ಭಾರತ್ ಜೋಡೋ ಯಾತ್ರೆಗೆ ಜನರನ್ನ ಕರೆದುಕೊಂಡು ಬಾರದ ಶಾಸಕರ ಮೇಲೆ ಎಐಸಿಸಿ ಗರಂ

ಜನರನ್ನ ಕರೆದುಕೊಂಡು ಬಾರದ ಶಾಸಕರ ಮೇಲೆ ಎಐಸಿಸಿ ನಾಯಕರು ಕಣ್ಣಿಟ್ಟಿದ್ದು, ಭಾರತ್ ಜೋಡೋ ವಿವಿಧ ಸಮಿತಿಗಳ ಕೆಲಸ ಕಾರ್ಯದ ಬಗ್ಗೆಯೂ ಗಮನ ಹರಿಸುತ್ತಿದೆ.

ಭಾರತ್ ಜೋಡೋ ಯಾತ್ರೆಗೆ ಜನರನ್ನ ಕರೆದುಕೊಂಡು ಬಾರದ ಶಾಸಕರ ಮೇಲೆ ಎಐಸಿಸಿ ಗರಂ
ಭಾರತ್ ಜೋಡೋ ಯಾತ್ರೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Oct 05, 2022 | 2:54 PM

ಬೆಂಗಳೂರು: ಭಾರತ್ ಜೋಡೋ ಯಾತ್ರೆಯಲ್ಲಿ ಶಾಸಕರ ಮೇಲೆ ಎಐಸಿಸಿ ವೀಕ್ಷಕರ ಹದ್ದಿನ ಕಟ್ಟಿದೆ. ಐದು ಮಂದಿ ಎಐಸಿಸಿ ವೀಕ್ಷಕರಿಂದ ಶಾಸಕರ ಬಗ್ಗೆ ಪರಿಶೀಲನೆ ಮಾಡಲಿದ್ದು, ಭಾರತ್ ಜೋಡೋಗೆ ಸಹಕಾರ ನೀಡದ ಶಾಸಕರ ವಿರುದ್ದ ಎಐಸಿಸಿಗೆ ವರದಿ ಸಲ್ಲಿಕೆ ಮಾಡಲಿದೆ. ಜನರನ್ನ ಕರೆದುಕೊಂಡು ಬಾರದ ಶಾಸಕರ ಮೇಲೆ ಎಐಸಿಸಿ ನಾಯಕರು ಕಣ್ಣಿಟ್ಟಿದ್ದು, ಭಾರತ್ ಜೋಡೋ ವಿವಿಧ ಸಮಿತಿಗಳ ಕೆಲಸ ಕಾರ್ಯದ ಬಗ್ಗೆಯೂ ಗಮನ ಹರಿಸುತ್ತಿದೆ. ಸೂಚನೆ ನೀಡಿದ್ದರೂ ಪರಿಣಾಮಕಾರಿಯಾಗಿ ಪಾಲಿಸದ ಶಾಸಕರ ವಿರುದ್ಧ ಎಐಸಿಸಿ ನಾಯಕರು ಗರಂ ಆಗಿದ್ದಾರೆ. ಭಾರತ್ ಜೋಡೋ ಯಾತ್ರೆಯಲ್ಲಿ ಶಾಸಕರ ಹಣೆ ಬರಹ ನಿರ್ಧಾರವಾಗಲಿದೆಯಾ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಭಾರತ್ ಜೋಡೋ ಯಾತ್ರೆಗೆ ಕನಿಷ್ಠ ಐದು ಸಾವಿರ ಜನರನ್ನ ಕರೆದುಕೊಂಡು ಬರುವಂತೆ ಮೊದಲೇ ಎಐಸಿಸಿ ನಾಯಕರು ಸ್ಪಷ್ಟ ಸೂಚನೆ ನೀಡಿದ್ದರು. ಆದರೆ, ಎಐಸಿಸಿ ನಾಯಕರ ಆದೇಶವಿದ್ದರೂ ಶಾಸಕರು ಅಷ್ಟಾಗಿ ಆಸಕ್ತಿ ತೋರಿಲ್ಲ.

ಪಾದಯಾತ್ರೆಗೆ ಜನರನ್ನ ಕರೆತರುವುದಿರಲಿ ಸ್ವತಃ ಕೆಲ ಶಾಸಕರು ಭಾಗಿಯಾಗುತ್ತಿಲ್ಲ ಎಂಬ ಮಾಹಿತಿ ರವಾನೆ ಮಾಡಲಾಗಿದೆ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ಸ್ವತಃ ರಾಹುಲ್ ಜೊತೆ ಹೆಜ್ಜೆ ಹಾಕಿದರೂ ಕೆಲ ಶಾಸಕರು ನಿರೀಕ್ಷಿತ ಮಟ್ಟದಲ್ಲಿ ಆಸಕ್ತಿ ತೋರುತ್ತಿಲ್ಲವೆಂದು ಕಿಡಿಕಾರಿದ್ದಾರೆ. ನಾಲ್ಕನೇ ದಿನ ದಿಢೀರನೇ ಪ್ರತ್ಯಕ್ಷವಾಗಿದ್ದ ಶಾಸಕ ಜಮೀರ್ ಅಹಮ್ಮದ್​ರನ್ನು ವೇಣುಗೋಪಾಲ್ ಪ್ರಶ್ನಿಸಿದ್ದಾರೆ. ಜಮೀರ್ ವಿರುದ್ಧ ದೂರು ರವಾನೆಯಾದ ಕಾರಣ ಜನರನ್ನ ಕರೆತರದ ಬಗ್ಗೆ ವೇಣುಗೋಪಾಲ್ ಪ್ರಶ್ನಿಸಿದ್ದು, ಉತ್ತರಿಸಲಾಗದೆ ಜಮೀರ್ ಅಹಮ್ಮದ್ ತಡಬಡಾಯಿಸಿದ್ದಾರೆ. ಯಾರು ಯಾರು ರ್ಯಾಲಿಲಿ ತೊಡಗಿಸಿಕೊಳುತ್ತಿದ್ದಾರೆ? ಜನರನ್ನ ಕರೆತರುತ್ತಿದ್ದಾರೋ ಇಲ್ಲವೋ ಎಂಬ ಮಾಹಿತಿಯನ್ನು ಎಐಸಿಸಿ ನಾಯಕರು ಪಡೆಯುತ್ತಿದ್ದಾರೆ.

ನಾಗರಹೊಳೆ ಅಭಯಾರಣ್ಯದಲ್ಲಿ ಸೋನಿಯಾ, ರಾಹುಲ್ ಸಫಾರಿ

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರಗೆ ಸಾಥ್​ ನೀಡಲು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನಿನ್ನೆ (ಸೆ. 4) ಮೈಸೂರಿಗೆ ಆಗಮಿಸಿದ್ದಾರೆ. ಆದರೆ ನಿತ್ಯದ ರಾಜಕೀಯ ಜಂಜಾಟದಿಂದ ದೂರವಾಗಿ ಸೋನಿಯಾ ಗಾಂಧಿ ಹಾಗೂ ಪುತ್ರ ರಾಹುಲ್ ಗಾಂಧಿ ನಾಗರಹೊಳೆ ಅಭಯಾರಣ್ಯ ಸುತ್ತಿದ್ದಾರೆ. ದಸರಾ ಹಬ್ಬ ಹಿನ್ನೆಲೆಯಲ್ಲಿ ಭಾರತ್ ಜೋಡೋ ಯಾತ್ರೆಗೆ ಅಕ್ಟೋಬರ್ 4 ಹಾಗೂ 5ರಂದು ಎರಡು ದಿನಗಳ ಕಾಲ ವಿಶ್ರಾಂತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಇಂದು(ಅ.04) ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ಮಾಡಿ ರಿಲ್ಯಾಕ್ಸ್ ಆಗಿದ್ದಾರೆ.

ಮೈಸೂರು ಜಿಲ್ಲೆ H.D.ಕೋಟೆ ತಾಲೂಕಿನ ಕಬಿನಿ ಬಳಿಯ ಆರೆಂಜ್ ಕೌಂಟಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಸೋನಿಯಾ, ರಾಹುಲ್‌ಗಾಂಧಿ ಇಂದು ಮಧ್ಯಾಹ್ನ ನಾಗರಹೊಳೆ ಅಭಯಾರಣ್ಯದಲ್ಲಿ 3 ಗಂಟೆ ಕಾಲ ಸಫಾರಿ ಮಾಡಿ ಎಂಜಾಯ್ ಮಾಡಿದರು. ರೆಸಾರ್ಟ್ ನಿಂದ ತೆರೆದ ಸಫಾರಿ ವಾಹನದಲ್ಲೇ ಮೂರು ಗಂಟೆಗಳ ಕಾಲ ನಾಗರಹೊಳೆ ಅಭಯಾರಣ್ಯ ಸುತ್ತಾಡಿ ಪ್ರಕೃತಿಯ ಸೊಬಗನ್ನು ಸವಿದರು. ಒಂದೆಡೆ ಅಧ್ಯಕ್ಷ ಚುನಾವಣೆ ಮತ್ತೊಂದೆಡೆ ಪಕ್ಷವನ್ನು ಮುಂದಿನ ಚುನಾವಣೆಗೆ ಶತಾಯಗತಾಯವಾಗಿ ಅಧಿಕಾರಕ್ಕೆ ತರಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸಾಗುತ್ತಿರುವ ಜೋಡೋ ಯಾತ್ರೆಗೆ ಸಾಥ್ ನೀಡಲು ಸೋನಿಯಾ ರಾಜ್ಯಕ್ಕೆ ಆಗಮಿಸಿದ್ದಾರೆ. ನಾಡಿದ್ದು ಸೆಪ್ಟೆಂಬರ್ 6ರಿಂದ ಮಂಡ್ಯದಲ್ಲಿ ಆರಂಭವಾಗಲಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಹೆಜ್ಜೆ ಹಾಕುವ ಸಾಧ್ಯತೆಗಳಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.