ದಾವಣಗೆರೆ: ಮಹಾನ್ ನಾಯಕರೇ ಹೊಸ ಪಕ್ಷ ಕಟ್ಟಿ ವಾಪಸ್ ಬಂದಿದ್ದಾರೆ. ನಮ್ಮ ರಾಜ್ಯದಲ್ಲಿ ಹೊಸ ಪಕ್ಷ ಕಟ್ಟುವುದರಿಂದ ಏನೂ ಆಗಲ್ಲ. ಅದು ಅಷ್ಟು ಸುಲಭವಲ್ಲ ಎಂದು ಜನಾರ್ದನ ರೆಡ್ಡಿ (Janardhana Reddy) ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಬಗ್ಗೆ ಬಳ್ಳಾರಿ ಸಂಸದ ದೇವೇಂದ್ರಪ್ಪ ಕಿಡಿಕಾರಿದ್ದಾರೆ. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕೆಆರ್ಪಿಪಿ ಎಷ್ಟು ಸೀಟು ಗೆಲ್ಲುತ್ತೆ ಅಂತಾ ಕಾದು ನೋಡೋಣ. ಸರ್ಕಾರದ ಯೋಜನೆ ಹೇಳಿದ್ರೂ ಮತ ಹಾಕೋಕೆ ಯೋಚಿಸ್ತಾರೆ. ಏಕಾಏಕಿ ಪಕ್ಷ ಕಟ್ಟಿದ್ರೆ ಯಾರು ಕೇಳ್ತಾರೆ. ರೆಡ್ಡಿ ವಾಪಸ್ ಕರೆ ತರುವು ವಿಚಾರ ಕೇಂದ್ರ ನಾಯಕರಿಗೆ ಬಿಟ್ಟಿದ್ದು. ಈ ಬಗ್ಗೆ ಚರ್ಚಿಸಿದ್ದೇವೆ, ಯಾವ ಹಂತಕ್ಕೆ ಹೋಗುತ್ತೋ ಗೊತ್ತಿಲ್ಲ ಎಂದು ಹೇಳಿದರು.
ಜೋಶಿ ಸಿಎಂ ಮಾಡಲು RSS ಹುನ್ನಾರ ಎಂಬ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ ಮಾಡುತ್ತಾರೆ. ಬ್ರಾಹ್ಮಣ, ಒಕ್ಕಲಿಗ, ದಲಿತ, ಲಿಂಗಾಯತ ಯಾರೇ ಆಗಬಹುದು. ಹೆಚ್.ಡಿ.ಕುಮಾರಸ್ವಾಮಿ ವಿಷಯಗಳನ್ನು ಕೂಡಿ ಇಟ್ಟಿರುತ್ತಾರೆ. ಇಂತಹ ಸಂದರ್ಭದಲ್ಲಿ ಪಟಾಕಿ ಹಾರಿಸಿಬಿಡ್ತಾರೆ ಎಂದರು.
ಇದನ್ನೂ ಓದಿ: ಕಲ್ಯಾಣ ರಾಜ್ಯದ ಕನಸು ನನಸು ಮಾಡಲು ಸಜ್ಜಾದ ಜನಾರ್ದನ ರೆಡ್ಡಿ: ಪತಿಗೆ ಸಾಥ್ ನೀಡಿದ ಪತ್ನಿ, ಪ್ರಚಾರಕ್ಕಿಳಿದ ಪುತ್ರಿ
ಸುಮಾರು ದಿನಗಳ ಕಾಲ ರಾಜಕೀಯದಿಂದ ದೂರ ಉಳಿದ್ದಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಆ ಮೂಲಕ ಅವರು ತಮ್ಮದೆ ಆದ ಕಲ್ಯಾಣ ಪ್ರಗತಿ ಎಂಬ ಪಕ್ಷವನ್ನು ಸ್ಥಾಪಿಸುವುದರೊಂದಿಗೆ ರಾಜಕಾರಣದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಕೊಪ್ಪಳದಿಂದ ಜನಾರ್ದನ ರೆಡ್ಡಿ ಸ್ಪರ್ಧಿಸಲಿದ್ದು, ಈಗಾಗಲೇ ಚುನಾವಣಾ ಕಾರ್ಯಗಳನ್ನು ಆರಂಭಿಸಿದ್ದಾರೆ. ಇನ್ನು ಇತ್ತ ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಅವರು ತಮ್ಮ ಪತಿ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಇದನ್ನೂ ಓದಿ: Bellary Politics: ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಜನಾರ್ದನ ರೆಡ್ಡಿ ಪತ್ನಿ ಸಭೆ: ಕೈ-ಕಮಲದಲ್ಲಿ ಆತಂಕ ಶುರು
ಜನಾರ್ದನ ರೆಡ್ಡಿ ಮುಸ್ಲಿಂ ಮತಗಳನ್ನ ಸೆಳೆಯಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಕಾಂಗ್ರೆಸ್ ವೋಟ್ ಬ್ಯಾಂಕ್ ಮೇಲೆ ಕೆಆರ್ಪಿಪಿ ಕಣ್ಣು ಇಟ್ಟಿದೆ. ಈ ಹಿಂದೆ ರೆಡ್ಡಿ ಅಮೀರ್ ದರ್ಗಾಕ್ಕೆ ಭೇಟಿ ನೀಡಿ ಚಾದರ್ ಸಲ್ಲಿಕೆ ಮಾಡಿದ್ದರು. ಗಂಗಾವತಿ ಕ್ಷೇತ್ರದ ಖಾಲಿದ್ ಅಲಿ ಬಾಬಾ ದರ್ಗಾಗೂ ಸಹಾಯ ಮಾಡಿದ್ದರು. ಈ ಮೂಲಕ ಮುಸ್ಲಿಂ ಸಮುದಾಯದ ಮನವೊಲಿಕೆಗೆ ರೆಡ್ಡಿ ರಣತಂತ್ರ ರೂಪಿಸಿದ್ದು, ಕಾಂಗ್ರೇಸ ಪಕ್ಷದ ವೋಟ್ ಬ್ಯಾಂಕ್ ಕಬಳಿಸಲು ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ. ಹೌದು ಬಳ್ಳಾರಿ ನಗರದ 40ಕ್ಕೂ ಹೆಚ್ಚು ಮಸೀದಿಗಳ ಮೌಲ್ವಿಗಳ ಜೊತೆ ಲಕ್ಷ್ಮೀ ಅರುಣಾ ಸಭೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:00 pm, Wed, 8 February 23