ಬೆಂಗಳೂರು, (ಅಕ್ಟೋಬರ್ 01): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಬಿಜೆಪಿ, ಜೆಡಿಎಸ್ ದೋಸ್ತಿ (BJP And JDS alliance )ಭಾರಿ ಸದ್ದು ಮಾಡುತ್ತಿದೆ. ಆದ್ರೆ, ಆಯಾ ಪಕ್ಷದ ಕೆಲ ನಾಯಕರು ಈ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಬಿಜೆಪಿಯೊಂದಿಗೆ ದೋಸ್ತಿ ಬೆಳೆಸಿದ್ದಕ್ಕೆ ಅಸಮಾಧಾನ ಸ್ಫೋಟಗೊಂಡಿದೆ. ಅದರಲ್ಲೂ ಮುಖ್ಯವಾಗಿ ಮುಸ್ಲಿಂ ಸಮುದಾಯದ ನಾಯಕರು ದೇವೇಗೌಡ-ಕುಮಾರಸ್ವಾಮಿ ನಡೆಗೆ ಸಿಡಿದೆದ್ದಿದ್ದು, ಒಬ್ಬೊಬ್ಬರೇ ಪಕ್ಷ ತೊರೆಯುತ್ತಿದ್ದಾರೆ. ಇನ್ನು ಮುಖ್ಯವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂದ ಸಹ ಅಸಮಾಧಾನಗೊಂಡಿದ್ದು, ಇದೀಗ ಖುದ್ದು ದೇವೇಗೌಡ ಅವರು ಅಖಾಡಕ್ಕಿಳಿದು ಇಬ್ರಾಹಿಂ ಮುಸಿಸು ಶಮನಕ್ಕೆ ಮುಂದಾಗಿದ್ದಾರೆ.
ಸಿ.ಎಂ. ಇಬ್ರಾಹಿ. ಅವರು ಬಿಜೆಪಿಯ ತತ್ವ ಸಿದ್ಧಾಂತರಗಳನ್ನು ಮೊದಲಿನಿಂದಲೂ ವಿರೋಧಿಸಿಕೊಂಡು ಬಂದುವರು. ಆದ್ರೆ, ಇದೀಗ ಹೆಚ್ಡಿ ಕುಮಾರಸ್ವಾಮಿ ಹಾಗೂ ಹೆಚ್ಡಿ ದೇವೇಗೌಡ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು, ಇಬ್ರಾಹಿಂ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ, ಇಬ್ರಾಹಿಂ ಅವರಿಗೆ ಕರೆ ಮಾಡಿ ಅಸಮಾಧಾನ ಶಮನಗೊಳಿಸಲು ಯತ್ನಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಜತೆ ಜೆಡಿಎಸ್ ಮೈತ್ರಿಗೆ ಬಹುಪರಾಕ್, ತಮ್ಮದೇ ಮುಸ್ಲಿಂ ನಾಯಕರಿಗೆ ಟಾಂಗ್ ಕೊಟ್ಟ ಫಾರೂಕ್
ಇಂದು(ಅ,01) ಇಬ್ರಾಹಿಂಗೆ ದೂರವಾಣಿ ಕರೆ ಮಾಡಿದ ದೇವೇಗೌಡ್ರು, ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿ ಹೆಚ್ಡಿ ಕುಮಾರಸ್ವಾಮಿ ತೋಟದ ಮನೆಯಲ್ಲಿ ನಡೆಯುವ ಸಭೆಗೆ ಬರುವಂತೆ ಆಹ್ವಾನ ಆಹ್ವಾನ ನೀಡಿದ್ದಾರೆ. ಆದ್ರೆ, ಇಬ್ರಾಹಿಂ ಅಸಮಾಧಾನಿತರ ಸಭೆಗೆ ಬರಲು ನಿರಾಕರಿಸಿದ್ದು, ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ಮಾತಾಡುತ್ತೇನೆ ಎಂದಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಇಬ್ರಾಹಿಂ ಜೆಡಿಎಸ್ ತೊರೆಯುವ ಸಾಧ್ಯತೆಗಳು ಹೆಚ್ಚಿವೆ.
ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿರುವ ಹೆಚ್ಡಿ ಕುಮಾರಸ್ವಾಮಿ ತೋಟದ ಮನೆಯಲ್ಲಿ ಅಸಮಾಧಾನಿತ ಶಾಸಕರುಗಳ ಸಭೆ ನಡೆದಿದೆ. ಈ ಸಭೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಮುನಿಸಿಕೊಂಡಿದ್ದ ಶಾಸಕರು ಭಾಗಿಯಾಗಿದ್ದಾರೆ. ಮೈತ್ರಿಗೆ ಬಹಿರಂಗ ವ್ಯಕ್ತಪಡಿಸಿದ್ದ ಶಾಸಕರಾದ ಶರಣಗೌಡ ಕಂದಕೂರು, ಕರೆಮ್ಮ ನಾಯಕ್ ಸೇರಿದಂತೆ ಇನ್ನು ಹಲವರು ಈ ಸಭೆಯಲ್ಲಿ ಭಾಗಿಯಾಗಿದ್ದು, ಅಸಮಾಧಾನಿತರನ್ನು ಕುಮಾರಸ್ವಾಮಿ ಸಮಧಾನ ಮಾಡುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.
ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ