ರಾಜ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತವಿದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡ ಉಸ್ತುವಾರಿ ರಣದೀಪ್ ಸುರ್ಜೇವಾಲಾ
ಇದೇ ವೇಳೆ ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ ಅವರು, ರಾಜ್ಯದಲ್ಲಿ ಆಕ್ಸಿಜನ್ ಸಿಗದೆ ಸೋಂಕಿತರು ಮೃತಪಟ್ಟರು. ರೆಮ್‌ಡಿಸಿವಿರ್ ಸಿಗದೆ ಜನ ಸಂಕಷ್ಟಕ್ಕೆ ಸಿಲುಕಿದ್ದರು. ಆಗ ಪ್ರಧಾನಿ ಎಲ್ಲಿ ಹೋಗಿದ್ರು, ನಡ್ಡಾ ಎಲ್ಲಿ ಹೋಗಿದ್ರು? ಅವರಿಗೆ ಕೇವಲ ಅಧಿಕಾರದ ದಾಹ ಮಾತ್ರ ಇದೆ ಎಂದು ಹರಿಹಾಯ್ದರು.
ಮೈಸೂರು: ನಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ಒಂದೆಡೆ ಒಟ್ಟಾಗಿ ಸೇರಿದ್ದೇವೆ ಎಂದು ಹೇಳುವ ಮೂಲಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ (Randeep Surjewala) ರಾಜ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಇರುವುದನ್ನು ಒಪ್ಪಿಕೊಂಡಿದ್ದಾರೆ. ರಾಜ್ಯ ಕಾಂಗ್ರೆಸ್ನ (Congress) ಮೈಸೂರು ವಿಭಾಗೀಯ ಸಭೆಯಲ್ಲಿ ಭಾಗಿಯಾಗಲು ಕರ್ನಾಟಕಕ್ಕೆ ಆಗಮಿಸಿರುವ ಅವರು, ಸುದ್ದಿಗೋಷ್ಠಿಯಲ್ಲಿ ಹೇಳಿರುವ ಈ ಮಾತು ರಾಜ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತವಿದೆ ಎಂಬುದನ್ನು ಪುಷ್ಠೀಕರಿಸಿದೆ. ಕಾರ್ಯಕರ್ತರು ಮತ್ತು ಮುಖಂಡರ ಅಭಿಪ್ರಾಯ ಪಡೆಯಲು ಸಭೆ ಸೇರಲಾಗಿದೆ. ಅವರ ಅಭಿಪ್ರಾಯದಂತೆ ಪಕ್ಷ ಮುನ್ನಡೆಸುವುದು, ಪಕ್ಷವನ್ನು ಮತ್ತೆ ಮರು ಸಂಘಟನೆ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು ಎಂದು ಅವರು ತಿಳಿಸಿದರು.
ತಮ್ಮ ನಾಯಕರನ್ನು ಕಡೆಗಣಿಸುವುದರಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾಗೆ ಎತ್ತಿದಕೈ. ಮೋದಿ, ಅಮಿತ್ ಶಾ ಹಿರಿಯರನ್ನು ಇಷ್ಟಪಡುವುದಿಲ್ಲ. ಯಾರಾದ್ರೂ ಹಿರಿಯರನ್ನು ಹೊರಗೆ ಹಾಕುತ್ತಾರಾ? ಇದಕ್ಕೆ ನಮ್ಮ ಸಂಸ್ಕೃತಿಯಲ್ಲಿ ಏನು ಹೇಳುತ್ತಾರೆ? ಅದನ್ನು ನಾನು ನನ್ನ ಬಾಯಿಂದ ಹೇಳುವುದಿಲ್ಲ. ಅಡ್ವಾಣಿ, ಮುರುಳಿ ಮನೋಹರ ಜೋಷಿ ಸೇರಿ ಹಲವು ಹಿರಿಯ ನಾಯಕರ ಉದಾಹರಣೆಗಳನ್ನು ಅವರು ನೀಡಿದರು. ಬಿಜೆಪಿಯಲ್ಲಿ ಭ್ರಷ್ಟಾಚಾರಿಗಳಿಗೆ ಮಾತ್ರ ಅವಕಾಶ ಎಂದು ಅವರು ವ್ಯಂಗ್ಯವಾಡಿದರು.
ಇದೇ ವೇಳೆ ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ ಅವರು, ರಾಜ್ಯದಲ್ಲಿ ಆಕ್ಸಿಜನ್ ಸಿಗದೆ ಸೋಂಕಿತರು ಮೃತಪಟ್ಟರು. ರೆಮ್‌ಡಿಸಿವಿರ್ ಸಿಗದೆ ಜನ ಸಂಕಷ್ಟಕ್ಕೆ ಸಿಲುಕಿದ್ದರು. ಆಗ ಪ್ರಧಾನಿ ಎಲ್ಲಿ ಹೋಗಿದ್ರು, ನಡ್ಡಾ ಎಲ್ಲಿ ಹೋಗಿದ್ರು? ಅವರಿಗೆ ಕೇವಲ ಅಧಿಕಾರದ ದಾಹ ಮಾತ್ರ ಇದೆ ಎಂದು ಹರಿಹಾಯ್ದರು.
ಪೋನ್ ದುರ್ಬಳಕೆ ಗೂಡಚಾರ ಆರೋಪ ವಿಚಾರವಾಗಿಯೂ ಬಿಜೆಪಿಯನ್ನು ಟೀಕಿಸಿದ ಅವರು, ಚುನಾಯಿತ ಸರ್ಕಾರವನ್ನು ಬೀಳಿಸಲು ಗೂಡಚಾರಿಕೆ ಮಾಡಲಾಗಿದೆ. ಇದೀಗ ಯಡಿಯೂರಪ್ಪ ಅವರನ್ನು ತೆಗೆಯಲಾಯಿತು ? ಎಂದು ಕರ್ನಾಟಕದ ಜನರು ಕೇಳುತ್ತಿದ್ದಾರೆ. ಕರ್ನಾಟಕ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಇದೀಗ ಆರ್ಎಸ್ಎಸ್ ಕೆಲವು ಸಚಿವರನ್ನು ತೆಗೆಯಲು ಹೇಳುತ್ತಿದ್ದೆ. ಸಚಿವರು ಸಿಡಿ ವಿಚಾರವಾಗಿ ನ್ಯಾಯಾಲಯಕ್ಕೆ ಹೋಗಿದ್ದಾರೆ. ನಾವು ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಹೇಳಿದ್ದೆವು. ಪ್ರಧಾನಿಯವರೇ ಇದನ್ನು ಸಾಬೀತು ಮಾಡಿದ್ದಾರೆ ಎಂದು ರಣದೀಪ್ ಸುರ್ಜೇವಾಲಾ ಟೀಕಿಸಿದರು.
ಇದನ್ನೂ ಓದಿ:
Exclusive: ದೇಶದಲ್ಲಿರುವ 12 ಬಿಜೆಪಿ ಮುಖ್ಯಮಂತ್ರಿಗಳಲ್ಲಿ ನಾಲ್ವರು ವಲಸಿಗರು; ಬಿಜೆಪಿ ಲೆಕ್ಕಾಚಾರ ಬದಲಾಯಿತೇಕೆ?
ನನ್ನ ರಾಜಕೀಯ ಗುರುಗಳ ಮಗ ಮಧುನನ್ನು ಪಕ್ಷಕ್ಕೆ ಸೇರಿಸಿಕೊಂಡಿರೋದು ನನ್ನ ಭಾಗ್ಯ: ಡಿಕೆ ಶಿವಕುಮಾರ್
(Karnataka Poliitics Ranheep Surjewala indirectly acknowledging dissent in State Congress)
Published On - 2:50 pm, Sat, 31 July 21