AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರ ಕಳೆದರೂ ಪತ್ತೆಯಾಗದ ಆ್ಯಸಿಡ್ ದಾಳಿ ಕೋರ; ಕಣ್ಣೀರು ಹಾಕುತ್ತ ನಾಗೇಶ್ ಮೇಲೆ ಹಿಡಿಶಾಪ ಹಾಕಿದ ನೊಂದ ಕುಟುಂಬ

ಬರೋಬ್ಬರಿ ಒಂದು ವಾರ ಕಳೆದರೂ ಇನ್ನೂ ಆಸಿಡ್ ದಾಳಿಕೋರ ನಾಗೇಶ್ ಬಾಬು ಪತ್ತೆಯಾಗಿಲ್ಲ. ಆರೋಪಿ ನಾಗೇಶನಿಗಾಗಿ ಪೊಲೀಸರು ನಿರಂತರ ಹುಡುಕಾಟ ನಡೆಸುತ್ತಲೇ ಇದ್ದಾರೆ. ಏಳು ದಿನ ಕಳೆದರು ಆರೋಪಿ ನಾಗೇಶನ ಸುಳಿವು ಸಿಕ್ಕಿಲ್ಲ. ಏಳು ವಿಶೇಷ ತಂಡಗಳು ನಾಗೇಶ್ ಪತ್ತೆಗೆ ನಿರಂತರ ಕಾರ್ಯಾಚರಣೆ ನಡೆಸುತ್ತಿವೆ.

ವಾರ ಕಳೆದರೂ ಪತ್ತೆಯಾಗದ ಆ್ಯಸಿಡ್ ದಾಳಿ ಕೋರ; ಕಣ್ಣೀರು ಹಾಕುತ್ತ ನಾಗೇಶ್ ಮೇಲೆ ಹಿಡಿಶಾಪ ಹಾಕಿದ ನೊಂದ ಕುಟುಂಬ
ಆರೋಪಿ ನಾಗೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ.
TV9 Web
| Edited By: |

Updated on: May 05, 2022 | 11:45 AM

Share

ಬೆಂಗಳೂರು: ಏಪ್ರಿಲ್‌ 28ರಂದು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆಯಬಾರದಿದ್ದ ಘಟನೆಯೊಂದು ನಡೆದಿತ್ತು. ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಪಾಗಲ್ ಪ್ರೇಮಿಯೊಬ್ಬ ಆಸಿಡ್ ಅಟ್ಯಾಕ್‌ ಮಾಡಿ ಎಸ್ಕೇಪ್‌ ಆಗಿದ್ದ. ಈ ಭೀಬತ್ಸ ಕೃತ್ಯ ನಡೆದು ವಾರವಾದ್ರೂ ಆರೋಪಿ ನಾಗೇಶ್ ಪತ್ತೆಯಾಗಿಲ್ಲ.

ಬರೋಬ್ಬರಿ ಒಂದು ವಾರ ಕಳೆದರೂ ಇನ್ನೂ ಆಸಿಡ್ ದಾಳಿಕೋರ ನಾಗೇಶ್ ಬಾಬು ಪತ್ತೆಯಾಗಿಲ್ಲ. ಆರೋಪಿ ನಾಗೇಶನಿಗಾಗಿ ಪೊಲೀಸರು ನಿರಂತರ ಹುಡುಕಾಟ ನಡೆಸುತ್ತಲೇ ಇದ್ದಾರೆ. ಏಳು ದಿನ ಕಳೆದರು ಆರೋಪಿ ನಾಗೇಶನ ಸುಳಿವು ಸಿಕ್ಕಿಲ್ಲ. ಏಳು ವಿಶೇಷ ತಂಡಗಳು ನಾಗೇಶ್ ಪತ್ತೆಗೆ ನಿರಂತರ ಕಾರ್ಯಾಚರಣೆ ನಡೆಸುತ್ತಿವೆ. ನೆರೆ ರಾಜ್ಯಗಳಲ್ಲಿ ನಾಗೇಶನಿಗಾಗಿ ಹುಡುಕಾಟ ನಡೆದಿದೆ. ಸದ್ಯ ಆರೋಪಿ ನಾಗೇಶ್ ಕುಟುಂಬದವರು, ಸಂಬಂಧಿಗಳ ವಿಚಾರಣೆ ನಡೆಸಲಾಗಿದೆ. ನಾಗೇಶನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ವಿಚಾರಣೆ ಕೂಡ ನಡೆದಿದೆ. ನಾಗೇಶನ ಗಾರ್ಮೆಂಟ್ಸ್ ಮೆಷಿನರಿ ಮಾರಾಟ ಮಾಡಿ ಹಣ ಕೊಡಿಸಿದ್ದ ವ್ಯಕ್ತಿಗಳ ವಿಚಾರಣೆ ಕೂಡ ಮಾಡಲಾಗಿದೆ. ಆದ್ರೆ ಆರೋಪಿ ನಾಗೇಶ್ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ.

ಆ್ಯಸಿಡ್ ದಾಳಿ ಬಗ್ಗೆ ಇನ್ನಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಾಗೇಶ್ ಮೇಲೆ ನೊಂದ ಕುಟುಂಬದ ಹಿಡಿಶಾಪ ಇನ್ನು ಯುವತಿಗೆ ಈ ಗತಿ ತಂದನಲ್ಲಾ ಎಂದು ನಾಗೇಶ್ ಕುಟುಂಬಸ್ಥರು ಕಣ್ಣೀರು ಹಾಕುತ್ತ ನಾಗೇಶ್ ಮೇಲೆ ಹಿಡಿಶಾಪ ಹಾಕಿದ್ದಾರೆ. ಅವನು ಏನಾದರು ಆಗಲಿ, ನಮಗು ಅವನಿಗೂ ಸಂಬಂಧ ಇಲ್ಲ ಎಂದು ಆರೋಪಿ ನಾಗೇಶ್ ಮಾವ ಕೃಷ್ಣಪ್ಪ ಕಣ್ಣೀರು ಹಾಕಿದ್ದಾರೆ. ಅವನಿಂದ ನಮಗೆಲ್ಲಾ ತೊಂದರೆ. ಅವನು ನಮ್ಮ ಮನೆಗೆ ಬರ್ತಾನೆ ಇರಲಿಲ್ಲ. ಈಗ ದಿನ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದೇವೆ. ಅವನು ಅಪ್ಪ ಅಮ್ಮನ ಜೊತೆ ಒಬ್ಬನೆ ವಾಸವಿದ್ದ. ನಮ್ಮ ಮನೆಗೆ ಅವನು ಬರ್ತಾ ಇರಲಿಲ್ಲ. ನಾನು ಅವರ ಅಕ್ಕನನ್ನ ಮದುವೆಯಾಗಿದ್ದೀನಿ. ನಮ್ಮ ಮನೆಯಲ್ಲಿ ನಾವು ಇದ್ದೀವಿ. ಹತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಇಲ್ಲಿ ಮೊದಲು ಕೆಲಸಕ್ಕೆ ಸೇರಿದ್ದ, ಅಮೇಲೆ ಇತ್ತೀಚಿಗೆ ಅವನೇ ಗಾರ್ಮೆಂಟ್ಸ್ ಓಪನ್ ಮಾಡಿದ್ದ. ಈ ಕೆಲಸಕ್ಕಾಗಿ ಅದನ್ನು ಮಾರಿಬಿಟ್ಟ. ಊರಲ್ಲಿ ಜಮೀನು ಮಾರಿದ್ದ. ಅಲ್ಲೇ ಓದಿ ವಿದ್ಯಾಭ್ಯಾಸ ಮುಗಿಸಿದ್ದ. ಅದ್ರೆ ನಮ್ಮ ಮನೆಗೆ ಬರ್ತಾ ಇರಲಿಲ್ಲ. ಈಗ ಪೊಲೀಸರು ದಿನಾ ನಮ್ಮನ್ನ ಕರೆಸ್ತಿದ್ದಾರೆ. ನಮಗೆ ಸಾಕಾಗಿ ಹೋಗಿದೆ ಎಂದು ನಾಗೇಶನ ಬಾವ ಕೃಷ್ಣಪ್ಪ ಬೇಸರದಿಂದ ಕಣ್ಣೀರು ಹಾಕಿದ್ದಾರೆ.

ಮೊಬೈಲ್‌, ಸಿಸಿಟಿವಿ ಅಂತಾ ಟೆಕ್ನಿಕಲ್‌ ಆಧಾರದಲ್ಲೂ ಸರ್ಚ್‌ ಮಾಡ್ತಿದ್ರೂ ಆರೋಪಿ ಪತ್ತೆಯಾಗ್ತಿಲ್ಲ. ಈ ನಡುವೆ ನಾಗೇಶ್‌ನ ಸಹೋದರನನ್ನ ವಿಚಾರಣೆ ಮಾಡ್ತಿದ್ದಂತೆ, ಅಂದು ನಿಜಕ್ಕೂ ಆಗಿದ್ದೇನು ಅನ್ನೋದು ಬಯಲಾಗಿದೆ. ಘಟನೆ ನಡೆಯೋ ಮುನ್ನ ನಾಗೇಶ್‌ನ ಸಹೋದರ ರಮೇಶ್‌ ಬಾಬುಗೆ ಫೋನ್‌ ಮಾಡಿದ್ದ ಯುವತಿ ದೊಡ್ಡಮ್ಮ ನಮ್ಮ ಹುಡುಗಿಯಿಂದ ದೂರ ಇರುವಂತೆ ಹೇಳಿದ್ರಂತೆ. ಹೀಗಾಗಿ ರಮೇಶ್‌ ಬಾಬು ಕೂಡಾ ನಾಗೇಶ್‌ಗೆ ಬುದ್ಧಿವಾದ ಹೇಳಿದ್ರಂತೆ. ಆದ್ರೆ ಅಣ್ಣನ ಮಾತು ಕೇಳಿದ ನಾಗೇಶ್‌, ಯುವತಿಗೆ ಌಸಿಡ್‌ ಹಾಕೋಕೆ ಆವತ್ತೇ ಸ್ಕೆಚ್‌ ಹಾಕಿದ್ದ.

ಸಹೋದರನ ಮಾತು ಮೀರಿ ಆರೋಪಿ ಎಸ್ಕೇಪ್‌ ಇನ್ನು ಏಪ್ರಿಲ್‌ 28 ರಂದು ಯುವತಿ ಮೇಲೆ ಌಸಿಡ್‌ ದಾಳಿ ಮಾಡಿದ್ದ ಪಾಪಿ ನಾಗೇಶ್‌, ಮೊದಲು ಸಹೋದರ ರಮೇಶ್‌ಗೆ ಫೋನ್‌ ಮಾಡಿದ್ದನಂತೆ. ಈ ವೇಳೆ ಪೊಲೀಸರಿಗೆ ಶರಣಾಗಿ ಬಿಡು ಅಂತಾ ರಮೇಶ್‌ ಹೇಳಿದ್ರಂತೆ. ರಾಜಗೋಪಾಲನಗರ ಠಾಣೆಗೆ ಬರುವಂತೆ ಸಹೋದರ ಹೇಳಿದ್ನಂತೆ. ಆದ್ರೆ ಅಣ್ಣನ ಮಾತು ಕೇಳದ ನಾಗೇಶ್‌ ಅಣ್ಣನಿಗೆ ಆವಾಜ್‌ ಹಾಕಿ ಎಸ್ಕೇಪ್‌ ಆಗಿದ್ದಾನೆ. ಕಳೆದ ಏಳು ವರ್ಷದಲ್ಲಿ ನಾಗೇಶ ವೆಲ್ ಎಜುಕೇಟಿಡ್ ಪರ್ಸನ್ ಎನಿಸಿಕೊಂಡಿದ್ದ. ಎಂಬಿಎ ಮುಗಿಸೋದ್ರ ಜತೆಗೆ ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್‌ವರ್ಕ್ಸ್ ಅಕೌಂಟ್ಸ್ ಆಫ್ ಇಂಡಿಯಾ ಎಂಬ ಕೊರ್ಸ್ ಸಹ ಮುಗಿಸಿದ್ದನಂತೆ. ಹೀಗೆ ಡಬಲ್ ಗ್ರಾಜ್ಯೂಯೇಟ್ ಆದ್ರೂ ಸಹ ಕೈಯಲ್ಲಿ ಌಸಿಡ್‌ ಬಾಟೆಲ್‌ ಹಿಡಿದು ಕ್ರಿಮಿನಲ್‌ ಆಗಿದ್ದ. ಇನ್ನು ಬಂಧನ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿರೋ ಗೃಹ ಸಚಿವರು ಆತ ಎಲ್ಲೇ ಇದ್ರೂ ಬಿಡಲ್ಲ ಅಂತಿದ್ದಾರೆ.