ಸಿಎಂಗೆ ಶಾಸಕರು ಬರೆದ ಪತ್ರ ನಕಲಿ ಅಲ್ಲ ಅಸಲಿ ಎಂದ ಸಿಟಿ ರವಿ ಕೊಟ್ಟ ಕಾರಣ ಏನು? ಇಲ್ಲಿದೆ ನೋಡಿ

CT Ravi slams Karnataka Congress Government; ಈ ರೀತಿಯ ಅಸಮಾಧಾನ ನೋಡಿದರೆ ಲೋಕಸಭೆ ಚುನಾವಣೆ ತನಕ ಈ ಸರ್ಕಾರ ಉಳಿಯಲಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕಮಿಷನ್ ಕೇಳ್ತಿರೋದು ನಿಜ ಎಂಬುದು ನನಗೂ ಕೇಳಿ ಬಂದಿದೆ. ಜೊತೆಗೆ ಬ್ಲಾಕ್​​ಮೇಲ್ ಕೂಡ ಮಾಡ್ತಿದ್ದಾರೆ ಎಂದು ಸಿಟಿ ರವಿ ಟೀಕಿಸಿದ್ದಾರೆ.

ಸಿಎಂಗೆ ಶಾಸಕರು ಬರೆದ ಪತ್ರ ನಕಲಿ ಅಲ್ಲ ಅಸಲಿ ಎಂದ ಸಿಟಿ ರವಿ ಕೊಟ್ಟ ಕಾರಣ ಏನು? ಇಲ್ಲಿದೆ ನೋಡಿ
ಸಿಟಿ ರವಿ
Follow us
ಪ್ರಸನ್ನ ಗಾಂವ್ಕರ್​
| Updated By: Ganapathi Sharma

Updated on: Aug 08, 2023 | 3:08 PM

ಬೆಂಗಳೂರು, ಆಗಸ್ಟ್ 8: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಶಾಸಕರ ಜತೆ ಸರಣಿ ಸಭೆ ನಡೆಸುತ್ತಿರುವುದನ್ನು ನೋಡಿದರೆ, ಎಂಎಲ್​​ಎಗಳು ಅವರಿಗೆ ಬರೆದಿರುವ ಪತ್ರ ನಕಲಿ ಅಲ್ಲ, ಅಸಲಿ ಎಂಬುದು ತಿಳಿಯುತ್ತದೆ ಎಂದು ಬಿಜೆಪಿ ನಾಯಕ ಸಿಟಿ ರವಿ (CT Ravi)  ಹೇಳಿದರು. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಸರಣಿ ಸಭೆ ಮಾಡುತ್ತಿದ್ದಾರೆ. ಮೊದಲು ಶಾಸಕರ ಪತ್ರ ನಕಲಿ ಅಂತ ಹೇಳಿದರು. ಆದರೆ ಅದನ್ನು ಗಂಭೀರವಾಗಿ ತೆಗೆದುಕೊಂಡು ಸಿದ್ದರಾಮಯ್ಯ ಸಭೆ ಮಾಡುತ್ತಿದ್ದಾರೆ. ಅದಕ್ಕಿಂತ ಮೊದಲು ಶಾಸಕಾಂಗ ಪಕ್ಷದ ಸಭೆ ನಡೆಸಿದ್ದಾರೆ. ಆ ನಂತರ ಒಂದರ ಹಿಂದೆ ಒಂದರಂತೆ ಸಭೆ ನಡೆಸಿದರು. ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಗೊತ್ತಾಗುತ್ತದೆ ಶಾಸಕರು ಬರೆದಿರುವ ಪತ್ರ ನಕಲಿ ಅಲ್ಲ ಅಸಲಿ ಎಂಬುದು ಎಂದು ಹೇಳಿದ್ದಾರೆ.

ಈ ರೀತಿಯ ಅಸಮಾಧಾನ ನೋಡಿದರೆ ಲೋಕಸಭೆ ಚುನಾವಣೆ ತನಕ ಈ ಸರ್ಕಾರ ಉಳಿಯಲಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ದೇಶಗಳಲ್ಲಿ ಚೀನಾದ ಪರ ಕೆಲಸ ಮಾಡುವ ವಿಚಾರವಾಗಿ ‘ನ್ಯೂಯಾರ್ಕ್ ಟೈಮ್ಸ್’ನ ತನಿಖಾ ವರದಿ ಆಧರಿಸಿ ಸಮಗ್ರ ತನಿಖೆ ಆಗಬೇಕು. ಹಲವು ವಿಷಯ ಇಟ್ಟುಕೊಂಡು ಅರಾಜಕತೆ ಸೃಷ್ಟಿಸಲು ಷಡ್ಯಂತ್ರ ಹೂಡಲಾಗುತ್ತಿದೆ. ಹಣ ಪಡೆದು ಕೆಲಸ ಮಾಡ್ತಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಭಾರತದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ನೋಡಿದರೆ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದು ಅವರು ಆಗ್ರಹಿಸಿದರು.

ಕಮಿಷನ್ ಕೇಳ್ತಿರೋದು ನಿಜ ಎಂಬುದು ನನಗೂ ಕೇಳಿ ಬಂದಿದೆ: ಸಿಟಿ ರವಿ

ಗುತ್ತಿಗೆದಾರರು ದೂರು ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಳೆ ಬಿಲ್​ಗೆ ಪರ್ಸಂಟೇಜ್ ಜೊತೆಗೆ ಬ್ಲಾಕ್​​ಮೇಲ್ ಸಹ ಮಾಡುತ್ತಿದ್ದಾರೆ. ಪ್ರಾಮಾಣಿಕತೆ ಇದ್ದರೆ ಗುತ್ತಿಗೆದಾರರ ಬಿಲ್ ಕ್ಲಿಯರ್ ಮಾಡಲಿ. ಆರೋಪ ಮಾಡಿದರೆ ಧಮ್ಕಿ ಹಾಕುತ್ತಿದ್ದಾರೆ ಅಷ್ಟೇ ಎಂದು ಸಿಟಿ ರವಿ ಆರೋಪಿಸಿದರು.

ಐದು ವರ್ಷಗಳ ಬಿಲ್​​​ಗೂ ಪರ್ಸಂಟೇಜ್ ಕೊಡಿ ಎಂದು ಬೇಡಿಕೆ ಇಡುತ್ತಿರುವುದು ಗುತ್ತಿಗೆದಾರರ ನಡುವಿನ ಗುಸು ಗುಸು ಸುದ್ದಿಯಾಗಿದೆ. ಇದನ್ನು ಅಲ್ಲಗೆಳೆಯಲು ಪತ್ರ ನಕಲಿ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಗುತ್ತಿಗೆದಾರರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ಅದನ್ನು ನಕಲಿ ಎನ್ನಲು ಸಾಧ್ಯವೇ ಎಂದು ರವಿ ಪ್ರಶ್ನಿಸಿದ್ದಾರೆ.

ಎಷ್ಟು ಜನ ಗುತ್ತಿಗೆದಾರರಿಗೆ ಬಿಲ್ ಕ್ಲಿಯರ್ ಮಾಡಿದ್ದಾರೆ? ನಮ್ಮ ಮೇಲೆ ಆರೋಪ ಮಾದ್ದರು.‌ ಆ ಬಗ್ಗೆ ಬೇಕಾದರೆ ತನಿಖೆ ಮಾಡಿಸಲಿ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಬ್ಲಾಕ್​ಮೇಲ್ ಮಾಡಲು ಯಾರಿಗೂ ಧಮ್ ಇಲ್ಲ. ಅವರೇ ಬೇಕಾದರೆ ಬೇರೆಯವರಿಗೆ ಬ್ಲಾಕ್​ಮೇಲ್ ಮಾಡುತ್ತಾರೆ. ಕಮಿಷನ್ ಕೇಳ್ತಿರೋದು ನಿಜ ಎಂಬುದು ನನಗೂ ಕೇಳಿ ಬಂದಿದೆ. ಜೊತೆಗೆ ಬ್ಲಾಕ್​​ಮೇಲ್ ಕೂಡ ಮಾಡ್ತಿದ್ದಾರೆ. ಇವರು ಸರಿ ಇದ್ರೆ ಹಣ ಬಿಡುಗಡೆ ಮಾಡಲಿ. ಬಿಜೆಪಿ ಸರ್ಕಾರದಲ್ಲಿ ಜ್ಯುಡಿಶಿಯರಿ ಕಮಿಟಿ ರಚನೆ ಮಾಡಲಾಗಿತ್ತು. ಕಾಮಗಾರಿ ನೀಡೋ ಮೊದಲು ಸರಿ ಇದೆಯಾ ಅಂತ ಪರಿಶೀಲನೆ ಮಾಡಿ ನಿರ್ಧಾರ ಕೈಗೊಳ್ಳಲಾಗುತ್ತಿತ್ತು. ಇವರು ಅಧಿಕಾರಕ್ಕೆ ಬಂದ ಮೇಲೆ ಯಾವ ಕ್ರಮ ಕೈಗೊಂಡಿದ್ದಾರೆ? ನಮ್ಮದೇ ಹಣಕ್ಕೆ ಕಮಿಷನ್ ಕೇಳ್ತಿದ್ದಾರೆ ಅನ್ನೋದು ಅವರ ಆರೋಪ. ಈ ಸರ್ಕಾರವು ಭ್ರಷ್ಟಾಚಾರದ ಪರಾಕಾಷ್ಠೆಗೆ ತಲುಪಿದೆ ಎಂದು ಅವರು ಟೀಕಿಸಿದ್ದಾರೆ.

ಇದನ್ನೂ ಓದಿ: ಮಂತ್ರಿಗಳ ಮಾನಗೇಡಿ ಕೃತ್ಯಗಳನ್ನೂ ಸಮರ್ಥನೆ ಮಾಡಿಕೊಳ್ಳುವ ಲಜ್ಜೆಗೇಡಿ ಸಿಎಂ ರಾಜ್ಯಕ್ಕೆ ವಕ್ಕರಿಸಿದ್ದಾರೆ: ಹೆಚ್​​ಡಿ ಕುಮಾರಸ್ವಾಮಿ

ಈ ಸರ್ಕಾರ ಬಂದ ಮೇಲೆ ಗೂಂಡಾಗಿರಿ, ಸ್ವ ಪಕ್ಷದ ಶಾಸಕರ ಅಸಹಾಯಕತೆ ಇದೆ. ಶಾಸಕರ ಅಸಹಾಯಕತೆ ಮಂತ್ರಿಗಳನ್ನು ಕಾಡ್ತಿದೆ‌. ಸಾರ್ವಜನಿಕವಾಗಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ರವಿ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಕಲುಷಿತ ನೀರು ಕುಡಿದು 6 ಜನ ಮೃತಪಟ್ಟಿದ್ದಾರೆ. ಚಿಕಿತ್ಸೆ ಕೊಡಲಾಗದಷ್ಟು ಅಸಹಾಯಕತೆ ಸರ್ಕಾರಕ್ಕೆ ಇದೆ. ಯಾದಗಿರಿಯಲ್ಲಿ ಕಲುಷಿತ ನೀರು ಎಂದೆಲ್ಲಾ ವರದಿಯಾಗಿತ್ತು. ಚಿತ್ರದುರ್ಗದಲ್ಲಿ ನಿನ್ನೆ ಆರನೇ ಸಾವು ಸಂಭವಿಸಿದೆ. ಸರ್ಕಾರ ಎರಡುವರೆ ತಿಂಗಳಲ್ಲಿ ಜನರ ವಿಶ್ವಾಸ ಕಳೆದುಕೊಂಡಿದೆ‌. ಎರಡೂವರೆ ತಿಂಗಳಲ್ಲೇ ಸರ್ಕಾರದ ಮೇಲೆ ಅಸಹನೆ ವ್ಯಕ್ತವಾಗಿರೋದು ಇದೇ ಮೊದಲು ಎಂದು ರವಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ