ದುರ್ಗಾ ಮಾತೆ ವಿಗ್ರಹ ವಿಸರ್ಜನೆಗೆ ತೆರಳಿದ್ದ ಯುವಕರು ನೀರುಪಾಲು
ದಸರಾ ನಿಮಿತ್ತ ದುರ್ಗಾ ಮಾತೆ ವಿಗ್ರಹ ವಿಸರ್ಜನೆಗೆ ತೆರಳಿದ್ದ ಯುವಕರು ನೀರುಪಾಲಾಗಿದ್ದಾರೆ.
ಬೆಂಗಳೂರು: ದಸರಾ ನಿಮಿತ್ತ ದುರ್ಗಾ ಮಾತೆ ವಿಗ್ರಹ ವಿಸರ್ಜನೆಗೆ ತೆರಳಿದ್ದ ಯುವಕರು ನೀರುಪಾಲಾಗಿದ್ದಾರೆ. ಮಹಾರಾಷ್ಟ್ರ ಮೂಲದ ಸೋಮೇಶ್(21), ಜಿತು(22) ಮೃತ ದುರ್ದೈವಿಗಳು. ದಸರಾ ನಿಮಿತ್ತ ದುರ್ಗಾ ಮಾತೆ ವಿಗ್ರಹ ವಿಸರ್ಜನೆಗೆ ಎಂದು ಐವರು ಕೆಂಗೇರಿಯ ಸುಣಕಲ್ ಪಾಳ್ಯಕೆರೆಗೆ ಹೋಗಿದ್ದಾರೆ. ಆಗ ಕೆರೆಯಲ್ಲಿ ಐವರು ಯುವಕರು ಇಳಿದಿದ್ದಾರೆ. ಈ ವೇಳೆ ಐವರ ಪೈಕಿ ಇಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಐವರು ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಆರ್.ಆರ್.ನಗರದಲ್ಲಿ ವಾಸವಿದ್ದರು. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಗ್ನಿಶಾಮಕ ದಳ, ಪೊಲೀಸರಿಂದ ಶೋಧ ಕಾರ್ಯಾ ನಡೆದಿದೆ. ಸದ್ಯ ಕತ್ತಲಾಗಿರುವುದರಿಂದ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ.
ಬೈಕ್ ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿ; ಬೈಕ್ ಸಾವಾರರಿಬ್ಬರೂ ಸ್ಥಳದಲ್ಲೇ ಸಾವು
ಬಾಗಲಕೋಟೆ: ಬೈಕ್ ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸಾವಾರರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ತಾಲೂಕಿನ ಆನದಿನ್ನಿ ಕ್ರಾಸ್ ಬಳಿಯ ಯಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಟ್ರಕ್ ವಿಜಯಪುರ ಮಾರ್ಗದಿಂದ ಗದ್ದನಕೇರಿ ಕ್ರಾಸ್ ಕಡೆಗೆ ಬರ್ತಿತ್ತು. ಬೈಕ್ ಸವಾರರು ಗದ್ದನಕೇರಿ ಕ್ರಾಸ್ ದಿಂದ ಬೀಳಗಿ ಕಡೆಗೆ ಹೊರಟಿದ್ದಾರೆ. ಅತೀ ವೇಗದಿಂದ ಬಂದ ಬೈಕ್ ಸಾವರರು, ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೊಟ್ಟಿಗೆ ಮನೆಯಲ್ಲಿ ಗೃಹಿಣಿ ಶವ ಪತ್ತೆ
ತುಮಕೂರು: ತುರುವೇಕೆರೆ ತಾಲೂಕಿನ ಬಿ.ಸಿ.ಕಾವಲ್ ಗ್ರಾಮದ ತೋಟದ ಮನೆಯ ಕೊಟ್ಟಿಗೆ ಮನೆಯಲ್ಲಿ ಗೃಹಿಣಿ ಶವ ಪತ್ತೆಯಾಗಿದೆ. ಶ್ಯಾಮಲಾ(28) ಶವ ಪತ್ತೆ. ಶ್ಯಾಮಲಾ ಅವರ ಕುತ್ತಿಗೆ ಭಾಗದಲ್ಲಿ ಹಗ್ಗದಿಂದ ಬಿಗಿದಿರೋ ರೀತಿ ಗುರುತು ಪತ್ತೆಯಾಗಿದೆ. ಪತಿ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದ್ದು, ಪತಿ ಮಂಜುನಾಥ್, ಅತ್ತೆ ಸುನಂದಮ್ಮಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಂಡಿನಶಿವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ
ಮತ್ತೂರು ಗ್ರಾಮದಲ್ಲಿ ಮನೆ ಕುಸಿದು ಮಹಿಳೆ ಸಾವು
ಕೊಪ್ಪಳ: ಮನೆ ಕುಸಿದು ಮಹಿಳೆ ಸಾವನ್ನಪ್ಪಿರುವ ಘಟನೆ ಕೊಪ್ಪಳ ತಾಲೂಕಿನ ಮತ್ತೂರು ಗ್ರಾಮದಲ್ಲಿ ಘಟನೆಮತ್ತೂರು ಗ್ರಾಮದಲ್ಲಿ ನಡೆದಿದೆ. ಬಸಮ್ಮ ಡಂಬರಳ್ಳಿ(55) ಮೃತ ದುರ್ದೈವಿ. ಮನೆಯಲ್ಲಿದ್ದ ಮತ್ತಿಬ್ಬರನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಶಂಕರಮ್ಮ, ಶಿವನಗೌಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಪ್ಪಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಿನ್ನೆ ಹೆಂಡತಿ ಇಂದು ಗಂಡ ಆತ್ಮಹತ್ಯೆ
ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಧನಮಿಟ್ಟೇನಹಳ್ಳಿಯಲ್ಲಿ ನಿನ್ನೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಪತಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ನಿನ್ನೆ ಮನೆಯಲ್ಲಿ ವಿಷ ಸೇವಿಸಿ ಪತ್ನಿ ಸುನಿತಾ(25) ಆತ್ಮಹತ್ಯೆ ಹಿನ್ನೆಲೆ ಪತಿ ಮೋಹನ್ ಕುಮಾರ್ನನ್ನು ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆ ನಡೆಸಿ ಕಳಿಸಿದ್ದರು. ಇಂದು ಮನೆಗೆ ಬಂದು ಮೋಹನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರ ವಿರುದ್ಧ ಸಂಬಂಧಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುವಕನನ್ನ ಅಪಹರಸಿ, ಕೊಲೆ ಮಾಡಿದ ದುಷ್ಕರ್ಮಿಗಳು
ಕಲಬುರಗಿ: ದುಷ್ಕರ್ಮಿಗಳು ಯುವಕನನ್ನ ಅಪಹರಸಿ, ಕೊಲೆ ಮಾಡಿರುವ ಘಟನೆ ಕಲಬುರಗಿ ಪಟ್ಟಣದ ಶರಣಸಿರಸಗಿ ಮಡ್ಡಿ ಬಳಿ ನಡೆದಿದೆ. ಕಲಬುರಗಿ ನಗರದ ಆಶ್ರಯ ಕಾಲೋನಿ ನಿವಾಸಿ ಪ್ರವೀಣ್(21) ಮೃತ ದುರ್ದೈವಿ. ದುಷ್ಕರ್ಮಿಗಳು ಪ್ರವೀಣನನ್ನು ಕೈನಿಂದ ಗುದ್ದಿ ಕೊಲೆ ಮಾಡಿದ್ದಾನೆ. ಯುವತಿಯೋರ್ವಳನ್ನು ಚುಡಾಯಿಸಿದ್ದಕ್ಕೆ ಅಕ್ಟೋಬರ್ 2 ರಂದು ಮನೆ ಮುಂದೆ ಇದ್ದ ಪ್ರವೀಣ್ನನ್ನು ದುಷ್ಕರ್ಮಿಗಳು ಅಪಹರಿಸಿಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಆಶ್ರಯ ಕಾಲೋನಿಯ ಸಾಗರ್ ಮತ್ತು ಆತನ ಸ್ನೇಹಿತರ ವಿರುದ್ಧ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:36 pm, Wed, 5 October 22