ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಸಜ್ಜಾದ್ರಾ ಶಾಸಕರು? ರಾಜ್ಯ ರಾಜಕಾರಣದಲ್ಲಾಗುತ್ತಿರುವ ಬೆಳವಣಿಗೆ ವಿವರ ಇಲ್ಲಿದೆ

| Updated By: ರಮೇಶ್ ಬಿ. ಜವಳಗೇರಾ

Updated on: Aug 18, 2023 | 8:06 AM

ರಾಜ್ಯ ರಾಜಕೀಯದಲ್ಲಿ ಆಪರೇಷನ್ ಹಸ್ತದ ಸುಂಟರಗಾಳಿ ಎದ್ದಿದೆ. ಈ ಸುಂಟರಗಾಳಿ ಶಿರಸಿ ಮತ್ತು ಯಶವಂತಪುರದಲ್ಲಿ ಕ್ಷೇತ್ರಗಳಲ್ಲಿ ಕಂಪನ ಎಬ್ಬಿಸಿದೆ. ಅದಕ್ಕೆ ಕಾರಣ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಂ ಹೆಬ್ಬಾರ್​​ ಮತ್ತು ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್ ಕರೆದಿದ್ದ ಬೆಂಬಲಿಗರ ಮೀಟಿಂಗ್ ಪುಷ್ಠಿ ನೀಡಿದೆ.

ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಸಜ್ಜಾದ್ರಾ ಶಾಸಕರು? ರಾಜ್ಯ ರಾಜಕಾರಣದಲ್ಲಾಗುತ್ತಿರುವ ಬೆಳವಣಿಗೆ ವಿವರ ಇಲ್ಲಿದೆ
ಬಿಜೆಪಿ ಮತ್ತು ಕಾಂಗ್ರೆಸ್
Follow us on

ಬೆಂಗಳೂರು, (ಆಗಸ್ಟ್ 18): ರಾಜ್ಯ ರಾಜಕಾರಣದಲ್ಲಿ (Karnataka Politics) ಮತ್ತೆ ಪಕ್ಷಾಂತರ ಪರ್ವದ ಬಗ್ಗೆ ಬಿಸಿ ಬಿಸಿ ಚರ್ಚೆಗಳು ಕಾವೇರಿವೆ. ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ಬಾಂಬೆ ಫ್ರೆಂಡ್ಸ್​ ಇದೀಗ ಕಾಂಗ್ರೆಸ್‌ಗೆ (Congress) ವಾಪಸಾಗುವ ಸುದ್ದಿ ಹರಿದಾಡುತ್ತಿದೆ. ಅದರಲ್ಲಿ ಹಾಲಿ ಶಾಸಕ ಶಿವರಾಮ್​​​ ಹೆಬ್ಬಾರ್ (Shivaram Hebbar)​​​​, ಬಿಜೆಪಿ(BJP) ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗ್ತಾರೆ ಅನ್ನೋ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ. ಜೊತೆಗೆ ಎಸ್​​​ಟಿ ಸೋಮಶೇಖರ್ (ST Somashekhar)​​ ಕೂಡ ಕಾಂಗ್ರೆಸ್​​ನತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಶಾಸಕ, ಮಾಜಿ ಸಚಿವ ಶಿವರಾಮ್​​​​ ಹೆಬ್ಬಾರ್​​​​ ಕಮಲ ಬಿಟ್ಟು ಕೈ ಹಿಡಿಯಲಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ಶಿವರಾಮ್​​​​​​​​​ ಹೆಬ್ಬಾರ್​​​​ ನಿನ್ನೆ ತಮ್ಮ ಬೆಂಬಲಿಗರೊಂದಿಗೆ ಮುಂಡಗೋಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರೆ ಆಗುವ ಅನುಕೂಲಗಳ ಬಗ್ಗೆ ಮತ್ತು ಬೆಂಬಲಿಗರ ಅಭಿಪ್ರಾಯದ ಬಗ್ಗೆ ಸಭೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಎಸ್​ಟಿ ಸೋಮಶೇಖರ್,​​ ಬೆಂಬಲಿಗರನ್ನು ಕಾಂಗ್ರೆಸ್​ಗೆ ಕರೆತರಬೇಕೆಂದು ಕೆಪಿಸಿಸಿ ಅಧ್ಯಕ್ಷರು ಟಾಸ್ಕ್​ ನೀಡಿದ್ದಾರೆ: ಶಾಸಕ ಎನ್​ ಶ್ರೀನಿವಾಸ್​​​

ಇನ್ನು ಕಮಲ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರೆ ಕ್ಷೇತ್ರದ ಜನ ಮತ್ತೆ ಬೆಂಬಲಿಸುತ್ತಾರಾ? ಎಂಬುದರ ಬಗ್ಗೆಯೂ ಚರ್ಚಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಇನ್ನು ಸಭೆ ಬಳಿಕ ಕಾಂಗ್ರೆಸ್‌ಗೆ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಶಿವರಾಂ ಹೆಬ್ಬಾರ್, ಕಾಂಗ್ರೆಸ್ ಸೇರುವ ಕಾಲ ನಿರ್ಣಯ ಮಾಡಿಲ್ಲ ಎಂದಿದ್ದಾರೆ.

ಸೋಮಶೇಖರ್ ಕರೆದಿದ್ದ ಬೆಂಬಲಿಗರ ಸಭೆಯಲ್ಲಿ ‘ಕೈ’ ಶಾಸಕ!

ಇನ್ನೂ ಯಶವಂತಪುರದ ಬಿಜೆಪಿ ಶಾಸಕ ಎಸ್‌.ಟಿ ಸೋಮಶೇಖರ್ ಕೂಡ ಬಿಜೆಪಿ ತೊರದು ಮತ್ತೆ ಕೈ ಹಿಡಿಯುತ್ತಾರೆ ಅನ್ನೋ ಸುದ್ದಿ ವಿಧಾನಸೌಧದ ಪಡಸಾಲೆಯಲ್ಲಿ ಭಾರೀ ಸದ್ದು ಮಾಡ್ತಿದೆ. ಇದೇ ಹೊತ್ತಲ್ಲಿ ಸೋಮಶೇಖರ್, ಡಿಕೆಯನ್ನ ಭೇಟಿಯಾಗಿದ್ದು, ಇದಾದ ನಂತ್ರ ನಿನ್ನೆ ಬೆಂಬಲಿಗರ ಸಭೆ ನಡೆಸಿದ್ದು, ಆಪರೇಷನ್ ಹಸ್ತಕ್ಕೆ ಪುಷ್ಟಿ ನೀಡಿದಂತಿದೆ. ಸೋಮಶೇಖರ್ ಕಾಂಗ್ರೆಸ್‌ ಹಾದಿಯಲ್ಲೇ ಇದ್ದಾರೆ ಎಂಬುದಕ್ಕೆ ಪುರಾವೆ ನೀಡಿದಂತಿದೆ. ಇಂಟ್ರಸ್ಟಿಂಗ್ ಅಂದ್ರೆ, ಸೋಮಶೇಖರ್ ಕರೆದಿದ್ದ ಸಭೆಯಲ್ಲಿ ನೆಲಮಂಗಲದ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಕೂಡ ಪ್ರತ್ಯಕ್ಷವಾಗಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಸಭೆಗೂ ಮುನ್ನವೇ ಎಸ್‌.ಟಿ.ಸೋಮಶೇಖರ್, ಯಶವಂತಪುರದ ಮೂಲ ಬಿಜೆಪಿಗರ ವಿರುದ್ಧವೇ ಗುಡುಗಿದ್ದಾರೆ.. ಆದ್ರೆ, ಸಭೆ ಬಳಿಕ ಕಾಂಗ್ರೆಸ್​​​​​​​​​ಗೆ ಸೇರ್ಪಡೆ ಬಗ್ಗೆ ಚರ್ಚಿಸಿಲ್ಲ ಎಂದಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಮತ್ತೆ ಪಕ್ಷಾಂತರ ಪರ್ವ ಜೋರಾಗಿ ಸದ್ದು ಮಾಡುತ್ತಿದ್ದು. ಈ ಚರ್ಚೆಯಲ್ಲಿ ಶಿವರಾಮ್​​​​​​​ ಹೆಬ್ಬಾರ್​​​, ಎಸ್​​​.ಟಿ.ಸೋಮಶೇಖರ್​​​​ ಹೆಸರು ಮುಂಚೂಣೆಯಲ್ಲಿ ಕೇಳಿ ಬರುತ್ತಿದೆ. ಈ ಇಬ್ಬರು ನಾಯಕರು​​ ಕಮಲ ತೊರೆದು ಕೈ ಹಿಡಿಯುತ್ತಾರಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಶಾಸಕರು, ಸಚಿವರ ಸಭೆಯಲ್ಲೂ ಚರ್ಚೆ

ಆಪರೇಷನ್ ಹಸ್ತ ವಿಚಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಸಭೆಯಲ್ಲಿಯೂ ಚರ್ಚೆಯಾಗಿದೆ.
ಶಾಸಕ ಶಿವರಾಂ ಹೆಬ್ಬಾರ್ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್​ ಶಾಸಕರು, ಸಚಿವರ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪ್ರಸ್ತಾಪಿಸಿ ಜಿಲ್ಲಾ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಆದ್ರೆ, ಈ ವೇಳೆ ಹೆಬ್ಬಾರ್ ಸೇರ್ಪಡೆಗೆ ಆರ್ ವಿ ದೇಶಪಾಂಡೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ನಮಗೆ ಅವಶ್ಯಕತೆ ಇದೆಯೇ ಎಂದು ಪ್ರಶ್ನೆ ಪ್ರಶ್ನಿಸಿದ್ದಾರೆ. ದೇಶಪಾಂಡೆ ಮಾತಿಗೆ ಇನ್ನೋರ್ವ ಹಿರಿಯ ಶಾಸಕ ಸಹ ಬೆಂಬಲಿಸಿದ್ದಾರೆ ಎನ್ನಲಾಗಿದೆ.

ಮುಂದಿನ ರಾಜಕೀಯ ನಡೆಗಳನ್ನ ಗಮನದಲ್ಲಿಟ್ಟುಕೊಂಡು ಅವಶ್ಯಕ. ನಂಬರ್ ಇನ್ನಷ್ಟು ಹೆಚ್ಚಿಸಲೇ ಬೇಕಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಡಿಸಿಎಂ ಮಾತಿಗೆ ಇತರ ಶಾಸಕರು, ಯಾವುದೇ ನಿರ್ಧಾರ ತೆಗೆದುಕೊಂಡರು ನಾವು ಬದ್ದ ಎಂದಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಆಪರೇಷನ್ ಹಸ್ತ ಸದ್ದು ಮಾಡುತ್ತಿದ್ದಂತೆ,ಬಿಜೆಪಿ ನಾಯಕರು ಬಾಂಬೆ ಬಾಯ್ಸ್‌ಗೆ ಕರೆ ಮಾಡಿದ್ದಾರೆ. ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದ್ರೆ, ಬಾಂಬೆ ಸ್ನೇಹಿತರ ಹೇಳಿಕೆಗಳೇ ನಿಗೂಢವಾಗಿವೆ. ಆದ್ರೆ, ಕೈ ನಾಯಕರು ಮಾತ್ರ ರೆಡ್‌ಕಾರ್ಪೆಟ್ ಹಾಕುತ್ತಿದ್ದು, ಯಾರನ್ನ ಆಪರೇಷನ್ ಮಾಡಲಿದೆ ಎನ್ನುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

ಇನ್ನಷ್ಟಿ ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 6:57 am, Fri, 18 August 23