ಹೊಟ್ಟೆನೋವಿಗೆ ವೈದ್ಯರು ಔಷಧಿ ಕೊಡುತ್ತಾರೆ, ಆದರೆ ಹೊಟ್ಟೆಕಿಚ್ಚಿಗೆ ಎಲ್ಲೂ ಔಷಧಿಯಿಲ್ಲ; ಹೆಚ್ ಡಿ ತಮ್ಮಯ್ಯ, ಶಾಸಕ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆಜೆ ಜಾರ್ಜ್ ಅವರ ಗುಣಗಾನವನ್ನು ಶಾಸಕ ತಮ್ಮಯ್ಯ ತಮ್ಮ ಭಾಷಣದುದ್ದಕ್ಕೂ ಮಾಡಿದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಯ ಎಲ್ಲ 5 ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ಕಾರ್ಯಕ್ರಮ ಮುಗಿದ ಬಳಿಕ ರವಿ ಬೆಂಬಲಿಗರು ಪರಿಷತ್ ಸದಸ್ಯನನ್ನು ಹೆಗಲ ಮೇಲೆ ಹೊತ್ತು ಕುಣಿದರು.
ಚಿಕ್ಕಮಗಳೂರು, 24 ಮಾರ್ಚ್: ಚಿಕ್ಕಮಗಳೂರು ಶಾಸಕ ಹೆಚ್ ಡಿ ತಮ್ಮಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಸಿಟಿ ರವಿ (CT Ravi) ನಡುವೆ ರಾಜಕೀಯ ಜಗಳ ಹೊಸದೇನಲ್ಲ. ಇವತ್ತು ಅವರ ವೈಷಮ್ಯದ ಮತ್ತೊಂದು ಎಪಿಸೋಡ್ ನಡೆಯಿತು. ಚಿಕ್ಕಮಗಳೂರಿನ ಮಲ್ಲೇಗೌಡ ಸರಕಾರೀ ಆಸ್ಪತ್ರೆಯ ಹೊರರೋಗಿ ವಿಭಾಗ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ರವಿ ತಾವು ಶಾಸಕರಾಗಿದ್ದಾಗ ಶುರುವಾದ ಕಾಮಗಾರಿಗಳು ನಿಂತುಹೋಗಿರುವ ಬಗ್ಗೆ ಬಾವುಕತೆಯಿಂದ ಮಾತಾಡಿದರು, ತಮ್ಮ ಸರದಿ ಬಂದಾಗ ತಮ್ಮಯ್ಯ, ರವಿಯವರ ಆರೋಪವನ್ನು ಅಲ್ಲಗಳೆಯುತ್ತಾ, ಹೊಟ್ಟೆನೋವಿಗೆ ಇಲ್ಲಿರುವ ಡಾಕ್ಟರ್ಗಳೆಲ್ಲ ಔಷಧಿ ನೀಡುತ್ತಾರೆ, ಅದರೆ ಹೊಟ್ಟೆಕಿಚ್ಚಿಗೆ ಪ್ರಪಂಚದಲ್ಲಿ ಎಲ್ಲೂ ಔಷಧಿ ಇಲ್ಲ ಎಂದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಚಿವನ ಹನಿ ಟ್ರ್ಯಾಪ್ ಆರೋಪಗಳಲ್ಲಿ ಎಷ್ಟು ಹುರುಳಿದೆ ಅನ್ನೋದು ಸಿಬಿಐ ತನಿಖೆ ಮೂಲಕ ಗೊತ್ತಾಗಬೇಕು: ಸಿಟಿ ರವಿ