Political retirement: ಸಚಿವರ ಕಾರ್ಯವೈಖರಿ ವಿರುದ್ಧ ಅಸಮಾಧಾನ, ರಾಜಕೀಯ ನಿವೃತ್ತಿ ಒಳ್ಳೆಯದು ಅನಿಸುತಿದೆ ಎಂದ ಕಾಂಗ್ರೆಸ್​ ಶಾಸಕ 

Kagawad Congress MLA Raju Kage: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್​​ ಸರ್ಕಾರದ (Siddaramaiah Government) ವಿರುದ್ಧ ನಿನ್ನೆ ತೀವ್ರ ಅಸಮಾಧಾನ ಹೊರಹಾಕಿದ್ದ ಬೆಳಗಾವಿ ಜಿಲ್ಲೆ ಕಾಗವಾಡ ಕ್ಷೇತ್ರದ ಕಾಂಗ್ರೆಸ್​ ಶಾಸಕ ರಾಜು ಕಾಗೆ ಅವರು ಇಂದು ಸಚಿವರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 04, 2023 | 6:32 PM

ಬೆಳಗಾವಿ, ಅಕ್ಟೋಬರ್​​ 4: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್​​ ಸರ್ಕಾರದ (Siddaramaiah Government) ವಿರುದ್ಧ ನಿನ್ನೆ ತೀವ್ರ ಅಸಮಾಧಾನ ಹೊರಹಾಕಿದ್ದ ಬೆಳಗಾವಿ ಜಿಲ್ಲೆ ಕಾಗವಾಡ ಕ್ಷೇತ್ರದ ಕಾಂಗ್ರೆಸ್​ ಶಾಸಕ ರಾಜು ಕಾಗೆ ಅವರು (Kagawad Congress MLA Raju Kage) ಇಂದು ಸಚಿವರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿರಿಯ ಶಾಸಕರಿಗೆ ಗೌರವ ಕೊಡಲ್ಲ, ಸ್ಪಂದಿಸುವ ಕೆಲಸ ಮಾಡಲ್ಲ. ರಾಜಕೀಯದಿಂದ ನಿವೃತ್ತಿ ಪಡೆಯುವುದು (Political retirement) ಒಳ್ಳೆಯದು ಅನ್ನೋ ಹಂತಕ್ಕೆ ಬಂದಿದ್ದೇನೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವರು ಹಾರಿಕೆ ಉತ್ತರ ಕೊಡುವುದರಿಂದ ಮನಸ್ಸಿಗೆ ನೋವಾಗುತ್ತೆ. ಸಚಿವರು ಗೌರವ ಕೊಡದೆ ಇದ್ರೆ ನೋವಾಗಿ ಹೊರಗೆ ಬರುತ್ತೇವೆ. ಏನು ಮಾಡುವುದು ಸಮಯಕ್ಕೆ ತಕ್ಕಂತೆ ಹೋಗಬೇಕಾಗುತ್ತದೆ. ಈ ಬಗ್ಗೆ ಸಾಕಷ್ಟು ಬಾರಿ ಸಿಎಂ ಮತ್ತು ಡಿಸಿಎಂ ಗಮನಕ್ಕೆ ತಂದಿದ್ದೇವೆ. ಕೆಲವು ಹಿರಿಯ ಮತ್ತು ಕಿರಿಯ ಸಚಿವರಿಗೆ ಕಿವಿಮಾತು ಹೇಳಿದ್ದಾರೆ. ಬದಲಾವಣೆ ಮಾಡುತ್ತಾರೆಂಬ ವಿಶ್ವಾಸ ಇದೆ, ಕಾದು ನೋಡೋಣ ಎಂದು ಅವರು ಸದ್ಯ ಸಮಾಧಾನಗೊಂಡಿದ್ದಾರೆ.

Also Read: ರಾಜ್ಯ ಸರ್ಕಾರದ ವಿರುದ್ಧ ಮತ್ತೋರ್ವ ಆಡಳಿತಾರೂಢ ಕಾಂಗ್ರೆಸ್ ಶಾಸಕ ಅಸಮಾಧಾನ, ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯಗೆ ಕುಟುಕು  

ಆಡಳಿತ ಚುರುಕುಗೊಳಿಸಿ ಅಂತಾ ಸರ್ಕಾರಕ್ಕೆ ಸಲಹೆ ಕೊಡುತ್ತೇನೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್​ ವತಿಯಿಂದ ಗೆದ್ದು ಬರುವ ಪ್ರಾಮಾಣಿಕ ಪ್ರಯತ್ನ ಮಾಡ್ತೇವೆ. ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆಯಿಂದ ಯಾವುದೇ ಎಫೆಕ್ಟ್​ ಆಗಲ್ಲ ಎಂದು ಟಿವಿ 9 ಜೊತೆ ಮಾತನಾಡಿದ ಕಾಗವಾಡ ಕ್ಷೇತ್ರದ ಕಾಂಗ್ರೆಸ್​ ಶಾಸಕ ರಾಜು ಕಾಗೆ ಹೇಳಿದ್ದಾರೆ.

ಶಾಸಕ ರಾಜು ಕಾಗೆ ಅಸಮಾಧಾನಕ್ಕೆ ಕಾರಣಗಳೇನು? ಸ್ವತಃ ಅವರದೆ ಮಾತು ಹೀಗಿದೆ:

ಶಾಸಕರ ನಿಧಿ ಬಿಡುಗಡೆ ವಿಚಾರವಾಗಿಯೂ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಉಗಾರ ಪಟ್ಟಣದಲ್ಲಿ ಮಾತನಾಡಿರುವ ಶಾಸಕ ರಾಜು ಕಾಗೆ ಅವರು ಏನೂ ಇಲ್ಲದೇ ನಾವು ಖಾಲಿ ಕುಳಿತಿದ್ದೇವೆ. ಬಸವೇಶ್ವರ ಏತನೀರಾವರಿ ಯೋಜನೆ ಕುರಿತು ಹತ್ತು ಬಾರಿ ಸಿಎಂ, ಡಿಸಿಎಂ ಇಬ್ಬರನ್ನೂ ಭೇಟಿಯಾಗಿದ್ದೇನೆ. ಈವರೆಗೂ ಆ ಯೋಜನೆಗೆ ಹಣ ಬಿಡುಗಡೆ ಮಾಡಿಲ್ಲ. ಬಸವೇಶ್ವರ ಏತ ನೀರಾವರಿ ಯೋಜನೆ ಮುಂದಿಟ್ಟುಕೊಂಡೇ ನಾನು ಚುನಾವಣೆ ಗೆದ್ದಿದ್ದು. ಜನರಿಗೆ ಆಶ್ವಾಸನೆ ಕೊಟ್ಟಿದ್ದೇವೆ, ಜನರಿಗೆ ಬಹಳ ನಿರೀಕ್ಷೆ ಇದೆ. ಎಲ್ಲಿ ಹೋದರೂ ಜನ ಪ್ರಶ್ನೆ ಮಾಡ್ತಾರೆ. ಮೊದಲೇ ಬರಗಾಲ, ಪ್ರವಾಹ ವೇಳೆ ಕೆರೆ ತುಂಬಿಸಿದ್ರೆ ಜನ ಜಾನುವಾರುಗಳಿಗೆ ಆಧಾರವಾಗುತ್ತಿತ್ತು. ಒಂದು ಟಿಸಿ ಬೇಕಾದ್ರೆ ನೀವೆ ಹಣ ತುಂಬಿ ಅಂತಾ ರೈತರಿಗೆ ಹೇಳ್ತಾರೆ. ಮೂರ್ನಾಲ್ಕು ಲಕ್ಷ ರೂ. ಹಣ ರೈತರಿಗೆ ನೀಡಲು ಆಗಲ್ಲವಲ್ಲಾ ಎಂದು ಸ್ವತಃ ತಮ್ಮದೆ ಸರ್ಕಾರವನ್ನು ಕಾಗೆ ಪ್ರಶ್ನಿಸಿದ್ದಾರೆ.

ಆಡಳಿತ ಸುಧಾರಣೆ ಆಗಬೇಕು ಎಂದು ಹೇಳಿದ್ದೇನೆ. ನಿನ್ನೆ ಇಂಧನ ಸಚಿವರು ನನ್ನ ಜೊತೆ ಮಾತನಾಡಿ ಸರಿಪಡಿಸುವ ಭರವಸೆ ನೀಡಿದರು. ಕ್ಷೇತ್ರದ ಜನರು ಸಮುದಾಯ ಭವನ, ದೇವಸ್ಥಾನಗಳಿಗೆ ಹಣ, ನೀರಾವರಿ ಯೋಜನೆ ಕೇಳುತ್ತಿದ್ದಾರೆ. ಏನೂ ಇಲ್ಲದೇ ನಾವು ಖಾಲಿ ಕುಳಿತುಕೊಂಡಿದ್ದೇವೆ. ಎಂಎಲ್‌ಎ ಫಂಡ್ ಕೊಟ್ಟಿದ್ದೀವಿ ಎಂದಿದ್ದಾರೆ, ಎರಡು ತಿಂಗಳಾದರೂ ಈವರೆಗೂ ಆದೇಶ ಬಂದಿಲ್ಲ. 50 ಲಕ್ಷ ನೀಡಿದ್ದೀವಿ ಎಂದಿದ್ದಾರೆ. ಜಿಲ್ಲಾಧಿಕಾರಿಗಳಿಂದ ಪತ್ರ ಬರಬೇಕಿತ್ತು ಇನ್ನೂ ಬಂದಿಲ್ಲ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:25 pm, Wed, 4 October 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್