ಎಚ್​ಡಿ ಕುಮಾರಸ್ವಾಮಿ ಲೆಕ್ಕಾಚಾರ: ರಮೇಶ್ ಜಾರಕಿಹೊಳಿ ಸಿಡಿ ಮಾಡಲು 5 ಕೋಟಿ ರೂಪಾಯಿ ಡೀಲ್

ಇದೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ, ಎಚ್​.ಡಿ. ಕುಮಾರಸ್ವಾಮಿ ಸಿಡಿ ರಾಜಕಾರಣದ ಬಗ್ಗೆ ಮಾತನಾಡಿ, ರಮೇಶ್​ ಜಾರಕಿಹೊಳಿ ಅವರ ಸಿಡಿ ಮಾಡಲು ರೂ. 5 ಕೋಟಿ ಡೀಲ್​ ಆಗಿದೆ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.

ಎಚ್​ಡಿ ಕುಮಾರಸ್ವಾಮಿ ಲೆಕ್ಕಾಚಾರ: ರಮೇಶ್ ಜಾರಕಿಹೊಳಿ ಸಿಡಿ ಮಾಡಲು 5 ಕೋಟಿ ರೂಪಾಯಿ ಡೀಲ್
ಹೆಚ್.​ಡಿ ಕುಮಾರಸ್ವಾಮಿ
Follow us
ಡಾ. ಭಾಸ್ಕರ ಹೆಗಡೆ
| Updated By: ಸಾಧು ಶ್ರೀನಾಥ್​

Updated on: Mar 05, 2021 | 1:16 PM

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ವಿಚಾರದ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌. ಡಿ.ಕುಮಾರಸ್ವಾಮಿ ಇದು 200 % ಬ್ಲಾಕ್ ಮೇಲ್ ಎಂದು ಬಣ್ಣಿಸಿದ್ದಾರೆ. ಈ ಮೂಲಕ ಈಗ ನಡೆಯುತ್ತಿರುವ ಚರ್ಚೆಗೆ ಹೊಸದೊಂದು ಆಯಾಮ ನೀಡಿದ್ದಾರೆ. ಇದೇ ವಿಚಾರದ ಕುರಿತು ಮಾತನಾಡಿರುವ ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ. ಅವರ ಪ್ರಕಾರ ಈ ಸಿಡಿ ವಿಚಾರದಲ್ಲಿ 5 ಕೋಟಿ ರೂಪಾಯಿ ವ್ಯವಹಾರ ಆಗಿದೆ ಎಂದು ಹೇಳಿದ್ದಾರೆ. ಆದರೆ, ರೂ 5 ಕೋಟಿಯನ್ನು ಯಾರು, ಯಾರಿಗೆ ಮತ್ತು ಎಲ್ಲಿ ಕೊಟ್ಟರು? ಎಂಬ ವಿಚಾರವನ್ನು ಅವರು ಹೊರಹಾಕಿಲ್ಲ.

ರಮೇಶ್ ಜಾರಕಿಹೊಳಿ ಅವರ ಸಿಡಿ ಬಿಡುಗಡೆ ಮಾಡಿರುವ ದಿನೇಶ್ ಕಲ್ಲಹಳ್ಳಿ ತನ್ನ ಬಳಿ ಇನ್ನೂ ಮೂರು ಸಿಡಿ ಇದೆ. ಅದನ್ನು ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಈಗಾಗಲೇ ಮಾಧ್ಯಮದ ಮುಂದೆ ಅನೇಕ ಬಾರಿ ಹೇಳಿದ್ದಾರೆ. ಆದರೆ ಆ ಮೂರು ಸಿಡಿಗಳಲ್ಲಿ ಇಬ್ಬರು ರಾಜಾರಣಿಗಳಲ್ಲ. ಹಾಗೊಮ್ಮೆ ಅದನ್ನು ಬಿಡುಗಡೆ ಮಾಡಿದರೆ, ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿ ಆಗುತ್ತದೆ ಎಂದೂ ಅವರು ಹೇಳಿದ್ದಾರೆ.

ಬೇರೆ ರಾಜಕಾರಿಣಿಗಳ ಸಿಡಿ ಇದೆ

ಇದಕ್ಕೆ ಸಂಬಂಧಿಸಿದಂತೆ, ಇನ್ನೋರ್ವ ಆರ್​ಟಿಐ ಕಾರ್ಯಕರ್ತ ರಾಜಶೇಖರ ಮಲಾಲಿ ಬಳ್ಳಾರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಡಿ ಈ ಕುರಿತು ಮಾತನಾಡಿದ್ದಾರೆ. ಸೆಕ್ಸ್ ಸಿಡಿ ಮಾದರಿಯಲ್ಲಿ 19 ಸಿಡಿಗಳು ಇವೆ. ಸಿಡಿ ಮಾಡುವುದಕ್ಕೆ ಅಂತಲೇ ಒಂದು ತಂಡ ಹಾಗೂ ಟಿವಿ ಚಾನೆಲ್ ಇದೆ ಎಂದು ಹೇಳುವ ಮೂಲಕ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ರಾಜಶೇಖರ ಮಲಾಲಿ ಎಂಎಲ್‌ಎ, ಎಂಪಿಗಳು ಸೇರಿದಂತೆ ಹಲವರ ಸಿಡಿಗಳಿವೆ. ಈ ರೀತಿಯ ಸಿಡಿ ಮಾಡುವುದಕ್ಕೇ ಅಂತಾನೆ ಒಂದು ಟೀಂ ಇದೆ. ಒಂದು ಟಿವಿ ಚಾನೆಲ್‌ ಕೈವಾಡವಿದೆ. ಅವರವರ ಅನುಕೂಲಕ್ಕೆ ತಕ್ಕಂತೆ ಬಿಡುಗಡೆ ಮಾಡುತ್ತಾರೆ ಎಂದು ಸ್ಫೋಟಕ ಹೇಳಿಕೆ ನೀಡಿದರು.

ರಮೇಶ್‌ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ಸಿಡಿ ಬಿಡುಗಡೆ ಕೇವಲ ಮರ್ಯಾದೆ ತೆಗೆಯುವುದಕ್ಕಷ್ಟೇ ಬಿಡುಗಡೆ. ಮಾನ ಮರ್ಯಾದೆ ಹಾಳು ಮಾಡುವ ಉದ್ದೇಶದಿಂದ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ. ಈ ವಿಡಿಯೋವನ್ನು ಗಮನಿಸಿದಾಗ ಇದೊಂದು ಒಪ್ಪಿತ ಕ್ರಿಯೆಯಂತೆ ಕಾಣುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಮರ್ಯಾದೆ ತೆಗೆಯುವುದಕ್ಕಷ್ಟೆ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗುತ್ತದೆ ಎಂದು ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ. ಆದರೆ ಯಾರ ಮೇಲೆ ಹೂಡುತ್ತಾರೋ ಗೊತ್ತಿಲ್ಲ.

ಇದರ ಜೊತೆಗೆ ಮಂತ್ರಿ ಸಿ.ಪಿ. ಯೋಗೇಶ್ವರ್​ ತನ್ನ ಬಳಿ ಮಾಜಿ ಮುಖ್ಯಮಂತ್ರಿ ಅವರ ಸಿಡಿ ಇದೆ ಎಂದು ಹೇಳಿದ್ದರು. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಮಾತನಾಡಿರುವ ಕುಮಾರಸ್ವಾಮಿ ಯೋಗೇಶ್ವರ್​ಗೂ ಚುರುಕು ಮುಟ್ಟಿಸಲು ಪ್ರಯತ್ನಿಸಿದ್ದಾರೆ. ನನ್ನ ಬಳಿ ಸಿಡಿ ಇದೇ ಅನ್ನೋರನ್ನು ಸರ್ಕಾರ ಬಂಧಿಸಬೇಕು. ಇದರ ಹಿಂದೆ ದೊಡ್ಡ ತಂಡವೇ ಇದೆ ಎಂಬ ಅನುಮಾನ ವ್ಯಕ್ತಪಡಿಸಿದ ಎಚ್​ಡಿಕೆ, ಈ ರೀತಿಯ ಸಿಡಿ ಇದೆ ಎನ್ನುವವರೇ ಮಾಡುತ್ತಿದ್ದಾರಾ ಆಥವಾ ಇವರ ಹಿಂದೆ ಬೇರೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕು. ಬ್ಲಾಕ್ ಮೇಲ್ ಮಾಡುವ ವ್ಯಕ್ತಿಗಳನ್ನು ಬಂಧಿಸಿ ಏರೋಪ್ಲೇನ್ ಹತ್ತಿಸಿದ್ರೆ ಎಲ್ಲಾ ಸತ್ಯ ಹೊರಬರುತ್ತದೆ. ಇದರ ಬಗ್ಗರ ಸೂಕ್ತ ಕ್ರಮ ತೆಗೆದುಕೊಳ್ಳದೇ ಹೋದರೆ ಕೀಳು ಮಟ್ಟದ ಸಂಸ್ಕೃತಿಗೆ ನಾವೇ ದಾರಿ ಮಾಡಿಕೊಟ್ಟ ಹಾಗೇ. ಸಂತ್ರಸ್ಥೆ ಬಗ್ಗೆ ಮಾತು ಆ ನಂತರ ಇರಲಿ. ಮೊದಲು ಸಿಡಿ ವಿಚಾರವಾಗಿ ಮಾತನಾಡುವವನನ್ನ ಬಂಧಿಸಲಿ. ಇನ್ನೂ ನಾಲ್ಕು, ಹತ್ತಂಬೊತ್ತು ಸಿಡಿ ಇವೆ ಅನ್ನೋದು ಬ್ಲಾಕ್‌ಮೇಲ್‌. ಯಾರದ್ದೇ ಖಾಸಗಿ ಬದುಕನ್ನ ಈ ರೀತಿ ತೋರಿಸದನ್ನ ತಪ್ಪು ಅಂತಾರೆ. ಅಷ್ಟು ಸಿಡಿ ಇವೆ ಅಂತ ಹೇಳಬೇಕಾದ್ರೆ ಈತನೇ ಚಿತ್ರೀಕರಣ ಮಾಡಿಸಿದ್ನ? ಈ ಎಲ್ಲ ವಿಚಾರಗಳು ಬಹಿರಂಗವಾಗಬೇಕಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ