ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತೇನೆ: ಸಿದ್ದರಾಮಯ್ಯ ಹೇಳಿಕೆಗೆ ಸಿಡಿದೆದ್ದ ಬಿಜೆಪಿ ನಾಯಕರು

| Updated By: ವಿವೇಕ ಬಿರಾದಾರ

Updated on: Dec 05, 2023 | 12:01 PM

ಮುಸ್ಲಿಮರಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ, ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯಲ್ಲಿ ನಡೆದಿದ್ದ ಮುಸ್ಲಿಂ ಸಮಾವೇಶದಲ್ಲಿ ಹೇಳಿದ್ದರು. ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.

ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತೇನೆ: ಸಿದ್ದರಾಮಯ್ಯ ಹೇಳಿಕೆಗೆ ಸಿಡಿದೆದ್ದ ಬಿಜೆಪಿ ನಾಯಕರು
ಆರ್​. ಅಶೋಕ, ಸಿದ್ದರಾಮಯ್ಯ
Follow us on

ಬೆಳಗಾವಿ ಡಿ.05: ದೇಶದ ಸಂಪತ್ತನ್ನು ಮುಸ್ಲಿಮರಿಗೆ (Muslim) ಹಂಚುತ್ತೇನೆ, ನಿಮ್ಮನ್ನು (ಮುಸ್ಲಿಂ) ನಾನು ರಕ್ಷಣೆ ಮಾಡುತ್ತೇನೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಪ್ಪು ಅಂದ್ರೆ ಸಿದ್ದರಾಮಯ್ಯಗೆ ಬಹಳ ಪ್ರೀತಿ. ಸೋಮವಾರ (ಡಿ.04) ರಂದು ಮುಖ್ಯಮಂತ್ರಿಗಳು ಆಡಿದ ಮಾತು ದೇಶ ಮತ್ತು ರಾಜ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹಿಂದೆ ಟಿಪ್ಪು (Tippu) ಮೇಲೆ ಅತಿಯಾದ ಪ್ರೀತಿ ತೋರಿಸಿ ಏನಾಯಿತು? ಹಿಂದೂಗಳನ್ನು ಎರಡನೇ ದರ್ಜೆ ಪ್ರಜೆಗಳ ರೀತಿ ನೋಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ವಾಗ್ದಾಳಿ ಮಾಡಿದರು.

ಸುವರ್ಣಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಸಮಾನತೆ ಇರಬೇಕು. ಟಿಪ್ಪು ಜಯಂತಿ, ಶಾಯಿ ಭಾಗ್ಯ, ಮುಸ್ಲಿಂ ವಿವಾಹಕ್ಕೆ ಧನ ಸಹಾಯ ಈ ರೀತಿ ಕಾರ್ಯಕ್ರಮಗಳನ್ನ ತಂದರು. ಮುಸ್ಲಿಮರನ್ನು ವೋಟ್​ ಗಾಳವಾಗಿ ಕಾಂಗ್ರೆಸ್ ಬಳಕೆ ಮಾಡಿಕೊಳ್ಳುತ್ತಿದೆ ಎಂದರು.

ಅಲ್ಪಸಂಖ್ಯಾತರು, ಬಹುಸಂಖ್ಯಾತರು ಅನ್ನೋದನ್ನು ಬಿಡಬೇಕು

ದೊಡ್ಡ ಕೋಮುವಾದಿ ಅಂದರೇ ಕಾಂಗ್ರೆಸ್​ನವರು. ಸಿದ್ದರಾಮಯ್ಯ ದೊಡ್ಡ ಕೋಮುವಾದಿ. ಸುಖದಲ್ಲಿ ತೇಲುತ್ತಿರುವ ವ್ಯಕ್ತಿ ಅಂದರೆ ಅದು ಸಿದ್ದರಾಮಯ್ಯ. ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರು, ಬಹುಸಂಖ್ಯಾತರು ಅನ್ನೋದನ್ನು ಬಿಡಬೇಕು. ರಾಜಕೀಯ ಸಲುವಾಗಿ ಬರಿ ಮತಕ್ಕಾಗಿ ಪುಷ್ಠೀಕರಣ ನೀಡುತ್ತಿದ್ದಾರೆ. ಈ ರೀತಿಯ ವಿಶೇಷ ಹೇಳಿಕೆ ಅಷ್ಟು ಸೂಕ್ತವಲ್ಲ. ನಮ್ಮ ಸಮಾಜದಲ್ಲಿ ಸಮಸ್ಯೆಯಿಂದ ಕಾಡುತ್ತಿದ್ದರೆ ಅದು ಕಾಂಗ್ರೆಸ್ ಎಂದು ಎಂದು ಬಿಜೆಪಿ ಶಾಸಕ ಡಾ.ಅಶ್ವತ್ಥ್ ನಾರಾಯಣ ಎಂದು ಕಿಡಿಕಾರಿದರು.

ಇದನ್ನೂ ಓದಿ: ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತೇನೆ: ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯನವರು ಒಳ್ಳೆಯ ಆಡಳಿತ ಕೊಟ್ಟು, ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಜನಪರವಾಗಿ ಕೆಲಸ ಮಾಡಿದರೇ, ಎಲ್ಲಾ ಸಮುದಾಯಗಳಿಗೂ ಸಲ್ಲುವಂತಹದ್ದು ಆಗಲಿದೆ. ಗುಣಮಟ್ಟದ ಆರೋಗ್ಯ ಸೇವೆ ಕೊಡುತ್ತಿಲ್ಲ. ಜನರಿಗೆ ಸಮರ್ಪಕವಾಗಿ ವಿದ್ಯುತ್ ಕೊಡುತ್ತಿಲ್ಲ. ಬರ, ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಪರಿಹಾರ ಕೊಡುತ್ತಿಲ್ಲ. ನಿಮ್ಮ ಪಾದಾರ್ಪಣೆ ವೇಳೆ ಹಲವು ಸಮಸ್ಯೆಗಳು‌ ತಲೆದೂರಿವೆ. ಕಿವಿಗೆ ಹೂವು ಇಡುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಮುಸ್ಲಿಮರನ್ನ ಸಿಎಂ ಮಾಡಿದ್ದಾರಾ, ಅಧ್ಯಕ್ಷರನ್ನಾಗಿ ಮಾಡಿದ್ದಾರಾ ?

ಮುಸ್ಲಿಮರು ಈಗ ಹುಟ್ಟಿದ್ದಾರೆ ಅಂತ ಮುಖ್ಯಮಂತ್ರಿಗಳು ಅಂದುಕೊಂಡಿದ್ದಾರೆ. ಅವರಿಗೆ ಈ ದೇಶ ಯಾವುದೇ ಅನ್ಯಾಯ ಮಾಡಿಲ್ಲ. ನಮ್ಮ ಸರ್ಕಾರ ಇದ್ದಾಗಲೂ ಸಹಾಯ ಮಾಡಿದೆ. ಅವರು ಧರ್ಮದ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಮುಸಲ್ಮಾನರು ನಮ್ಮ ಪಕ್ಷದಲ್ಲೂ ಇದ್ದಾರೆ. ಕಾಂಗ್ರೆಸ್​ನವರು ಓಲೈಸುವ ಕೆಲಸ ಮಾಡುತ್ತಿದ್ದಾರೆ ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಮುಸ್ಲಿಮರನ್ನು ಸಿಎಂ ಮಾಡಿದ್ದಾರಾ, ಅಧ್ಯಕ್ಷರನ್ನಾಗಿ ಮಾಡಿದ್ದಾರಾ? ನ್ಯಾಯ ಕೊಡಿಡುತ್ತೇನೆ ಅಂದರೇ, ಏನು ಅನ್ಯಾಯ ಆಗಿದೆ ? ಸರ್ವರಿಗೂ ಸಮಪಾಲು, ಸಮಬಾಳು ಅಂತ ನಮ್ಮ ಅಂಬೇಡ್ಕರ್ ಹೇಳಿದ್ದಾರೆ. ಓಲೈಕೆ ಮಾಡುವ ಕೆಲಸ ಆಗಬಾರದು. ಮುಖ್ಯಮಂತ್ರಿಗಳು ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಸಲಹೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ