ದೇಶದ ಸಂಪತ್ತು ಮುಸ್ಲಿಮರಿಗೆ ಹಂಚುತ್ತೇನೆ ಎಂಬ ಸಿಎಂ ಹೇಳಿಕೆಗೆ ಹೆಚ್ಡಿಕೆ ತಿರುಗೇಟು
ನಾಡಿನ ಸಿಎಂ ಆಗಿ ರಾಜ್ಯದ ಸರ್ವತೋಮುಖ ಜನರ ಅಭಿವೃದ್ಧಿ ಮಾಡಬೇಕು. ಒಂದು ಸಮಾಜವನ್ನು ಓಲೈಕೆ ಮಾಡೋದಲ್ಲ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ(HD Kumaraswamy) ಸಿಎಂಗೆ ತಿರುಗೇಟು ನೀಡಿದ್ದಾರೆ.
ಬೆಳಗಾವಿ, ಡಿ.05: ದೇಶದ ಸಂಪತ್ತು ಮುಸ್ಲಿಮರಿಗೆ ಹಂಚುತ್ತೇನೆಂಬ ಸಿಎಂ ಸಿದ್ದರಾಮಯ್ಯ(Siddaramaiah)ನವರ ಹೇಳಿಕೆ ವಿಚಾರ, ‘ಇದು ಓಲೈಕೆ ಅಲ್ಲದೇ ಬೇರೇನು ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಪ್ರಶ್ನಿಸಿದ್ದು, ನಾಡಿನ ಸಿಎಂ ಆಗಿ ರಾಜ್ಯದ ಸರ್ವತೋಮುಖ ಜನರ ಅಭಿವೃದ್ಧಿ ಮಾಡಬೇಕು. ಒಂದು ಸಮಾಜವನ್ನು ಓಲೈಕೆ ಮಾಡೋದಲ್ಲ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ(HD Kumaraswamy) ಸಿಎಂಗೆ ತಿರುಗೇಟು ನೀಡಿದ್ದಾರೆ. ‘ರಾಜ್ಯದ ಎಲ್ಲ ಜನರ ಬದುಕು ಕಟ್ಟಲು ಈ ಸರ್ಕಾರ ಇರಬೇಕು. ಕಳೆದ ಬಜೆಟ್ನಲ್ಲಿ ಇವರೆಷ್ಟು ಹಣ ಇಟ್ಟಿದ್ದರು ಅದನ್ನು ಮೊದಲು ಕೊಡಲಿ. ಬಳಿಕ ಮುಂದಿನ ವರ್ಷ 10 ಸಾವಿರ ಕೋಟಿ ಕೊಡಲಿ ಎಂದರು.
ಸಿಎಂ ಹೇಳಿದ್ದೇನು?
ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತೇನೆ, ನಿಮ್ಮನ್ನು (ಮುಸ್ಲಿಂ) ನಾನು ರಕ್ಷಣೆ ಮಾಡುತ್ತೇನೆ ಎಂದಿದ್ದರು. ಇದಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಬೆಳಗಾವಿಯ ಸುವರ್ಣಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಅವರು, ಈ ಬಗ್ಗೆ ಒಂದು ಪತ್ರಿಕೆ ಮಾತ್ರ ನಾನು ಹೇಳಿದ್ದನ್ನು ಸರಿಯಾಗಿ ಬರೆದಿದೆ. ಅದನ್ನು ಬಿಟ್ಟು ಬೇರೆ ರೀತಿ ಅರ್ಥ ಕಲ್ಪಿಸಿಕೊಂಡು ಹೇಳಿದರೆ ಏನು ಮಾಡುವುದು ಎಂದು ಸ್ಪಷ್ಟನೆ ನೀಡಿದ್ದರು. ನಾನು ಹೇಳಿದ್ದರಲ್ಲಿ ವಾಟ್ ಇಸ್ ರಾಂಗ್ ಇನ್, ಮುಸ್ಲಿಮರು ಸೇರಿ ಎಲ್ಲರನ್ನೂ ರಕ್ಷಣೆ ಮಾಡುತ್ತೇವೆಂದು ನಾನು ಹೇಳಿದ್ದು. ಬೇರೆ ರೀತಿ ಅರ್ಥ ಕಲ್ಪಿಸಿಕೊಂಡು ಹೇಳಿದರೆ ಏನು ಮಾಡುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ಇದನ್ನೂ ಓದಿ:ಮುಸ್ಲಿಮರನ್ನು ನಾನು ರಕ್ಷಣೆ ಮಾಡುತ್ತೇನೆ ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ
ನಮ್ಮ ಮನೆ ಕೆಲ ವಿಚಾರದ ಅಪಪ್ರಚಾರಕ್ಕೆ ಮುಂದಾದರು
ಇದೇ ವೇಳೆ ಮಾತನಾಡಿದ ಕುಮಾರಸ್ವಾಮಿ ‘ನಮ್ಮ ಮನೆಯಲ್ಲಾದ ಕೆಲ ವಿಚಾರದ ಬಗ್ಗೆ ಅಪಪ್ರಚಾರಕ್ಕೆ ಮುಂದಾದರು. ಅದನ್ನು ಕೆದಕಲು ಹೋದ್ರೆ ಈಗ ಬೇರೆ ವಿಚಾರಗಳು ಚರ್ಚೆ ಆಗುತ್ತದೆ. ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ನಾವು ಹೆಚ್ಚಿನ ಮಹತ್ವ ಕೊಟ್ಟಿದ್ದು, ಸದನದಲ್ಲಿ ನೀರಾವರಿ ವಿಚಾರಗಳ ಬಗ್ಗೆ ಚರ್ಚೆಯಾಗಬೇಕು. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಪಾತ್ರದ ಬಗ್ಗೆ ಚರ್ಚಿಸುತ್ತೇವೆ. ಅಧಿಕಾರಿಗಳ ವರ್ಗಾವಣೆ ವಿಚಾರಗಳ ಬಗ್ಗೆ ಮಾಹಿತಿ ಇದೆ. ಕೋಟ್ಯಂತರ ಹಣ ಇಲ್ಲಿ ಖರ್ಚು ಮಾಡಿ ವ್ಯರ್ಥ ಮಾಡೋದು ಬೇಡ ಎಂದು ಸುವರ್ಣಸೌಧದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:32 pm, Tue, 5 December 23