ಬಿಬಿಎಂಪಿಗೆ ಚುನಾವಣೆಯೂ ನಡೆಯಬೇಕಿದೆ. ಆದಷ್ಟು ಬೇಗ ಚುನಾವಣೆ ನಡೆಸಲಾಗುವುದು ಎಂದು ಆಡಳಿತ ಪಕ್ಷ ಹೇಳಿದೆ. ಆದಾಗ್ಯೂ, ವಾರ್ಡ್ ವಿಂಗಡಣೆ ಬಗ್ಗೆ ಕಾಂಗ್ರೆಸ್ ಒಲವು ಹೊಂದಿದೆ ಎನ್ನಲಾಗಿದ್ದು, ಇದರಿಂದಾಗಿ ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯೂ ಇದೆ. ಈ ಎಲ್ಲ ಬೆಳವಣಿಗೆಗಳ ಸಂದರ್ಭದಲ್ಲೇ ಡಿಕೆ ಶಿವಕುಮಾರ್ ಅವರು ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಆದರೆ ಭೇಟಿಯ ಪ್ರಮುಖ ಉದ್ದೇಶ ಏನೆಂದು ಇನ್ನೂ ತಿಳಿದುಬಂದಿಲ್ಲ. ಸೌಜನ್ಯದ ಭೇಟಿ ಎಂದಷ್ಟೇ ಹೇಳಲಾಗಿದ್ದರೂ ಇದರ ಹಿಂದೆ ರಾಜಕೀಯ ಲೆಕ್ಕಾಚಾರಗಳಿರುವ ಸಾಧ್ಯತೆ ಇದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.