AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರೀಕ್ಷೆಗಳ ವಿಚಾರದಲ್ಲಿ ಡಾ.ಅಶ್ವತ್ಥ್ ಬಹಳ ಅನುಭವಸ್ಥರು; ಹೆಚ್​ಡಿ ಕುಮಾರಸ್ವಾಮಿ ಆರೋಪ

ಡಾ.ಅಶ್ವತ್ಥ್ ಸಾಕಷ್ಟು ಜನರಿಗೆ ಸರ್ಟಿಫಿಕೆಟ್ ಕೊಡಿಸಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ಸಾಕಷ್ಟು ಕೊಡಿಸಿದ್ದಾರೆ. ಕಾಂಗ್ರೆಸ್​ನವರು ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡಬೇಕಿತ್ತು.

ಪರೀಕ್ಷೆಗಳ ವಿಚಾರದಲ್ಲಿ ಡಾ.ಅಶ್ವತ್ಥ್ ಬಹಳ ಅನುಭವಸ್ಥರು; ಹೆಚ್​ಡಿ ಕುಮಾರಸ್ವಾಮಿ ಆರೋಪ
ಹೆಚ್​ಡಿ ಕುಮಾರಸ್ವಾಮಿ
TV9 Web
| Edited By: |

Updated on:May 05, 2022 | 12:27 PM

Share

ಬೆಂಗಳೂರು: ಪರೀಕ್ಷೆಗಳ ವಿಚಾರದಲ್ಲಿ ಡಾ.ಅಶ್ವತ್ಥ್ (Ashwath Narayanan) ಬಹಳ ಅನುಭವಸ್ಥರು ಅಂತ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಆರೋಪ ಮಾಡಿದ್ದಾರೆ. ಈ ಹಿಂದೆ ನರ್ಸ್​ಗಳಿಗೆ ಸರ್ಟಿಫಿಕೆಟ್ ವಿಚಾರದಲ್ಲಿ ಡಾ.ಅಶ್ವತ್ಥ್ ನಾರಾಯಣ ಹೆಸರು ಕೇಳಿಬಂದಿತ್ತು. ಡಾ.ಅಶ್ವತ್ಥ್ ಸಾಕಷ್ಟು ಜನರಿಗೆ ಸರ್ಟಿಫಿಕೆಟ್ ಕೊಡಿಸಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ಸಾಕಷ್ಟು ಕೊಡಿಸಿದ್ದಾರೆ. ಕಾಂಗ್ರೆಸ್​ನವರು ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡಬೇಕಿತ್ತು ಅಂತ ಇದೀಗ ಕುಮಾರಸ್ವಾಮಿ ಅಶ್ವಥ್ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.

ಎರಡೂ ರಾಷ್ಟ್ರೀಯ ಪಕ್ಷಗಳನ್ನು ನಾಡಿನ ಜನ ತಿರಸ್ಕರಿಸಬೇಕು. ಪ್ರಾದೇಶಿಕ ಹಿನ್ನೆಲೆ ಕನ್ನಡತನ ಇರುವ ಪಕ್ಷಕ್ಕೆ ಬೆಂಬಲ ನೀಡಿ ಎಂದು ಮಾತನಾಡಿದ ಕುಮಾರಸ್ವಾಮಿ, 2008ರಲ್ಲಿ ಅಂದಿನ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದೆವು. ಆಗ ಟನ್​​ಗಟ್ಟಲೇ ಮಾಹಿತಿ ಇಟ್ಟಿದ್ದೇನೆ. ಆಡಳಿತದ ಸರ್ಕಾರ ಎಲ್ಲ ವಿಚಾರದಲ್ಲೂ ಮೌನವಹಿಸಿದೆ. ಮೌನ ವಹಿಸಿವುದರ ಅರ್ಥವೇ ಪಾಲುದಾರರು ಎಂದರ್ಥ. ಅಶ್ವತ್ಥ್​ ಪರೀಕ್ಷೆ ನಡೆಸುವುದಲ್ಲಿ ಬಹಳ ಅನುಭವಸ್ಥರು. ಪರೀಕ್ಷೆ ಬರೆಯದ ನರ್ಸ್​​ಗಳಿಗೆ ಸರ್ಟಿಫಿಕೇಟ್ ಕೊಡಿಸಿದ್ದಾರೆ. ಪಿಎಸ್ಐ ನೇಮಕಾತಿಗೆ ಸಂಬಂಧ ಹಲವರು ಹಣ ನೀಡಿದ್ದಾರೆ. ಹಣ ನೀಡಿದ ಅಭ್ಯರ್ಥಿಗಳು ಈಗ ಜೈಲಿಗೆ ಹೋಗಬೇಕಾಗಿದೆ. ಈ ಹಿಂದೆ ಡ್ರಗ್ಸ್​​ನಲ್ಲಿ ಮಾಜಿ ಸಿಎಂ ಪ್ರಭಾವ ಇದೆ ಅಂದರು. ಅದು ಒಂದು ಹಂತಕ್ಕೆ ಬಂದು ನಿಂತಿ ಹೋಯ್ತು ಎಂದು ಹೇಳಿದರು.

ಜನರು ಗಮನಿಸುತ್ತಿದ್ದಾರೆ- ಕುಮಾರಸ್ವಾಮಿ: ಬಂಡೆಪ್ಪ ಕಾಶಂಪುರ್ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ಸಭೆ ಇದೆ. ಇದರ ಜೊತೆ ಪಕ್ಷದ ಪದಾಧಿಕಾರಿಗಳ ಸಭೆ ಕೂಡಾ ನಡೆಯುತ್ತದೆ. ಜಲಧಾರೆ ಕಾರ್ಯಕ್ರಮದ ಬಗ್ಗೆ ಇವತ್ತು ಚರ್ಚೆ ಮಾಡುತ್ತೇವೆ. ಜಲಧಾರೆ ವಾಹನಗಳು ಹೋದಲ್ಲಿ ಜನರ ಬೆಂಬಲ ಸಿಗುತ್ತಿದೆ. 13ನೇ ತಾರೀಖು ಜಲಾಧಾರೆ ಕಾರ್ಯಕ್ರಮ ವನ್ನು ನೆಲಮಂಗಲದಲ್ಲಿ ಮಾಡುತ್ತಿದ್ದೇವೆ. ಬೆಂಗಳೂರಿನ ಜನಕ್ಕೆ ತೊಂದರೆ ಆಗಬಾರದು ಎಂದು ನೆಲ ಮಂಗಲದಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಮೊನ್ನೆ ಕಾಂಗ್ರೆಸ್ ನಾಯಕರ ಭಾಷಣ ನೋಡಿದೆ. ಐದು ವರ್ಷ ಅಧಿಕಾರ ಕೊಟ್ಟರೆ ನೀರಾವರಿ ಯೋಜನೆ ಪೂರ್ಣಗೊಳಿಸುತ್ತೇವೆ ಅಂತಾ ಹೇಳುತ್ತಿದ್ದಾರೆ. ಅಧಿಕಾರ ಇದ್ದಾಗ ಇವರು ನೀರಾವರಿ ಯೋಜನೆಗಳು ಪೂರ್ತಿ ಮಾಡಲಿಲ್ಲ. ಈಗ ನಾವು ಜಲಧಾರೆ ಆರಂಭ ಮಾಡಿದ ಮೇಲೆ ಈ ರೀತಿ ಹೇಳುತ್ತಿದ್ದಾರೆ. ಈ ಭಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡವಳಿಕೆ ಜನ ಗಮನಿಸುತ್ತಿದ್ದಾರೆ. ರಾಜ್ಯದಲ್ಲಿ ಉತ್ತಮ ಸರ್ಕಾರ ತರಲು ಜನ ನಿರ್ಧಾರ ಮಾಡುತ್ತಾರೆ ಅಂತ ಅಭಿಪ್ರಾಯಪಟ್ಟರು.

ಇದನ್ನೂ ಓದಿ

ವಾರ ಕಳೆದರೂ ಪತ್ತೆಯಾಗದ ಆ್ಯಸಿಡ್ ದಾಳಿ ಕೋರ; ಕಣ್ಣೀರು ಹಾಕುತ್ತ ನಾಗೇಶ್ ಮೇಲೆ ಹಿಡಿಶಾಪ ಹಾಕಿದ ನೊಂದ ಕುಟುಂಬ

Rashid Khan: ರಶೀದ್ ಖಾನ್ ಫ್ಲೈಯಿಂಗ್ ಕಿಸ್ ಕೊಟ್ಟಿದ್ದು ಯಾರಿಗೆ? ವೈರಲ್ ಆಯ್ತು ವಿಡಿಯೋ

Published On - 12:00 pm, Thu, 5 May 22