ಎಲ್ಲ ಪಾರ್ಟಿಯವರಿಗೆ ಒಳ್ಳೆದಾಗಲಿ, ಅಧಿಕಾರ ಮಾತ್ರ ನಮಗೆ ಸಿಗಲಿ ಎಂದ ಡಿ.ಕೆ.ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷರು ಮತ್ತೆ ಅಧಿಕಾರದ ಆಸೆಯನ್ನು ಹೊರಹಾಕಿದ್ದಾರೆ. ಎಲ್ಲ ಪಕ್ಷದರಿಗೂ, ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯಗಳು. ಎಲ್ಲ ಪಾರ್ಟಿಯವರಿಗೆ ಒಳ್ಳೆದಾಗಲಿ, ಅಧಿಕಾರ ಮಾತ್ರ ನಮಗೆ ಸಿಗಲಿ ಎಂದರು.
ಹುಬ್ಬಳ್ಳಿ: ಎಲ್ಲ ಪಕ್ಷದರಿಗೂ, ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯಗಳು. ಎಲ್ಲ ಪಾರ್ಟಿಯವರಿಗೆ ಒಳ್ಳೆದಾಗಲಿ, ಅಧಿಕಾರ ಮಾತ್ರ ನಮಗೆ ಸಿಗಲಿ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಅವರು ರಾಜ್ಯದಲ್ಲಿ ಮತ್ತೆ ಅಧಿಕಾರದ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಆಗುವುದರ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ರಾಹುಲ್ ಗಾಂಧಿ (Rahul Gandhi) ತೀರ್ಮಾನ ಕೈಗೊಳ್ಳುತ್ತಾರೆ. ಹೈಕಮಾಂಡ್ ಏನು ಹೇಳುತ್ತದೆಯೋ ಅದು ನಮಗೆ ಪ್ರಸಾದವಾಗಿದೆ ಎಂದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಎಲ್ಲ ಪಕ್ಷದರಿಗೂ, ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯಗಳು. ಎಲ್ಲ ಪಕ್ಷದವರಿಗೂ ಒಳ್ಳೆದಾಗಲಿ, ಅಧಿಕಾರ ಮಾತ್ರ ನಮಗೆ ಸಿಗಲಿ ಎಂದರು. ಮಹದಾಯಿ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಸುಳ್ಳಿನ ಯುನಿವರ್ಸಿಟಿಯಾಗಿದೆ. ಮೂರೂವರೆ ವರ್ಷದಿಂದ ಏನೂ ಮಾಡಲು ಆಗಲಿಲ್ಲ. ಆಪರೇಶನ್ ಲೋಟಸ್ ಮಾಡಿ ಗೋವಾದಲ್ಲಿ ನಮ್ಮವರನ್ನ ತಗೆದುಕೊಂಡಿದ್ದಾರೆ. ಇದೀಗ ನಾವು ದ್ವನಿ ಎತ್ತಿದ್ದೇವೆ, ಕಲಾವಿದರು, ರೈತರು ಹೋರಾಟ ಮಾಡಿ ಒಂದು ಹಂತಕ್ಕೆ ತಂದಿದ್ದಾರೆ ಎಂದರು.
ಇದನ್ನೂ ಓದಿ: Video ಸಂಸದ ಮುನಿಸ್ವಾಮಿಗೆ ಕಿಸ್ ಕೊಟ್ಟ ಮಾಜಿ ಸಚಿವ ವರ್ತೂರ್ ಪ್ರಕಾಶ್: ಕಾರಣವೂ ಇದೆ…
ಕೃಷ್ಣ ಅವರ ಕಾಲದಲ್ಲಿ ಇದು ಸ್ಟಾರ್ಟ್ ಆಯ್ತು. ಏನೋ ಒಂದು ಲೆಟರ್ ಕಳಸಿಕೊಟ್ಟರು ಎಂದರು. ಸುಮಲತಾ ಕುರಿತು ಡಿ.ಕೆ.ಶಿವಕುಮಾರ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದು, ಅವರು ಬಿಜೆಪಿ ಅಸೋಶಿಯಟ್ ಮೆಂಬರ್. ಡಿ.ಕೆ.ಸುರೇಶ್, ಪ್ರಜ್ವಲ್ ರೇವಣ್ಣ ಬಿಟ್ಟ ಬಿಡಿ, ಉಳಿದವರು ಯಾಕೆ ಪ್ರಧಾನಿ ಭೇಟಿ ಮಾಡಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯವಿಲ್ಲ, ಪೈಪೋಟಿಯಿದೆ
ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯವಿಲ್ಲ, ಪೈಪೋಟಿಯಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದರು. ನನ್ನ ಅಧ್ಯಕ್ಷತೆಯಲ್ಲಿ ಮ್ಯಾಚ್ ಫಿಕ್ಸಿಂಗ್ಗೆ ಅವಕಾಶ ಇಲ್ಲ. ಮ್ಯಾಚ್ ಫಿಕ್ಸಿಂಗ್ ಎಲ್ಲವೂ ಬೇರೆ ಪಕ್ಷದಲ್ಲಿ, ನಮ್ಮಲ್ಲಿಲ್ಲ. ಕಾಂಗ್ರೆಸ್ ಟಿಕೆಟ್ಗಾಗಿ ಬಹಳ ಜನರು ಅರ್ಜಿ ಹಾಕಿದ್ದಾರೆ. ವರದಿ ಬಂದ ಬಳಿಕ ಈ ಬಗ್ಗೆ ಚರ್ಚಿಸಿ ತೀರ್ಮಾನಿಸುತ್ತೇವೆ. ಬಿಜೆಪಿಯಲ್ಲಿ ಅಧಿಕಾರ ಇದೆ ಕಿತ್ತಾಡ್ತಿದ್ದಾರೆ, ನಮಗೆ ಅಧಿಕಾರ ಇಲ್ಲ. ಅಧಿಕಾರ ಸಿಗಲಿ ಎಂದು ಕಿತ್ತಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ, ಡಿಕೆಶಿ ಸ್ಪರ್ಧೆ ಬೇಡ ಎಂದು ಲಾಡ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂತೋಷ್ ಲಾಡ್ ಸ್ಪರ್ಧಿಸುವುದು ಎಂದು ನಮಗೆ ಹೇಳಿದ್ದಾರೆ. ಸಂತೋಷ್ ಲಾಡ್ ಸಲಹೆಯನ್ನು ಗಂಭೀರವಾಗಿ ಪರಗಣಿಸುತ್ತೇನೆ. ಸಂತೋಷ್ ಲಾಡ್ ರಾಷ್ಟ್ರೀಯ ನಾಯಕ ಎಂದು ಟಾಂಗ್ ನೀಡಿದರು.
ಇದನ್ನೂ ಓದಿ: ಬಿಜೆಪಿಯಲ್ಲಿ ಸಂಚಲನ, ಉಪಹಾರ ನೆಪದಲ್ಲಿ ಸಚಿವ ಸೋಮಣ್ಣ ನಿವಾಸದಲ್ಲಿ ನಾಯಕರ ಜತೆ ಅಮಿತ್ ಶಾ ಪ್ರತ್ಯೇಕ ಚರ್ಚೆ
ಗುಜರಾತ್ ಮಾದರಿಯಂತೆ ಹಾಲಿಗಳನ್ನ ಕೈ ಬಿಡುವ ಪ್ರಯತ್ನ ಇದೆಯಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ರಿಪೋರ್ಟ್ ಕೇಳಿದ್ದೇವೆ. ಶೇಕಡಾ 95 ರಷ್ಟು ಹಾಲಿಗಳಿಗೆ ಟಿಕೆಟ್ ಸಿಗತ್ತದೆ ಎಂದರು. ರೆಬಲ್ ಶಾಸಕರ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜಕಾರಣದಲ್ಲಿ ಏನ ಬೇಕಾದರೂ ಆಗಬಹುದು. ಆದರೆ ನನಗೆ ಯಾರೂ ಅರ್ಜಿ ಕೊಟ್ಟಿಲ್ಲ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ