ಆಶ್ರಯ ಸಮಿತಿ ಸದಸ್ಯರು ಕೆಡಿಪಿ ಸಭೆ ನಡೆಸುವ ಅಧಿಕಾರ ಇರುತ್ತಾ? ಯತೀಂದ್ರ ಹುದ್ದೆಯನ್ನು ಪ್ರಶ್ನಿಸಿದ ಹೆಚ್​ಡಿಕೆ

ನಿಮ್ಮ ಮಗ ರಾಜಕೀಯ ಮಾಡುವುದಕ್ಕೆ ನನ್ನ ತಕರಾರು ಇಲ್ಲ. ಅವರಿಂದ ರಾಜಕೀಯ ಮಾಡಿಸಿ ನಾವು ಬೇಡ ಅನ್ನುವುದಿಲ್ಲ. ‘ಹಲೋ ಅಪ್ಪಾ’ ಹೇಳಿಕೆಗೆ ಸ್ಪಷ್ಟನೆ ನೀಡಲು ಪರದಾಡುತ್ತಿದ್ದಾರೆ. ಎರಡು ದಿನದಿಂದ ಅವರ ಗೋಳಾಟ ನೋಡಿದ್ದೇನೆ ಎಂದು ಮಾಜಿ ಶಾಸಕ ಹೆಚ್​ಡಿ ಕುಮಾರಸ್ವಾಮಿ ಹೇಳಿದರು.

ಆಶ್ರಯ ಸಮಿತಿ ಸದಸ್ಯರು ಕೆಡಿಪಿ ಸಭೆ ನಡೆಸುವ ಅಧಿಕಾರ ಇರುತ್ತಾ? ಯತೀಂದ್ರ ಹುದ್ದೆಯನ್ನು ಪ್ರಶ್ನಿಸಿದ ಹೆಚ್​ಡಿಕೆ
ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ವಿವೇಕ ಬಿರಾದಾರ

Updated on: Nov 19, 2023 | 11:38 AM

ಚಿಕ್ಕಮಗಳೂರು ನ.19: ನಿಮ್ಮ ಮಗನನ್ನು ಆಶ್ರಯ ಕಮಿಟಿ ಅಧ್ಯಕ್ಷರಾಗಿ ಮಾಡಿದ್ದೀರಿ. ಅದಕ್ಕೆ ನಮ್ಮ ತಕರಾರು ಇಲ್ಲ. ಆಶ್ರಯ ಕಮಿಟಿ ಅಧ್ಯಕ್ಷರು ಅಧಿಕಾರಿಗಳನ್ನು ಕರೆದು ಕೆಡಿಪಿ ಸಭೆ ಮಾಡಬಹುದಾ? ಆಶ್ರಯ ಸಮಿತಿ ಸದಸ್ಯರು ಕೆಡಿಪಿ ಸಭೆ ನಡೆಸುವ ಅಧಿಕಾರ ಇರುತ್ತಾ? ಕ್ಷೇತ್ರ ನೋಡಿಕೊಳ್ಳಲು ಆಶ್ರಯ ಸಮಿತಿ ಸದಸ್ಯ ಮಾಡಿದ್ದೇವೆ ಅನ್ನುತ್ತೀರಿ. ನಿವೇಶನ ಕೊಡುವ ಕುರಿತು ಆಶ್ರಯ ಕಮಿಟಿ ಸದಸ್ಯ ಸಭೆ ಮಾಡಬಹುದು. ಅದನ್ನು ಬಿಟ್ಟು ಕೆಡಿಪಿ ಸಭೆ, ಅಧಿಕಾರಿಗಳ ಸಭೆ ನಡೆಸಬಹುದಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್​ಡಿ​​ ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿದರು.

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಖಾಸಗಿ ರೆಸಾರ್ಟ್​​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಿಮ್ಮ ಮಗ ರಾಜಕೀಯ ಮಾಡುವುದಕ್ಕೆ ನನ್ನ ತಕರಾರು ಇಲ್ಲ. ಅವರಿಂದ ರಾಜಕೀಯ ಮಾಡಿಸಿ ನಾವು ಬೇಡ ಅನ್ನುವುದಿಲ್ಲ. ‘ಹಲೋ ಅಪ್ಪಾ’ ಹೇಳಿಕೆಗೆ ಸ್ಪಷ್ಟನೆ ನೀಡಲು ಪರದಾಡುತ್ತಿದ್ದಾರೆ. ಎರಡು ದಿನದಿಂದ ಅವರ ಗೋಳಾಟ ನೋಡಿದ್ದೇನೆ ಎಂದು ಹೇಳಿದರು.

ಗ್ಯಾರಂಟಿಗಳಿಂದ ಜನ ನೆಮ್ಮದಿಯಿಂದ ಇದ್ದಾರೆಂದು ಜಾಹೀರಾತು ಪ್ರಕಟಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಕಷ್ಟು ಜಾಹೀರಾತು ಪ್ರಕಟಿಸಿದ್ದೀರಿ. ಜನ ನೆಮ್ಮದಿಯಿಂದ ಇದ್ದಾರಾ, ಇಲ್ವಾ ಅಂತ ಜಾಹೀರಾತನಿಂದ ತಿಳಿಯಲ್ಲ. ರಾಜ್ಯದಲ್ಲಿ ಅಕ್ರಮಗಳು, ಅಪರಾಧ ಚಟುವಟಿಗಳು ಹೆಚ್ಚುತ್ತಿವೆ. ರಾಜ್ಯದಲ್ಲಿ ಜನ ನೆಮ್ಮದಿಯಿಂದ ಬದುಕುವುದು ಕಷ್ಟಕರವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಿಮ್ಮ ಅಧಿಕಾರಶಾಹಿ ಆಡಳಿತದ ಬಗ್ಗೆ ಜನರಿಗೆ ಗೊತ್ತಾಗಿದೆ ಎಂದು ವಾಗ್ದಾಳಿ ಮಾಡಿದರು.ನೀವು ಅಧಿಕಾರಕ್ಕೆ ಬಂದ 6 ತಿಂಗಳಿನಲ್ಲಿ ಎಷ್ಟು ಕೊಲೆಗಳಾಗಿವೆ. ಇದು ಯಾವ ಮಟ್ಟಕ್ಕೆ ಹೋಗಿದೆ, ಯಾರಿಗೂ ಭಯ ಭಕ್ತಿ ಇಲ್ಲ. ಗಣಿ-ಭೂವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿಯ ಕೊಲೆ ಆಗಿದೆ. ಈ ಸರ್ಕಾರ ಯಾವ ಪರಿಸ್ಥಿತಿಗೆ ಜನರನ್ನು ದೂಡುತ್ತಿದೆ ಎಂದರೆ, ಮನೆಯಿಂದ ಹೋದವರು ವಾಪಸ್ ಬರುತ್ತೇವೆ ಎಂಬ ನಂಬಿಕೆ ಇಲ್ಲ. ಗೃಹ ಇಲಾಖೆಯ ಬಗ್ಗೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರು.

ಕಾಂಗ್ರೆಸ್​ನಿಂದ ಬಿಜೆಪಿ, ಜೆಡಿಎಸ್ ಶಾಸಕರನ್ನು ಸೆಳೆಯುವ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್​​ನವರು ಬಿಜೆಪಿ, ಜೆಡಿಎಸ್​ ಶಾಸಕರ ಸೆಳೆಯಲು ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ 136 ಶಾಸಕರ ಬಲ ಇದೆ, ಇದೇನು ಬಲಹೀನವಲ್ಲ. ಸರ್ಕಾರ ನಡೆಸಲು ರಾಜ್ಯದ ಜನ ಶಕ್ತಿಯನ್ನ ನೀಡಿದ್ದಾರೆ. ರಾಜ್ಯದಲ್ಲಿ ಬರಗಾಲದಿಂದ ಬೆಳೆಹಾನಿಯಾಗಿ ರೈತರು ಕಷ್ಟದಲ್ಲಿದ್ದಾರೆ. ಕಷ್ಟಕರ ಪ್ರಕೃತಿಯ ಅಸಹಕಾರದಲ್ಲಿ ರಾಜ್ಯದ ಜನ ಸಿಲುಕಿದ್ದಾರೆ. ಜನರ ಬದುಕನ್ನ ಕಟ್ಟಿಕೊಡುವ ಕೆಲಸ ರಾಜ್ಯ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಕುಮಾರಸ್ವಾಮಿ ಸಿಎಂ ಆಗಿದ್ದಾಗ ವರ್ಗಾವಣೆಗೆ ನಿಖಲ್ ಶಿಫಾರಸು ಮಾಡಿ​ಲ್ಲವೇ? ಪ್ರಿಯಾಂಕ್​ ಆರೋಪ

ಸರ್ಕಾರದ ಅಕ್ರಮಗಳನ್ನು ಬಯಲಿಗೆ ತರುವ ಕೆಲಸ ಮಾಡುತ್ತಿದ್ದೇವೆ. ನಾವು ಬರ ‌ವೀಕ್ಷಣೆಗೆ ಹೋದಾಗ ಲಘುವಾಗಿ ಮಾತನಾಡಿದರು. ರಾಜ್ಯದ ಜನರನ್ನೇ ಲೆಕ್ಕಕ್ಕೆ ಇಡದವರು ವಿಪಕ್ಷವನ್ನ ಗೌರವಿಸುತ್ತಾರಾ? ನೀವು ಏನೇ ಮಾಡಿದ್ರು ನಮ್ಮ ಬಾಯಿ ಮುಚ್ಚಿಸಲು, ಹೆದರಿಸಲು ಆಗಲ್ಲ. ಮುಂದೆ ಒಂದು ದಿನ ಜನ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಮೂರು ವರ್ಷದಿಂದ ಜಿಪಂ, ತಾಪಂ ಚುನಾವಣೆ ನಡೆದಿಲ್ಲ. ಸಿಇಓ ನೇತೃತದವದಲ್ಲಿ ಅಧಿಕಾರ ನಡೆಯುತ್ತಿದೆ. ಯಾವ ಕಂಪನಿಯಿಂದ ಎಷ್ಟು ಬಂದಿದೆ ಎಂದು ಪಟ್ಟಿ ಇದ್ಯಾ. ನಾನು ಕೇಳಿದ್ದೇನೆ, ಈಗ ಅದನ್ನೂ ಸಿದ್ಧ ಮಾಡಬೇಕು. ಗತಿಗೆಟ್ಟ ಸರ್ಕಾರವಾ ಇದು. ಶಾಲಾಕಟ್ಟಡ ರಿಪರೇಗೆ 2.50 ಲಕ್ಷ ರೂ. ಇದು ಗತಿಗೆಟ್ಟ ಸರ್ಕಾರ. ಅದಿವೇಶನದಲ್ಲಿ ಇದನ್ನ ರೈಸ್ ಮಾಡುತ್ತೇನೆ. ಕರೆಂಟ್ ಕಳ್ಳ, ಕಳ್ಳ ಅನ್ನುತ್ತಾರೆ. ನೀವು ದರೋಡೆ ಮಾಡಿಕೊಂಡು ಕೂತಿದ್ದೀರಾ. ಕೂಲಿ ಮಾಡೋನು ತಿಳಿಯದೆ ಮಾಡಿದ್ದಾನೆ. ನನಗೆ ಗೊತ್ತಿಲ್ಲ ಅನ್ನಬಹುದಿತ್ತು, ನಾನು ಹೇಳಿಲ್ಲ ಎಂದು ಕಾಂಗ್ರೆಸ್​ನ ವಿದ್ಯುತ್​ ಕಳ್ಳ ಆರೋಪಕ್ಕೆ ತಿರುಗೇಟು ನೀಡಿದರು.

ಶೋಭಾ ಅಪಾರ್ಟ್​​​ಮೆಂಟ್ ಕಟ್ಟಿದ್ದಾರೆ. ಬೆಸ್ಕಾಂ ಎಂ.ಡಿ. ಆಗಿದ್ದ ರಾಜೇಂದ್ರ ಚೋಳನ್ ಅದೇ ಅಪಾರ್ಟ್ ಮೆಂಟ್ ಇದ್ದರು. ಅದಕ್ಕೆ ಆರು ತಿಂಗಳಲ್ಲಿ ಎಷ್ಟು ಬಿಲ್ ಬಂತು ಕೇಳಿ. ನಿಮಗೆ ಮಾನಸಿಕ ನೆಮ್ಮದಿ ಇಲ್ಲ. ನಾನು ಆರಾಮಾಗಿದ್ದೇನೆ. ನನ್ನ ದ್ವೇಷ ಮಾಡುಬುದು ಎಂದು ಸಿಎಂ ಹೇಳಿದ್ದಾರೆ.

ನಾನು ದತ್ತ ಮಾಲೆ ಹಾಕಬಾರದು ಅಂತ ಇದೆಯಾ ಸಮಯ ಬಂದಾಗ ದತ್ತಮಾಲೆ‌ ಹಾಕುತ್ತೇನೆ. ಯಾವುದು ಜಾತ್ಯಾತೀತ ನಿಲುವು. ಸರ್ಕಾರದ ಒಬ್ಬ ಸಚಿವ ಮಾತನಾಡಿದನಲ್ಲ ಅದ ಜಾತ್ಯತೀತ ನಿಲುವು. ಜಾತ್ಯತೀತ ನಿಲುವು ಅಂದರೆ ಅದೇನಾ? ಸ್ಪೀಕರ್ ಬಗ್ಗೆ ಮಾತನಾಡಿದ್ದನ್ನು ನಾನು ಕೇಳಿದ್ದೇನೆ. ಸ್ಪೀಕರ್ ಮುಂದೆ ಕೈಕಟ್ಟಿ ನಿಲ್ಲುತ್ತಾರೆ ಅನ್ನುವುದು ಜಾತ್ಯಾತೀತ ನಿಲುವಾ? ನಾನು ವರ್ಗಾವಣೆ ದಂಧೆ ಬಗ್ಗೆ ಇವತ್ತು ಮಾತನಾಡಲ್ಲ. ಎಲ್ಲರೂ ಕ್ರಿಕೆಟ್ ಗುಂಗಿನಲ್ಲಿ ಇದ್ದಾರೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ