ಬಸವರಾಜ ಬೊಮ್ಮಾಯಿಗೆ ಪತ್ರದ ಮೂಲಕ ಶುಭಕೋರಿದ ಎಸ್​ಎಂ ಕೃಷ್ಣ

| Updated By: ganapathi bhat

Updated on: Jul 28, 2021 | 8:54 PM

ಎಸ್.ಎಂ. ಕೃಷ್ಣ ತಮ್ಮ ಹಾಗೂ ಬಸವರಾಜ ಬೊಮ್ಮಾಯಿ ತಂದೆ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರೊಂದಿಗಿನ ಒಡನಾಟವನ್ನೂ ಪತ್ರದಲ್ಲಿ ಸ್ಮರಿಸಿಕೊಂಡಿದ್ದಾರೆ.

ಬಸವರಾಜ ಬೊಮ್ಮಾಯಿಗೆ ಪತ್ರದ ಮೂಲಕ ಶುಭಕೋರಿದ ಎಸ್​ಎಂ ಕೃಷ್ಣ
ಎಸ್.ಎಂ. ಕೃಷ್ಣ ಹಾಗೂ ಎಸ್.ಎಂ. ಕೃಷ್ಣ ಬಸವರಾಜ ಬೊಮ್ಮಾಯಿಗೆ ಬರೆದ ಪತ್ರ
Follow us on

ಬೆಂಗಳೂರು: ಕರ್ನಾಟಕದ 30ನೇ ಮುಖ್ಯಮಂತ್ರಿಯಾಗಿ ಇಂದು (ಜುಲೈ 28) ಪ್ರಮಾಣವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿಗೆ ಕರ್ನಾಟಕ ಕಂಡ ಅನುಭವಿ ಹಾಗೂ ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ ಪತ್ರದ ಮೂಲಕ ಶುಭ ಹಾರೈಸಿದ್ದಾರೆ. ಎಸ್.ಎಂ. ಕೃಷ್ಣ ತಮ್ಮ ಹಾಗೂ ಬಸವರಾಜ ಬೊಮ್ಮಾಯಿ ತಂದೆ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರೊಂದಿಗಿನ ಒಡನಾಟವನ್ನೂ ಪತ್ರದಲ್ಲಿ ಸ್ಮರಿಸಿಕೊಂಡಿದ್ದಾರೆ. ಪತ್ರದ ಸಾಲುಗಳನ್ನು ಈ ಕೆಳಗೆ ನೀಡಲಾಗಿದೆ.

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಮಗೆ ತುಂಬುಹೃದಯದ ಅಭಿನಂದನೆಗಳು. ತಮ್ಮ ನೇತೃತ್ವದ ಬಿಜೆಪಿ ಸರ್ಕಾರ ನಾಡಿನ ಜನರ ಹಿತರಕ್ಷಣೆಗೆ ಕಟಿಬದ್ಧರಾಗಿ ಶ್ರೀ ಬಿ.ಎಸ್ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಆಶಿಸುತ್ತೇನೆ.

ನಾನು ಮತ್ತು ನಿಮ್ಮ ತಂದೆಯವರು ಆತ್ಮೀಯ ಮಿತ್ರರಾಗಿದ್ದು ಶ್ರೀ ಎಸ್.ಆರ್ ಬೊಮ್ಮಾಯಿಯವರು ಹಲವು ಬಾರಿ ನನಗೆ ಮಾರ್ಗದರ್ಶಕರಾಗಿ, ಹಿತೈಷಿಗಳಾಗಿದ್ದು ನನ್ನ ಸ್ಮೃತಿ ಪಟಲದಲ್ಲಿದೆ. ಸಜ್ಜನ ಸೌಮ್ಯ ರಾಜಕಾರಣಿಯಾಗಿ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತು ಸಂಬಂಧ ಹೊಂದಿದ್ದ ನಿಮ್ಮ ತಂದೆಯವರಂತೆ ತಾವು ಸಹ ಅವರ ದಾರಿಯಲ್ಲಿ ಮುನ್ನಡೆದು ಎಲ್ಲರ ವಿಶ್ವಾಸಗಳಿಸಿ ಯಶಸ್ವಿಯಾಗಿ ತಮ್ಮ ಆಡಳಿತ ನಡೆಸುವಂತಾಗಲಿ ಎಂದು ಆಶಿಸುತ್ತೇನೆ.

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿಗೆ ರಾಜ್ಯದ ಹಾಗೂ ಕೇಂದ್ರದ ಹಲವಾರು ನಾಯಕರು ಶುಭಾಶಯ ಕೋರಿದ್ದಾರೆ. ಅಭಿನಂದನೆ ಸಲ್ಲಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ರಾಜ್ಯ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಜೆಡಿಎಸ್ ನಾಯಕರಾದ ಎಚ್.ಡಿ. ದೇವೇಗೌಡ, ಕುಮಾರಸ್ವಾಮಿ ಮುಂತಾದವರು ಶುಭಹಾರೈಸಿದ್ದಾರೆ.

ಇದನ್ನೂ ಓದಿ: ಸ್ವಕ್ಷೇತ್ರ ಶಿಗ್ಗಾಂವಿಯನ್ನು ಮಾದರಿ ಕ್ಷೇತ್ರವಾಗಿ ಮಾಡುವೆ: ನೂತನ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ

Jagadish Shettar: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ನಾನು ಸೇರಲ್ಲ: ಜಗದೀಶ್ ಶೆಟ್ಟರ್

(Karnataka Senior Political Leader SM Krishna wishes to Basavaraj Bommai)

Published On - 8:45 pm, Wed, 28 July 21