ಲೋಕಸಭೆ ಚುನಾವಣೆ 2024: ಮಾ. 4, 5 ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಬೆಳಗಾವಿ ಜಿಲ್ಲೆ ಪ್ರವಾಸ

ಲೋಕಸಭೆ ಚುನಾವಣೆಗೆ ಎರಡು ತಿಂಗಳು ಬಾಕಿ ಉಳಿದಿದೆ. ಭಾರತೀಯ ಜನತಾ ಪಾರ್ಟಿ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಬಿಜೆಪಿ ಹೈಕಮಾಂಡ್​ ನಾಯಕರು ದೇಶಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸೋಮವಾರ (ಮಾ.04) ರಂದು ಬೆಳಗಾವಿಗೆ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ನಾಯಕರು ಮಾಹಿತಿ ನೀಡಿದ್ದಾರೆ.

ಲೋಕಸಭೆ ಚುನಾವಣೆ 2024: ಮಾ. 4, 5 ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಬೆಳಗಾವಿ ಜಿಲ್ಲೆ ಪ್ರವಾಸ
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ
Follow us
| Updated By: ವಿವೇಕ ಬಿರಾದಾರ

Updated on:Mar 03, 2024 | 1:25 PM

ಬೆಳಗಾವಿ, ಮಾರ್ಚ್​ 03: ಲೋಕಸಭೆ ಚುನಾವಣೆಗೆ (Lok Sabha Election) ಎರಡು ತಿಂಗಳು ಬಾಕಿ ಉಳಿದಿದೆ. ಭಾರತೀಯ ಜನತಾ ಪಾರ್ಟಿ (BJP) ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಅದು ಕೂಡ ಈ ಸಲ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಭೂತಪೂರ್ವ ಗೆಲವು ಸಾಧಿಸಲು ರಣತಂತ್ರ ಹೆಣೆಯುತ್ತಿದೆ. ಬಿಜೆಪಿ ಈಗಾಗಲೆ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಈ ಪಟ್ಟಿಯಲ್ಲಿ ಕಾರ್ನಾಟಕದ ಯಾವೊಬ್ಬ ಅಭ್ಯರ್ಥಿಯ ಹೆಸರು ಇಲ್ಲ. ಇದು ರಾಜ್ಯ ಬಿಜೆಪಿ ನಾಯಕರಿಗೆ ಸ್ವಲ್ಪ ಮಟ್ಟಿಗೆ ತಲೆನೋವಾಗಿದೆ. ಈ ಮಧ್ಯೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ (JP Nadda) ಸೋಮವಾರ (ಮಾ.04) ರಂದು ಬೆಳಗಾವಿಗೆ (Belagavi) ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ನಾಯಕರು ಮಾಹಿತಿ ನೀಡಿದ್ದಾರೆ.

ಸೋಮವಾರ ರಾತ್ರಿ 8 ಗಂಟೆಗೆ ಬೆಳಗಾವಿ ಸಾಂಬ್ರಾ ಏರ್​ಪೋರ್ಟ್​ಗೆ ಆಗಮಿಸುವ ನಡ್ಡಾ, ಬೆಳಗಾವಿಯ ‌ಐಟಿಸಿ ವೆಲ್​ಕಮ್​​​​​ ಹೋಟೆಲ್​ನಲ್ಲಿ ರಾತ್ರಿ 9 ಗಂಟೆಗೆ ನಾಲ್ಕು (ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ) ಲೋಕಸಭಾ ಕ್ಷೇತ್ರಗಳ ಕೋರ್​ ಕಮಿಟಿ ಸದಸ್ಯರ ಜೊತೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳು, ಸಂಸದರು, ಶಾಸಕರು, ಪ್ರಮುಖರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ: ಮೊದಲ ಪಟ್ಟಿಯಲ್ಲಿ 33 ಹಾಲಿ ಸಂಸದರನ್ನು ಕೈಬಿಟ್ಟ ಬಿಜೆಪಿ

ಬಳಿಕ ಮಾರ್ಚ್ 5ರಂದು ಬೆಳಗ್ಗೆ 11ಗಂಟೆಗೆ ಚಿಕ್ಕೋಡಿಯಲ್ಲಿ ನಡೆಯುವ ಭೂತಮಟ್ಟದ ಸಮಾವೇಶ ಮತ್ತು ಅದೇ ದಿನ ಸಂಜೆ 4.30ಕ್ಕೆ ಬೆಳಗಾವಿಯಲ್ಲಿ ನಡೆಯುವ ‌ಬುದ್ಧಿಜೀವಿಗಳ ಸಮಾವೇಶದಲ್ಲಿ ಭಾಗಿಯಾಗಿ, ಸಂಜೆ ಬೆಳಗಾವಿಯಿಂದ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ ಎಂದು ಬಿಜೆಪಿ ಬೆಳಗಾವಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ಮಾಹಿತಿ ನೀಡಿದರು.

ಚಿಕ್ಕೋಡಿಯಲ್ಲಿ ಕಾರ್ಯಕರ್ತರ ಸಮಾವೇಶ ಮಾಡುವ ಮೂಲಕ ಕಾರ್ಯಕರ್ತರನ್ನು ಬೂಸ್ಟ್ ಮಾಡಲಿದ್ದಾರೆ. ಇನ್ನು ರಾಷ್ಟ್ರಾಧ್ಯಕ್ಷರ ಭೇಟಿ ವೇಳೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ನಡ್ಡಾ ಸುತ್ತ ಪರೇಡ್​ ಮಾಡಲಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಕಿತ್ತೂರು ಕರ್ನಾಟಕದ ನಾಲ್ಕು ಕ್ಷೇತ್ರದ ಮೇಲೆ ಸಹಜವಾಗಿ ಕಣ್ಣಿಟ್ಟಿದ್ದು, ಕೇಸರಿ ಭದ್ರಕೋಟೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಮುಂದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:24 pm, Sun, 3 March 24