ಲೋಕಸಭೆಗೆ ಹಾಸನದಿಂದ ಪ್ರಜ್ವಲ್​ ರೇವಣ್ಣ ಸ್ಪರ್ಧೆ: ದೇವೇಗೌಡರ ತೀರ್ಮಾನವೇ ಅಂತಿಮ: ಹೆಚ್​. ಡಿ ರೇವಣ್ಣ

ಲೋಕಸಭೆಗೆ ಹಾಸನದಿಂದ ಪ್ರಜ್ವಲ್​ ರೇವಣ್ಣ ಸ್ಪರ್ಧೆ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು ತೆಗೆದುಕೊಂಡ ತೀರ್ಮಾನವೇ ಅಂತಿಮ. ಈ ಬಗ್ಗೆ ಪಕ್ಷ ಯಾವ ತೀರ್ಮಾನ ಮಾಡುತ್ತೆ ಅದಕ್ಕೆ ಬದ್ಧ. ಭವಾನಿ ರೇವಣ್ಣ ಅವರದ್ದು ಚರ್ಚೆ ಆಗಿತ್ತು. ಜನಾಭಿಪ್ರಾಯ ಕೇಳಿದ್ದೆವು ಮಾಜಿ ಸಚಿವ ಹೆಚ್​ ಡಿ ರೇವಣ್ಣ ಹೇಳಿದರು.

ಲೋಕಸಭೆಗೆ ಹಾಸನದಿಂದ ಪ್ರಜ್ವಲ್​ ರೇವಣ್ಣ ಸ್ಪರ್ಧೆ: ದೇವೇಗೌಡರ ತೀರ್ಮಾನವೇ ಅಂತಿಮ: ಹೆಚ್​. ಡಿ ರೇವಣ್ಣ
ಮಾಜಿ ಸಚಿವ ಹೆಚ್​ಡಿ ರೇವಣ್ಣ
Follow us
| Updated By: ವಿವೇಕ ಬಿರಾದಾರ

Updated on: Aug 08, 2023 | 3:14 PM

ಹಾಸನ: ಲೋಕಸಭೆಗೆ ಹಾಸನದಿಂದ ಪ್ರಜ್ವಲ್​ ರೇವಣ್ಣ (Prajwal Revanna) ಸ್ಪರ್ಧೆ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು (HD Devegowda) ತೆಗೆದುಕೊಂಡ ತೀರ್ಮಾನವೇ ಅಂತಿಮ. ಈ ಬಗ್ಗೆ ಪಕ್ಷ ಯಾವ ತೀರ್ಮಾನ ಮಾಡುತ್ತೆ ಅದಕ್ಕೆ ಬದ್ಧ. ಭವಾನಿ ರೇವಣ್ಣ (Bhavani Revanna) ಅವರದ್ದು ಚರ್ಚೆ ಆಗಿತ್ತು. ಜನಾಭಿಪ್ರಾಯ ಕೇಳಿದ್ದೆವು. ಪ್ರಾದೇಶಿಕ ಪಕ್ಷದ ಕುಟುಂಬದವರ ಸ್ಪರ್ಧೆ ಬೇಡ ಅಂತ ಬಿಲ್ ತರಲಿ ಎಂದು ಮಾಜಿ ಸಚಿವ ಹೆಚ್​ ಡಿ ರೇವಣ್ಣ ಹೇಳಿದರು.

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ, ಹೆಚ್​ ಡಿ ದೇವೇಗೌಡರು ಹೊಡೆದಾಡುತ್ತಿದ್ದಾರೆಂದರೇ ಅದು ಭ್ರಮೆ. ಹೆಚ್​.ಡಿ ದೇವೇಗೌಡರದ್ದು ಮುಗಿದೇ ಹೋಯ್ತು ಅಂದರು. ಕುಮಾರಸ್ವಾಮಿಯವರು ಆಶ್ವಾಸನೆ ಕೊಟ್ಟರೇ ಈಡೇರಿಸುತ್ತಾರೆ. ಬೆಳಗ್ಗೆ ಎದ್ದರೆ ದೇವೇಗೌಡರ ಕುಟುಂಬ ಅಂತೀರ. ಎರಡು ರಾಷ್ಟ್ರೀಯ ಪಕ್ಷಗಳ ಏಕೆ ಬಗ್ಗೆ ಮಾತನಾಡಲ್ಲ ಎಂದು ಪ್ರಶ್ನಿಸಿದರು.

ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆಗೆ 2006 ರಲ್ಲಿ ನಮ್ಮ ಸರ್ಕಾರ 1000 ಸಹಾಯಕ ಎಂಜಿನಿಯರ್​ಗಳನ್ನು ನೇಮಕ ಮಾಡಿತ್ತು. ಮೂರೇ ವರ್ಷದಲ್ಲಿ ನಾವು ನಿರ್ಣಯ ಮಾಡಿದ್ದೇವು. 2022 ರಲ್ಲಿ 320 ಸಹಾಯಕ ಎಂಜಿನಿಯರ್​ಗಳನ್ನು ನೇಮಕ ಮಾಡಲಾಗಿತ್ತು. ಅವರಿಗೆ 16 ರಿಂದ 20 ವರ್ಷ ಸರ್ವೀಸ್ ಆಗಿದೆ. ಅವರಿಗೆ ಇನ್ನೂ ಮುಂಬಡ್ತಿ ನೀಡಿಲ್ಲ. ಯಾಕೆ ಬಡ್ತಿ ನೀಡಲು ಒದ್ದಾಡುತ್ತಿದ್ದೀರಿ. ಲೋಕೋಪಯೋಗಿ ಸಚಿವನಾಗಿ ಎಂಟು ವರ್ಷ ಕೆಲಸ ಮಾಡಿದ್ದೇನೆ. ಆದರೆ ನಾನು ಯಾವತ್ತೂ ಈ ರೀತಿ ಮಾಡಿರಲಿಲ್ಲ. ಯಾವ ಕಾರಣಕ್ಕೆ ಕೊಟ್ಟಿಲ್ಲ, ಲೋಕೋಪಯೋಗಿ ಇಲಾಖೆ ಸಚಿವರೇ ಹೇಳಿ ಎಂದರು.

ಅಕ್ರಮ ಅಂತ ನಾನು ಹೇಳಲ್ಲ. ಆಪಾದನೆ ಮಾಡುವಷ್ಟು ಬೆಳೆದಿಲ್ಲ. ಭ್ರಷ್ಟಾಚಾರ ಬಗ್ಗೆ ಆರೋಪ ಮಾಡಲ್ಲ. ನನಗೆ ಬೇಕಾಗಿರುವುದು ಪ್ರಾಮಾಣಿಕ ಅಧಿಕಾರಿಗಳು. ಅದನ್ನು ನಾನು ಪ್ರಸ್ತಾಪ ಮಾಡಿದ್ದೀನಿ ನೀರು ಬಿಡಲ್ಲ, ಅಧಿಕಾರಗಳು ಕೆಲಸ ಮಾಡೋಕೆ ಬಿಡಲ್ಲ. ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಗೌರವವಿದೆ. ನಾನು ಪ್ರಿಯಾಂಕ್ ಖರ್ಗೆ ದುಡ್ಡು ಹೊಡೆದಿದ್ದಾರೆ ಎಂದು ನಾನು ಹೇಳಿಲ್ಲ. ಪ್ರಿಯಾಂಕ್​ ಖರ್ಗೆ ಅವರ ಹೆಸರಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಪ್ರಿಯಾಂಕ ಖರ್ಗೆ ಯುವಕರಿದ್ದಾರೆ. ಕೆಲಸ ಮಾಡುತ್ತಾರೆ. ಆದರೆ ಅವರ ಹೆಸರಿಗೆ ಕಳಂಕ ಬರಬಾರದಲ್ಲ. ನಮ್ಮ ಜಿಲ್ಲೆಯಲ್ಲಿ ಕೆಲವರು ಏನೇನೋ ಮಾಡಿದ್ದಾರೆ. ಹಾಗಾಗಿ ಅವರ ಗಮನ ಸೆಳೆಯೋಕೆ ಹೇಳುತ್ತಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಐನೂರಲ್ಲ ಸಾವಿರ ಅಧಿಕಾರಿಗಳ ವರ್ಗಾವಣೆ ಮಾಡಿಕೊಳ್ಳಲಿ, ಯಾವ ಹತಾಶೆಯೂ ಇಲ್ಲ: ಹೆಚ್​ಡಿ ರೇವಣ್ಣ

ಭ್ರಷ್ಟಾಚಾರದ್ದು ನಾನು ಹೇಳಿದ ಮೇಲೆ ದಾಖಲೆ ಕೇಳಿದರೇ ಎಲ್ಲಿಂದ ತರಲಿ. ಬಿಜೆಪಿಯವರು ನಾಲ್ಕು ತಿಂಗಳು ಯಾಕೆ ಇಟ್ಟುಕೊಂಡರು. ಕಾಂಗ್ರೆಸ್ ಎರಡು ತಿಂಗಳು ಯಾಕೆ ಇಟ್ಟುಕೊಂಡರು. ಇದರ ಬಗ್ಗೆ‌ ನೀವು ತನಿಖೆ ಮಾಡಿ. ದೊಡ್ಡವರು ಇದ್ದಾರೆ, ಜನ ಆಯ್ಕೆ ಮಾಡಿ ವಿಧಾನಸಭೆ ಕಳಿಸಿದ್ದಾರೆ. ಕುಮಾರಸ್ವಾಮಿ ಅವರಿಗೆ ಮಾಹಿತಿ ಇರುತ್ತೆ. ಮಾಜಿ ಸಿಎಂಗೆ ಅಧಿಕಾರಿಗಳು ಹೇಳುತ್ತಾರೆ. ನಮಗೆ ಯಾರು ಹೇಳುತ್ತಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ