Karnataka Politics: ಭವಾನಿ ರೇವಣ್ಣಗೆ ಹಾಸನ ಟಿಕೆಟ್ ವಿಚಾರ: ಕುಮಾರಸ್ವಾಮಿ ವ್ಯಂಗ್ಯದ ಪ್ರತಿಕ್ರಿಯೆ

"ಯಾರೋ ನಾಲ್ಕೈದು ಜನರು ಹೇಳಿದ ತತ್​ಕ್ಷಣ ಟಿಕೆಟ್ ನೀಡಲು ಆಗುವುದಿಲ್ಲ. ಕೆಲವರಿಗೆ ಪ್ರೀತಿ ವಿಶ್ವಾಸ ಇರುತ್ತೆ. ಅಭಿಮಾನದಿಂದ ಮಾತನಾಡಿದ್ದಾರೆ. ಅದನ್ನು ಅಭಿಪ್ರಾಯ ಎನ್ನಲು ಆಗಲ್ಲ. ಟಿಕೆಟ್ ನೀಡುವ ವಿಚಾರವನ್ನು ಪಕ್ಷದ ಚೌಕಟ್ಟಿನಲ್ಲಿ ಕುಳಿತು ತೀರ್ಮಾನ ಮಾಡುತ್ತೇವೆ,” ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

Karnataka Politics: ಭವಾನಿ ರೇವಣ್ಣಗೆ ಹಾಸನ ಟಿಕೆಟ್ ವಿಚಾರ: ಕುಮಾರಸ್ವಾಮಿ ವ್ಯಂಗ್ಯದ ಪ್ರತಿಕ್ರಿಯೆ
Edited By:

Updated on: Jan 26, 2023 | 4:05 PM

ರಾಯಚೂರು: ಭವಾನಿ ರೇವಣ್ಣಗೆ ಹಾಸನ ವಿಧಾನಸಭಾ ಕ್ಷೇತ್ರದ (JDS ticket to Bhavani Revanna) ಟಿಕೆಟ್ ನೀಡಲು ನಿರ್ಧರಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಪುನರುಚ್ಚರಿಸಿದ್ದಾರೆ. ಭವಾನಿ ರೇವಣ್ಣಗೆ ಟಿಕೆಟ್ ಕೊಡುವುದಿಲ್ಲ ಎಂದು ಹೆಚ್​ಡಿಕೆ ನಿನ್ನೆ ಬುಧವಾರವೂ ಹೇಳಿದ್ದರು. ಇಂದು ಮಾಧ್ಯಮ ಪ್ರತಿನಿಧಿಗಳು ರಾಯಚೂರಿನಲ್ಲಿ ಈ ವಿಷಯವನ್ನು ಕೆದಕಿದಾಗ ಕುಮಾರಸ್ವಾಮಿ ತಾನು ನಿನ್ನೆ ಏನು ಹೇಳಬೇಕೋ ಅದನ್ನು ಹೇಳಿಯಾಗಿದೆ ಎನ್ನುವ ಮೂಲಕ ಭವಾನಿ ರೇವಣ್ಣಗೆ ಟಿಕೆಟ್ ಇಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

ಈಗಾಗಲೇ ನಾಲ್ವರು ಮಹಿಳೆಯರಿಗೆ ಟಿಕೆಟ್ ಘೋಷಣೆ ಮಾಡಿದ್ದೇವೆ. ಸಮರ್ಥ ಅಭ್ಯರ್ಥಿ ಇದ್ದಾಗ ಕುಟುಂಬದವರನ್ನು ಸ್ಪರ್ಧೆಗೆ ಇಳಿಸಲ್ಲ. ಈ ಬಗ್ಗೆ ಪದೇ ಪದೇ ಸಮಜಾಯಿಷಿ ಕೊಡಬೇಕಿಲ್ಲ,” ಎಂದವರು ಹೇಳಿದ್ದಾರೆ.

ಯಾರೋ ನಾಲ್ಕೈದು ಜನರು ಹೇಳಿದ ತತ್​ಕ್ಷಣ ಟಿಕೆಟ್ ನೀಡಲು ಆಗುವುದಿಲ್ಲ. ಕೆಲವರಿಗೆ ಪ್ರೀತಿ ವಿಶ್ವಾಸ ಇರುತ್ತೆ. ಅಭಿಮಾನದಿಂದ ಮಾತನಾಡಿದ್ದಾರೆ. ಅದನ್ನು ಅಭಿಪ್ರಾಯ ಎನ್ನಲು ಆಗಲ್ಲ. ಟಿಕೆಟ್ ನೀಡುವ ವಿಚಾರವನ್ನು ಪಕ್ಷದ ಚೌಕಟ್ಟಿನಲ್ಲಿ ಕುಳಿತು ತೀರ್ಮಾನ ಮಾಡುತ್ತೇವೆ,” ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಹಾಸನ ಜಿಲ್ಲೆಯ ಸಾಲಗಾಮೆ ಹೋಬಳಿಯ ಕಕ್ಕೇನಹಳ್ಳಿಯಲ್ಲಿ ನಿನ್ನೆ ಬುಧವಾರ (. 25) ಭವಾನಿ ರೇವಣ್ಣ ಮಾತನಾಡಿ, ತಾನು ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನಿಸಿರುವುದಾಗಿ ಹೇಳಿದ್ದರು.

ಈ ಬಾರಿ ಹಾಸನ ಕ್ಷೇತ್ರದಲ್ಲಿ ಜೆಡಿಎಸ್​ನಿಂದ ನನ್ನನ್ನು ಅಭ್ಯರ್ಥಿ ಮಾಡಬೇಕೆಂದು ಎಲ್ಲರೂ ಸೇರಿ ನಿರ್ಧಾರ ಕೈಗೊಂಡಿದ್ದಾರೆ. ಸ್ವಲ್ಪ ದಿನದಲ್ಲೇ ನನ್ನ ಹೆಸರು ಪ್ರಕಟಿಸುತ್ತಾರೆಎಂದು ಭವಾನಿ ರೇವಣ್ಣ ತಿಳಿಸಿದ್ದರು.

ಆ ಬಗ್ಗೆ ನಿನ್ನೆಯೇ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, ಈ ದೇಶದ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ನಿಲ್ಲುವ ಹಕ್ಕಿದೆ. ಜೆಡಿಎ್ ಪಕ್ಷದಿಂದ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಪಕ್ಷದ ಸಂಘಟನಾ ದೃಷ್ಟಿಯನ್ನು ಗಮನದಲ್ಲಿರಿಸಿ ತೀರ್ಮಾನ ಮಾಡಲಾಗುತ್ತದೆ ಎಂದಿದ್ದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಪ್ರಜ್ವಲ್ ರೇವಣ್ಣ, ತಮ್ಮ ತಾಯಿ ಭವಾನಿ ರೇವಣ್ಣಗೆ ಟಿಕೆಟ್ ನೀಡಬೇಕೋ ಬೇಡವೋ ಎಂಬುದನ್ನು ರೇವಣ್ಣ ಆಗಲೀ ಕುಮಾರಸ್ವಾಮಿ ಆಗಲೀ ನಿರ್ಧಾರ ಮಾಡಲು ಸಾಧ್ಯವಿಲ್ಲ. ಅದೆಲ್ಲವನ್ನೂ ದೇವೇಗೌಡರೇ ತೀರ್ಮಾನಿಸುವುದು, ಅವರೇ ಬಿ ಫಾರ್ಮ್ ಕೊಡುವುದು ಎಂದಿದ್ದರು.

ಪ್ರಜ್ವಲ್ ರೇವಣ್ಣರ ಈ ಹೇಳಿಕೆಗೂ ಕುಮಾರಸ್ವಾಮಿ ಟಾಂಟ್ ಮಾಡಿದ್ದಾರೆ. “ಪ್ರಜ್ವಲ್ ರೇವಣ್ಣ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ದೇವೇಗೌಡರೇ ಬಿ ಫಾರ್ಮ್​ಗೆ ಸಹಿ ಮಾಡುವುದುಲ. ಆದರೆ, ಯಾರು ಯಾವ ಕ್ಷೇತ್ರದಲ್ಲಿ ನಿಲ್ಲಬೇಕೆಂಬುದನ್ನು ಪಕ್ಷದ ಸಂಸದೀಯ ಮಂಡಳಿ ತೀರ್ಮಾನಿಸಲಿದೆಎಂದು ಮಾಜಿ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ.