ಕಾನೂನು ಬಾಹಿರವಾಗಿ ನಾನು ಕಚೇರಿಯನ್ನು ನಿರ್ಮಿಸಿಲ್ಲ, ಕಚೇರಿ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಶಾಸಕ ಹ್ಯಾರಿಸ್ ಪ್ರತಿಕ್ರಿಯೆ

ತಮ್ಮ ವಿರುದ್ಧದ ಆರೋಪ ತಳ್ಳಿಹಾಕಿದ ಶಾಸಕ ಎನ್.ಎ.ಹ್ಯಾರಿಸ್ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಕಾರಣಕ್ಕೂ ಕಚೇರಿ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಕಾನೂನು ಬಾಹಿರವಾಗಿ ನಾನು ಕಚೇರಿಯನ್ನು ನಿರ್ಮಿಸಿಲ್ಲ, ಕಚೇರಿ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಶಾಸಕ ಹ್ಯಾರಿಸ್ ಪ್ರತಿಕ್ರಿಯೆ
ಶಾಸಕ ಎನ್.ಎ.ಹ್ಯಾರಿಸ್
Follow us
TV9 Web
| Updated By: Rakesh Nayak Manchi

Updated on:May 15, 2022 | 5:59 PM

ಬೆಂಗಳೂರು: ರಂಗಮಂದಿರದ ಜಾಗ ಶಾಸಕರ ಕಚೇರಿಯಾಗಿ ಮಾರ್ಪಾಡು ಮಾಡಲಾಗಿದೆ ಎಂಬ ಆರೋಪವನ್ನು ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್(N.A.harris) ತಳ್ಳಿಹಾಕಿದ್ದಾರೆ. ಅಲ್ಲದೆ, ಕಾನೂನು ಬಾಹಿರವಾಗಿ ತಾನು ಕಚೇರಿ(Office)ಯನ್ನು ನಿರ್ಮಿಸಿಲ್ಲ, ಯಾವುದೇ ಕಾರಣಕ್ಕೂ ಕಚೇರಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಮುಂದೆ ಯಾರೇ ಶಾಸಕರಾದರೂ ಈ ಕಚೇರಿಯನ್ನು ಬಳಕೆ ಮಾಡಬಹುದು. ಮುಂಬರುವ ವರ್ಷ ಬರುವ ಚುನಾವಣೆ(Election) ಹಿನ್ನೆಲೆ ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ದೊಮ್ಮಲೂರು ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಬಯಲು ರಂಗ ಮಂದಿರವನ್ನು ಶಾಸಕ ಹ್ಯಾರಿಸ್ ಅವರು ಶಾಸಕರ ಕಚೇರಿಯನ್ನಾಗಿ ಬದಲಾಯಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ರಂಗಮಂದಿರ ನವೀಕರಣಕ್ಕೆ ಬಿಬಿಎಂಪಿ ಇತ್ತೀಚೆಗಷ್ಟೇ 3.1 ಕೋಟಿ ಬಿಡುಗಡೆ ಮಾಡಿತ್ತು. ರಂಗಮಂದಿರದ ಪಕ್ಕದಲ್ಲಿರುವ ಗ್ರಂಥಾಲಯ ಶಿಥಿಲಾವಸ್ಥೆಯಲ್ಲಿರುವುದರಿಂದ ಇದನ್ನು ರಂಗಮಂದಿರದ ಮೊದಲನೇ ಮಹಡಿಗೆ ಶಿಫ್ಟ್ ಮಾಡಲು ಪಾಲಿಕೆ ತಯಾರಿ ನಡೆಸಿದೆ. ಆದರೆ, ಇದನ್ನು ಹ್ಯಾರಿಸ್ ಅವರು ಶಾಸಕರ ಕಚೇರಿಯನ್ನಾಗಿ ಮಾರ್ಪಾಡು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ತಮ್ಮ ವಿರುದ್ಧದ ಗಂಭೀರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು, ಶ್ರೀಶಿವಕುಮಾರ ಸ್ವಾಮೀಜಿ ರಂಗಮಂದಿರ ಜಾಗ ಬೇಸ್ಮೆಂಟ್​ನಲ್ಲಿದೆ. ನನ್ನ ಕಚೇರಿ ಮೊದಲ ಮಹಡಿಯಲ್ಲಿದೆ. ಮುಖ್ಯ ರಸ್ತೆಯಲ್ಲಿ ಗ್ರಂಥಾಲಯವಿದ್ದರೆ ಓದುಗರಿಗೆ ತೊಂದರೆಯಾಗುತ್ತದೆ. ಹೀಗಾಗಿ ವಾರ್ಡ್​ನಲ್ಲಿರುವ ವಾರ್ ರೂಮ್​ಗೆ ಗ್ರಂಥಾಲಯವನ್ನು ಶಿಫ್ಟ್ ಮಾಡುತ್ತೇವೆ. ನನ್ನ ಕ್ಷೇತ್ರದ 7 ವಾರ್ಡ್​ಗಳಲ್ಲಿಯೂ ಶಾಸಕರ ಕಚೇರಿ ಇಲ್ಲ. ದೊಮ್ಮಲೂರು ವಾರ್ಡ್ ನಲ್ಲಿ ನಾಗರೀಕರ ಸಮಸ್ಯೆ ಹೆಚ್ಚು. ಇನ್ನುಮುಂದೆ ಜನರು ಸಮಸ್ಯೆ ಹೇಳಿಕೊಂಡು ನನ್ನ ಬಳಿ ಬರಬೇಕೆಂದಿಲ್ಲ. ಇಲ್ಲಿನ ಕಚೇರಿಗೆ ಬರಬಹುದು ಎಂದರು.

ಶಾಸಕರಿಗೆ ಬಿಬಿಎಂಪಿಯೇ ಕಚೇರಿಯನ್ನು ಮಾಡಿಕೊಡಬೇಕು, ನನ್ನ ಕ್ಷೇತ್ರದಲ್ಲಿ ಎಲ್ಲೂ ಕಚೇರಿ ಇಲ್ಲ. ನನ್ನ ಕಚೇರಿ ಕಾನೂನು ಬಾಹಿರವಾಗಿಲ್ಲ. ನನಗೆ ಆಗದವರು ಬೇಕಂತಲೇ ತಗಾದೆ ತೆಗೆಯುತ್ತಿದ್ದಾರೆ. 2023ರಲ್ಲಿ ಬರುವ ವಿಧಾನಸಭೆ ಚುನಾವಣೆ ಹಿನ್ನೆಲೆ ನನ್ನ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ. ರಂಗಮಂದಿರ ಬಯಲು ಅವ್ಯವಸ್ಥೆಯ ಆಗರವಾಗಿತ್ತು. ಹೀಗಾಗಿ ಗೇಟ್​ಗೆ ಬೀಗ ಹಾಕಿ ಅವಶ್ಯಕತೆ ಇದ್ದಾಗ ಮಾತ್ರ ತೆರೆಯಲಾಗುತ್ತಿತ್ತು. ನಾನು ಮಾತ್ರವಲ್ಲ, ಮುಂದೆ ಯಾರೇ ಶಾಸಕರಾಗಿ ಬಂದರೂ ಈ ಕಚೇರಿ ಬಳಸಿಕೊಳ್ಳಬಹುದು. ಯಾವುದೇ ಕಾರಣಕ್ಕೂ ಕಚೇರಿ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

Published On - 5:59 pm, Sun, 15 May 22

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!