ನಾನು ಕಾಂಗ್ರೆಸ್ ಪಕ್ಷ ತೊರೆಯುವಂತೆ ಬಲವಂತ ಮಾಡಿದ್ದಾರೆ; ಕಾಂಗ್ರೆಸ್, ರಾಹುಲ್ ಗಾಂಧಿಗೆ ಗುಲಾಂ ನಬಿ ಆಜಾದ್ ತಿರುಗೇಟು

ಇಂದಿರಾಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರು ಹೆಚ್ಚಿನ ಮಟ್ಟಿಗೆ ಸಮಾಲೋಚನಾ ರಾಜಕಾರಣದಲ್ಲಿ ನಂಬಿಕೆ ಇಟ್ಟಿದ್ದರು ಆದರೆ ಅದು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಇದು ನಾಶವಾಯಿತು ಎಂದರು.

ನಾನು ಕಾಂಗ್ರೆಸ್ ಪಕ್ಷ ತೊರೆಯುವಂತೆ ಬಲವಂತ ಮಾಡಿದ್ದಾರೆ; ಕಾಂಗ್ರೆಸ್, ರಾಹುಲ್ ಗಾಂಧಿಗೆ ಗುಲಾಂ ನಬಿ ಆಜಾದ್ ತಿರುಗೇಟು
ಗುಲಾಂ ನಬಿ ಆಜಾದ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 29, 2022 | 4:41 PM

ಕಾಂಗ್ರೆಸ್‌ಗೆ (Congress) ರಾಜೀನಾಮೆ ನೀಡಿದ ಬೆನ್ನಲ್ಲೇ, ಗುಲಾಂ ನಬಿ ಆಜಾದ್ (Ghulam Nabi Azad) ಸೋಮವಾರ ಗಾಂಧಿ ನಾಯಕತ್ವದ ಮೇಲೆ ವಾಗ್ದಾಳಿ ಮಾಡಿದ್ದಾರೆ. G-23 ಪತ್ರವನ್ನು ಬರೆದಾಗಿನಿಂದ ಕಾಂಗ್ರೆಸ್ ಪಕ್ಷಕ್ಕೆ ನನ್ನೊಂದಿಗೆ ಸಮಸ್ಯೆ ಉದ್ಭವವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೆಪ ಎಂದು ಹೇಳಿದ ಆಜಾದ್ ನನ್ನನ್ನು ಬಲವಂತವಾಗಿ ಕಾಂಗ್ರೆಸ್ ಪಕ್ಷವನ್ನು ತೊರೆಯುವಂತೆ ಮಾಡಲಾಯಿತು ಎಂದಿದ್ದಾರೆ.  ಮೋದಿ ಒಂದು ನೆಪ, ಜಿ 23 ಪತ್ರ ಬರೆದಾಗಿನಿಂದ ಅವರಿಗೆ ನನ್ನೊಂದಿಗೆ ಸಮಸ್ಯೆ ಇದೆ. ಅವರ ಬಗ್ಗೆ ಬರೆಯುವುದಾಗಲೀ ಅವರನ್ನು ಪ್ರಶ್ನಿಸುವುದಾಗಲೀ ಅವರಿಗೆ ಇಷ್ಟವಿಲ್ಲ ಹಲವಾರು (ಕಾಂಗ್ರೆಸ್) ಸಭೆಗಳು ನಡೆದಿವೆ, ಆದರೆ ಒಂದೇ ಒಂದು ಸಲಹೆಯನ್ನು ಸಹ ತೆಗೆದುಕೊಳ್ಳಲಾಗಿಲ್ಲ ಎಂದು ಗುಲಾಂ ನಬಿ ಆಜಾದ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.ಸಂಸತ್ತಿನಲ್ಲಿ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಅಪ್ಪುಗೆಯ ಬಗ್ಗೆ ವ್ಯಂಗ್ಯವಾಡಿದ ಗುಲಾಂ ನಬಿ ಆಜಾದ್, “ಮೋದಿಯೊಂದಿಗೆ ಸಿಕ್ಕಿಹಾಕಿಕೊಂಡಿರುವುದು ನಾನಲ್ಲ, ಅವರೇ” ಎಂದು ಹೇಳಿದರು. ಪ್ರಧಾನಿ ಮೋದಿಯವರ ಎಡ, ಬಲ ಮತ್ತು ಮಧ್ಯೆ ದಾಳಿ ಮಾಡುವ ರಾಹುಲ್ ಗಾಂಧಿಯವರ ನೀತಿಯನ್ನು ಆಜಾದ್ ಟೀಕಿಸಿದ್ದಾರೆ.

ಈಗಿನ ಸಿಡಬ್ಲ್ಯುಸಿ ಅರ್ಥಹೀನವಾಗಿದೆ. ಸೋನಿಯಾ ನೇತೃತ್ವದಲ್ಲಿ ಒಂದೇ ಒಂದು ಸಿಡಬ್ಲ್ಯುಸಿ ಮಾತ್ರ ಇತ್ತು. ಆದರೆ ಕಳೆದ 10 ವರ್ಷಗಳಲ್ಲಿ, 25 ಸಿಡಬ್ಲ್ಯುಸಿ ಸದಸ್ಯರು ಮತ್ತು 50 ವಿಶೇಷ ಆಹ್ವಾನಿತರು ಇದ್ದಾರೆ ಎಂದು ಎನ್ ಡಿಟಿವಿ ಜತೆ ಮಾತನಾಡಿದ ಆಜಾದ್ ಹೇಳಿದ್ದಾರೆ .

ಇಂದಿರಾಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರು ಹೆಚ್ಚಿನ ಮಟ್ಟಿಗೆ ಸಮಾಲೋಚನಾ ರಾಜಕಾರಣದಲ್ಲಿ ನಂಬಿಕೆ ಇಟ್ಟಿದ್ದರು. ಆದರೆ ಅದು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಇದು ನಾಶವಾಯಿತು.

30 ವರ್ಷಗಳ ಹಿಂದೆ ಹೇಗಿತ್ತೋ ಅದೇ ಗೌರವವನ್ನು ನಾನು “ಸೋನಿಯಾ ಗಾಂಧಿಯವರಿಗೆ ಕೊಡುತ್ತೇನೆ. ಇಂದಿರಾಗಾಂಧಿ ಕುಟುಂಬ, ರಾಜೀವ್-ಸೋನಿಯಾ ಗಾಂಧಿ ಅವರ ಮಗ ರಾಹುಲ್ ಗಾಂಧಿಯ ಮೇಲಿನ ಗೌರವವೂ ಹಾಗೇ ಇದೆ. ವೈಯಕ್ತಿಕವಾಗಿ, ನಾನು ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ. ನಾವು ಅವರನ್ನು ಯಶಸ್ವಿ ನಾಯಕನನ್ನಾಗಿ ಮಾಡಲು ಪ್ರಯತ್ನಿಸಿದ್ದೇವೆ ಆದರೆ ಅವರು ಆಸಕ್ತಿ ಹೊಂದಿಲ್ಲ..,” ಆಜಾದ್ ಹೇಳಿದರು.

ರಾಹಲ್ ಅವರ ಅವರ “ಬಾಲಿಶ ವರ್ತನೆ”, “ಅಪ್ರಬುದ್ಧತೆ” ಮತ್ತು ಅನುಭವ ಇಲ್ಲದವರಿಗೆ ಪಕ್ಷದ ಹೊಣೆ ನೀಡಿದ್ದನ್ನು ಟೀಕಿಸಿ ಆಜಾದ್ ಕಾಂಗ್ರೆಸ್ ತೊರೆದಿದ್ದರು.ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಐದು ಪುಟಗಳ ರಾಜೀನಾಮೆ ಪತ್ರದಲ್ಲಿ ಅವರು 2014 ರ ರಾಷ್ಟ್ರೀಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ರಾಹುಲ್ ಕಾರಣ ಎಂದು ಆರೋಪಿಸಿದ್ದಾರೆ.

ಏತನ್ಮಧ್ಯೆ, ಕಾಂಗ್ರೆಸ್ ತನ್ನ ಉನ್ನತ ನಾಯಕತ್ವದ ಮೇಲಿನ ಇತ್ತೀಚಿನ ದಾಳಿಗೆ ಗುಲಾಂ ನಬಿ ಆಜಾದ್ ಅವರನ್ನು ಟೀಕಿಸಿದೆ, ಅವರು ಪಕ್ಷವನ್ನು “ನಿಂದೆ” ಮಾಡಲು ಕೆಲಸ ಮಾಡಿದ್ದಾರೆ. ಹಾಗೆ ಮಾಡುವ ಮೂಲಕ ಅವರು ತಮ್ಮನ್ನು ತಾವು ಕೀಳು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಆಜಾದ್‌ಗೆ ತಿರುಗೇಟು ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನದ ಉಸ್ತುವಾರಿ ಜೈರಾಮ್ ರಮೇಶ್, “ಇಷ್ಟು ಸುದೀರ್ಘ ವೃತ್ತಿಜೀವನದ ನಂತರ, ಸೌಜನ್ಯದಿಂದ ಸಂಪೂರ್ಣವಾಗಿ ಪಕ್ಷವನ್ನು ನಿಂದಿಸಲು, ಮನಬಂದಂತೆ ಸಂದರ್ಶನಗಳನ್ನು ನೀಡುವ ಮೂಲಕ, ಆಜಾದ್ ಅವರು ತಮ್ಮನ್ನು ಮತ್ತಷ್ಟು ಕೆಳಗಿನ ಮಟ್ಟಕ್ಕೆ ಇಳಿಸಿದ್ದಾರೆ . ಪ್ರತಿ ನಿಮಿಷವೂ ತನ್ನ ವಿಶ್ವಾಸಘಾತುಕತನವನ್ನು ಸಮರ್ಥಿಸಿಕೊಳ್ಳುತ್ತಿರುವುದಕ್ಕೆ ಅವರು ಯಾಕೆ ಹೆದರುತ್ತಾರೆ? ಅವರನ್ನು ಸುಲಭವಾಗಿ ಬಯಲುಗೊಳಿಸಬಹುದು. ಹೀಗೆ ಮಾಡುವ ಮೂಲಕ ನಾವೇಕೆ ಅವರ ಮಟ್ಟಕ್ಕೆ ಇಳಿಯಬೇಕು ಎಂದು ಕೇಳಿದ್ದಾರೆ .

ಕಪಿಲ್ ಸಿಬಲ್ ಮತ್ತು ಅಶ್ವನಿ ಕುಮಾರ್ ಸೇರಿದಂತೆ ಉನ್ನತ ಮಟ್ಟದ ನಾಯಕರ ನಿರ್ಗಮನದಿಂದಾಗಿ ಪತನ ಎದುರಿಸುತ್ತಿರುವ ಕಾಂಗ್ರೆಸ್, ಆಜಾದ್ ಅವರ ಡಿಎನ್‌ಎಯನ್ನು “ಮೋದಿ ಫೈಡ್” ಎಂದು ಆಗಿದೆ ಎಂದಿದ್ದು ರಾಜ್ಯಸಭಾ ಅಧಿಕಾರಾವಧಿಯ ಅಂತ್ಯಕ್ಕೆ ಈ ರಾಜೀನಾಮೆ ಬೆಸೆದಿರುವುದಾಗಿ ಹೇಳಿದೆ.

Published On - 4:31 pm, Mon, 29 August 22

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ