ಬೆಂಗಳೂರು: ರಾಜ್ಯದಲ್ಲಿ ನಿಧಾನವಾಗಿ ಮುಂದಿನ ಚುನಾವಣಾ ತಯಾರಿಗಳು ನಡೆಯುತ್ತಿವೆ. ಒಂದು ಕಡೆ ಕಾಂಗ್ರೆಸ್ (Congress) ನಲ್ಲಿ ಟಿಕೆಟ್ಗೆ ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದರೆ, ಇನ್ನೊಂದು ಕಡೆ ಒಂದು ಕುಟುಂಬಕ್ಕೆ ಒಂದು ಟಿಕೆಟ್ ನೀಡುವ ಚಿಂತನೆ ನಡೆಯುತ್ತಿದೆ. ಈ ಬಗ್ಗೆ ಕಾಂಗ್ರೆಸ್ ವಿರುದ್ಧ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ (Karnataka BJP), ದೇಶವೇ ಬೆರಗುಗಣ್ಣಿನಿಂದ ನೋಡುತ್ತಿದ್ದ ಯುಪಿ ಚುನಾವಣೆಯಲ್ಲಿ ಮೋದಿ ಅವರು ವಂಶವಾದ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡರು. ವಂಶವಾದಕ್ಕೆ ಪೋಷಣೆ ನೀಡದೆ ಬಲಾಢ್ಯರ ಮಕ್ಕಳಿಗೆ ಟಿಕೆಟ್ ನಿರಾಕರಿಸಿದ್ದರು. ಈ ನಿರ್ಧಾರದಿಂದ ಪಕ್ಷಕ್ಕೆ ಸೋಲಾದರೆ ತಾವೇ ಹೊಣೆ ಎಂದಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಈ ಧೈರ್ಯ ತೋರಿಸುವ ತಾಕತ್ತಿದೆಯೇ? ಎಂದು ಸವಾಲೆಸೆದಿದೆ.
‘ಧೃತರಾಷ್ಟ್ರ ಮೋಹ’ ಎಂಬ ಮಾತು ರಾಜಕಾರಣದಲ್ಲಿ ಸದಾ ಜೀವಂತವಾಗಿರಬೇಕೆಂದು ಕಾಂಗ್ರೆಸ್ ಬಯಸುತ್ತದೆ ಎಂದು ಟ್ವೀಟ್ ಮಾಡಿರುವ ಬಿಜೆಪಿ, ಏಕೆಂದರೆ ತಮ್ಮ ನಂತರ ತಮ್ಮ ಪಳೆಯುಳಿಕೆಗಳನ್ನೂ ಅಧಿಕಾರದಲ್ಲಿ ಪ್ರತಿಷ್ಠಾಪಿಸಬೇಕೆಂಬ ವಾಂಛೆ ಕಾಂಗ್ರೆಸ್ ರಕ್ತದಲ್ಲಿದೆ. ನೆಹರು, ಇಂದಿರಾ, ರಾಜೀವ್, ಸೋನಿಯಾ, ರಾಹುಲ್ ಪ್ರಿಯಾಂಕಾ ಇವೆರಲ್ಲರೂ ಇದಕ್ಕೆ ಜ್ವಲಂತ ಉದಾಹರಣೆಗಳು ಎಂದು ಕಾಲೆಳಿದಿದೆ.
ಕೆಲವು ಕುಟುಂಬಗಳಿಗೆ ಕಾಂಗ್ರೆಸ್ ನಿಯಮ ಅನ್ವಯವಾಗುವುದಿಲ್ಲ ಎಂಬ ಮಾತಿನ ಅರ್ಥವೇನು? ಯಾವುದು ಆ ಕುಟುಂಬಗಳು? ಇಡಿ ದೇಶಕ್ಕೆ ಕುಟುಂಬ ರಾಜಕಾರಣವನ್ನು ಪರಿಚಯಿಸಿದ ಕಾಂಗ್ರೆಸ್ ಪಕ್ಷಕ್ಕೆ ಈಗ ಅದನ್ನು ಪೋಷಿಸುವುದು ಅನಿವಾರ್ಯವಾಗಿದೆ. ಕಾಂಗ್ರೆಸ್ ನೀತಿಯ ಬಗ್ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದರೂ ವಂಶವಾದವನ್ನು ಮಾತ್ರ ಬಿಡುವುದಿಲ್ಲ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಚಿಂತನಾ ಸಭೆಯಿಂದ ದೇಶಕ್ಕೆ ಲಭ್ಯವಾದ ವಿಶೇಷ ವಾರ್ತೆ ಏನು? ಎಂದು ಪ್ರಶ್ನಿಸಿರುವ ಬಿಜೆಪಿ, ಬೆಳಗ್ಗೆ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂಬ ಪ್ರಸ್ತಾಪ ಸಂಜೆಯಾಗುತ್ತಲೇ ಈ ನಿಯಮ ಗಾಂಧಿ ಕುಟುಂಬಕ್ಕೆ ಅನ್ವಯವಾಗದು. ರಾತ್ರಿಯಾಗುತ್ತಲೇ, ಗಾಂಧಿ ನಿಷ್ಠ ಕೆಲವು ಕುಟುಂಬಗಳಿಗೆ ಇದು ಅನ್ವಯವಿಲ್ಲ ಎಂದು
“ಧೃತರಾಷ್ಟ್ರ ಮೋಹ” ಎಂಬ ಮಾತು ರಾಜಕಾರಣದಲ್ಲಿ ಸದಾ ಜೀವಂತವಾಗಿರಬೇಕೆಂದು ಕಾಂಗ್ರೆಸ್ ಬಯಸುತ್ತದೆ!
ಏಕೆಂದರೆ ತಮ್ಮ ನಂತರ ತಮ್ಮ ಪಳಯುಳಿಕೆಗಳನ್ನೂ ಅಧಿಕಾರದಲ್ಲಿ ಪ್ರತಿಷ್ಠಾಪಿಸಬೇಕೆಂಬ ವಾಂಛೆ ಕಾಂಗ್ರೆಸ್ ರಕ್ತದಲ್ಲಿಯೇ ಇದೆ.
ನೆಹರು, ಇಂದಿರಾ, ರಾಜೀವ್, ಸೋನಿಯಾ, ರಾಹುಲ್, ಪ್ರಿಯಾಂಕ ಇವೆರಲ್ಲರೂ ಇದಕ್ಕೆ ಜ್ವಲಂತ ಉದಾಹರಣೆಗಳು. pic.twitter.com/JdS0ccxKSc
— BJP Karnataka (@BJP4Karnataka) May 15, 2022
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:52 pm, Sun, 15 May 22