ಒಂದೇ ಹಂತದಲ್ಲಿ ಸಂಪುಟ‌ ರಚನೆ ಮಾಡಲು ಹೈಕಮಾಂಡ್ ಪ್ಲಾನ್? ಸೋಮವಾರ ಸಿಎಂ ಮತ್ತೆ ದೆಹಲಿಗೆ ತೆರಳುವ ಸಾಧ್ಯತೆ

Basavaraj Bommai Cabinet: ತ್ವರಿತವಾಗಿ ಸಂಪುಟ ರಚನೆ ಮಾಡಲು ಹೈಕಮಾಂಡ್ ಉತ್ಸಾಹ ತೋರಿದ್ದು ಮುಂದಿನ ಬುಧವಾರ ಅಥವಾ ಗುರುವಾರ ಹೊಸ ಸಚಿವರು ಸಂಪುಟ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಒಂದೇ ಹಂತದಲ್ಲಿ ಸಂಪುಟ‌ ರಚನೆ ಮಾಡಲು ಹೈಕಮಾಂಡ್ ಪ್ಲಾನ್? ಸೋಮವಾರ ಸಿಎಂ ಮತ್ತೆ ದೆಹಲಿಗೆ ತೆರಳುವ ಸಾಧ್ಯತೆ
ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us
TV9 Web
| Updated By: ganapathi bhat

Updated on: Jul 31, 2021 | 4:57 PM

ದೆಹಲಿ: ಎರಡು ದಿನಗಳ ದೆಹಲಿ ಪ್ರವಾಸ ಮುಗಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ. ಏಕಾಂಗಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಸಿಎಂ‌ ಸಂಪುಟ ತಂಡ ಕಟ್ಟಲು ಹರಸಹಾಸ ಮಾಡ್ತಿದ್ದಾರೆ. ಸಿಎಂ ಬೊಮ್ಮಾಯಿ ದೆಹಲಿ ಭೇಟಿ ವೇಳೆ‌ ಸಂಪುಟ ರಚನೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಬಳಿ ಚರ್ಚೆ ನಡೆಸಿದ್ದಾರೆ. ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ನೀಡುವಂತೆ ಮನವಿ ಮಾಡಿದ್ದಾರೆ. ತ್ವರಿತವಾಗಿ ಸಂಪುಟ ರಚನೆ ಮಾಡಲು ಹೈಕಮಾಂಡ್ ಉತ್ಸಾಹ ತೋರಿದ್ದು ಮುಂದಿನ ಬುಧವಾರ ಅಥವಾ ಗುರುವಾರ ಹೊಸ ಸಚಿವರು ಸಂಪುಟ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಒಂದೇ ಹಂತದಲ್ಲಿ ಸಂಪುಟ‌ ರಚನೆ ಮಾಡಲು ಹೈಕಮಾಂಡ್ ಪ್ಲಾನ್ ಯಡಿಯೂರಪ್ಪನವರ ನೇತೃತ್ವ ಇಲ್ಲದ ಬಿಜೆಪಿ ಸರಕಾರದಲ್ಲಿ ಸಚಿವರನ್ನು ನೇಮಿಸುವ ವಿಚಾರವಾಗಿ ಹೈಕಮಾಂಡ್ ಹೆಚ್ಚು ಪ್ರಭಾವ ಬೀರಲಿದೆ. ಒಂದೇ ಹಂತದಲ್ಲಿ ಸಂಪುಟ ರಚನೆ ಮಾಡಲು ಹೈಕಮಾಂಡ್ ಪ್ಲಾನ್ ಮಾಡಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಒಂದೂವರೆ ವರ್ಷ ಬಾಕಿ ಉಳಿದಿದ್ದು, ಒಂದೇ ಹಂತದಲ್ಲಿ ಎನೆರ್ಜೆಟಿಕ್ ಟೀಂ ಕಟ್ಟಿ ಜನರಲ್ಲಿ ಸರಕಾರದ ಬಗ್ಗೆ ಒಳ್ಳೆ ಅಭಿಪ್ರಾಯದ ಮೂಡಿಸಲು ಬಿಜೆಪಿ ಹೈಕಮಾಂಡ್ ತಯಾರಿ ನಡೆಸಿದೆ. ವಲಸೆ ಬಂದವರಿಗೆ ಮತ್ತೆ ಸಚಿವ ಸ್ಥಾನ ನೀಡುವುದು ಸೇರಿದಂತೆ ಮೂಲ ಬಿಜೆಪಿ ಸಚಿವಾಕಾಂಕ್ಷಿಗಳ‌ ಬೇಡಿಕೆ ಈಡೇರಿಸುವುದು ಕಷ್ಟವಾದ್ರೆ ಎರಡು ಹಂತದಲ್ಲಿ ರಚನೆ ಮಾಡಲು ಹೈಕಮಾಂಡ್ ಯೋಚಿಸಿದೆ.

ಸಂಪುಟ ಸರ್ಕಸ್: ಸೋಮವಾರ ಮತ್ತೆ ಸಿಎಂ ದೆಹಲಿಗೆ ಈ ಬಾರಿ ದೆಹಲಿ ಭೇಟಿ ವೇಳೆ ಸಿಎಂ‌ ಸಂಪುಟ ರಚನೆ ಬಗ್ಗೆ ಕೇವಲ‌ ಪ್ರಾಥಮಿಕ ಚರ್ಚೆ ನಡೆಸಿದ್ದಾರೆ. ಸಂಪುಟಕ್ಕೆ‌ ಸೇರ್ಪಡೆ ಮಾಡಿಕೊಳ್ಳಲೇ‌ಬೇಕಾದ ಒಂದಷ್ಟು ಮಂದಿಯ ಹೆಸರು ಚರ್ಚೆಯಾಗಿದೆ ಎನ್ನಲಾಗಿದೆ. ಆದ್ರೆ ಒಟ್ಟು ಸಂಪುಟದ ಬಗ್ಗೆ ವಿವರವಾಗಿ ಚರ್ಚೆ ಮಾಡಲು‌ ಸಾಧ್ಯವಾಗಿಲ್ಲ. ಏಕೆಂದರೆ ಸಿಎಂ ಬೊಮ್ಮಾಯಿಯವರಿಗೆ ಸಂಪುಟ ರಚನೆಗೆ ಬೇಕಾದ ತಯಾರಿ ನಡೆಸಲು ಅವಕಾಶ ಸಿಕ್ಕಿಲ್ಲ. ಅರ್ಜೆಂಟಾಗಿ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗಿದ್ದಾರೆ. ಹೀಗಾಗಿ ಸಂಪುಟ ಬಗ್ಗೆ ಚರ್ಚೆ ನಡೆಸಿ ಪಟ್ಟಿ ಫೈನಲ್ ಮಾಡಲು ಸಿಎಂ‌ ಬೊಮ್ಮಾಯಿ ಮತ್ತೊಮ್ಮೆ ದೆಹಲಿಗೆ ತೆರಳಿದ್ದಾರೆ.‌ ಸೋಮುವಾರ ಸಂಜೆ ಅಥವಾ ಮಂಗಳವಾರ ದೆಹಲಿಗೆ ತೆರಳಿ‌ ಸಂಪುಟ ಸೇರುವವರ ಪಟ್ಟಿ ಫೈನಲ್ ಮಾಡಲಿದ್ದಾರೆ. ಬುಧವಾರ ಅಥವ ಗುರುವಾರ ನೂತನ ಸಚಿವರು ಸಂಪುಟ ಸೇರುವ ಸಾಧ್ಯತೆ ಇದೆ.‌ ಹೈಕಮಾಂಡ್ ನಾಯಕರು ನೇರವಾಗಿ ದೆಹಲಿಯಿಂದ ನೂತನ ಸಚಿವರ ಪಟ್ಟಿಯನ್ನು ಸಿಎಂಗೆ ರವಾನಿಸಲಿದ್ದಾರೆ.

ವರದಿ: ಹರೀಶ್, ಟಿವಿ9 ನವದೆಹಲಿ

ಇದನ್ನೂ ಓದಿ: ಉಪವಾಸ ಬೇಕಾದ್ರೂ ಮಾಡಲಿ, ಇಲ್ಲ ಊಟ ಮಾಡಲಿ; ನಾವಂತೂ ಮೇಕೆದಾಟು ಮಾಡೇ ಮಾಡ್ತೀವಿ: ಅಣ್ಣಾಮಲೈಗೆ ಸಿಎಂ ಬೊಮ್ಮಾಯಿ ಟಾಂಗ್

ಕೊರೊನಾ ಆತಂಕ: ಕೇರಳ-ಕರ್ನಾಟಕ ಗಡಿಯಲ್ಲಿ ಕಠಿಣ ಕ್ರಮ ಜಾರಿ; ಇಂದು ಸಂಜೆ ಜಿಲ್ಲಾಡಳಿತಗಳೊಂದಿಗೆ ಸಿಎಂ ಬೊಮ್ಮಾಯಿ ಸಭೆ

(Karnataka Politics BJP Govt Cabinet formation process CM Basavaraj Bommai BJP Leaders)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ