Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಅಶುತೋಷ್ ಆರ್ಭಟಕ್ಕೆ ಪತರುಗುಟ್ಟಿದ ಪಂತ್ ಪಡೆ; ಡೆಲ್ಲಿಗೆ ರೋಚಕ ಜಯ ತಂದ ದೇಶೀ ಸ್ಟಾರ್ಸ್

Delhi Capitals' Stunning IPL 2025 Victory: 2025ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ಅತ್ಯಂತ ರೋಮಾಂಚಕಾರಿಯಾಗಿತ್ತು. ಆರಂಭದಲ್ಲಿ ಹಿನ್ನಡೆ ಅನುಭವಿಸಿದ ಡೆಲ್ಲಿ, ಅಶುತೋಷ ಶರ್ಮಾರ ಅದ್ಭುತ ಬ್ಯಾಟಿಂಗ್‌ನಿಂದ ಕೊನೆಯ ಓವರ್‌ನಲ್ಲಿ ಗೆಲುವು ಸಾಧಿಸಿತು. ಇತ್ತ ಲಕ್ನೋ ತಂಡ ತನ್ನ ತಪ್ಪುಗಳಿಂದ ಸೋಲಿಗೆ ಕೊರಳೊಡ್ಡಿತು.

IPL 2025: ಅಶುತೋಷ್ ಆರ್ಭಟಕ್ಕೆ ಪತರುಗುಟ್ಟಿದ ಪಂತ್ ಪಡೆ; ಡೆಲ್ಲಿಗೆ ರೋಚಕ ಜಯ ತಂದ ದೇಶೀ ಸ್ಟಾರ್ಸ್
Ashutosh Sharma
Follow us
ಪೃಥ್ವಿಶಂಕರ
|

Updated on:Mar 24, 2025 | 11:52 PM

2025 ರ ಐಪಿಎಲ್​ನ 3ನೇ ದಿನ ಅತ್ಯಂತ ರೋಚಕ ಪಂದ್ಯಕ್ಕೆ ಸಾಕ್ಷಿಯಾಯಿತು. ಒಂದೆಡೆ ಆರಂಭದಲ್ಲೇ ಸೋಲೊಪ್ಪಿಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕ ರೀತಿಯಲ್ಲಿ ಗೆಲುವು ಸಾಧಿಸಿದರೆ, ಮತ್ತೊಂದೆಡೆ ಆರಂಭದಲ್ಲೇ ಪಂದ್ಯವನ್ನು ಕೈವಶ ಮಾಡಿಕೊಂಡಿದ್ದ ಲಕ್ನೋ ತಂಡ ತಾನು ಮಾಡಿಕೊಂಡ ತಪ್ಪುಗಳಿಂದಲೇ ಸೋಲಿಗೆ ಕೊರಳೊಡ್ಡಿತು. ವಿಶಾಖಪಟ್ಟಣದಲ್ಲಿ ನಡೆದ ಈ ಸೀಸನ್​ನ ನಾಲ್ಕನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ 20 ಓವರ್‌ಗಳಲ್ಲಿ 209 ರನ್‌ಗಳ ಬೃಹತ್ ಸ್ಕೋರ್ ದಾಖಲಿಸಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕೇವಲ 65 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತಾದರೂ, ಅಶುತೋಷ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್​ನಿಂದಾಗಿ ಕೊನೆಯ ಓವರ್‌ನಲ್ಲಿ ಕೇವಲ 1 ವಿಕೆಟ್‌ನಿಂದ ಪಂದ್ಯವನ್ನು ಗೆದ್ದುಕೊಂಡಿತು.

ಡೆಲ್ಲಿ ಆರಂಭಿಕ ಆಘಾತ

ಲಕ್ನೋ ನೀಡಿದ 210 ರನ್‌ಗಳ ಗುರಿ ಬೆನ್ನಟ್ಟಿದ ದೆಹಲಿ ತಂಡ ಮೊದಲ ಓವರ್‌ನಲ್ಲಿಯೇ 2 ವಿಕೆಟ್‌ಗಳನ್ನು ಕಳೆದುಕೊಂಡಿತು. ಮೆಗಾ ಹರಾಜಿನಲ್ಲಿ ಎಲ್ಲಾ ತಂಡಗಳಿಂದ ತಿರಸ್ಕರಿಸಲ್ಪಟ್ಟ ಶಾರ್ದೂಲ್ ಠಾಕೂರ್, ಮೊಹ್ಸಿನ್ ಖಾನ್ ಅವರ ಗಾಯದಿಂದಾಗಿ ಈ ಸೀಸನ್‌ನಲ್ಲಿ ಆಡಲು ಅವಕಾಶ ಪಡೆದರು. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಶಾರ್ದೂಲ್ ಲಕ್ನೋ ಪರ ಮೊದಲ ಓವರ್‌ನಲ್ಲಿ ಡಬಲ್ ವಿಕೆಟ್ ಉರುಳಿಸಿದರು. ನಂತರ ಎರಡನೇ ಓವರ್‌ನಲ್ಲಿ ಮೂರನೇ ವಿಕೆಟ್ ಕೂಡ ಪತನವಾಯಿತು. ಶೀಘ್ರದಲ್ಲೇ ತಂಡದ ಅರ್ಧದಷ್ಟು ಜನರು ಪೆವಿಲಿಯನ್‌ಗೆ ಮರಳಿದರು. ಹೀಗಾಗಿ ಕೇವಲ 40 ಎಸೆತಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡ ದೆಹಲಿಯ ಸೋಲು ಖಚಿತವೆನಿಸಿದರೂ ಅಶುತೋಷ್ ಅವರ ಉದ್ದೇಶವೇ ಬೇರೆಯಾಗಿತ್ತು.

ವಿಪ್ರಾಜ್ ವಿಧ್ವಂಸಕ ಬ್ಯಾಟಿಂಗ್

7ನೇ ಓವರ್‌ನಲ್ಲಿ ಬ್ಯಾಟಿಂಗ್​ಗೆ ಬಂದ ಅಶುತೋಷ್ ಆರಂಭದಲ್ಲಿ ತಾಳ್ಮೆಯ ಆಟಕ್ಕೆ ಮುಂದಾದರೆ, ಇತ್ತ ಸ್ಟಬ್ಸ್ ಕೇವಲ 22 ಎಸೆತಗಳಲ್ಲಿ 33 ರನ್ ಗಳಿಸುವ ಮೂಲಕ ತಂಡವನ್ನು ಮತ್ತೆ ಟ್ರ್ಯಾಕ್​ಗೆ ತಂದರು. ಆ ಬಳಿಕ ಬಂದ  ವಿಪ್ರಾಜ್ ನಿಗಮ್ ಪಂದ್ಯದ ಗತಿಯನ್ನು ಬದಲಾಯಿಸಿದರು. ಈ 20 ವರ್ಷದ ಸ್ಪಿನ್ ಆಲ್‌ರೌಂಡರ್ ತಮ್ಮ ಮೊದಲ ಪಂದ್ಯದಲ್ಲೇ ಕೇವಲ 15 ಎಸೆತಗಳಲ್ಲಿ 39 ರನ್ ಗಳಿಸುವ ಮೂಲಕ ದೆಹಲಿ ತಂಡಕ್ಕೆ ಗೆಲುವಿನ ಅಸೆ ಮೂಡಿಸಿದರು. ಇತ್ತ ತನ್ನ ಗೇರ್ ಬದಲಿಸಿದ ಅಶುತೋಷ್‌ ಕೊನೆಯ 3 ಓವರ್‌ಗಳಲ್ಲಿ 39 ರನ್ ಕಲೆಹಾಕಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಅಶುತೋಷ್ ಗೆಲುವಿನ ಸಿಕ್ಸರ್

ವಾಸ್ತವವಾಗಿ 19ನೇ ಓವರ್‌ನಲ್ಲಿ ಡೆಲ್ಲಿ ತಂಡದ 9ನೇ ವಿಕೆಟ್ ಪತನವಾಯಿತು. ಅಂತಿಮವಾಗಿ ಡೆಲ್ಲಿ ತಂಡಕ್ಕೆ 9 ಎಸೆತಗಳಲ್ಲಿ 18 ರನ್‌ಗಳು ಬೇಕಾಗಿದ್ದವು. ಅಂತಹ ಪರಿಸ್ಥಿತಿಯಲ್ಲಿ, ಅಶುತೋಷ್ 19 ನೇ ಓವರ್ ಅನ್ನು ಒಂದು ಸಿಕ್ಸರ್ ಮತ್ತು ಒಂದು ಬೌಂಡರಿಯೊಂದಿಗೆ ಕೊನೆಗೊಳಿಸಿದರು. 20ನೇ ಓವರ್‌ನ ಮೊದಲ ಎಸೆತದಲ್ಲಿ ರಿಷಭ್ ಪಂತ್ ಸ್ಟಂಪಿಂಗ್ ಅವಕಾಶವನ್ನು ತಪ್ಪಿಸಿಕೊಂಡರು. ಆ ನಂತರದ ಎಸೆತದಲ್ಲೂ ರನೌಟ್ ಕೈತಪ್ಪಿತು. ಇದರ ಲಾಭ ಪಡೆದ ಅಶುತೋಷ್ ಸ್ಟ್ರೈಕ್‌ಗೆ ಬಂದಿದಲ್ಲದೆ ಮೂರನೇ ಎಸೆತದಲ್ಲಿ ಸಿಕ್ಸ್ ಬಾರಿಸುವ ಮೂಲಕ ಪಂದ್ಯವನ್ನು ಕೊನೆಗೊಳಿಸಿದರು.

ಪೂರನ್- ಮಾರ್ಷ್​ ಅರ್ಧಶತಕ

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಉತ್ತಮ ಆರಂಭ ಪಡೆಯಿತು. ಐಡೆನ್ ಮಾರ್ಕ್ರಾಮ್ ಬೇಗನೆ ಔಟಾದ ಹೊರತಾಗಿಯೂ, ಮಿಚೆಲ್ ಮಾರ್ಷ್ (72) ಮತ್ತು ನಿಕೋಲಸ್ ಪೂರನ್ (75) ದೆಹಲಿ ಬೌಲರ್‌ಗಳನ್ನು ಬೆಂಡೆತಿದರು. ಇಬ್ಬರೂ ಕೇವಲ 42 ಎಸೆತಗಳಲ್ಲಿ 87 ರನ್‌ಗಳ ಜೊತೆಯಾಟ ನಡೆಸಿದರು. ಈ ಸಮಯದಲ್ಲಿ, ಮಾರ್ಷ್ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದಲ್ಲದೆ 36 ಎಸೆತಗಳಲ್ಲಿ 72 ರನ್ ಗಳಿಸಿ ಔಟಾದರು. ಇತ್ತ ಪೂರನ್​ ಕೂಡ 30 ಎಸೆತಗಳಲ್ಲಿ 6 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 75 ರನ್ ಗಳಿಸಿ ಔಟಾದರು.

ಸ್ಟಾರ್ಕ್​- ಕುಲ್ದೀಪ್ ಮ್ಯಾಜಿಕ್

ಆದರೆ, ನಾಯಕ ರಿಷಭ್ ಪಂತ್​ಗೆ 6 ಎಸೆತಗಳಲ್ಲಿ ತಮ್ಮ ಖಾತೆಯನ್ನು ತೆರೆಯಲು ಸಹ ಸಾಧ್ಯವಾಗಲಿಲ್ಲ. ಇಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮತ್ತೆ ಭರ್ಜರಿ ಪ್ರದರ್ಶನ ನೀಡಿ ಲಕ್ನೋದ ಮಧ್ಯಮ ಮತ್ತು ಕೆಳ ಕ್ರಮಾಂಕವನ್ನು ನಾಶಮಾಡಿತು. ಅದೇ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಎರಡು ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ ಕೂಡ ಎರಡು ವಿಕೆಟ್ ಪಡೆದರು. ಇನ್ನಿಂಗ್ಸ್‌ನ ಕೊನೆಯ ಎರಡು ಎಸೆತಗಳಲ್ಲಿ ಡೇವಿಡ್ ಮಿಲ್ಲರ್ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿ ತಂಡವನ್ನು 209 ರನ್‌ಗಳ ಗಡಿ ದಾಟಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:33 pm, Mon, 24 March 25

ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ