ಕಾಂಗ್ರೆಸ್ ಸರ್ಕಾರ ಆಯ್ಕೆ ಮಾಡಿದ ಜನರಲ್ಲಿ ಹೆಚ್ಚಿನ ಅಂಶ ಹಿಂದೂಗಳೇ: ಪರಮೇಶ್ವರ್

| Updated By: Rakesh Nayak Manchi

Updated on: Jan 05, 2024 | 10:03 AM

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಹಿಂದೂ ಕಾರ್ಯಕರ್ತರ ವಿರುದ್ಧ ವಿಚಾರಣೆ ನಡೆಸುವ ನೆಪದಲ್ಲಿ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದವು. ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಲೇ ಇದೆ. ರಾಮ ಜನ್ಮಭೂಮಿ ಹೋರಾಟ ಪ್ರಕರಣ ರೀಓಪನ್, ಶ್ರೀಕಾಂತ್ ಪೂಜಾರಿ ಬಂಧನ, ಬಾಬ ಬುಡನ್​ಗಿರಿ ಪ್ರಕರಣ ರೀಓಪನ್​​ ನಂತರ ಈ ಆರೋಪಗಳು ಹೆಚ್ಚಾಗತೊಡಗಿವೆ.

ಕಾಂಗ್ರೆಸ್ ಸರ್ಕಾರ ಆಯ್ಕೆ ಮಾಡಿದ ಜನರಲ್ಲಿ ಹೆಚ್ಚಿನ ಅಂಶ ಹಿಂದೂಗಳೇ: ಪರಮೇಶ್ವರ್
ಗೃಹಸಚಿವ ಡಾ.ಜಿ.ಪರಮೇಶ್ವರ್
Follow us on

ಬೆಂಗಳೂರು, ಜ.5: ನಮ್ಮ ಸರ್ಕಾರವನ್ನ ಜನ ಆರಿಸಿದ್ದಾರೆ. ನಮ್ಮನ್ನ ಆಯ್ಕೆ ಮಾಡಿರುವ ಜನರಲ್ಲಿ ಹೆಚ್ಚಿನ ಅಂಶ ಹಿಂದೂಗಳೇ ಇದ್ದಾರೆ. ನಾವು ಹೇಗೆ ಹಿಂದೂ ವಿರೋಧಿ ಆಗುತ್ತೇವೆ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್ (Dr.G.Parameshwar) ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಬಕ್ರೀದ್ ಹಬ್ಬದಲ್ಲಿ ಭಾಗಿಯಾಗಿದ್ದ ಪರಮೇಶ್ವರ್, ಅಲ್ಲಾನ ಕೃಪೆಯಿಂದಲೇ ಕಾಂಗ್ರೆಸ್ ಗೆದ್ದಿದೆ, ನಿಮ್ಮ ಆಶೀರ್ವಾದದಿಂದಲೇ ನಾನು ಗೃಹಮಂತ್ರಿಯಾಗಿದ್ದೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮುಸ್ಲಿಂ ಮತಗಳಿಂದಲೇ ಕಾಂಗ್ರೆಸ್ ಗೆದ್ದಿದೆ ಎಂದು ಹೇಳಿಕೆ ನೀಡಿದ್ದರು.

ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಬೆಂಗಳೂರಿನಲ್ಲಿ ತಿರುಗೇಟು ನೀಡಿದ ಅವರು, ಹೇಳುವುದಕ್ಕೂ ಒಂದು ಮಿತಿ ಇರಬೇಕು. ಇಂತಹ ವಿಷಯಗಳಲ್ಲಿ ನಾವು ನ್ಯಾಯವಾಗಿ ಹೋಗಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ದತ್ತಪೀಠ ಹೋರಾಟಗಾರರ ವಿರುದ್ಧದ ಪ್ರಕರಣವನ್ನು ರೀ ಓಪನ್ ಮಾಡಿ ಕ್ರಮಕ್ಕೆ ಮುಂದಾದ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ನಾನು ಕೇಸ್ ರೀ ಓಪನ್ ಮಾಡಿಲ್ಲ. ಪೊಲೀಸ್ ಠಾಣೆಯಲ್ಲಿ ಇರುವ ಪ್ರಕರಣಗಳ ವಿರುದ್ಧ ಅಧಿಕಾರಿ ಕ್ರಮ ತೆಗೆದುಕೊಳ್ಳಲು ಹೋದರೆ ರೀ ಓಪನ್ ಮಾಡಿದ್ದೀರಾ ಅಂತ ಕೇಳಿದರೆ ಹೇಗೆ? ಕೋರ್ಟ್ ಸೂಚನೆ ಕೊಟ್ಟಿದ್ದರೆ ನಾವು ಕೇಳಬಾರದಾ? ಬಿಜೆಪಿಯವರು ಕೋರ್ಟ್, ಕಾನೂನಿಗೂ ಬೆಲೆ ಕೊಡುವುದಿಲ್ಲ ಎಂದರು.

ಇದನ್ನೂ ಓದಿ: ಹಿಂದೂ ಕಾರ್ಯಕರ್ತರು ಹೆದರಿ ಮನೆಯಲ್ಲೇ ಕೂರುವ ವಾತಾವರಣ ಕಾಂಗ್ರೆಸ್ ಸರ್ಕಾರ ಸೃಷ್ಟಿಸುತ್ತಿದೆ: ಆರ್ ಅಶೋಕ, ವಿಪಕ್ಷ ನಾಯಕ

16 ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಯ ವಿಷಯಕ್ಕೆ ಇಷ್ಟು ದೊಡ್ಡದು ಮಾಡಿ ಇಡೀ ದೇಶದಲ್ಲಿ ದೊಡ್ಡದು ಮಾಡಲು ಹೊರಟಿದ್ದೀರಾ? ಬಿಜೆಪಿಯವರು ಅಪರಾಧಿಯನ್ನ ಬೆಂಬಲಿಸುತ್ತಿದ್ದಾರೆ. ಒಂಬತ್ತು ಸಾರಾಯಿ ಕೇಸ್ ಸೇರಿದಂತೆ ಬೇರೆ ಬೇರೆ ಪ್ರಕರಣಗಳು ಆತನ ಮೇಲಿದೆ. ಅ ಲೀಸ್ಟ್​ನಲ್ಲಿ ಬೇರೆ ಹಿಂದೂಗಳು ಇದ್ದಾರೆ ಅಲ್ಲವಾ? ಎಂದು ಪರಮೇಶ್ವರ್ ಕಿಡಿಕಾರಿದ್ದಾರೆ.

ಸತೀಶ್ ಜಾರಕಿಹೊಳಿ ನಿವಾಸದಲ್ಲಿ ರಾಜಕೀಯ ಚರ್ಚೆ

ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಚಿವರ ಸಭೆ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಡಿನ್ನರ್ ಮೀಟಿಂಗ್ ಇತ್ತು, ಊಟ ಮಾಡಿ ಬಂದೆ. ರಾಜಕೀಯ ಬಗ್ಗೆಯೂ ಚರ್ಚೆ ಆಗಿದೆ. ಅದನ್ನು ಬಹಿರಂಗಪಡಿಸಲು ಆಗುತ್ತಾ? ನಾವು ರಾಜಕಾರಣಿಗಳು, ರಾಜಕೀಯ ಬಗ್ಗೆ ಮಾತಾಡಿಯೇ ಇರುತ್ತೇವೆ ಎಂದರು.

ಚುನಾವಣೆ ಮೊದಲು ಚಿತ್ರದುರ್ಗದಲ್ಲಿ ಎಸ್​ಸಿ ಎಸ್​ಟಿ ಸಮಾವೇಶ ಮಾಡಿ 10 ನಿರ್ಣಯಗಳನ್ನು ತೆಗೆದುಕೊಂಡಿದ್ದೆವು. ಸರ್ಕಾರ ಬಂದಾಗ ಅದನ್ನ ಮಾಡುತ್ತೇವೆ ಅಂತ ಘೋಷಣೆ ಮಾಡಿದ್ದೆವು. ಈಗ ಸರ್ಕಾರ ಬಂದಿದೆ. ಅದನ್ನ ಜಾರಿ ಮಾಡಬೇಕು. ಅ ಬಗ್ಗೆಯೂ ಚರ್ಚೆ ಮಾಡಿದ್ದೇವೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ