ಚಾಮರಾಜನಗರ: ಬಿಜೆಪಿ ಸಂಸದ ಪ್ರತಾಪ್ ಸಿಂಹ ಮಾತಿನಲ್ಲಿ ಗಾಂಭೀರ್ಯತೆ ಇದೆಯಾ, ಏನಾದ್ರೂ ಅರ್ಥ ಇದೆಯಾ? ಯಾರ್ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆಂದು ಅವರೇ ಹೇಳಲಿ ಎಂದು ಪ್ರತಾಪ್ ಸಿಂಹ ವಿರುದ್ಧ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ (H C Mahadevappa) ಕಿಡಿ ಕಾರಿದ್ದಾರೆ. ‘ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಹೊಂದಾಣಿಕೆ ಬಗ್ಗೆ ತನಿಖೆ ಆಗಲ್ಲ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, 40% ಕಮಿಷನ್ ವಿಚಾರದಲ್ಲಿ ಸರ್ಕಾರ ಗಂಭೀರ ಕ್ರಮಕೈಗೊಳ್ಳಲಿದೆ. ಎಲ್ಲಿ ದುರ್ಬಳಕೆ, ಕಾನೂನು ಉಲ್ಲಂಘನೆ ಆಗಿದೆ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ತನಿಖೆಗೆ ಸರ್ಕಾರ ಮೀನಮೇಷ ಎಣಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳಿಗೆ ಹಣ ಎಲ್ಲಿಂದ ತರುತ್ತಾರೆ ಎಂಬ ವಿರೋಧ ಪಕ್ಷಗಳ ಟೀಕೆಗೆ ಸಚಿವ ಹೆಚ್.ಸಿ.ಮಹದೇವಪ್ಪ ಟಾಂಗ್ ನೀಡಿದ್ದು, ಹಣಕಾಸು ಕ್ರೋಡೀಕರಿಸುವುದು ಹಣಕಾಸು ಇಲಾಖೆ ಜವಾಬ್ದಾರಿ. 13 ಬಜೆಟ್ ಮಂಡಿಸಿದ ಸಿದ್ದರಾಮಯ್ಯಗೆ ಆಳವಾದ ಅನುಭವವಿದೆ. ಹಣಕಾಸು ಹೊಂದಿಸುವ ಬಗ್ಗೆ ಪ್ರತಾಪ್ ಸಿಂಹಗೆ ಹೇಳಲು ಆಗುತ್ತಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಟೋಲ್ ದರ ಹೆಚ್ಚಳ ಸಮರ್ಥಿಸಿಕೊಂಡ ಸಂಸದ ಪ್ರತಾಪ್ ಸಿಂಹ
ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿದ್ದು ಹಿಂದಿನ ಬಿಜೆಪಿ ಸರ್ಕಾರ. ಈಗ ಜಾರಿಯಾಗಿದೆ ಅಷ್ಟೇ. ಯಾರು ದರ ಹೆಚ್ಚಳ ಮಾಡಿದ್ದಾರೋ ಅವರೇ ಟೀಕೆ ಮಾಡಿದರೆ ಹೇಗೆ? ವಿದ್ಯುತ್ ದರ ಏರಿಕೆಯನ್ನು ಈಗ ತಡೆ ಹಿಡಿಯಲು ಸಾಧ್ಯವಾಗುವುದಿಲ್ಲ ಎಂದರು.
ಇದನ್ನೂ ಓದಿ: ನಿಮ್ಮನ್ನು ಅಲ್ಲಾ ಎಂದಿಗೂ ಕ್ಷಮಿಸಲ್ಲ, ಮುಸ್ಲಿಂ ಸಮುದಾಯದ ವಿರುದ್ಧ ಬುಸುಗುಟ್ಟಿದ ಎಂಟಿಬಿ ನಾಗರಾಜ್
ವಿದ್ಯುತ್ ದರ ಏರಿಕೆಯಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಎಂದು ಶಾಸಕ ತನ್ವೀರ್‌ಸೇಠ್ ಸರ್ಕಾರಕ್ಕೆ ಪತ್ರ ಬರೆದ ವಿಚಾರವಾಗಿ ಮಾತನಾಡಿ, ಅದು ಅವರ ವೈಯಕ್ತಿಕ ವಿಚಾರ, ಸರ್ಕಾರ ಗಮನಹರಿಸಲಿದೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.