ಬೆಂಗಳೂರು ನ.17: ಲುಲು ಮಾಲ್ಗೆ (Lulu Mall) ಭೂಮಿ ಕಬಳಿಸಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಆರೋಪಕ್ಕೆ ಸಂಬಂಧಿಸಿದಂತೆ ಮಾಲ್ ಕಟ್ಟಿರುವ ಜಾಗ ಕೇಂದ್ರ ಸರ್ಕಾರದ ಸಂಸ್ಥೆಯದ್ದು. ಹೆಚ್.ಡಿ ಕುಮಾರಸ್ವಾಮಿ ಏನೇನು ಕೇಳಿದ್ದಾರೆ ಎಲ್ಲದಕ್ಕೂ ಜನ ಉತ್ತರ ಕೊಟ್ಟಿದ್ದಾರೆ. ಹೆಚ್ಡಿ ಕುಮಾರಸ್ವಾಮಿ ಆಚಾರ, ವಿಚಾರಕ್ಕೆ ಜನರೇ ಉತ್ತರ ಕೊಟ್ಟಿದ್ದಾರೆ. ಇನ್ನೂ ಏನ್ ಬೇಕಾದರು ಕೇಳಲಿ ನಾನು ಉತ್ತರ ಕೊಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾನು (ಡಿಕೆ ಶಿವಕುಮಾರ್) ಏನಾದರು ತಪ್ಪು ಮಾಡಿದ್ದರೇ ಗಲ್ಲಿಗೆ ಹಾಕಲಿ, ಎಲ್ಲದಕ್ಕೂ ತಯಾರಾಗಿದ್ದೇನೆ. ಈ ಪೊಗರು, ಬ್ಲ್ಯಾಕ್ಮೇಲ್ಗೆ ಹೆದರಲ್ಲವೆಂದು ಅವರಿಗೂ ಗೊತ್ತಿದೆ. ಆ ಮಾಲ್ ಕಟ್ಟಿದ್ದು ನಾನಲ್ಲ. ಜಾಯಿಂಟ್ ಡೆವಲಪ್ಮೆಂಟ್, ಶೋಭಾ ಡೆವಲಪ್ಮೆಂಟ್ ಕಟ್ಟಿದ್ದು ಎಂದು ತಿಳಿಸಿದರು.
ಇದನ್ನೂ ಓದಿ: ವಿದ್ಯುತ್ ಕಳ್ಳಾಟ, ದಂಡ ಪಾವತಿಸದ ಬೆನ್ನಲ್ಲೇ ಲುಲು ಮಾಲ್ ಕರೆಂಟ್ ಬಗ್ಗೆ ಧ್ವನಿ ಎತ್ತಿದ ಕುಮಾರಸ್ವಾಮಿ
ಅವರು ಏನೇನು ಪಟ್ಟಿ ಕೊಡುತ್ತಾರಲ್ಲ ಲೆಕ್ಕ ಕೊಡೋಣ. ಮಾಲ್ ಅನ್ನು ನಮ್ಮ ಸ್ನೇಹಿತರು ತೆಗೆದುಕೊಂಡಿದ್ದರು. ಅದನ್ನು ನಾನು ಅವರ ಬಳಿ ತೆಗೆದುಕೊಂಡಿದ್ದೇನೆ. ಅವರ ತಂದೆಯವರು 15 ವರ್ಷದ ಹಿಂದೇನೆ, ಜಯರಾಜ್ ಆಪೀರ್ ಬಳಿಯೇ ತನಿಖೆ ಮಾಡಿಸಿದ್ದಾರೆ. ಏನಾದರೂ ತಪ್ಪು ಮಾಡಿದ್ದರೇ ಗಲ್ಲಿಗೆ ಹಾಕಲಿ. ಎಲ್ಲದಕ್ಕೂ ತಯಾರಾಗಿದ್ದೇನೆ. ಅವರಿಗೆ ಏನ್ ದಾಖಲೆ ಬೇಕು, ನಾನು ಸಾರ್ವಜನಿಕ ವ್ಯಕ್ತಿ ಆಗಿದ್ದೇನೆ. ಅವರಿಗೆ ಹೇಳುತ್ತೇನೆ, ಅವರು ಏನೇನು ಬಿಲ್ಲು ಕಟ್ಟಿದ್ದಾರೆ, ತಂದು ತೋರಿಸಲಿ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ