ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಉಗ್ರಪ್ಪ ಫುಲ್ ಆ್ಯಕ್ಟಿವ್: ಗಣೇಶ ಚತುರ್ಥಿಯಂದೇ ಬಳ್ಳಾರಿಯಲ್ಲಿ ಮನೆ ಮಾಡಿದ ಮಾಜಿ ಸಂಸದ
ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋತು ಸುಣ್ಣಾಗಿ ಬಳ್ಳಾರಿಯಿಂದ ಕಾಲ್ಕಿತ್ತಿದ್ದ ಉಗ್ರಪ್ಪ ಅವರು ಗಣೇಶನ ಹಬ್ಬದ ದಿನದಂದು, ಸರ್ವ ವಿಘ್ನಗಳನ್ನು ನಿವಾರಣೆ ಮಾಡೆಂದು ಮತ್ತೊಮ್ಮೆ ಬಳ್ಳಾರಿಯಲ್ಲಿ ಮನೆ ಮಾಡಿ ಪೂಜೆ ನೆರವೇರಿಸಿದ್ದಾರೆ.

ಬಳ್ಳಾರಿ ಸೆ.18: ಲೋಕಸಭೆ ಚುನಾವಣೆಗೆ (Lokasabha Election) ರಾಜಕೀಯ ನಾಯಕರು ಸದ್ದಿಲ್ಲದೇ ತಯಾರಿ ನಡೆಸಿದ್ದಾರೆ. ಚುನಾವಣೆಗೆ ಇನ್ನು ಹತ್ತು ತಿಂಗಳು ಬಾಕಿ ಇರುವಾಗಲೇ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಂಸದ ವಿ.ಎಸ್ ಉಗ್ರಪ್ಪ (VS Ugrappa) ಫುಲ್ ಆ್ಯಕ್ಟಿವ್ ಆಗಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋತು ಸುಣ್ಣಾಗಿ ಬಳ್ಳಾರಿಯಿಂದ (Bellary) ಕಾಲ್ಕಿತ್ತಿದ್ದ ಉಗ್ರಪ್ಪ ಅವರು ಗಣೇಶನ ಹಬ್ಬದ ದಿನದಂದು, ಸರ್ವ ವಿಘ್ನಗಳನ್ನು ನಿವಾರಣೆ ಮಾಡೆಂದು ಮತ್ತೊಮ್ಮೆ ಬಳ್ಳಾರಿಯಲ್ಲಿ ಮನೆ ಮಾಡಿ ಪೂಜೆ ನೆರವೇರಿಸಿದ್ದಾರೆ.
ಉಗ್ರಪ್ಪ ಅವರ ತಯಾರಿ ನೋಡಿದರೇ ಬಳ್ಳಾರಿ ಲೋಕಸಭೆ ಟಿಕೆಟ್ ಇವರಿಗೆ ನೀಡಲು ಹೈಕಮೆಂಡ್ ನಿರ್ಧರಿಸಿದೆಯಾ ಎಂಬ ಪ್ರಶ್ನೆಗಳು ರಾಜಕೀಯ ಪಡಸಾಲೆಯಲ್ಲಿ ಉದ್ಭವಿಸಿವೆ. ವಿಎಸ್ ಉಗ್ರಪ್ಪ ಅವರು 2018ರ ಲೋಕಸಭೆ ಉಪಚುನಾಣೆ ಗೆದ್ದು ಬೀಗಿದ್ದರು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರು.
ಉಗ್ರಪ್ಪ ಸೋತ ಬಳಿಕ ಬಳ್ಳಾರಿಯಲ್ಲಿದ್ದ ಮನೆಯನ್ನು ಖಾಲಿ ಮಾಡಿಕೊಂಡು ಹೋಗಿದ್ದರು. ಆಗೋಮ್ಮೆ ಈಗೊಮ್ಮೆ ಕ್ಷೇತ್ರಕ್ಕೆ ವಿಸಿಟ್ ಕೊಡುತ್ತಿದ್ದರು. ಆದರೆ ಇದೀಗ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪುಲ್ ಆ್ಯಕ್ಟಿವ್ ಆಗಿದ್ದಾರೆ. ಅದರಲ್ಲಂತೂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತ ಪೂರ್ವ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಮತ್ತಷ್ಟು ಹುರುಪು ಬಂದಿದೆ. ಇದೀಗ ಬಳ್ಳಾರಿಯಲ್ಲಿ ಮನೆ ಮಾಡಿದ್ದು ಮುಂದಿನ ವಾರ ಹೊಸಪೇಟೆಯಲ್ಲಿ ಮನೆ ಮಾಡಲಿದ್ದಾರೆ. ಚುನಾವಣೆಗೆ ಹೆಚ್ಚು ಕಡಿಮೆ ಇನ್ನೂ ಹತ್ತು ತಿಂಗಳು ಬಾಕಿ ಇರೋವಾಗಲಿ ಕಾಂಗ್ರೆಸ್ ಸಜ್ಜಾಗುತ್ತಿದ್ದು, ಉಗ್ರಪ್ಪ ಅವರನ್ನು ಮುಂದಿಬಿಟ್ಡು ಈಗಿನಿಂದಲೇ ಚುನಾವಣೆ ಕಣ ರೆಡಿ ಮಾಡುತ್ತಿದೆ.
ಇದನ್ನೂ ಓದಿ: ಬಳ್ಳಾರಿ: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್; ಏನು?
ಬಳ್ಳಾರಿ ಲೋಕಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿದ್ದು ಪರಿಶಿಷ್ಟ ಪಂಗಡಕ್ಕೆ ಸೇರಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಅವರ ವಿರುದ್ಧ ಬಿಜೆಪಿ ವೈ ದೇವೇಂದ್ರಪ್ಪ ಅವರನ್ನು ಕಣಕ್ಕೆ ಇಳಿಸಿತ್ತು. ವೈ ದೇವೇಂದ್ರಪ್ಪ ಅವರು 54,475 ಮತಗಳ ಅಂತರದಿಂದ ಅವರು ವಿಎಸ್ ಉಗ್ರಪ್ಪ ಅವರನ್ನು ಸೋಲಿಸಿದ್ದರು. ಈ ಮೂಲಕ ಬಳ್ಳಾರಿ ಕೋಟೆಯಲ್ಲಿ ಮತ್ತೆ ಕೇಸರಿ ಬಾವುಟ ಹಾರುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



