AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Golmaal: ಡಿ.ಕೆ. ಶಿವಕುಮಾರ್ ನೆಂಟ ಕುಣಿಗಲ್ ಶಾಸಕ ಡಾ. ರಂಗನಾಥ್ ಚುನಾವಣೆಗೂ ಮುನ್ನ ನಡೆಸಿದ ಅಕ್ರಮಗಳೇನು? ಬಿಜೆಪಿ ಬಳಿಯಿರುವ ಸಾಕ್ಷ್ಯಗಳೇನು?

ಮತದಾನದ ಮುನ್ನ ಕುಣಿಗಲ್ ಕ್ಷೇತ್ರದಲ್ಲಿ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಲಾಗಿದೆ. ಕಾರ್ಡ್ ನಲ್ಲಿ ಅಭ್ಯರ್ಥಿಯ ಕ್ರಮ ಸಂಖ್ಯೆ, ಸಿಂಬಲ್ ಹಾಗೂ ಬಾರ್ ಕೋಡ್ ಇದೆ. 60 ಸಾವಿರ ಕಾರ್ಡ್ ಗಳನ್ನ ಮನೆ ಮನೆಗೆ ಹೋಗಿ ಡಾ. ರಂಗನಾಥ್ ವಿತರಣೆ ಮಾಡಿದರು ಎನ್ನುತ್ತಿದ್ದಾರೆ ಬಿಜೆಪಿ ಕಲಿಗಳು

Golmaal: ಡಿ.ಕೆ. ಶಿವಕುಮಾರ್ ನೆಂಟ ಕುಣಿಗಲ್ ಶಾಸಕ ಡಾ. ರಂಗನಾಥ್ ಚುನಾವಣೆಗೂ ಮುನ್ನ ನಡೆಸಿದ ಅಕ್ರಮಗಳೇನು? ಬಿಜೆಪಿ ಬಳಿಯಿರುವ ಸಾಕ್ಷ್ಯಗಳೇನು?
ಡಿ.ಕೆ. ಶಿ. ನೆಂಟ ಕುಣಿಗಲ್ ಶಾಸಕ ಚುನಾವಣೆಗೂ ಮುನ್ನ ನಡೆಸಿದ ಅಕ್ರಮಗಳೇನು?
ಸಾಧು ಶ್ರೀನಾಥ್​
|

Updated on:Jun 02, 2023 | 10:22 AM

Share

ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಗ್ಯಾರಂಟಿ ಗುದ್ದಾಟ ತಾರಕ್ಕೇರಿದೆ.. ಈ ನಡುವೆ ಕಾಂಗ್ರೆಸ್ ಶಾಸಕರ ವಿರುದ್ಧ ಅಕ್ರಮ ಗೆಲುವಿನ ಆರೋಪ ಕೇಳಿ ಬಂದಿದೆ. ಈ ಆರೋಪ ಮಾಡಿರೋದು ಯಾರು. ಗೆದ್ದ ಶಾಸಕ ಚುನಾವಣೆ ಪೂರ್ವದಲ್ಲಿ ನಡೆಸಿದ ಅಕ್ರಮವೇನು (Golmaal).. ಇಲ್ಲಿದೆ ಅದರ ಪಿನ್ ಟೂ ಪಿನ್ ಮಾಹಿತಿ.. ಈ‌ ಸ್ಟೋರಿ ನೋಡಿ… ರಾಜ್ಯದಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ ಕಲಿಗಳು (Tumkur BJP) ಕಾಂಗ್ರೆಸ್ ಪಕ್ಷದ ಒಂದೊಂದೇ ತಪ್ಪುಗಳನ್ನು ಹೆಕ್ಕಿ ಹೆಕ್ಕಿ ತೆಗೆಯುತಿದ್ದಾರೆ.. ಚುನಾವಣೆ ಸಂದರ್ಭದಲ್ಲಿ ಅಕ್ರಮ ಎಸಗಿ ಗೆಲುವು ಕಂಡಿದೆ ಅಂತೆಲ್ಲಾ ಮಾಧ್ಯಮಗಳ ಮುಂದೆ ಸಾಕ್ಷಿ ಸಮೇತ ಕಾಣಿಸಿಕೊಂಡು ಬಿಜೆಪಿ ಸೋತರೂ ಸುಮ್ಮನೆ ಕೂರೋದಿಲ್ಲ ಅಂತಾ ಅಬ್ಬರಿಸಿದ್ದಾರೆ.. ಹೌದು.. ಈ ಆರೋಪ ಎದುರಿಸುತ್ತಿರೋದು ಕುಣಿಗಲ್ ಕ್ಷೇತ್ರದ ಹಾಲಿ ಶಾಸಕ ಡಾ. ರಂಗನಾಥ್ (Dr HD Ranganath). ಇವರು ಕೆಪಿಸಿಸಿ ಅಧ್ಯಕ್ಷ, ರಾಜ್ಯದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ (DK Shivakumar) ಸಂಬಂಧಿ.. ಇವರ ಅಕ್ರಮಕ್ಕೆ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಸಾಥ್ ನೀಡಿದ್ದಾರೆ ಎಂದು ತುಮಕೂರಿನಲ್ಲಿ ವಿಧಾನಪರಿಷತ್ ಸದಸ್ಯ ನವೀನ್ ಸುದ್ದಿಗೋಷ್ಟಿ ನಡೆಸಿ ಗಂಭೀರ ಆರೋಪದ ಜೊತೆ ದಾಖಲೆಯನ್ನೂ ಬಿಡುಗಡೆ ಮಾಡಿದ್ದಾರೆ.

ಇನ್ನು ಮತದಾನದ ಮುನ್ನ ಕ್ಷೇತ್ರದಲ್ಲಿ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಲಾಗಿದೆ. ಕಾರ್ಡ್ ನಲ್ಲಿ ಅಭ್ಯರ್ಥಿಯ ಕ್ರಮ ಸಂಖ್ಯೆ, ಸಿಂಬಲ್ ಹಾಗೂ ಬಾರ್ ಕೋಡ್ ಇದೆ. 60 ಸಾವಿರ ಕಾರ್ಡ್ ಗಳನ್ನ ಮನೆ ಮನೆಗೆ ಹೋಗಿ ವಿತರಣೆ ಮಾಡಿದ್ದಾರೆ. ಕಾರ್ಡ್ ಅನ್ನು ಎಟಿಎಂ ರೀತಿ ಬಳಸಬಹುದಾಗಿದೆ. ಅಲ್ಲದೆ ಗಿಫ್ಟ್​​ ಖರೀದಿ ಮಾಡಬಹುದು ಎಂದು ಮತದಾರರಿಗೆ ಆಮಿಷ ಒಡ್ಡಿದ್ದಾರೆ. ಮತದಾನ ಬಳಿಕ ಕಾರ್ಡ್ ಬಳಸಬಹುದು ಅಂತಾ ಸುಳ್ಳು ಭರವಸೆ ನೀಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ಡಾ. ರಂಗನಾಥ್ ಭಾವ ಚಿತ್ರ ಇರೋ ಸ್ಮಾರ್ಟ್ ಕಾರ್ಡ್ ಅನ್ನು ಬಿಜೆಪಿ ನಾಯಕರು ಸುದ್ದಿಗೋಷ್ಟಿಯಲ್ಲಿ ಪ್ರದರ್ಶಿಸಿದರು. ಅಕ್ರಮ ಮಾಡಿ ಕುಣಿಗಲ್ ಶಾಸಕ ಗೆದ್ದಿದ್ದಾರೆ. ನಾವು ಕಾನೂನು ಹೋರಾಟ ಮಾಡ್ತೀವಿ ಹೈಕೋರ್ಟ್ ನಲ್ಲಿ ಈ ಬಗ್ಗೆ ಕೇಸ್ ದಾಖಲು ಮಾಡ್ತೀವಿ. ಮತದಾರರ ಮೂಲಕ ಕೇಸ್ ದಾಖಲಿಸಲು ನಿರ್ಧಾರ ಮಾಡಿದೀವಿ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಡಿ. ಕೃಷ್ಣಕುಮಾರ್ (D Krishna Kumar) ಆರೋಪಗಳ ಸುರಿ ಮಳೆಗೈದರು.

ಡಾ ರಂಗನಾಥ್ ಅಕ್ರಮ ಮಾಡುವುದರಲ್ಲಿ ಎತ್ತಿದ ಕೈ.. ಚುನಾವಣೆ ಹಲವು ತಿಂಗಳು ಇರುವಾಗಲೇ.. ಕುಕ್ಕರ್ ಗಳನ್ನ ಮನೆ ಮನೆಗೂ ಹಂಚಿದ್ದಾರೆ.. ನಿರಂತವಾಗಿ ನಾಲ್ಕೈದು ತಿಂಗಳುಗಳಿಂದ ಹಂಚಿದ್ದಾರೆ.. ಹಂಚಿಕೆ ವಿರುದ್ಧ ಕೇಸ್ ದಾಖಲಿಸಿದರೂ ಕೂಡ ಚುನಾವಣೆಯಲ್ಲಿ ಅಕ್ರಮ ಮಾಡಿದ್ದಾರೆ.. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾಡಿದ ಹೋರಾಟ ಹಾದಿಯಲ್ಲೇ ಕುಣಿಗಲ್ ಕ್ಷೇತ್ರದ್ದು ಕೂಡ ಹೋರಾಟ ಮಾಡಿ ಗೆಲ್ತೀವಿ ಅಂತಾ ಶಪಥ ಮಾಡಿದ್ದೇವೆ ಎನ್ನುತ್ತಿದ್ದಾರೆ ಬಿಜೆಪಿ ಮುಖಂಡರು.. ಚುಣಾವಣೆ ಬಳಿಕ ಜಿದ್ದಾಜಿದ್ದಿ ಫಲಿತಾಂಶ ಬಂದ ಬಳಿಕವೂ ರಾಜಕೀಯ ಅಖಾಡದಲ್ಲಿ ಜಿದ್ದಾಜಿದ್ದಿಗೆ ಪೂರ್ಣ ವಿರಾಮ ಸಿಕ್ಕಿಲ್ಲ. ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವಿನ ಕಿತ್ತಾಟ ಯಾವ ತಿರುವು ಪಡೆದುಕೊಳ್ಳುತ್ತೆ ಕಾದುನೋಡ್ಬೇಕಿದೆ..

ವರದಿ: ಮಹೇಶ್ ಟಿವಿ9 ತುಮಕೂರು

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:22 am, Fri, 2 June 23

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ