ಬೆಂಗಳೂರು, ಜನವರಿ 12: ಸ್ಟಾಂಡಿಂಗ್ ಕಮಿಟಿ ಸಭೆ ವಿಷಯ ಬಹಿರಂಗ ಪಡಿಸುವಂತಿಲ್ಲ. ಆದರೆ ನೀರಿನ ವಿಚಾರದಲ್ಲಿ ಮುಚ್ಚಿಡುವುದಕ್ಕೆ ಆಗಲ್ಲ. ಮೇಕೆದಾಟು ಯೋಜನೆಗೆ ಅವಕಾಶ ಕೊಡಿ ಎಂದು ಸ್ಟಾಂಡಿಂಗ್ ಕಮಿಟಿ ಮುಂದೆ ಹೇಳಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ (HD Deve Gowda)
ಹೇಳಿದ್ದಾರೆ. ನಗದರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿಯಲ್ಲಿ ಏತ ನೀರಾವರಿ ಮಾಡಬಹುದು ಎಂದಿದ್ದಾರೆ. ತಮಿಳುನಾಡಿನವರು ನೀರು ಎತ್ಕೊಂಡು ಹೋಗುತ್ತಾರೆ. ‘ಕಬಿನಿ, ಹಾರಂಗಿ, ಹೇಮಾವತಿ, ಕೆಆರ್ಎಸ್ನಿಂದ ಕೊಂಡೊಯ್ಯುತ್ತಾರೆ. ಆದರೆ ನಾವು ಯಾವ ಪ್ರಾಜೆಕ್ಟ್ ಮಾಡುವುದಕ್ಕೆ ಆಗಿಲ್ಲ ಎಂದು ಹೇಳಿದ್ದಾರೆ.
ಡ್ಯಾಂನ ಹಿಂಭಾಗದಲ್ಲಿ ಸುಮಾರು 20 ಪ್ರಾಜೆಕ್ಟ್ ಮಾಡಬಹುದೆ. ನೀತಿ ಯೋಗದ ಶಿಫಾರಸು ಇದೆ. 8000 ಕೋಟಿ ರೂ. ಹಣ ಬಿಡುಗಡೆ ಮಾಡಿ ಅದನ್ನ ಬಳಸುವುದಕ್ಕೆ ಅಡ್ಡಿ ಮಾಡಬೇಡಿ. ಯೋಜನೆಗಳನ್ನ ಕೈಗೆತ್ತಿಕೊಳ್ಳಿ. ನಾವು ಎಲ್ಲೂ ನೀರನ್ನ ಲಿಫ್ಟ್ ಮಾಡುತ್ತಿಲ್ಲ. ನಾವು ನೀರನ್ನ ಲಿಫ್ಟ್ ಮಾಡಿದರೆ ನೀರಾವರಿ ಮಾಡಬಹುದು. 10 ಜಿಲ್ಲೆಗಳಿಗೆ ಇದು ಅನುಕೂಲವಾಗಲಿದೆ. ನೀರನ್ನ ಲಿಫ್ಟ್ ಮಾಡುವುದಕ್ಕೆ ಯಾಕೆ ಅಡ್ಡಿ ಎಂದಿದ್ದಾರೆ.
ಇದನ್ನೂ ಓದಿ: ಯಾರದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿರುವ ಕಾಂಗ್ರೆಸ್: 3 ಡಿಸಿಎಂ ಬಗ್ಗೆ ಕುಮಾರಸ್ವಾಮಿ ಲೇವಡಿ
ಅಪ್ಪರ್ ಭದ್ರಾ ಬಗ್ಗೆಯೂ ನಾನು ಮಾತನಾಡಿದ್ದೇನೆ. ತುಮಕೂರಿನ ನಾಲ್ಕೈದು ತಾಲೂಕುಗಳಿಗೆ ನೀರಿಲ್ಲ. ಭದ್ರಾದಿಂದ ಅಲ್ಲಿಗೆ ನೀರನ್ನ ಕೊಡಬಹುದು. ಚಿತ್ರದುರ್ಗ ಜಿಲ್ಲೆಗೂ ನೀರು ಕೊಡಬಹುದು. ತಮಿಳುನಾಡು ಆನಂದವಾಗಿ ನೀರು ಪಡೆಯಬಹುದು. ಆದರೆ ನಮಗೆ ಮಾತ್ರ ಅಂತಹ ಅವಕಾಶವಿಲ್ಲ. ಕಾವೇರಿ ವಲಯದಲ್ಲಿ ತುಂಬಾ ತೊಂದರೆಯಾಗಿದೆ. ಕೃಷ್ಣಾ ಜಲಾನಯನ ವ್ಯಾಪ್ತಿಯಲ್ಲಿ ತೊಂದರೆಯಿಲ್ಲ. ನಾಲ್ಕು ತಿಂಗಳಲ್ಲಿ ಮಳೆ ಬರದಿದ್ದರೆ ಏನು ಮಾಡಬೇಕು ಎಂದರು.
ಸರ್ಕಾರ ಕೊಡುವ 2000 ಸಾಕಾಗಲ್ಲ. ನೀರು ಕೊಂಡುಕೊಳ್ಳುವುದಕ್ಕೆ ಸಾಕಾಗಲ್ಲ. ಗೊರೂರು ಡ್ಯಾಂ ನಮ್ಮ ಕಾಲದಲ್ಲಿ ಅಯ್ತು. ಆಗ ಕಾಂಗ್ರೆಸ್ ಕೂಡ ಬೆಂಬಲಿಸಿತ್ತು. ರಾಜ್ಯಕ್ಕಾದ ಅನ್ಯಾಯ ಸರಿಪಡಿಸುವ ಕೆಲಸ ಮಾಡಿದ್ದೆ. ನೆಹರು ಬಾಕ್ರಾ ನಂಗಲ್ ಡ್ಯಾಂ ಉದ್ಘಾಟಿಸಿದ್ದರು. ಆ ನೀರನ್ನ ನಾಲ್ಕು ರಾಜ್ಯ ಬಳಕೆ ಮಾಡಿರಲಿಲ್ಲ. ನಾನು ಪ್ರಧಾನಿಯಾದಾಗ ನಿರ್ಧಾರ ತೆಗೆದುಕೊಂಡೆ. ನಾಲ್ಕು ರಾಜ್ಯಗಳಿಗೆ ನೀರು ಹರಿಯಲು ಅವಕಾಶ ಮಾಡಿಕೊಟ್ಟೆ.
ಇದನ್ನೂ ಓದಿ: ಕೆಆರ್ಎಸ್ ಜಲಾಶಯಕ್ಕೆ ಕೇಂದ್ರ ಸಂಸದೀಯ ಸ್ಥಾಯಿ ಸಮಿತಿ ಭೇಟಿ: ಡ್ಯಾಂ ಸ್ಥಿತಿಗತಿ ಬಗ್ಗೆ ಪರಿಶೀಲನೆ
ಮೇಕೆದಾಟು ಯೋಜನೆಗೆ ಕ್ಲಿಯರ್ ಮಾಡಿ ಎಂದಿದ್ದೇವೆ. ತಮಿಳುನಾಡು ಪ್ರತಿ ಹಳ್ಳಿಗೆ ನೀರು ಕೊಡುತ್ತಿದೆ. ನಮ್ಮ ಹಣದಲ್ಲಿ ನಾವು ನಿರ್ಮಾಣ ಮಾಡುತ್ತೇವೆ. ಹೊಗೇನಕಲ್ನಿಂದ ಎಲ್ಲಾ ಕಡೆ ನೀರು ಕೊಟ್ಟಿದ್ದಾರೆ. ನಾವೇನು ಪಾಪ ಮಾಡಿದ್ದೇವೆ. ಕುಡಿಯುವ ನೀರಿಗೆ ಯಾಕೆ ಅಡ್ಡಿ ಮಾಡುತ್ತೀರಾ. ಎಂದರು.
ಸಭೆಯಲ್ಲಿ ಒರಿಸ್ಸಾ, ಆಂಧ್ರ, ತೆಲಂಗಾಣ, ಕರ್ನಾಟಕದ ಬಗ್ಗೆ ಚರ್ಚೆ ಮಾಡಲಾಗಿದೆ. ನೀರಾವರಿ ವಿಚಾರದ ಬಗ್ಗೆ ಸಮಗ್ರ ಚರ್ಚೆ ಮಾಡಲಾಗಿದೆ. ಶಿವಕುಮಾರ್ ಉದಾಸಿ ಉತ್ತಮವಾಗಿ ಮಾತನಾಡುತ್ತಾರೆ. ಡಿಕೆ ಸುರೇಶ್ ಕೂಡ ನೀರಾವರಿ ಬಗ್ಗೆ ಮಾತನಾಡುತ್ತಾರೆ. ಆದರೆ ಇವತ್ತಿನ ಸಭೆಗೆ ಅವರು ಬಂದಿಲ್ಲ. ಬೇರೆ ಪಕ್ಷದವರು ಸಭೆಗೆ ಬಂದಿಲ್ಲ ಎಂದು ತಿಳಿಸಿದರು.
ಬೆಳೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಚರ್ಚೆಯಾಗಿದೆ. ಒಂದು ಭಾಗಕ್ಕೆ ನೀರು ಕೊಡಲು ಡಿಸಿಎಂ ಡಿಕೆ ಶಿವಕುಮಾರ್ ಆದೇಶವನ್ನ ಮಾಡಿದ್ದಾರೆ. ನಾನು ಅದಕ್ಕೆ ಅಪ್ರಿಶಿಯೇಟ್ ಮಾಡುತ್ತೇನೆ. ನೀರಿನ ವಿಚಾರದಲ್ಲಿ ನಮ್ಮೆಲ್ಲರ ಅಭಿಪ್ರಾಯ ಒಂದೇ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:14 pm, Fri, 12 January 24