ಬೆಂಗಳೂರು: ಚುನಾವಣೋತ್ತರ ಮತಗಟ್ಟೆ ಸಮೀಕ್ಷೆ ಆಧಾರದ ಮೇಲೆ ನೆರೆಯ ಗೋವಾ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂದು ಎಣಿಸಿ, ಅಲ್ಲಿನ ಚುನಾವಣೆ ಉಸ್ತುವಾರಿ ವಹಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು (DK Shivakumar) ಚುನಾವಣೆ ಆಯೋಗ ಅಧಿಕೃತವಾಗಿ ಫಲಿತಾಂಶ ನೀಡಿದ ನಂತರ ಚಿತ್ರಣ ಬದಲಾಗಿದ್ದರಿಂದ ಗೋವಾದಿಂದ ಬರಿಗೈನಲ್ಲಿ ಬೆಂಗಳೂರಿಗೆ ವಾಪಸಾಗಿದ್ದಾರೆ (Goa assembly elections).
ಗೋವಾದಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರು ನಿರಾಸೆಯಲ್ಲಿಯೇ ರಾಜ್ಯಕ್ಕೆ ಮರಳಿದ್ದಾರೆ. ಏರ್ಪೋರ್ಟ್ನಲ್ಲಿ ಫಲಿತಾಂಶ ಬಗ್ಗೆ ಟಿವಿ9 ಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಜನರು ತೀರ್ಪು ಕೊಟ್ಟಿದ್ದಾರೆ, ಜನರ ತೀರ್ಪು ತಪ್ಪು ಅನ್ನಲಾಗಲ್ಲ. ಜನರು ಕೊಟ್ಟ ತೀರ್ಪು ಒಪ್ಪಿಕೊಳ್ಳಲೇಬೇಕು. ಗೆಲ್ಲುವ ವಿಶ್ವಾಸವಿತ್ತು. ಆದ್ರೆ, ಮತಗಳು ಎಲ್ಲ ವಿಭಜನೆಯಾದವು ಎಂದು ವ್ಯಾಖ್ಯಾನಿಸಿದ್ದಾರೆ.
ಕಾಂಗ್ರೆಸ್ ಸೋಲಿಗೆ ಸ್ಥಳೀಯ ಸಮಸ್ಯೆಗಳು ಕಾರಣ: ಕೆಪಿಸಿಸಿ ಕಾರ್ಯಾಧ್ಯಕ್ಷ ಪ್ರತಿಕ್ರಿಯೆ
ಬೆಳಗಾವಿ: ಪಂಚ ರಾಜ್ಯಗಳ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿನ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಸೋಲಿಗೆ ಸ್ಥಳೀಯ ಸಮಸ್ಯೆಗಳು ಕಾರಣ. ಹೀಗೆ ಎರಡು ಮೂರು ಬಾರಿ ಆಗಿದೆ, ಇದೇ ಮೊದಲಲ್ಲ. 2-3 ರಾಜ್ಯಗಳನ್ನು ನಾವು ಸತತವಾಗಿ ಸೋತಿದ್ದೇವೆ ಎಂದು ಬೆಳಗಾವಿಯಲ್ಲಿ ಕೈ ನಾಯಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಕಾಂಗ್ರೆಸ್ ಮುಗಿಸಲು ಯಾರಿಂದಲೂ ಆಗುವುದಿಲ್ಲ. ಮತ ವಿಭಜನೆಯಿಂದ ಸಮಸ್ಯೆಯಾಗಿದೆ. ಎಲ್ಲೂ ಕಾಂಗ್ರೆಸ್ ವೋಟ್ ಬ್ಯಾಂಕ್ ಕಳೆದುಕೊಂಡಿಲ್ಲ. ಇದು ತಾತ್ಕಾಲಿಕ ಹಿನ್ನಡೆಯಾಗಿರಬಹುದು ಮುಂದೆ ಗೆಲ್ಲುತ್ತೇವೆ. ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ಇದೆ: ಬಿಜೆಪಿಯಲ್ಲೂ ಪರಿವಾರ ಇದೇ ನಾಯಕರ ಮಕ್ಕಳು ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಬಿಜೆಪಿ ಪಕ್ಷದಲ್ಲಿ ಮಕ್ಕಳು, ಅಣ್ತಮ್ಮಂದಿರೂ ಎಂಟ್ರಿಯಾಗಿದ್ದಾರೆ ಎಂದು ಈಗಿನ ರಾಜಕೀಯದ ಬಗ್ಗೆ ಹೇಳಿದರು.
DKS : ಗೋವಾದಿಂದ ಬರಿಗೈನಲ್ಲಿ ಬಂದ ಡಿಕೆಶಿ ಫಸ್ಟ್ ರಿಯಾಕ್ಷನ್ ಏನು?
ಇದನ್ನೂ ಓದಿ:
ಒಂದೇ ದಿನ ಎರಡು ಕಡೆ! ಪೊಲೀಸರು ಜಫ್ತಿ ಮಾಡಿದ್ದ ಹಳೆಯ ವಾಹನಗಳಿಗೆ ಬೆಂಕಿ -21 ವಾಹನಗಳು ಅಗ್ನಿಗಾಹುತಿ
ಇದನ್ನೂ ಓದಿ:
ಮನೆಯವರ ವಿರೋಧದ ನಡುವೆ ಮದುವೆಯಾಗಿದಕ್ಕೆ ಮಗಳನ್ನೇ ವಿಧವೆ ಮಾಡಿದ ಅಪ್ಪ; ವಿಜಯಪುರ ಮಾಜಿ ಕಾರ್ಪೊರೇಟರ್ ಸೇರಿ ನಾಲ್ವರ ಬಂಧನ
Published On - 5:10 pm, Fri, 11 March 22