ಬಿಜೆಪಿ, ಜೆಡಿಎಸ್‌ಗೆ ಮತಹಾಕಿದ್ರೆ ಗ್ಯಾರಂಟಿ ಯೋಜನೆ ರದ್ದು ಮಾಡುತ್ತಾರೆ: ಡಿಕೆ ಶಿವಕುಮಾರ್​​

ಜನವರಿ ವೇಳೆಗೆ ಯುವ ನಿಧಿ ಯೋಜನೆಯನ್ನೂ ಜಾರಿಗೆ ತರುತ್ತೇವೆ. ಗ್ಯಾರಂಟಿಗಳು ತಲುಪಿದೆಯೋ ಇಲ್ಲವೋ ಎಂದು ಪರಿಶೀಲನೆಗೆ ನ.28ರಂದು ಸಮಿತಿ ರಚನೆ ಮಾಡುತ್ತೇವೆ. ಗ್ಯಾರೆಂಟಿಗಳ ಮೇಲ್ವಿಚಾರಣೆಗೆ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಜವಾಬ್ದಾರಿ ನೀಡಿದ್ದೇವೆ. ಪ್ರತಿ ಮನೆಗೆ ಹೋಗಿ ಗ್ಯಾರಂಟಿ ಯೋಜನೆಗಳು ತಲುಪಿದೆಯೇ, ಇಲ್ಲವೇ ಅಥವಾ ಏನಾದರೂ ಬದಲಾವಣೆ ಮಾಡಬೇಕಾ ಅಂತಾ ಮಾಹಿತಿ ಸಂಗ್ರಹಿಸಬೇಕು ಎಂದು ಡಿಕೆ ಶಿವಕುಮಾರ್​ ಹೇಳಿದರು.

ಬಿಜೆಪಿ, ಜೆಡಿಎಸ್‌ಗೆ ಮತಹಾಕಿದ್ರೆ ಗ್ಯಾರಂಟಿ ಯೋಜನೆ ರದ್ದು ಮಾಡುತ್ತಾರೆ: ಡಿಕೆ ಶಿವಕುಮಾರ್​​
ಡಿಸಿಎಂ ಡಿಕೆ ಶಿವಕುಮಾರ್​
Follow us
ಪ್ರಸನ್ನ ಗಾಂವ್ಕರ್​
| Updated By: ವಿವೇಕ ಬಿರಾದಾರ

Updated on:Nov 19, 2023 | 2:02 PM

ಬೆಂಗಳೂರು ನ.19: ಬಿಜೆಪಿ (BJP), ಜೆಡಿಎಸ್‌ಗೆ (JDS) ಮತಹಾಕಿದರೇ ಗ್ಯಾರಂಟಿ ಯೋಜನೆ ರದ್ದು ಮಾಡುತ್ತಾರೆಂದು ಮನೆ ಮನೆಗೆ ಭೇಟಿ ನೀಡಿ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ದಿನಾಚರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಅಧಿಕಾರದಲ್ಲಿ ಇರುವವರೆಗೆ ಗ್ಯಾರಂಟಿಗಳನ್ನು ತೆಗೆಯಲ್ಲ. ಗ್ಯಾರಂಟಿ ಯೋಜನೆಗಳನ್ನು ಬದಲಾವಣೆ ಮಾಡಲ್ಲ, ಇದು ನಿಶ್ಚಿತ ಎಂದರು.

ಜನವರಿ ವೇಳೆಗೆ ಯುವ ನಿಧಿ ಯೋಜನೆಯನ್ನೂ ಜಾರಿಗೆ ತರುತ್ತೇವೆ. ಗ್ಯಾರಂಟಿಗಳು ತಲುಪಿದೆಯೋ ಇಲ್ಲವೋ ಎಂದು ಪರಿಶೀಲನೆಗೆ ನ.28ರಂದು ಸಮಿತಿ ರಚನೆ ಮಾಡುತ್ತೇವೆ. ಗ್ಯಾರೆಂಟಿಗಳ ಮೇಲ್ವಿಚಾರಣೆಗೆ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಜವಾಬ್ದಾರಿ ನೀಡಿದ್ದೇವೆ. ಪ್ರತಿ ಮನೆಗೆ ಹೋಗಿ ಗ್ಯಾರಂಟಿ ಯೋಜನೆಗಳು ತಲುಪಿದೆಯೇ, ಇಲ್ಲವೇ ಅಥವಾ ಏನಾದರೂ ಬದಲಾವಣೆ ಮಾಡಬೇಕಾ ಅಂತಾ ಮಾಹಿತಿ ಸಂಗ್ರಹಿಸಬೇಕು. ಬಿಜೆಪಿ, ಜೆಡಿಎಸ್‌ಗೆ ಮತಹಾಕಿದ್ರೆ ಗ್ಯಾರಂಟಿ ಯೋಜನೆ ರದ್ದು ಮಾಡ್ತಾರೆಂದು, ಮನೆಮನೆಗೆ ಭೇಟಿ ವೇಳೆ ಮನವರಿಕೆ ಮಾಡಿಕೊಡಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು.

ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯವರು ಒಬ್ಬರೂ ತ್ಯಾಗ ಬಲಿದಾನ ಮಾಡಿಲ್ಲ: ಸಿದ್ದರಾಮಯ್ಯ ವಾಗ್ದಾಳಿ

ನವೆಂಬರ್ 17ರವರೆಗೆ ಶಕ್ತಿ ಯೋಜನೆಯಡಿ 100 ಕೋಟಿ ಟಿಕೆಟ್ ನೀಡಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ದಿವಾಳಿ ಆಗುತ್ತೆ ಅಂತಾ ಬಿಜೆಪಿ ಹೇಳುತ್ತಿತ್ತು. ಈಗ ಬಿಜೆಪಿಯವರೇ ಗ್ಯಾರಂಟಿ ಯೋಜನೆ ನೀಡಲು ಹೊರಟಿದ್ದಾರೆ. ಹಾಸನಾಂಬೆ ಜಾತ್ರೆ ವೇಳೆ 14 ಕೋಟಿ ರೂ. ಆದಾಯ ಬಂದಿದೆ. ಮಹಿಳೆಯರಿಗೆ ಉಚಿತ ಬಸ್​ ನೀಡಿದ್ದರಿಂದ ಹೆಚ್ಚು ಆದಾಯ ಬಂದಿದೆ. ತಾಂತ್ರಿಕ ಕಾರಣದಿಂದ ಶೇ 7 ರಷ್ಟು ಜನರಿಗೆ ಗೃಹಲಕ್ಷ್ಮೀ ಯೋಜನೆ ಹಣ ತಲುಪಿಲ್ಲ ಎಂದು ತಿಳಿಸಿದರು.

ಯಾರು ರಾಜ್ಯಾಧ್ಯಕ್ಷರು ಆದ್ರೆ ಎನು? ಯಾರು ವಿರೋಧ ಪಕ್ಷದ ನಾಯಕರಾದರೇ ಏನು? ನಮಗೂ ಅದಕ್ಕೂ ಸಂಬಂಧವಿಲ್ಲ. ನಮ್ಮ ಜೊತೆ ಬರುವರ ಬಗ್ಗೆ ಮಾತಾಡಿದರೇ ದೊಡ್ಡ ಸುದ್ದಿ ಆಗುತ್ತೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:56 pm, Sun, 19 November 23