ಬೀದರ್: ನಷ್ಟಕ್ಕೆ ಸಿಲುಕಿದ ತೊಗರಿ ಬೆಳೆದ ರೈತ; ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ

ಕಲ್ಯಾಣ ಕರ್ನಾಟಕದ ಆ ಎರಡು ಜಿಲ್ಲೆಗಳು ತೊಗರಿಯ ಕಣಜ ಎಂದು ಹೆಸರುವಾಸಿ. ಪ್ರತಿ ವರ್ಷ ಒಂದು ಲಕ್ಷ ಹೆಕ್ಟರ್​ಗೂ ಅಧಿಕ ಪ್ರದೇಶದಲ್ಲಿ ತೊಗರಿ ನಾಟಿ ಮಾಡಿ ಉತ್ತಮ ಆದಾಯ ಘಟಳಿಸುತ್ತಿದ್ದಾರೆ. ಆದರೆ, ಈ ವರ್ಷ ಮಳೆಯ ಅಭಾವದಿಂದಾಗಿ ತೊಗರಿ ಬೆಳೆ ಇಳುವರಿ ಕುಂಟಿತಗೊಂಡಿದ್ದು ರೈತನಿಗೆ ಬರಸಿಡಿಲು ಬಂಡಿದಂತಾಗಿದೆ.

ಬೀದರ್: ನಷ್ಟಕ್ಕೆ ಸಿಲುಕಿದ ತೊಗರಿ ಬೆಳೆದ ರೈತ; ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ
ನಷ್ಟದಲ್ಲಿ ತೊಗರಿ ಬೆಳೆದ ರೈತರು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 19, 2023 | 3:02 PM

ಬೀದರ್, ನ.19: ತೊಗರಿ ಕಣಜ ಎಂದರೆ ಸಾಕು, ಥಟ್ಟನೆ ಕಲಬುರಗಿ ಮತ್ತು ಬೀದರ್ ಜಿಲ್ಲೆಗಳ ಹೆಸರು ಮೊದಲಿಗೆ ನೆನಪಾಗುತ್ತದೆ. ಕಲ್ಯಾಣ ಕರ್ನಾಟಕ ಭಾಗದ ಈ ಎರಡು ಜಿಲ್ಲೆಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ತೊಗರಿ ಬೆಳೆಸಲಾಗುತ್ತದೆ. ಇನ್ನು ಈ ವರ್ಷ ಬೀದರ್(Bidar) ಜಿಲ್ಲೆಯಲ್ಲಿ 1 ಲಕ್ಷ 18 ಸಾವಿರ ಹೆಕ್ಟರ್ ಪ್ರದೇಶದಲ್ಲಿ ತೊಗರಿಯನ್ನು ಬಿತ್ತನೆ ಮಾಡಿದ್ದರು. ಆರಂಭದಲ್ಲಿಯೇ ಮಳೆಯೂ ಕೂಡ ಉತ್ತಮವಾಗಿ ಬಂದಿದ್ದರಿಂದ ರೈತರು ಖುಷಿ ಖುಷಿಯಾಗಿ ಬಿತ್ತನೆ ಮಾಡಿದರು. ತೊಗರಿ ಬೆಳೆಯೂ ಕೂಡ ಹುಲುಸಾಗಿ ಬೆಳೆಯಿತು. ಆದರೆ, ತೊಗರಿ ಕಾಯಿ ಹಾಗೂ ಹೂವು ಕಟ್ಟವ ಹೊತ್ತಿನಲ್ಲಿ ಮಳೆ ಕೈಕೊಟ್ಟ ಪರಿಣಾಮವಾಗಿ ತೊಗರಿ ಇಳುವರಿ ಕುಟಿಂತಗೊಂಡಿದ್ದು, ಒಂದು ಎಕರೆಗೆ ನಾಲ್ಕು ಕಿಂಟ್ವಾಲ್ ಬರುತ್ತಿದ್ದ ಇಳುವರಿ, ಈಗ ಒಂದು ಕಿಂಟ್ವಾಲ್​ ಇಳುವರಿ ಬರುತ್ತಿದೆ. ಇದು ಸಹಜವಾಗಿಯೇ ರೈತರನ್ನ ಆತಂಕಕ್ಕೆ ತಳ್ಳಿದಂತಾಗಿದೆ.

ಈ ಬಗ್ಗೆ ಕೃಷಿ ಅಧಿಕಾರಿಯನ್ನು ಕೇಳಿದರೆ ಈ ವರ್ಷ ಬೀದರ್ ಜಿಲ್ಲೆಯಲ್ಲಿ 1 ಲಕ್ಷ 18 ಸಾವಿರ ಹಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಿದ್ದರು. ಆದರೆ, ಮಳೆಯ ಕೊರತೆಯಿಂದಾಗಿ 70 ಸಾವಿರಕ್ಕೂ ಅಧಿಕ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ ತೊಗರಿ ನಾಶವಾಗಿದೆ ಎಂದು ಕೃಷಿ ಅಧಿಕಾರಿ ಹೇಳುತ್ತಿದ್ದಾರೆ. ಇನ್ನು ಅತಿವೃಷ್ಠಿಯಿಂದಾಗಿ ಉದ್ದು, ಸೋಯಾ, ಹೆಸರು ಈ ವರ್ಷ ನೆಲಕಚ್ಚಿದೆ. ಆದರೆ, ತೊಗರಿ ಬೆಳೆಯಲ್ಲಾದರೂ ಲಾಭ ಮಾಡಿಕೊಳ್ಳಬೇಕು ಅಂದಕೊಂಡಿದ್ದ ರೈತರಿಗೆ ಇದು ಶಾಕ್ ಕೊಟ್ಟಂತಾಗಿದೆ. ಪ್ರತಿ ವರ್ಷವೂ ರೈತರ ನಂಬಿಕೆ ಉಳಿಸಿಕೊಳ್ಳುತ್ತಿದ್ದ ಹಸ್ತ ಮಳೆ ಈ ವರ್ಷ ಮುನಿಸಿಕೊಂಡಿದ್ದರಿಂದ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಬೆಳೆಗಳು ಬಾಡಿವೆ. ಅದರಲ್ಲೂ ಹೂ ಬಿಟ್ಟು, ಕಾಯಿ ಕಟ್ಟುವ ಹಂತದಲ್ಲಿರುವ ತೊಗರಿ ಬೆಳೆಗೆ ಭೂಮಿಯಲ್ಲಿ ತೇವಾಂಶ ಕೊರತೆಯಿಂದಾಗಿ ಹೂಗಳು ಉದುರತೊಡಗಿದ್ದು, ಅನ್ನದಾತರಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ:ಇದು ಮುಂದೆ ಬೆಲೆ ಏರುವುದರ ಮುನ್ಸೂಚನೆ: ಗೊಡ್ಡಾದ ತೊಗರಿ ಬೆಳೆ, ಒಣಗುತ್ತಿರೋ ಗಿಡಗಳು, ಬೆಳೆಗಾರರು ಕಂಗಾಲು

ರೈತರಿಗೆ ಶಾಕ್​

ತೊಗರಿ ಬೆಳೆಯಲ್ಲಾದರೂ ಉತ್ತಮ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರಿಗೆ ಸದ್ಯದ ಸ್ಥಿತಿ ಹುಸಿಗೊಳಿಸುವಂತೆ ಮಾಡಿದೆ. ಈಗಾಗಲೇ ಹೂ ಬಿಟ್ಟು ಕಾಯಿ ಕಟ್ಟುವ ಹಂತದಲ್ಲಿರುವ ಬೆಳೆಗೆ, ಮಳೆ ಅಗತ್ಯವಿತ್ತು. ಆದರೆ, ಈಗ ಚಳಿಗಾಲ ಆರಂಭವಾಗಿದ್ದರಿಂದ ಮಳೆಯಂತೂ ಆಗುವುದು ಡೌಟ್ ಆಗಿದೆ. ಹೀಗಾಗಿ ರೈತರಿಗೆ ತೊಗರಿ ಬೆಳೆಯೂ ಕೈತಪ್ಪಲಿದೆ. ಸರಕಾರ ಕೂಡ ಜಿಲ್ಲೆಯ ಎಲ್ಲಾ ತಾಲೂಕನ್ನು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ. ಆದರೆ, ಬರ ಅಧ್ಯಯನ ತಂಡ ಮಾತ್ರ ಬೀದರ್ ಜಿಲ್ಲೆಗೆ ಬಂದಿಲ್ಲ. ಹೀಗಾಗಿ ಪರಿಹಾರ ಬರುತ್ತದೋ? ಇಲ್ಲವೋ ಎನ್ನುವ ಗೊಂದಲದಲ್ಲಿ ರೈತರು ಕಾಲ ಕಳೆಯುತ್ತಿದ್ದಾರೆ.

ಇದರ ಜೊತೆಗೆ ಸರಕಾರ, ಬೆಳೆ ಪರಿಹಾರವಾಗಿ ಕೇವಲ ನಾಲ್ಕೂವರೆ ಕೋಟಿ ರೂಪಾಯಿ ಮಾತ್ರ ಪರಿಹಾರ ಕೊಟ್ಟಿದ್ದು, ಇಷ್ಟು ಹಣ ರೈತರಿಗೆ ಹಂಚಿಕೆ ಮಾಡಿದರೆ ಒಂದು ಸಾವಿರ ರೂಪಾಯಿಯೂ ಬರುವುದಿಲ್ಲ ಎಂದು ರೈತರು ಅಸಮಧಾನ ವ್ಯಕ್ತ ಪಡಿಸುತ್ತಿದ್ದಾರೆ. ಈಗಾಗಲೇ ಉದ್ದು ಸೋಯಾ, ಹೆಸರು ಬೆಳೆ ಅತಿ ಹೆಚ್ಚು ಮೆಳೆಯಾಗಿದ್ದರಿಂದ ಹಾಳಾಗಿದೆ. ತೊಗರಿ ಬೆಳೆಯಿಂದ ಉತ್ತಮ ಇಳುವರಿ ಪಡೆಯಬೇಕೆಂಬ ನಮ್ಮ ಕನಸು ಸಹ ಮಳೆರಾಯ ನುಚ್ಚುನೂರು ಮಾಡಿದೆ. ಸರಕಾರ ರೈತರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ರೈತರು ಸರಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ರೈತರು ತೊಗರಿಯನ್ನೇ ಹೆಚ್ಚಾಗಿ ಬೆಳೆಯುತ್ತಾರೆ. ಆದರೆ, ಈ ಷರ್ವ ಮಳೆಯ ಕೊರೆತೆಯಿಂದಾಗಿ ತೊಗರಿ ಇಳುವರಿ ಕಡಿಮೆಯಾಗಿದ್ದು ರೈತರನ್ನ ಕಂಗಾಲು ಮಾಡಿದೆ. ಸರಕಾರ ಸರ್ವೇ ಮಾಡಿ ಸೂಕ್ತ ಪರಿಹಾರ ಕೊಡಬೇಕು ಎಂದು ರೈತರು ಸರಕಾರಕ್ಕೆ ವಿನಂತಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:58 pm, Sun, 19 November 23