ವಿದ್ಯುತ್ ಕಳ್ಳಾಟ, ದಂಡ ಪಾವತಿಸದ ಬೆನ್ನಲ್ಲೇ ಲುಲು ಮಾಲ್​ ಕರೆಂಟ್​ ಬಗ್ಗೆ ಧ್ವನಿ ಎತ್ತಿದ ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು ತಮ್ಮ ಮನೆಗೆ ಶೃಂಗರಿಸಲಾಗಿದ್ದ ವಿದ್ಯುತ್​ ದೀಪಗಳಿಗೆ ಅನಧಿಕೃತವಾಗಿ ಕರೆಂಟ್​​ ಬಳಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಕಾಂಗ್ರೆಸ್​ ಕಾರ್ಯಕರ್ತರು ಹೆಚ್​ಡಿ ಕುಮಾರಸ್ವಾಮಿ ಕರೆಂಟ್​ ಕಳ್ಳ ಎಂದು ಪೋಸ್ಟರ್​ ಅಂಟಿಸಿದ್ದರು. ಇದರಿಂದ ಆಕ್ರೋಶಗೊಂಡ ಹೆಚ್​ಡಿ ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ ಅವರ ಪಾಲುದಾರಿಕೆಯ ಲುಲು ಮಾಲ್​ನ ಆಸ್ತಿ ಮತ್ತು ಬಳಕೆ ಮಾಡಿರುವ ವಿದ್ಯುತ್​ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ವಿದ್ಯುತ್ ಕಳ್ಳಾಟ, ದಂಡ ಪಾವತಿಸದ ಬೆನ್ನಲ್ಲೇ ಲುಲು ಮಾಲ್​ ಕರೆಂಟ್​ ಬಗ್ಗೆ ಧ್ವನಿ ಎತ್ತಿದ ಕುಮಾರಸ್ವಾಮಿ
ಡಿಕೆ ಶಿವಕುಮಾರ್​, ಲುಲು ಮಾಲ್​, ಹೆಚ್​ಡಿ ಕುಮಾರಸ್ವಾಮಿ
Follow us
ಪ್ರಸನ್ನ ಗಾಂವ್ಕರ್​
| Updated By: ವಿವೇಕ ಬಿರಾದಾರ

Updated on:Nov 17, 2023 | 12:28 PM

ಬೆಂಗಳೂರು ನ.17: ದೀಪವಾಳಿ ಹಬ್ಬದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಮನೆಯನ್ನು ವಿದ್ಯುತ್​ ದೀಪಗಳಿಂದ ಶೃಂಗರಿಸಲಾಗಿತ್ತು. ಈ ವಿದ್ಯುತ್​ ದೀಪಗಳಿಗೆ ಅನಧಿಕೃತವಾಗಿ ಕರೆಂಟ್​ (Current) ಕಂಬದಿಂದ ಸಂಪರ್ಕ ಪಡೆಯಲಾಗಿತ್ತು. ಇದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿ ದಂಡ ಪಾವತಿಸಿದ್ದರು. ಅನಧಿಕೃತವಾಗಿ ವಿದ್ಯುತ್​ ಸಂಪರ್ಕ ಪಡೆದಿದ್ದಕ್ಕೆ ಕಾಂಗ್ರೆಸ್ (Congress)​ ಕಾರ್ಯಕರ್ತರು ಜೆಡಿಎಸ್​ ಕಚೇರಿ ಕಂಪೌಂಡ್​ಗಳಿಗೆ “ಕರೆಂಟ್​ ಕಳ್ಳ” ಎಂಬ ಪೋಸ್ಟರ್​ ಅಂಟಿಸಿದ್ದರು. ಇದರಿಂದ ಆಕ್ರೋಶಗೊಂಡ ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಪಾಲುದಾರಿಕೆಯ ಲುಲು ಮಾಲ್​ನ (Lulu Mall) ಆಸ್ತಿ ಮತ್ತು ಬಳಕೆ ಮಾಡಿರುವ ವಿದ್ಯುತ್​ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ಬೆಂಗಳೂರಿನಲ್ಲಿರುವ ಜೆಡಿಎಸ್​ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಲುಲು ಮಾಲ್​ಗೆ 24 ಎಕರೆ ಖರಾಬು ಭೂಮಿಯನ್ನ ಕಬಳಿಸಲಾಗಿದೆ. 1934ರ ಭೂಮಿಯ ದಾಖಲೆಗಳನ್ನು ಸುಟ್ಟು ಹಾಕಿ ನಾಶ ಮಾಡಿದ್ದಾರೆ. ಇವರೆಲ್ಲ ಹೇಗೆಲ್ಲಾ ದಾಖಲೆ ಬದಲಾಯಿಸಿದ್ದಾರೆಂದು ಗೊತ್ತಿದೆ. ಭೂದಾಖಲೆಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿ ಭೂಮಿ ಕಬಳಿಸಿದ್ದಾರೆ. ಈ ಎಲ್ಲಾ ದಾಖಲೆಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ ಎಂದು ಆರೋಪ ಮಾಡಿದರು.

ಲುಲು ಮಾಲ್​​​ ಕಾಮಗಾರಿ ವೇಳೆ, ಆರಂಭಕ್ಕೂ ಮುನ್ನ 6 ತಿಂಗಳು ಕರೆಂಟ್ ಬಿಲ್​ ನೀಡಿಲ್ಲ. ಆಗ ಲುಲು ಮಾಲ್​ಗೆ ಬಳಕೆ ಮಾಡಿದ್ದ ವಿದ್ಯುತ್​ಗೆ​​​​​ ದಂಡ ಹಾಕುತ್ತೀರಾ?  ಹೈ ಟೆನ್ಷನ್ ವೈರ್ ಅಂಡರ್ ಗ್ರೌಂಡ್​ನಲ್ಲಿ ತೆಗೆದುಕೊಂಡು ಮಾಲ್​ಗೆ ಹೋಗಿದ್ದಾರೆ. ಅದಕ್ಕೆ ಎಷ್ಟು ಹಣ ಕಟ್ಟಿದ್ದೀರಾ? ಸುಜಾತ ಟಾಕೀಸ್ ಮುಂದೆ ಇದ್ದ ಹೈ ಟೆನ್ಷನ್ ವೈರ್ ಹೇಗೆ ಅಂಡರ್ ಗ್ರೌಂಡ್​ನಲ್ಲಿ ತಗೊಂಡು ಹೋದರಿ? ಜನರಿಗಾಗಿ ಮಾಡಿದ್ರಾ? ನಕಲಿ ಸೊಸೈಟಿಯನ್ನ ಅಸಲಿ ಮಾಡಿಕೊಳ್ಳೋರು‌ ಇವರು ಎಂದು ಆರೋಪಿಸಿದರು.

ಇದನ್ನೂ ಓದಿ: 71 ಯೂನಿಟ್​ಗೆ ಮೂರು ಪಟ್ಟು ದಂಡ ವಿಧಿಸಿದ ಬೆಸ್ಕಾಂ: ಹೆಚ್​ಡಿ ಕುಮಾರಸ್ವಾಮಿ ಆರೋಪ

ಇನ್ನು ವೈರಲ್​ ಆದ ಯತೀಂದ್ರ ಸಿದ್ದರಾಮಯ್ಯ ಅವರ ಪೋನ್​ ಸಂಭಾಷಣೆಯ ವಿಡಿಯೋ ಬಗ್ಗೆ ಮಾತನಾಡಿದ ಅವರು ಯಾರು ವಿವೇಕಾನಂದ, ಮಹದೇವ ಯಾರು ಅನ್ನೋದನ್ನ ಮಾಧ್ಯಮದವರು ಪತ್ತೆ ಹಚ್ಚಿದ್ದೀರಿ. ಈ ಬಗ್ಗೆ ಪ್ರಶ್ನಿಸಿದರೇ ಹೆಚ್​​ಡಿ ಕುಮಾರಸ್ವಾಮಿ ಹತಾಷೆಯಿಂದ ಹೀಗೆ ಮಾಡುತ್ತಿದ್ದಾರೆ ಅಂತ ಕಾಂಗ್ರೆಸ್ ಟ್ವೀಟ್ ಮಾಡಿದೆ. ಮಾನಸೀಕ ಸ್ತಿಮಿತ ಕಳೆದುಕೊಂಡಿದ್ದಾರೆ ಅಂತ ಹೇಳಿದ್ದಾರೆ. ಸದಾ ವರ್ಗಾವಣೆ ದಂಧೆಯಲ್ಲಿ ಇದ್ದೇನೆ ಅಂತ ಹೇಳಿದ್ದಾರೆ. ಸಿದ್ದರಾಮಯ್ಯ ಅವರೇ ಕೋಆರ್ಡಿಮೇಷನ್ ಕಮಿಟಿಲಿ ನೀವು ಇದ್ದರಲ್ಲಾ, ಆಗ ಇದರ ಬಗ್ಗೆ ಪ್ರಸ್ತಾಪ ಮಾಡಿದ್ರಾ? ಕಾಫಿ, ಟೀಗೆ ಕರೆಯುತ್ತಿದ್ರಲ್ಲಾ ಆಗ ಪ್ರಸ್ತಾಪ ಮಾಡಿದ್ರಾ? ಎಂದು ಪ್ರಶ್ನಿಸಿದ್ದಾರೆ.

ಪೆನ್​ಡ್ರೈವ್ ಟುಸ್ ಆಯ್ತು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ನಾನು ತೋರಿಸಿದ ತಕ್ಷಣ ಯಾಕೆ ದಯವಿಟ್ಟು ಅಣ್ಣ ಅಂತ ಕರೆ ಮಾಡಿದ್ರಿ? ನಾವು ನಿಮ್ಮ ಹಣದಲ್ಲಿ ಇದ್ದೀವಿ ಅಂದ್ರಲಾ ಯಾಕೆ ಕರೆ ಮಾಡಿದರು? ಮುಖ್ಯಮಂತ್ರಿ ಪುತ್ರನ ವಿಡಿಯೋ 7 ಗಂಟೆಗೆ ರಿಲೀಸ್ ಆಯ್ತು. ಅವರು ಪಟ್ಟಿ ರಿಲೀಸ್ ಮಾಡಿದ್ದು 3 ಗಂಟೆಗೆ. ವಿಡಿಯೋ ರಿಲೀಸ್ ಆದ ಕೂಡಲೇ ಕರೆದು ಸಿಎಸ್​ರ್​ ಫಂಡ್ ಅಂತ ಹೇಳಬೇಕಿತ್ತು. ಡಿಕೆ ಶಿವಕುಮಾರ್​​ ಹೋಗಿ ಹೇಳಿದ ಮೇಲೆ ಸಿಎಂ ಸಿಎಸ್​ಆರ್​ ಫಂಡ್ ಅಂತ ಹೇಳಿದ್ದಾರೆ. ಮೂರು ಗಂಟೆವರೆಗೂ ಯಾಕೆ ಹೇಳಲಿಲ್ಲ. ಇದನ್ನ ಯಾರಾದ್ರು ನಂಬುತ್ತಾರಾ? ಎಂದು ವಾಗ್ದಾಳಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:18 pm, Fri, 17 November 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್