ಚುನಾವಣಾ ವಿಚಾರದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ: ಬಿಜೆಪಿ ವಿರುದ್ಧ ಕಿಡಿಕಾರಿದ ಡಿ ಕೆ ಶಿವಕುಮಾರ್

| Updated By: ಗಂಗಾಧರ​ ಬ. ಸಾಬೋಜಿ

Updated on: Jan 20, 2023 | 12:38 PM

ಸಿಎಂ ಬೊಮ್ಮಾಯಿ‌ ನೇತೃತ್ವದಲ್ಲೇ ಚುನಾವಣೆ ಅಂದಿದ್ದರು. ಈಗ ನೋಡಿದ್ರೆ ಮೋದಿ ನೇತೃತ್ವದಲ್ಲಿ ಚುನಾವಣೆ ಅಂತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ಮಾಡಿದರು.

ಚುನಾವಣಾ ವಿಚಾರದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ: ಬಿಜೆಪಿ ವಿರುದ್ಧ ಕಿಡಿಕಾರಿದ ಡಿ ಕೆ ಶಿವಕುಮಾರ್
ಡಿ.ಕೆ.ಶಿವಕುಮಾರ್
Image Credit source: indiatoday.in
Follow us on

ಬೆಂಗಳೂರು: ಸಿಎಂ ಬೊಮ್ಮಾಯಿ‌ ನೇತೃತ್ವದಲ್ಲೇ ಚುನಾವಣೆ (election) ಅಂದಿದ್ದರು. ಈಗ ನೋಡಿದ್ರೆ ಮೋದಿ ನೇತೃತ್ವದಲ್ಲಿ ಚುನಾವಣೆ ಅಂತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ವಾಗ್ದಾಳಿ ಮಾಡಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯ ಇಲ್ಲ. ಹಾಗಾಗಿ ಬಹಳಷ್ಟು ಜನರು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ ಎಂದು ಹೇಳಿದರು. ಇನ್ನು ಪ್ರಜಾಧ್ವನಿ ಯಾತ್ರೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾನು ಸಿದ್ದರಾಮಯ್ಯ ಪ್ರಜಾಧ್ವನಿ ಯಾತ್ರೆಯಲ್ಲಿ ಬಹಳ ಬ್ಯುಸಿ ಆಗಿದ್ದೇವೆ. ಇವತ್ತು ನೆಲಮಂಗಲದ ಮುಖಂಡರು ಪಕ್ಷಕ್ಕೆ ಸೇರ್ಪಡೆ ಆಗ್ತಿದ್ದಾರೆ. ಬೆಮೆಲ್ ಕಾಂತರಾಜು ಅವರ ಬಹಳ ದೊಡ್ಡ ಬಳಗ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ನೆಲಮಂಗಲದಲ್ಲೂ ದೊಡ್ಡ ಸಭೆ ಇದೆ. ಪ್ರಮುಖರನ್ನೆಲ್ಲ ಜೆಡಿಎಸ್​ನಿಂದ ಕಾಂಗ್ರೆಸ್ ಸೇರಿಸಿಕೊಂಡಿದ್ದೇವೆ. ಹಾಲಿ ನೆಲಮಂಗಲ ಶಾಸಕರಿಂದ ಮುನಿಸಿಪಾಲಿಟಿ ಅಸ್ತಿತ್ವವನ್ನೇ ತೆಗೆದುಹಾಕಲು ಹೊರಟಿದ್ದರು. ರಾಜ್ಯದಲ್ಲಿ ಬದಲಾವಣೆ ಪರ್ವ ಶುರುವಾಗಿದೆ. ಅನೇಕರು ಬಿಜೆಪಿಯಿಂದ ಸೇರುತ್ತಿದ್ದಾರೆ. ಹಳಬರು, ಹೊಸಬರು ಅನ್ನೋ ಹಾಗಿಲ್ಲ ಎಲ್ಲರೂ ಒಟ್ಟಿಗೆ ಕೆಲಸ ಮಾಡ್ತಾರೆ ಎಂದು ತಿಳಿಸಿದರು.

ಬಿಜೆಪಿ ಪಾಳೆಯದಲ್ಲಿ ಸಂಚಲನ ಮೂಡಿಸಿದ ಡಿಕೆಶಿ ಹೇಳಿಕೆ

ಇನ್ನು ಹಾವೇರಿ ಬಿಜೆಪಿ ಪಾಳೆಯದಲ್ಲಿ ನಿನ್ನೆ(ಜ. 19) ಡಿ.ಕೆ.ಶಿವಕುಮಾರ್ ಹೇಳಿದ ಮಾತು ಸಂಚಲನ ಮೂಡಿಸಿದೆ. ಜಿಲ್ಲೆಯ ಬಿಜೆಪಿ ಹಾಲಿ ಎಂ.ಎಲ್​ಎಗಳೆ ಕಾಂಗ್ರೆಸ್ ಪಕ್ಷಕ್ಕೆ ಬರೊಕೆ ಸಜ್ಜಾಗಿದ್ದಾರೆ. ಸ್ಥಳ ಇಲ್ಲ ಅಂತಾ ನಾನೇ ಅವರನ್ನು ಪಕ್ಷಕ್ಕೆ ಕರ್ಕೊಂಡಿಲ್ಲ. ಇಬ್ಬರು ಬಿಜೆಪಿ ಶಾಸಕರ ಮೇಲೆ ಮೊದಲಿನಿಂದಲೂ ಜಿಲ್ಲೆಯ ಜನರಿಗೆ ಅನುಮಾನವಿದ್ದು, ಅದು ನಿನ್ನೆಯ ಡಿ.ಕೆ.ಶಿವಕುಮಾರ್​ ಮಾತಿನಿಂದ ಪುಷ್ಠಿ ಕೊಟ್ಟಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಅಬ್ಬರಿಸಿದ ಸಿದ್ದರಾಮಯ್ಯ; ಭಾಷಣದುದ್ದಕ್ಕೂ ಮೋದಿ, ಬಿಜೆಪಿ ವಿರುದ್ಧ ಟೀಕಾ ಪ್ರಹಾರ

ಒಳರಾಜಕೀಯಕ್ಕೆ ಬೇಸತ್ತು ಕಾಂಗ್ರೆಸ್ ಕದ ತಟ್ಟಿದ್ರಾ ನೆಹರು ಓಲೇಕಾರ

ಹಾವೇರಿ ಶಾಸಕ ನೆಹರು ಓಲೆಕಾರ ಹಾಗೂ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಹಾವೇರಿ ಶಾಸಕ ನೆಹರು ಓಲೆಕಾರಗೂ ಸಿಎಂಗೂ ಆಗಿ ಬರಲ್ಲ. ಹಾಗಾಗಿ ನೆಹರು ಓಲೆಕಾರಗೆ ವಿಶೇಷ ಅನುದಾನವನ್ನು ಕೊಟ್ಟಿಲ್ಲ. ಓಲೆಕಾರ ಕ್ಷೇತ್ರದಲ್ಲಿ ಬೇರೆಯವರಿಗೆ ಬಿಜೆಪಿ ಅಭ್ಯರ್ಥಿ ಮಾಡಲು ಸಿಎಂ ಬೊಮ್ಮಾಯಿ ಈಗಾಗಲೇ ಇಬ್ಬರು ಕಾರ್ಯಕರ್ತರನ್ನು ಫಿಲ್ಡ್​​ಗೆ ಬಿಟ್ಟಿದ್ದಾರೆ. ಸಿಎಂ ಒಳರಾಜಕೀಯಕ್ಕೆ ಬೇಸತ್ತು ನೆಹರು ಓಲೇಕಾರ ಕಾಂಗ್ರೆಸ್ ಕದ ತಟ್ಟಿದ್ರಾ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಮತ್ತೆ ಹೆಚ್ಚಳ; ‘ನಾ ನಾಯಕಿ ಸಮಾವೇಶ’ದಲ್ಲಿ ಸಿದ್ದರಾಮಯ್ಯ

ಇನ್ನೂ ಬ್ಯಾಡಗಿಯಲ್ಲಿ ಬಿಜೆಪಿ ಪಕ್ಷದಲ್ಲೇ ಇದ್ಕೊಂಡು ಗೆಲ್ಲೊದು ಕಷ್ಟ ಎಂದು ಬಿಜೆಪಿ ಹಾಲಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿಗೆ ಗೊತ್ತಾಗಿದೆ. ಹಾಗಾಗಿ ಕಾಂಗ್ರೆಸ್ ಹೊಗ್ತಾರೆ ಅಂತಾ ಜಿಲ್ಲೆಯಲ್ಲಿ ಮಾತು ಹರಿದಡ್ತಾ ಇತ್ತು. ವಿರೂಪಾಕ್ಷಪ್ಪ ಬಳ್ಳಾರಿಗೆ ಸಿಎಂ ಸಾಥ್ ಕೊಡತ್ತಿದ್ದಾರೆ ಆದ್ರೆ ಸ್ಥಳಿಯವಾಗಿ ಬಂಡಾಯ ಏಳುವ ಸಾಧ್ಯತೆ ಇದೆ. ಹಾಗಾಗಿ ಡಿ.ಕೆ.ಶಿವಕುಮಾರ್​ ಮಾತು ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾದಂತ್ತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 12:33 pm, Fri, 20 January 23