ಬೆಂಗಳೂರು ಕಾಂಗ್ರೆಸ್​ ಶಾಸಕರಿಗೆ ಕರೆ ಮಾಡಿ ಸುರ್ಜೇವಾಲ ಫುಲ್ ಕ್ಲಾಸ್, ಜೊತೆಗೊಂದು ಖಡಕ್ ಸೂಚನೆ

ಕರ್ನಾಟಕಕ್ಕೆ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಸ್ತುವಾರಿ ಸುರ್ಜೆವಾಲ ಅವರು ಕಾಂಗ್ರೆಸ್ ಶಾಸಕರಿಗೆ ಕರೆ ಮಾಡಿ ಖಡಕ್ ಸೂಚನೆ ಕೊಟ್ಟಿದ್ದಾರೆ.

Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Oct 05, 2022 | 7:57 PM

ಬೆಂಗಳೂರು: ದೇಶದಲ್ಲಿ ಒಗ್ಗಟ್ಟು ಮೂಡಿಸುವ ಅಭಿಲಾಷೆಯೊಂದಿಗೆ ತಮಿಳುನಾಡಿನ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್‌ ಜೋಡೋ ಯಾತ್ರೆ (Bharat Jodo Yatra)  ಕರ್ನಾಟಕದಲ್ಲಿ ನಡೆಯುತ್ತಿದ್ದು, ಇದೀಗ ಪುತ್ರ ರಾಹುಲ್ ಗಾಂಧಿ ಸಾಥ್ ನೀಡಲು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರ್ನಾಟಕಕ್ಕೆ ಬಂದಿದ್ದಾರೆ.

ಎರಡು ದಿನದ ವಿಶ್ರಾಂತಿ ಬಳಿಕ ನಾಳೆ(ಅ.6) ಭಾರತ್ ಜೋಡೋ ಯಾತ್ರೆ ಆರಂಭವಾಗಲಿದ್ದು, ಇದರಲ್ಲಿ ಸೋನಿಯಾ ಗಾಂಧಿ ಅವರು ಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್​​ ಸುರ್ಜೇವಾಲ ಬೆಂಗಳೂರು ನಗರ ಶಾಸಕರಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ಜನರನ್ನ ಕರೆದುಕೊಂಡು ಬಾರದ ಶಾಸಕರ ಮೇಲೆ ಎಐಸಿಸಿ ಗರಂ

ಬೆಂಗಳೂರು ನಗರ ಕಾಂಗ್ರೆಸ್ ಶಾಸಕರಿಗೆ ರಾಜ್ಯ ಉಸ್ತುವಾರಿ ಸುರ್ಜೆವಾಲಾ ಕರೆ ಮಾಡಿ, ನಾಳೆಯ ಸೋನಿಯಾ ಗಾಂಧಿ ಕಾರ್ಯಕ್ರಮಕ್ಕೆ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿದ್ದಾರೆ.  ಇನ್ನೇನು ಆರೇಳು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿರುವುದರಿಂದ ಕಾಂಗ್ರೆಸ್ ವರಿಷ್ಠರು ಕರ್ನಾಟಕವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇದರಿಂದ ಭಾರತ್ ಜೋಡೋ ಯಾತ್ರೆ ಮೂಲಕವೂ ಸಹ ಕಾಂಗ್ರೆಸ್ ಅಲೆ ಎಬ್ಬಿಸಲು ಪ್ಲಾನ್ ಮಾಡಿದೆ.

ಆದ್ರೆ, ಮೊನ್ನೆ ಪಾಂಡವಪುರ ಬಳಿ ಶಾಸಕರು – ಜನರು ಆಗಮಿಸದಿರುವುದಕ್ಕೆ ಸುರ್ಜೆವಾಲಾ ಗರಂ ಆಗಿದ್ದರು. ಶ್ರೀರಂಗಪಟ್ಟಣ ಸಮಯ ಬದಲಾಗಿರುವ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂದು ಬೆಂಗಳೂರು ಶಾಸಕರ ಸಮಜಾಯಿಷಿ ನೀಡಿದ್ರು. ಇದೀಗ ಮಂಡ್ಯ ಜಿಲ್ಲೆಯಲ್ಲಿ ಭಾರತ್ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿಯಾಗಿರುವುದರಿಂದ ಬೆಂಗಳೂರಿನ ಎಲ್ಲಾ ಶಾಸಕರು ಹಾಜರಿರುವಂತೆ ಸಂದೇಶ ರವಾನಿಸಿದ್ದಾರೆ.

ಶಾಸಕರಿಗೆ ಕರೆ ಮಾಡಿ ತರಾಟೆ

ಭಾರತ್ ಜೋಡೋ ಯಾತ್ರೆಗೆ ಕನಿಷ್ಠ ಐದು ಸಾವಿರ ಜನರನ್ನ ಕರೆದುಕೊಂಡು ಬರುವಂತೆ ಮೊದಲೇ ಎಐಸಿಸಿ ನಾಯಕರು ಸ್ಪಷ್ಟ ಸೂಚನೆ ನೀಡಿದ್ದರು. ಆದರೆ, ಎಐಸಿಸಿ ನಾಯಕರ ಆದೇಶವಿದ್ದರೂ ಶಾಸಕರು ಅಷ್ಟಾಗಿ ಆಸಕ್ತಿ ತೋರಿಲ್ಲ. ಆದ್ರೆ, ಮೊನ್ನೇ ಯಾತ್ರೆಯಲ್ಲಿ ಜನರು ಇರಲಿಲ್ಲ. ಅಲ್ಲದೇ ಬೆಂಗಳೂರು ಶಾಸಕರು ಸಹ ಕಾಣಲಿಲ್ಲ. ಇದರಿಂದ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಅಣಕಿಸಿತ್ತು. ಇದರಿಂದ ಗರಂ ಆಗಿದ್ದ ಸುರ್ಜೆವಾಲ ಇಂದು(ಬುಧವಾರ) ಬೆಂಗಳೂರು ನಗರ ಶಾಸಕರಿಗೆ ಖುದ್ದು ಅವರೇ ಕರೆ ಮಾಡಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ನಾಳೆ ಐಕ್ಯತಾ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿ ಹಿನ್ನೆಲೆಯಲ್ಲಿ ಎಲ್ಲಾ ಶಾಸಕರು ಕಡ್ಡಾಯವಾಗಿ ಯಾತ್ರೆಯಲ್ಲಿ ಭಾಗಿಯಾಗಲು ಖಡಕ್ ಸೂಚನೆ ನೀಡಿದ್ದಾರೆ.

ದಸರಾ ಹಿನ್ನೆಲೆಯಲ್ಲಿ ಅ.4 ಹಾಗೂ 5ರಂದು ಭಾರತ್ ಜೋಡೋ ಯಾತ್ರೆಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಮತ್ತೆ ನಾಳೆಯಿಂದ ಪುನಾರಂಭವಾಗಲಿದ್ದು, ಸೋನಿಯಾ ಗಾಂಧಿ ಪಾಲ್ಗೊಳ್ಳಲಿದ್ದಾರೆ.