ಮುಂಬೈ: ಕ್ಯಾನ್ಸರ್ನಿಂದ ಬಳಲುತ್ತಿರುವ ಮಹಾರಾಷ್ಟ್ರದ ಬಿಜೆಪಿ (BJP) ಶಾಸಕಿ ಮುಕ್ತಾ ತಿಲಕ್ (Mukta Tilak) ಅವರು ರಾಜ್ಯಸಭಾ ಚುನಾವಣೆಗೆ (Rajya Sabha Election) ಮತ ಚಲಾಯಿಸಲು ಆ್ಯಂಬುಲೆನ್ಸ್‌ನಲ್ಲಿ ಆಗಮಿಸಿದ್ದರು. ವಿಡಿಯೊದಲ್ಲಿ ಆಕೆಯನ್ನು ಸ್ಟ್ರೆಚರ್‌ನಲ್ಲಿ ಹೊರಗೆ ಕರೆತರುತ್ತಿರುವ ದೃಶ್ಯವನ್ನು ಕಾಣಬಹುದು. ಆಕೆಯ ಪತಿ ಶೈಲೇಶ್ ಶ್ರೀಕಾಂತ್ ತಿಲಕ್ ಅವರು ಮತ ಚಲಾಯಿಸುವಾಗ ಹಾಜರಿರಲು ಚುನಾವಣಾ ಆಯೋಗವು ಅವಕಾಶ ನೀಡಿದೆ. ತಿಲಕ್ ಅವರು ಪುಣೆಯ ಕಸ್ಬಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಮತ್ತೋರ್ವ ಬಿಜೆಪಿ ಶಾಸಕ ಲಕ್ಷ್ಮಣ್ ಜಗತಾಪ್ ಅವರನ್ನು ಇಂದು ಮತದಾನಕ್ಕಾಗಿ ಪಿಂಪ್ರಿ ಚಿಂಚ್‌ವಾಡ್‌ನಿಂದ ವಿಮಾನದ ಮೂಲಕ ಕರೆತರಲಾಗಿದೆ.
BJP MLA from Pune Mukta Tilak battling health issues is brought in an Ambulance to Vidhan Bhavan to vote for Rajya Sabha polls. Another BJP MLA Laxman Jagtap suffering from ailment has also been airlifted from Pimpri Chinchwad for voting today. pic.twitter.com/oEcoWAq2YJ
ಇದನ್ನೂ ಓದಿ— Ritvick Bhalekar (@ritvick_ab) June 10, 2022
ಮಹಾರಾಷ್ಟ್ರ: ರಾಜ್ಯಸಭೆಯ 6 ಸ್ಥಾನಗಳಿಗೆ ಚುರುಕಿನ ಮತದಾನ
ಮಧ್ಯಾಹ್ನ 12 ಗಂಟೆವರೆಗೆ ಶಿವಸೇನೆ-ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ-ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು, ಬಿಜೆಪಿ ಮತ್ತು ಅದರ ಬೆಂಬಲಿಗರನ್ನು ಒಳಗೊಂಡಿರುವ 288-ಬಲವಾದ ಸದನದಲ್ಲಿ 285 ಶಾಸಕರ ಪೈಕಿ ಸುಮಾರು 200 ಮಂದಿ ಮತ ಚಲಾಯಿಸಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 2:16 pm, Fri, 10 June 22