ಹಾಸನದಲ್ಲಿ ಇವರ ಯೋಗ್ಯತೆಗೆ ಒಬ್ಬೇ ಒಬ್ಬ ಲಿಂಗಾಯತ ಅಭ್ಯರ್ಥಿಯನ್ನು ಹಾಕಲಿಲ್ಲ, ಶಾಮನೂರು ಬಿಜೆಪಿಗೆ ಹೋಗಿದ್ದರೆ ಇಷ್ಟೊತ್ತಿಗೆ ಕೇಂದ್ರ ಮಂತ್ರಿ ಆಗ್ತಿದ್ದರು – ಎಚ್​​ ಡಿ ರೇವಣ್ಣ

HD Revanna: ಜಮೀರಣ್ಣನಿಗೆ ಈ ಹಿಂದೆ ಕೋಮುವಾದಿಗಳ‌ ಜೊತೆ ಹೋಗಬಾರದು ಅಂತಾ ಗೊತ್ತಿರಲಿಲ್ಲವಾ? ಎಂದು ಪ್ರಶ್ನಿಸುವ ಮೂಲಕ ಅಲ್ಪಸಂಖ್ಯಾತರಿಗೆ ಕುಮಾರಸ್ವಾಮಿ ನೀಡಿರುವ ಕೊಡುಗೆ ಏನು ಎಂಬ ಜಮೀರ್ ಪ್ರಶ್ನೆಗೆ ರೇವಣ್ಣ ತಿರುಗೇಟು ನೀಡಿದರು. ಆಗ ಕುಮಾರಣ್ಣಗೆ ನೀನು-ನಾನು ಜೋಡೆತ್ತು ಎಂದಿದ್ದರು, ಈಗ ಎಲ್ಲಿದಾರೆ? ಎಂದು ಜಮೀರ್​ರ ಬಗ್ಗೆ ರೇವಣ್ಣ ಕಟಕಿಯಾಡಿದರು.

ಹಾಸನದಲ್ಲಿ ಇವರ ಯೋಗ್ಯತೆಗೆ ಒಬ್ಬೇ ಒಬ್ಬ ಲಿಂಗಾಯತ ಅಭ್ಯರ್ಥಿಯನ್ನು ಹಾಕಲಿಲ್ಲ, ಶಾಮನೂರು ಬಿಜೆಪಿಗೆ ಹೋಗಿದ್ದರೆ ಇಷ್ಟೊತ್ತಿಗೆ ಕೇಂದ್ರ ಮಂತ್ರಿ ಆಗ್ತಿದ್ದರು - ಎಚ್​​ ಡಿ ರೇವಣ್ಣ
ಶಾಮನೂರು ಬಿಜೆಪಿಗೆ ಹೋಗಿದ್ದರೆ ಕೇಂದ್ರ ಮಂತ್ರಿ ಆಗ್ತಿದ್ದರು -ರೇವಣ್ಣ
Follow us
| Updated By: ಸಾಧು ಶ್ರೀನಾಥ್​

Updated on:Oct 04, 2023 | 3:43 PM

ಹಾಸನ, ಅಕ್ಟೋಬರ್ 4: ಮಾಜಿ ಸಚಿವ, ಜೆಡಿಎಸ್ ಹಿರಿಯ ನಾಯಕ ​ಎಚ್​​ ಡಿ ರೇವಣ್ಣ ಅವರು ಕಾಂಗ್ರೆಸ್​​ ಪಕ್ಷದಲ್ಲಿ ಆಂತರಿಕ ತುಮುಲದ ಬಗ್ಗೆ ತಮ್ಮದೆ ಧಾಟಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಅದರಲ್ಲೂ ಕಾಂಗ್ರೆಸ್​​ ಪಕ್ಷದಲ್ಲಿ ಲಿಂಗಾಯತರ ಕಡೆಗಣನೆಯಾಗುತ್ತಿದೆ ಎಂದು ಕಿಡಿಕಾರಿರುವ ಶಾಮನೂರು ಶಿವಶಂಕರಪ್ಪ ಅವರ ಮಾತಿಗೆ ರೇವಣ್ಣ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಲಿಂಗಾಯತರ ಕಡೆಗಣನೆ ಆಗುತ್ತಿದೆ ಎಂದು ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆ ಸರಿಯಾಗಿಯೇ ಇದೆ. ಹಾಸನ ಜಿಲ್ಲೆಯಲ್ಲಿ ಇವರ ಯೋಗ್ಯತೆಗೆ ಒಬ್ಬೇ ಒಬ್ಬ ಲಿಂಗಾಯತ ಅಭ್ಯರ್ಥಿ ಹಾಕಲಿಲ್ಲ. ಶಾಮನೂರು ಶಿವಶಂಕರಪ್ಪ ಇಷ್ಟೊತ್ತಿಗೆ ಬಿಜೆಪಿಗೆ ಹೋಗಿದ್ದಿದ್ದರೆ ಕೇಂದ್ರ ಸಚಿವರಾಗುತ್ತಿದ್ದರು ಎಂದು ರೇವಣ್ಣ ಹೇಳಿದ್ದಾರೆ.

ಕಾಂಗ್ರೆಸ್​​ ಪಕ್ಷಕ್ಕೆ ಈಗ ಅಲ್ಪ ಸಂಖ್ಯಾತರ ಬಗ್ಗೆ ಕಾಳಜಿ ಬಂದಿದೆ. 60 ವರ್ಷ ಅವರಿಂದ ಓಟ್ ಹಾಕಿಸಿಕೊಂಡಿದ್ದೀರಿ, ಈಗ ಅವರ ಸೇವೆ ಮಾಡಿ. ಆದರೆ ಈ ಹಿಂದೆ ಕೋಮುವಾದಿಗಳ ಬಳಿ ಬಸ್ ಓಡಿಸಿಕೊಂಡು ಹೋಗಿದ್ದವರು ಯಾರು? ಎಂದು ವಸತಿ ಸಚಿವ ಜಮೀರ್ ಅಹಮದ್ ವಿರುದ್ಧ ರೇವಣ್ಣ ಇದೇ ವೇಳೆ ಕಿಡಿಕಾರಿದ್ದಾರೆ. ಜಮೀರಣ್ಣ ನನ್ನ ಆತ್ಮೀಯ. ಅವರಿಗೆ ಇನ್ನೂ ನಾಲ್ಕು ಖಾತೆ ಕೊಡಲಿ. ಆದರೆ ಈ ಹಿಂದೆ ಇವರಿಗೆ ಕೋಮುವಾದಿಗಳ‌ ಜೊತೆ ಹೋಗಬಾರದು ಅಂತಾ ಗೊತ್ತಿರಲಿಲ್ಲವಾ? ಎಂದು ಪ್ರಶ್ನಿಸುವ ಮೂಲಕ ಅಲ್ಪಸಂಖ್ಯಾತರಿಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೀಡಿರುವ ಕೊಡುಗೆ ಏನು ಎಂಬ ಜಮೀರ್ ಅಹಮದ್ ಪ್ರಶ್ನೆಗೆ ರೇವಣ್ಣ ತಿರುಗೇಟು ನೀಡಿದರು. ಆಗ ಕುಮಾರಣ್ಣಗೆ ನೀನು-ನಾನು ಜೋಡೆತ್ತು ಎಂದಿದ್ದರು, ಈಗ ಎಲ್ಲಿದಾರೆ? ಎಂದು ಜಮೀರ್​ರ ಬಗ್ಗೆ ರೇವಣ್ಣ ಕಟಕಿಯಾಡಿದರು.

ಇದನ್ನೂ ಓದಿ: ಜೆಡಿಎಸ್‌ ಸೇರಲು ಕುಮಾರಸ್ವಾಮಿ ಮನೆಗೆ ನಾ ಹೋಗಿಲ್ಲ; ಅವರೇ ನಮ್ಮ ಮನೆಗೆ ಬಂದಿದ್ದರು, ಮೈತ್ರಿಗೆ ಈಗ ಯಾರೆಲ್ಲ ಒಪ್ಪುತ್ತಿಲ್ಲ ಗೊತ್ತಾ? ಸಿಎಂ ಇಬ್ರಾಹಿಂ ನೀಡಿದರು ವಿವರ

ಇನ್ನು ತಮ್ಮ ಪಕ್ಷದ ಹಾಲಿ ರಾಜ್ಯಧ್ಯಕ್ಷ ಸಿಎಂ ಇಬ್ರಾಹಿಂ ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಹೋಗಲ್ಲ ಎಂದಿದಾರೆ. ಬೇಕಿದ್ದರೆ ರಾಜಕೀಯ ನಿವೃತ್ತಿ ಆಗ್ತಿನಿ, ಕಾಂಗ್ರೆಸ್ ಗೆ ಹೋಗಲ್ಲ ಎಂದಿದಾರೆ. ಅವರು ಅಕ್ಟೋಬರ್ 16 ರವರೆಗೆ ಏನೂ ಮಾತಾಡಲ್ಲ ಎಂದಿದಾರೆ. ಆ ನಂತರ ಮಾತಾಡೋಣ ಎಂದಿದಾರೆ. ಅವರು ಯಾವುದೇ ಕಾರಣದಿಂದ ಕಾಂಗ್ರೆಸ್ ಗೆ ಹೋಗಲ್ಲ ಎಂದಿದಾರೆ ಎಂದು ರೇವಣ್ಣ ಪುನರುಚ್ಚರಿಸಿದರು.

ರಾಜ್ಯದಲ್ಲಿ ಒಂದು ತಿಂಗಳಿಂದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಅಲ್ಪ ಸಂಖ್ಯಾತರ ಬಗ್ಗೆ ಕರುಣೆ ತೋರುತ್ತಿದೆ. ಈ ದೇಶದಲ್ಲಿ ಹಳ್ಳಿಯ ರೈತನ ಮಗ ದೇವೇಗೌಡರು ಸಿಎಂ ಆಗೊವರೆಗೆ ಅಲ್ಪಸಂಖ್ಯಾ ತರಿಗೆ ಮೀಸಲಾತಿ ಕೊಟ್ಟಿರಲಿಲ್ಲ. ದೇವೇಗೌಡರು ಸಿಎಂ ಆದ ಬಳಿಕ ಅವರಿಗೆ ಮೀಸಲಾತಿ ಕೊಟ್ಟರು. ಇವರು 60 ವರ್ಷ ಏನು ಮಾಡ್ತಾ ಇದ್ದರು ಸ್ವಾಮಿ. ದೇವೇಗೌಡರು ಕಾಂಗ್ರೆಸ್ ಮಾಡದ ಕೆಲಸವನ್ನು ಮಾಡಿದರು. ಮುಸ್ಲಿಮರಿಗೆ 4 % ಮೀಸಲಾತಿ ಕೊಟ್ಟಿದ್ದು ದೇವೇಗೌಡರು. ಇವರು ಅಲ್ಪಸಂಖ್ಯಾತರ ಓಟ್ ಇಟ್ಟುಕೊಳ್ಳಲು ಮಾತ್ರ ಪ್ರಯತ್ನ ಮಾಡ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಎಚ್ಡಿ ರೇವಣ್ಣ ಹರಿಹಾಯ್ದರು.

ಅಲ್ಪಸಂಖ್ಯಾತರಿಗೆ ಅವಕಾಶ ಕೊಟ್ಟಿದ್ದು ಜೆಡಿಎಸ್. ಹಿಂದುಳಿದ ವರ್ಗದವರಿಗೂ ರಾಜಕೀಯವಾಗಿ ಅವಕಾಶ ನೀಡಿದ್ದು ದೇವೇಗೌಡರು

ಅಲ್ಪ ಸಂಖ್ಯಾತರಿಗೆ ಅವಕಾಶ ಕೊಟ್ಟಿದ್ದು ಜೆಡಿಎಸ್. ಹಿಂದುಳಿದ ವರ್ಗದವರಿಗೂ ರಾಜಕೀಯವಾಗಿ ಅವಕಾಶ ನೀಡಿದ್ದು ದೇವೇಗೌಡರು. ಮೀಸಲಾತಿಯೇ ಇಲ್ಲದೆ ಹಿಂದುಳಿದ ವರ್ಗದ ಜನರಿಗೆ ಅದಿಕಾರ ಕೊಟ್ಟವರು ದೇವೇಗೌಡರು. ಕಾಂಗ್ರೆಸ್ ನವರು ಏನಾದ್ರು ಇಂತಹ ಅವಕಾಶ ಕೊಟ್ಟಿದಾರಾ? ಹಾಸನದ ಜಿಪಂ ನಲ್ಲಿ ಜನರಲ್ ಸ್ಥಾನಕ್ಕೆ ಪರಿಶಿಷ್ಟ ಸಮುದಾಯದ ವ್ಯಕ್ತಿ ಯನ್ನ ಅದ್ಯಕ್ಷ ರನ್ನಾಗಿ ಮಾಡಿದ್ದು ದೇವೇಗೌಡರು. ದೇವೇಗೌಡರು ಬರೋವರೆಗೆ ಅವರ ಯೋಗ್ಯತೆಗೆ ನಗರಸಭೆಗೆ ಅದ್ಯಕ್ಷ ರನ್ನ ಮಾಡೋಕೆ ಆಗಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ದ ಜೆಡಿಎಸ್ ನಾಯಕ ರೇವಣ್ಣ ಕಿಡಿಕಿಡಿಯಾದರು.

ಎಲೆಕ್ಷನ್ ಬಂದಾಗ ಕಾಂಗ್ರೆಸ್ ನಾಯಕರು ಎ ಟೀಂ, ಬೀ ಟಿಂ ಅಂತಾರೆ. ಚುನಾವಣೆ ಮುಗಿದ ಬಳಿಕ ದೇವೇಗೌಡರ ಪಾದದ ಬಳಿಬಂದ್ರು. ಯಾವ ಪಾರ್ಟಿ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಇವರಿಗೇನು ಹೊಟ್ಟೆ ಉರಿ? ಗೌರವಯುತವಾಗಿ ನಿಮ್ಮ‌ಕೆಲಸ ನೀವು ಮಾಡಿ. ಇನ್ನೂ ಗ್ಯಾರಂಟಿ ಕೊಡ್ತೀರಾ ಕೊಡಿ. ಹಿಂದಿನ ಕಾಂಗ್ರೆಸ್ ಈಗ ಉಳಿದಿಲ್ಲ ಎಂದು ವಾಗ್ದಾಳಿ ನಡೆಸಿದರು.

ದೇವೇಗೌಡರನ್ನು ಅದಿಕಾರದಿಂದ ಕೆಳಗೆ ಇಳಿಸಿದ್ದು ಯಾರು? ವಾಜಪೇಯಿ ಅವರು ಬೆಂಬಲ‌ಕೊಡ್ತಿನಿ ‌ಅಂದರೂ ಪ್ರಧಾನಿ ಹುದ್ದೆ ತ್ಯಾಗ ಮಾಡಿ ಬಂದ ನಾಯಕ ದೇವೇಗೌಡರು. ದೇವೇಗೌಡರು ಮಂತ್ರಿ ಆಗಲು 20 ವರ್ಷ ದುಡಿದರು. ಕಾಂಗ್ರೆಸ್ ನವರಿಗೆ ಭಯ ಶುರುವಾಗಿದೆ. ಎಷ್ಟು ದಿನ ಅಂತಾ ಜನರಿಗೆ ಸುಳ್ಳು ಹೇಳೋಕೆ ಆಗುತ್ತಾ? ಮುಸ್ಲಿಮರ ಬಗ್ಗೆ ಮಾತಾಡೋಕೆ ಕಾಂಗ್ರೆಸ್ ಗೆ ನೈತಿಕತೆ ಇಲ್ಲ. ಅಲ್ಪ ಸಂಖ್ಯಾತರೇ ಕಾಂಗ್ರೆಸ್ ಅನ್ನು ತಿರಸ್ಕಾರ ಮಾಡೊ ಸಮಯ ಬರುತ್ತೆ. ಗುಲಾಮ್‌ ನಬಿ ಅಜಾದ್ ಕಣ್ಣೀರು ಹಾಕಿಕೊಂಡು ರಾಜ್ಯಸಭೆಯಿಂದ ಹೋದರು. ಅಂತಹ ನಾಯಕನನ್ನ ಕಣ್ಣೀರು ಹಾಕಿಸಿದ್ರು. ಇವರು ಅಲ್ಪ ಸಂಖ್ಯಾತರ ಹಿತ ರಕ್ಷಣೆ ಮಾಡ್ತಿರಾ? ಗೌರವ ಇದ್ದರೆ ನಿಮಗೆ ಏನುಬೇಕೊ ವ್ಯಾಪಾರ ಮಾಡ್ಕೊಳಿ, ಲೂಟಿ ಮಾಡ್ಕೊಳಿ ಈ ಐದು ವರ್ಷ. ಅದು ಬಿಟ್ಟು ದಿನ ಬೆಳಗಾದ್ರೆ ದೇವೇಗೌಡರು ಕುಮಾರಸ್ವಾಮಿ ಬಗ್ಗೆ ಯಾಕೆ ಮಾತಾಡ್ತಿರಾ? ಎಂದು ನಿರಂಗತರವಾಗಿ ವಾಗ್ದಾಳಿ ನಡೆಸಿದರು.

ಲೋಕಸಭೆಯಲ್ಲಿ 240 ಇದ್ದ ಕಾಂಗ್ರೆಸ್ ಈಗ ಯಾವ ಸ್ಥಾನಕ್ಕೆ ಬಂದಿದೆ. ಈಗ ಸಿಕ್ಕ ಸಿಕ್ಕವರನ್ನ ತಬ್ಬಿಕೊಳ್ತಿದಾರೆ ಎಂದು ರೇವಣ್ಣ ಲೇವಡಿ ಮಾಡಿದರು. ಐಎನ್ ಡಿಐಎ ಅಂತಾ ತಬ್ಬಿಕೊಂಡಿದ್ದೀರಲ್ಲ, ಹಾಗಾದರೆ ಕಾವೇರಿ ಸಮಸ್ಯೆ ಬಗೆಹರಿಸಿ. ತಮಿಳುನಾಡಿನಲ್ಲಿ 40 ಸ್ಥಾನ ಗೆಲ್ಲಲು ನಮ್ಮ ರಾಜ್ಯವನ್ನು ಅಡ ಇಟ್ಟಿದಾರೆ. ಕಾವೇರಿ ಟ್ರಿಬ್ಯುನಲ್ ರಚನೆ ಮಾಡಿದಾಗ ಕಾಂಗ್ರೆಸ್ ಸ್ವಾಗತ ಮಾಡಿದ್ರು. ಈಗ ಕಾವೇರಿ ವಿಚಾರದ ಬಗ್ಗೆ ಮಾತಾಡುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇವರು ಬೇಕಾದಾಗ ಕೋಮುವಾದಿಗಳ ಜೊತೆ ತಮ್ಮವರನ್ನು‌ಕಳಿಸುತ್ತಾರೆ. ಹೋಗಿ ಅಲ್ಲಿ ಹೋಗಿ ಮೇವು ತಿಂದು ಬನ್ನಿ ಅಂತಾರೆ. ಅವರಿಗೆ ಮಾನರ್ಯಾದೆ ಇದ್ದರೆ ಸುಮ್ಮನಿರಲಿ. ಈ ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತರು ಓಟ್ ಕೊಡಲಿ ಬಿಡಲಿ ಅವರನ್ನು ಕೈಬಿಡಲು ಸಾದ್ಯವೇ ಇಲ್ಲ. ಈ ಜಿಲ್ಲೆಯಲ್ಲಿ ದೇವೇಗೌಡರು ರಾಜಕಾರಣ ಮಾಡಲು ಅಲ್ಪ ಸಂಖ್ಯಾತರ ಕೊಡುಗೆ ಇದೆ. ಇವರು ಏನೇ ಬಾಯಿ ಬಡಿದುಕೊಂಡರು ನಾನು ಅಲ್ಪಸಂಖ್ಯಾತರ ಜೊತೆ ಇರ್ತಿನಿ ಎಂದು ರೇವಣ್ಣ ಖಡಕ್ಕಾಗಿ ನುಡಿದರು.

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Wed, 4 October 23

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್