Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಬಿಜೆಪಿ ಸಂಸದನಾದ್ದರಿಂದ ನನ್ನ ಮೇಲೆ ಇಡಿ ದಾಳಿಯಾಗದು’; ಸಂಜಯ್ ಪಾಟೀಲ್ ವಿವಾದಾತ್ಮಕ ಹೇಳಿಕೆ

Sanjay Patil: ಮಹಾರಾಷ್ಟ್ರದ ಸಾಂಗ್ಲಿಯ ಬಿಜೆಪಿಯ ಲೋಕಸಭಾ ಸದಸ್ಯ ಸಂಜಯ್ ಪಾಟೀಲ್ ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ನಾನು ಬಿಜೆಪಿ ಸಂಸದನಾಗಿರುವುದರಿಂದ ಇಡಿ ನನ್ನ ಮೇಲೆ ದಾಳಿ ಮಾಡುವುದಿಲ್ಲ ಎಂಬ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

'ನಾನು ಬಿಜೆಪಿ ಸಂಸದನಾದ್ದರಿಂದ ನನ್ನ ಮೇಲೆ ಇಡಿ ದಾಳಿಯಾಗದು'; ಸಂಜಯ್ ಪಾಟೀಲ್ ವಿವಾದಾತ್ಮಕ ಹೇಳಿಕೆ
ಮಹಾರಾಷ್ಟ್ರ ಬಿಜೆಪಿ ಸಂಸದ ಸಂಜಯ್ ಪಾಟೀಲ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 25, 2021 | 2:55 PM

ಮುಂಬೈ: ನಾನು ಬಿಜೆಪಿ ಸಂಸದನಾದ ಕಾರಣ ನನ್ನ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸುವುದಿಲ್ಲ ಎಂದು ಮಹಾರಾಷ್ಟ್ರದ ಬಿಜೆಪಿ ಸಂಸದ ಸಂಜಯ್ ಪಾಟೀಲ್ (Sanjay Patil) ಹೇಳಿದ್ದಾರೆ. ನಾನು ಬಿಜೆಪಿಗೆ ಸೇರಿದ ನಂತರ ಯಾವ ತನಿಖೆಗಳ ಭಯವೂ ಇಲ್ಲದ ಕಾರಣ ನೆಮ್ಮದಿಯಾಗಿ, ಗೊರಕೆ ಹೊಡೆಯುತ್ತಾ ನಿದ್ರೆ ಮಾಡುತ್ತಿದ್ದೇನೆ ಎಂದು ಬಿಜೆಪಿ ನಾಯಕ ಹರ್ಷವರ್ಧನ್ ಪಾಟೀಲ್ (Harshavardhan Patil) ಹೇಳಿದ ಬೆನ್ನಲ್ಲೇ ಇನ್ನೋರ್ವ ಬಿಜೆಪಿ ನಾಯಕ ಸಂಜಯ್ ಪಾಟೀಲ್ ಅವರ ಈ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ.

ಮಹಾರಾಷ್ಟ್ರದ ಸಾಂಗ್ಲಿಯ ಬಿಜೆಪಿಯ ಲೋಕಸಭಾ ಸದಸ್ಯ ಸಂಜಯ್ ಪಾಟೀಲ್ ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ನಾನು ಬಿಜೆಪಿ ಸಂಸದನಾಗಿರುವುದರಿಂದ ಇಡಿ ನನ್ನ ಮೇಲೆ ದಾಳಿ ಮಾಡುವುದಿಲ್ಲ. 40 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಕಾರುಗಳನ್ನು ಖರೀದಿಸಲು ನಾವು ಸಾಲ ತೆಗೆದುಕೊಳ್ಳಬೇಕಾಗಿದೆ. ನಮ್ಮಲ್ಲಿರುವ ಸಾಲದ ಮೊತ್ತವನ್ನು ನೋಡಿದರೆ ಇಡಿ ಆಶ್ಚರ್ಯವಾಗುತ್ತದೆ ಎಂದು ಅವರು ತಮಾಷೆ ಮಾಡಿದ್ದಾರೆ.

ಎನ್​ಸಿಪಿ ಹಾಗೂ ಶಿವಸೇನೆ ಪಕ್ಷಗಳ ನಾಯಕರು ಬಿಜೆಪಿ ಸಿಬಿಐನಂತಹ ತನಿಖಾ ಸಂಸ್ಥೆಗಳನ್ನು ದುರುಪೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸುತ್ತಿವೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕರು ಈ ರೀತಿಯ ಹೇಳಿಕೆಗಳನ್ನು ನೀಡಿರುವುದು ಪಕ್ಷಕ್ಕೂ ಮುಜುಗರ ಉಂಟುಮಾಡಿದೆ. ಇತ್ತೀಚೆಗೆ ಮಹಾರಾಷ್ಟ್ರದ ಬಿಜೆಪಿ ನಾಯಕ ಹರ್ಷವರ್ಧನ್ ಪಾಟೀಲ್ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು. ಕೇಸರಿ ಪಕ್ಷದಲ್ಲಿ ನನ್ನ ವಿರುದ್ಧ ಇನ್ನು ಯಾವುದೇ ವಿಚಾರಣೆ, ಕೇಸ್​ಗಳು ಇರುವುದಿಲ್ಲ ಎಂದು ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದೇನೆ ಎಂದು ಹರ್ಷವರ್ಧನ್ ಪಾಟೀಲ್ ಹೇಳಿದ್ದರು.

ಪುಣೆ ಜಿಲ್ಲೆಯ ಇಂದಾಪುರದ ಮಾಜಿ ಶಾಸಕರಾಗಿದ್ದ ಹರ್ಷವರ್ಧನ್ ಪಾಟೀಲ್ ಅವರು 2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದರು. ಕೆಲವರು ನಾನು ಯಾಕೆ ಬಿಜೆಪಿಗೆ ಸೇರಿದೆ ಎಂದು ಕೇಳುತ್ತಾರೆ. ನಾನು ಯಾಕೆ ಕಾಂಗ್ರೆಸ್ ತೊರೆದೆ ಎಂದು ನಿಮ್ಮ ನಾಯಕರನ್ನೇ ಕೇಳಿ. ಬಿಜೆಪಿಯಲ್ಲಿ ಎಲ್ಲವೂ ಸುಲಭವಾಗಿ ಆಗುತ್ತದೆ. ಇಲ್ಲಿ ಯಾವುದೇ ವಿಚಾರಣೆ ಇಲ್ಲದ ಕಾರಣ ನಾನೀಗ ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದೇನೆ ಎಂದು ಹರ್ಷವರ್ಧನ್ ಪಾಟೀಲ್ ವ್ಯಂಗ್ಯದ ಧಾಟಿಯಲ್ಲಿ ಹೇಳಿದ್ದರು.

ಅವರ ಹೇಳಿಕೆಗಳು ವೈರಲ್ ಆದ ನಂತರ ಸ್ಪಷ್ಟನೆ ನೀಡಿದ್ದ ಹರ್ಷವರ್ಧನ್ ಪಾಟೀಲ್, ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದಿದ್ದರು.

ಇದನ್ನೂ ಓದಿ: ಕರಾವಳಿಯಲ್ಲಿ ಶುರುವಾಯ್ತು ಹೊಸ ವಿವಾದ; ದೇಗುಲದ ಆಭರಣ ಹೆಸರಲ್ಲಿ ಹೈಡ್ರಾಮಾ, ಆಡಳಿತ ಮಂಡಳಿ-ಬಾಳ್ತಿಲ ವಂಶಸ್ಥರ ನಡುವೆ ಕದನ

Viral Video: ಮನೆ ಎದುರು ಲಾಲೂಪ್ರಸಾದ್ ಯಾದವ್ ಪಾದ ತೊಳೆದ ಮಗ ತೇಜ್ ಪ್ರತಾಪ್