ಮಾರ್ಗರೇಟ್​ರನ್ನು ಕಾಂಗ್ರೆಸ್ ಹರಕೆಯ ಕುರಿಯಾಗಿಸಲು ಹೊರಟಿದೆ; ಕರ್ನಾಟಕ ಬಿಜೆಪಿ ವ್ಯಂಗ್ಯ

| Updated By: sandhya thejappa

Updated on: Jul 18, 2022 | 12:08 PM

ಅಪಮಾನ ಮಾಡಿದ್ದಕ್ಕೆ ರಾಷ್ಟ್ರದ ಕ್ಷಮೆ ಕೇಳಬೇಕು: ದ್ರೌಪದಿ ಮುರ್ಮು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

ಮಾರ್ಗರೇಟ್​ರನ್ನು ಕಾಂಗ್ರೆಸ್ ಹರಕೆಯ ಕುರಿಯಾಗಿಸಲು ಹೊರಟಿದೆ; ಕರ್ನಾಟಕ ಬಿಜೆಪಿ ವ್ಯಂಗ್ಯ
ಮಾರ್ಗರೇಟ್ ಆಳ್ವ
Image Credit source: @alva_margaret
Follow us on

ಬೆಂಗಳೂರು: ಉಪರಾಷ್ಟ್ರಪತಿ ಚುನಾವಣೆಗೆ ವಿಪಕ್ಷಗಳ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವ (Margaret Alva) ಆಯ್ಕೆಯಾಗಿರುವುದಕ್ಕೆ ರಾಜ್ಯ ಬಿಜೆಪಿ (Karnataka BJP) ವ್ಯಂಗ್ಯವಾಗಿ ಟ್ವೀಟ್ ಮಾಡಿದೆ. ಮಾರ್ಗರೇಟ್​ರನ್ನು ಕಾಂಗ್ರೆಸ್ ಹರಕೆಯ ಕುರಿಯಾಗಿಸಲು ಹೊರಟಿದೆ. ರಾಜಕೀಯವಾಗಿ ಈಗಾಗಲೇ ಮೂಲೆಗುಂಪಾಗಿದ್ದ ಆಳ್ವಾ ಕುಟುಂಬಕ್ಕೆ ಭವಿಷ್ಯದ ಎಲ್ಲ ರಾಜಕೀಯ ಆಯ್ಕೆಗಳನ್ನು ಕಾಂಗ್ರೆಸ್ ವರಿಷ್ಠರು ಡೆಡ್ ಎಂಡ್​ಗೆ ತಂದು ನಿಲ್ಲಿಸಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಕಳೆದ ಬಾರಿಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಟಿಕೆಟ್ ಮಾರಾಟವಾಗಿದೆ ಎಂದು ಮಾರ್ಗರೇಟ್ ನೇರ ಆರೋಪ ಮಾಡಿದ್ದರು. ಹೊರಗಡೆಯಿಂದ ಬಂದವರು, ರಾಜ್ಯದ ಬಗ್ಗೆ ಅರಿವಿಲ್ಲದವರು ಟಿಕೆಟ್ ನಿರ್ಧರಿಸುತ್ತಿದ್ದಾರೆ ಎಂದು ದೂರಿದ್ದರು. ಕಾಂಗ್ರೆಸ್ ಧೋರಣೆಯನ್ನು ಪ್ರಶ್ನಿಸಿದವರಿಗೇ ಮಣೆ ಹಾಕಿರುವುದರ ಗುಟ್ಟೇನು? ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ
Unwanted Thoughts: ಬೇಡದ ಯೋಚನೆಗಳಿಂದ ಹೊರಬರುವುದು ಹೇಗೆ?
CBSE Result 2022: ಸಕಾಲದಲ್ಲಿಯೇ ಸಿಬಿಎಸ್​ಇ ಫಲಿತಾಂಶ; ಧರ್ಮೇಂದ್ರ ಪ್ರಧಾನ್
Rishabh Pant: 42ನೇ ಓವರ್​ನಲ್ಲಿ ರಿಷಭ್ ಪಂತ್ ಆಡಿದ ಆಟಕ್ಕೆ ಬೆರಗಾದ ಕ್ರಿಕೆಟ್ ಜಗತ್ತು: ವಿಡಿಯೋ ನೋಡಿ
ICSE Results 2022: ಐಸಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ; ಬೆಂಗಳೂರಿನ 5 ವಿದ್ಯಾರ್ಥಿಗಳಿಗೆ 2ನೇ ರ‍್ಯಾಂಕ್‌

ಕಳೆದ ಬಾರಿಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸೋಲುವ ಸ್ಪರ್ಧೆಗೆ ಮಾರ್ಗರೇಟ್ ಆಳ್ವ ಅವರನ್ನು ದೂಡಿರುವುದು ಕಾಂಗ್ರೆಸ್ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯಕ್ಕೆ ಕೊಡುತ್ತಿರುವ ಕೊಡುಗೆ ಎಂದು ವ್ಯಾಖ್ಯಾನಿಸಬಹುದೇ? ಗಾಂಧಿ ಕುಟುಂಬದ ಧೋರಣೆಯನ್ನು ಈ ಹಿಂದೆ ಪ್ರಶ್ನಿಸಿದ್ದಕ್ಕಾಗಿ ಈ ಕೊಡುಯೇ? ಎಂದು ಬಿಜೆಪಿ ಟ್ವೀಟ್ ಮೂಲಕ ಕೇಳಿದೆ.


ಇದನ್ನೂ ಓದಿ: ಚಾರ್ ಧಾಮ್ ಯಾತ್ರೆ ಕೈಗೊಂಡ ಯಾತ್ರಿಕರು ಸಹಾಯಧನಕ್ಕಾಗಿ ಏನೆಲ್ಲ ದಾಖಲಾತಿಗಳನ್ನು ಸಲ್ಲಿಸಬೇಕು ಗೊತ್ತಾ? ಯಾತ್ರೆಯ ಮಹತ್ವ, ಪ್ರಯೋಜನಗಳು ಇಲ್ಲಿವೆ

ಅಪಮಾನ ಮಾಡಿದ್ದಕ್ಕೆ ರಾಷ್ಟ್ರದ ಕ್ಷಮೆ ಕೇಳಬೇಕು: ದ್ರೌಪದಿ ಮುರ್ಮು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ. ಆದರೂ ಅವರನ್ನು ರಬ್ಬರ್ ಸ್ಟ್ಯಾಂಪ್ ಅಂತ ಅವಮಾನಿಸಲಾಗುತ್ತಿದೆ. ಇದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಅಸಡ್ಡೆಯನ್ನು ತೋರಿಸುತ್ತಿದೆ. ಈ ರೀತಿ ಅಸಡ್ಡೆ ಅಪಮಾನ ಮಾಡಿದ್ದಕ್ಕೆ ರಾಷ್ಟ್ರದ ಕ್ಷಮೆ ಕೇಳಬೇಕು. ಆದಿವಾಸಿ ಮಹಿಳೆಯನ್ನು ವಿರೋಧಿಸಿ ವಿಪಕ್ಷಗಳ ಮುಖವಾಡ ಕಳಚಿ ಬಿದ್ದಿದೆ ಎಂದು ಸಿಟಿ ರವಿ ಹೇಳಿದರು.

ಸಿದ್ದರಾಮಯ್ಯನವರೇ ಅಹಿಂದ ಟ್ರಂಪ್ ಕಾರ್ಡ್ ಎಲ್ಲಿ ಹೋಯ್ತು? ಎಂದು ಪ್ರಶ್ನಿಸಿರುವ ಸಿಟಿ ರವಿ, ಅಲ್ಪಸಂಖ್ಯಾತ, ಆದಿವಾಸಿ, ದಲಿತರ ಪರ ಅಂತಾ ಹೇಳಿಕೊಂಡು ಟ್ರಂಪ್ ಕಾರ್ಡ್ ಹಾಕಿದ್ರಲ್ಲ ಸಿದ್ದರಾಮಯ್ಯನವರೇ, ಈಗ ನಿಮ್ಮ ಬದ್ಧತೆ ಎಲ್ಲಿ ಹೋಯ್ತು?, ನಿಮ್ಮ ಮುಖವಾಡ ಕಳಚಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಅಮೃತ ಮಹೋತ್ಸವದ ಅಧಿವೇಶನ ಇದು, ಸಂಸತ್ತಿನ ಘನತೆ ಹೆಚ್ಚಿಸುವ ವರ್ತನೆ ಇರಲಿ: ನರೇಂದ್ರ ಮೋದಿ

Published On - 11:53 am, Mon, 18 July 22