ಮೋದಿ ಒರಟು ಮನುಷ್ಯ ಎಂದು ಭಾವಿಸುತ್ತಿದ್ದೆ,ಅವರು ಮಾನವೀಯತೆಯುಳ್ಳವರು: ಗುಲಾಂ ನಬಿ ಆಜಾದ್

ಮೋದಿ ಸಾಹಬ್ ಆಗ ಗುಜರಾತ್ ಸಿಎಂ ಆಗಿದ್ದರು. ಅವರು ನನಗೆ ಕರೆ ಮಾಡಿದರು. ನಾನು ಅಳುತ್ತಿದ್ದೆ. ನಾನು ಮಾತನಾಡಲು ಸಾಧ್ಯವಿಲ್ಲ ಎಂದು ನನ್ನ ಅಧಿಕಾರಿಗಳಿಗೆ ಹೇಳಿದೆ. ನಾನು ಅಳುವುದನ್ನು ಅವರು ಕೇಳಿಸಿಕೊಂಡಿದ್ದಾರೆ...

ಮೋದಿ ಒರಟು ಮನುಷ್ಯ ಎಂದು  ಭಾವಿಸುತ್ತಿದ್ದೆ,ಅವರು ಮಾನವೀಯತೆಯುಳ್ಳವರು: ಗುಲಾಂ ನಬಿ ಆಜಾದ್
ಗುಲಾಂ ನಬಿ ಆಜಾದ್
Updated By: ರಶ್ಮಿ ಕಲ್ಲಕಟ್ಟ

Updated on: Aug 29, 2022 | 5:35 PM

ಪ್ರಧಾನಿ ಮೋದಿ (PM Modi) ಬಗ್ಗೆ ನಾನು ತಪ್ಪು ಗ್ರಹಿಕೆ ಹೊಂದಿದ್ದೆ ಎಂದು ಜಮ್ಮು ಮತ್ತು ಕಾಶ್ಮೀರದ ಹಿರಿಯ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಸೋಮವಾರ ಹೇಳಿದ್ದಾರೆ. “ಪ್ರಧಾನಿ ಮೋದಿ ಒಬ್ಬ ಒರಟು ಮನುಷ್ಯ ಎಂದು ನಾನು ಭಾವಿಸುತ್ತಿದ್ದೆ .ಅವರಿಗೆ ಮಕ್ಕಳಿಲ್ಲ, ಆದರೆ ಅವರು ಮಾನವೀಯತೆಯನ್ನು ತೋರಿಸಿದರು” ಎಂದು 73 ವರ್ಷದ ಮಾಜಿ ಕೇಂದ್ರ ಸಚಿವರು ಹೇಳಿದ್ದಾರೆ. ನಾನು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದಾಗ ಬಸ್ಸಿನೊಳಗೆ ಗ್ರೆನೇಡ್ ಸ್ಫೋಟವಾಗಿ ಸಾವುನೋವು ಸಂಭವಿಸಿತ್ತು. ಆ ಘಟನೆಯಲ್ಲಿ ಮೃತಪಟ್ಟವರ  ದೇಹಗಳು ಛಿದ್ರವಾಗಿದ್ದವು. ಮೋದಿ ಸಾಹಬ್ ಆಗ ಗುಜರಾತ್ ಸಿಎಂ ಆಗಿದ್ದರು. ಅವರು ನನಗೆ ಕರೆ ಮಾಡಿದರು. ನಾನು ಅಳುತ್ತಿದ್ದೆ. ನಾನು ಮಾತನಾಡಲು ಸಾಧ್ಯವಿಲ್ಲ ಎಂದು ನನ್ನ ಅಧಿಕಾರಿಗಳಿಗೆ ಹೇಳಿದೆ. ನಾನು ಅಳುವುದನ್ನು ಅವರು ಕೇಳಿಸಿಕೊಂಡಿದ್ದಾರೆ ಎಂದು ನನಗನಿಸುತ್ತಿದೆ . ನನ್ನ ಜನರಿಗೆ ನಾನು ಬೇಕು ಎಂದು ಅತ್ತಿದ್ದೆ.  ಗಾಯಗೊಂಡವರಿಗೆ ಮತ್ತು ಮೃತಪಟ್ಟವರನ್ನು ಕರೆದೊಯ್ಯುವುದಕ್ಕಾಗಿ ನನಗೆ ಎರಡು ವಿಮಾನಗಳು ಬೇಕು ಎಂದು ನಾನು ಪ್ರಧಾನಿಗೆ ಹೇಳಿದೆ. ನಂತರ, ನಾನು ಗಾಯಗೊಂಡವರನ್ನು ನೋಡಲು ಹೋದಾಗ ಸಂತ್ರಸ್ತರನ್ನು ಭೇಟಿಯಾದಾಗ, ಅವರು ತಮ್ಮ ನೋವನ್ನು ನನ್ನೊಂದಿಗೆ ಹಂಚಿಕೊಂಡರು, ನಾನು ಆಗಲೂ ಅಳುತ್ತಿದ್ದೆ. ಟಿವಿ ಸುದ್ದಿ ದೃಶ್ಯಗಳಲ್ಲಿ ಸೆರೆಹಿಡಿಯಲ್ಪಟ್ಟಿದೆ. ಆಗ ಗುಜರಾತ್ ಸಿಎಂ (ಮೋದಿ) ನನಗೆ ಮತ್ತೆ ಕರೆ ಮಾಡಿದ್ದರು ಎಂದು ಆಜಾದ್ ಹೇಳಿದ್ದಾರೆ.

ಕಳೆದ ವಾರ, ಆಜಾದ್ ಅವರು ಐದು ಪುಟಗಳ ರಾಜೀನಾಮೆಯನ್ನು ಬರೆದಿದ್ದು ಅದರಲ್ಲಿ ಅವರು ರಾಹುಲ್ ಗಾಂಧಿಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಯಾರೊಬ್ಬರೂ ತಮಗೆ ಪತ್ರ ಬರೆಯುವುದಾಗಲೀ, ಪ್ರಶ್ನಿಸುವುದಾಗಲೀ ಅವರಿಗೆ ಇಷ್ಟವಿಲ್ಲ, ಹಲವಾರು (ಕಾಂಗ್ರೆಸ್) ಸಭೆಗಳು ನಡೆದಿವೆ, ಆದರೆ ಒಂದೇ ಒಂದು ಸಲಹೆಯನ್ನು ಸಹ ತೆಗೆದುಕೊಳ್ಳಲಾಗಿಲ್ಲ ಎಂದು ಆಜಾದ್ ಹೇಳಿದಾರೆ.

ಇದನ್ನೂ ಓದಿ
ನಾನು ಕಾಂಗ್ರೆಸ್ ಪಕ್ಷ ತೊರೆಯುವಂತೆ ಬಲವಂತ ಮಾಡಿದ್ದಾರೆ; ಕಾಂಗ್ರೆಸ್, ರಾಹುಲ್ ಗಾಂಧಿಗೆ ಗುಲಾಂ ನಬಿ ಆಜಾದ್ ತಿರುಗೇಟು
Big News: ಇನ್ನು 14 ದಿನಗಳೊಳಗೆ ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹೊಸ ಪಕ್ಷದ ಘೋಷಣೆ
Big News: ಕಾಂಗ್ರೆಸ್​​ಗೆ ರಾಜೀನಾಮೆ ಬೆನ್ನಲ್ಲೇ ಹೊಸ ರಾಜಕೀಯ ಪಕ್ಷ ಕಟ್ಟಲು ಗುಲಾಂ ನಬಿ ಆಜಾದ್ ನಿರ್ಧಾರ
Ghulam Nabi Azad: ಸೂತ್ರದ ಗೊಂಬೆಯಂಥ ಅಸಮರ್ಥ ನಾಯಕನ ಪಿಎಗಳು ಕಾಂಗ್ರೆಸ್​ ಮುನ್ನಡೆಸುತ್ತಿದ್ದಾರೆ; ಗುಲಾಂ ನಬಿ ಆಜಾದ್

ಆಜಾದ್ ಹೊಸ ಪಕ್ಷ ಸ್ಥಾಪಿಸುತ್ತಾರೆ ಎಂಬ ಸುದ್ದಿಯ ನಡುವೆಯೇ ಅವರು ಬಿಜೆಪಿಯೊಂದಿಗೆ  ಸೇರುತ್ತೀರಾ ಎಂದು ಕೇಳಲಾಯಿತು. ಕಾಂಗ್ರೆಸ್‌ನಲ್ಲಿ ಅನಕ್ಷರಸ್ಥರು ಇದ್ದಾರೆ ನೋಡಿ. ನನ್ನ ಮತದ ನೆಲೆಯಿಂದ ಬಿಜೆಪಿಗೆ ಲಾಭವಾಗುವುದಿಲ್ಲ ಮತ್ತು ಇದಕ್ಕೆ ವಿರುದ್ಧವಾಗಿಯೂ ಏನೂ ಆಗುವುದಿಲ್ಲ ಎಂಬುದು ನಿಜ. ಜಮ್ಮು ಮತ್ತು ಕಾಶ್ಮೀರ ರಾಜಕೀಯವನ್ನು ಅರ್ಥಮಾಡಿಕೊಳ್ಳುವ ಜನರಿಗೆ ಇದು ಚೆನ್ನಾಗಿ ತಿಳಿದಿದೆ. ಕೇಂದ್ರಾಡಳಿತ ಪ್ರದೇಶವು ಶೀಘ್ರದಲ್ಲೇ ಚುನಾವಣೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಬಿಜೆಪಿಯೊಂದಿಗೆ ಚುನಾವಣೋತ್ತರ ಮೈತ್ರಿ ಇರಬಹುದೇ? ಎಂದು ಕೇಳಿದಾಗ ನನ್ನದು ಒಂದೇ ಪಕ್ಷವಲ್ಲ. ಬೇರೆ ಪಕ್ಷಗಳೂ ಇವೆ” ಎಂದು ಅವರು ಉತ್ತರಿಸಿದ್ದಾರೆ.