಡಾಯ

ನೆರೆದಿದ್ದ ಸಾವಿರಾರು ಕಾರ್ಯಕರ್ತರು ‘ಉದ್ಧವ್ ಸಾಹೇಬ್ ತುಮ್ ಆಗೇ ಬಡೋ, ಹಮ್ ತುಮ್ಹಾರೆ ಸಾಥ್ ಹೇ’ (ಉದ್ಧವ್ ಠಾಕ್ರೆ ನೀನು ಮುಂದೆ ಹೋಗು, ನಾವು ನಿನ್ನೊಂದಿಗೆ ಇದ್ದೇವೆ) ಎಂದು ಕೂಗುತ್ತಾ ಹೂ ಪಕಳೆಗಳನ್ನು ಎಸೆಯುತ್ತಿದ್ದರು. ದಾರಿ ಮಧ್ಯೆ ಕಾರು ನಿಲ್ಲಿಸಿ, ಕೆಳಗಿಳಿದ ಉದ್ಧವ್ ಠಾಕ್ರೆ ಕೇಸರಿ ಬಾವುಟ ಬೀಸುತ್ತಿದ್ದ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದರು.

ನೆರೆದಿದ್ದ ಜನಸಂದಣಿ ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಕಷ್ಟಪಡಬೇಕಾಯಿತು. ಮುಖ್ಯಮಂತ್ರಿ ಸರ್ಕಾರಿ ನಿವಾಸ ‘ವರ್ಷಾ’ದಿಂದ ಖಾಸಗಿ ನಿವಾಸ ‘ಮಾತೋಶ್ರೀ’ ಹೆಚ್ಚೇನೂ ದೂರವಿಲ್ಲ. ಆದರೆ ಉದ್ಧವ್ ಠಾಕ್ರೆ ಅವರ ವಾಹನಗಳಿಗೆ ಈ ಅಂತರ ಕ್ರಮಿಸಲು ಹಲವು ಗಂಟೆಗಳೇ ಬೇಕಾಯಿತು.

ಇದು ಶಿವಸೇನೆಯ ಶಕ್ತಿಪ್ರದರ್ಶನದೊಂದಿಗೆ ಉದ್ಧವ್ ಠಾಕ್ರೆ ಅವರ ಬಗ್ಗೆ ಶಿವಸೈನಿಕರಿಗೆ ಇರುವ ಪ್ರೀತಿಯ ಪ್ರದರ್ಶನವೂ ಆಗಿತ್ತು. ಠಾಕ್ರೆ ಅವರು ವಾಹನದಿಂದ ಇಳಿಯುತ್ತಿದ್ದಂತೆ ‘ರಾಜೀನಾಮೆ ಕೊಡಬೇಡಿ, ಸಂಚುಕೋರರನ್ನು ಸುಮ್ಮನೆ ಬಿಡಬೇಡಿ’ ಎಂದು ಆಗ್ರಹಿಸಿದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:31 am, Thu, 23 June 22