ಶಾಸಕ ಜಮೀರ್ ಹೇಳಿಕೆಗೆ ಸಚಿವ ಕೆಎಸ್ ಈಶ್ವರಪ್ಪ ವಾಗ್ದಾಳಿ
ಹಲವು ವರ್ಷಗಳಿಂದ ರಾಜ್ಯಗಳಲ್ಲಿ ಕಾಂಗ್ರೆಸ್ ನಿರ್ನಾಮ ಆಗಿದೆ. ಬೈಎಲೆಕ್ಷನ್ ಮುಗಿದ ಮೇಲೆ ಕಾಂಗ್ರೆಸ್ ಎರಡು ಹೋಳಾಗುತ್ತದೆ. ಒಂದು ಸಿದ್ದರಾಮಯ್ಯ, ಇನ್ನೊಂದು ಡಿಕೆಶಿಯವರದ್ದು. ಸಿದ್ದರಾಮಯ್ಯ, ಡಿಕೆಶಿಯವರು ಒಂದೇ ಪಕ್ಷದಲ್ಲಿ ಇರಲ್ಲ.
ವಿಜಯಪುರ: ಕುಮಾರಸ್ವಾಮಿ ಆರ್ಎಸ್ಎಸ್ ಚಡ್ಡಿ ಹಾಕಿರಬಹುದು ಎಂಬ ಶಾಸಕ ಜಮೀರ್ ಅಹ್ಮದ್ (Zameer Ahmed) ಹೇಳಿಕೆಗೆ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ವಾಗ್ದಾಳಿ ನಡೆಸಿದ್ದಾರೆ. ಶಾಸಕ ಜಮೀರ್ ಒಂದು ಪಕ್ಷದ ನಿಷ್ಠೆ ಇಲ್ಲದೇ ಇರುವವನು. ಮೊದಲು ಗಟ್ಟಿಯಾಗಿ ನಿಂತ್ಕೋ, ಆಮೇಲೆ ಯಾರ್ಯಾರು ಏನ್ ಹಾಕಿದ್ದಾರೆಂದು ನೊಡೋಣ. ಜಮೀರ್ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ರಾಜಕಾರಣದಲ್ಲಿ ಮಾತಿಗೂ ಕೂಡ ಲೆಕ್ಕ ಬೇಕು ಅಂತ ಸಿಂದಗಿಯ ಯಂಕಂಚಿಯಲ್ಲಿ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಹಲವು ವರ್ಷಗಳಿಂದ ರಾಜ್ಯಗಳಲ್ಲಿ ಕಾಂಗ್ರೆಸ್ ನಿರ್ನಾಮ ಆಗಿದೆ. ಬೈಎಲೆಕ್ಷನ್ ಮುಗಿದ ಮೇಲೆ ಕಾಂಗ್ರೆಸ್ ಎರಡು ಹೋಳಾಗುತ್ತದೆ. ಒಂದು ಸಿದ್ದರಾಮಯ್ಯ, ಇನ್ನೊಂದು ಡಿಕೆಶಿಯವರದ್ದು. ಸಿದ್ದರಾಮಯ್ಯ, ಡಿಕೆಶಿಯವರು ಒಂದೇ ಪಕ್ಷದಲ್ಲಿ ಇರಲ್ಲ. ಯಾವುದಾದರೂ ಒಂದು ಪ್ರಾದೇಶಿಕ ಪಕ್ಷದಲ್ಲಿ ಇರುತ್ತಾರೆ ಎಂದು ಈಶ್ವರಪ್ಪ ನುಡಿದರು.
ಬಿಜೆಪಿಗರಿಗೆ ಕಂಬಳಿ ಹಾಕಿಕೊಳ್ಳುವ ಯೋಗ್ಯತೆ ಇಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕನಕದಾಸರು, ಸಂಗೊಳ್ಳಿ ರಾಯಣ್ಣ, ಮಹಾಪುರುಷರು ಹಾಕಿದ್ರು. ಕಂಬಳಿ ಪವಿತ್ರವಾದ ಸಂಕೇತ, ಕುಂಕುಮ ಕೂಡ ಪವಿತ್ರ ಸಂಕೇತ. ಕಂಬಳಿಯನ್ನು ರಾಜಕಾರಣಕ್ಕೆ ತರಬೇಡಿ. ಕನಕದಾಸರ ಹೆಸರು ಹೇಳಲು ಸಿದ್ದರಾಮಯ್ಯಗೆ ಯೋಗ್ಯತೆ ಇಲ್ಲ ಅಂತ ಈಶ್ವರಪ್ಪ ಹೇಳಿದ್ದಾರೆ.
ನಾನು ಕುರುಬ ಹೌದು, ಅಲ್ಲ ಎಂಬುದು ತೀರ್ಮಾನ ಮಾಡುವುದು ರಾಜಕಾರಣ ವೇದಿಕೆಯಲ್ಲಿ ಅಲ್ಲ. ಜಾತಿ ಇರುವುದು ಸಂಸ್ಕಾರ ಮತ್ತು ವ್ಯವಸ್ಥೆಗಾಗಿ. ಕುರುಬ ರಾಜಕಾರಣಕ್ಕೆ ಬಳಸುವುದು ಅಲ್ಲ. ನಾನು ಕುರುಬ ಹೌದು. ಅದಕ್ಕಿಂತ ವಿಶೇಷವಾಗಿ ಹಿಂದುತ್ವವಾದಿ. ನೂರು ಪಕ್ಷಗಳು ಒಂದಾದರೂ ನಾವು ಗಟ್ಟಿಯಾಗಿ ಇರ್ತೀವಿ ಎಂದರು.
ಇದನ್ನೂ ಓದಿ
PM Narendra Modi: ವಾರಾಣಸಿಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ಗೆ ಪ್ರಧಾನಿ ಮೋದಿ ಚಾಲನೆ
Published On - 4:13 pm, Mon, 25 October 21