ಕೆಪಿಸಿಸಿ ನೂತನ ತಂಡ ರಚನೆ: 7 ಜಿಲ್ಲಾಧ್ಯಕ್ಷ, ರಾಜ್ಯ ಉಪಾಧ್ಯಕ್ಷರ ನೇಮಕ: ಇಲ್ಲಿದೆ ನೂತನ ಪದಾಧಿಕಾರಿಗಳ ಪಟ್ಟಿ

| Updated By: ರಮೇಶ್ ಬಿ. ಜವಳಗೇರಾ

Updated on: Apr 01, 2024 | 10:30 PM

ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ (ಕೆಪಿಸಿಸಿ) ಮಹತ್ವದ ಬದಲಾವಣೆ ಮಾಡಲಾಗಿದೆ. ಹಳೆಬರನ್ನು ಕೈಬಿಟ್ಟು ಹೊಸ-ಹೊಸ ಮುಖಗಳಿಗೆ ಕೆಪಿಸಿಸಿ ನೂತನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇನ್ನು ಎಐಸಿಸಿ ಪ್ರಕಟಿಸಿದ ಕೆಪಿಸಿಸಿ ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ ಯಾರೆಲ್ಲ ಹೆಸರಿದೆ ಎನ್ನುವ ವಿವರ ಇಲ್ಲಿದೆ.

ಕೆಪಿಸಿಸಿ ನೂತನ ತಂಡ ರಚನೆ:  7 ಜಿಲ್ಲಾಧ್ಯಕ್ಷ, ರಾಜ್ಯ ಉಪಾಧ್ಯಕ್ಷರ ನೇಮಕ: ಇಲ್ಲಿದೆ ನೂತನ ಪದಾಧಿಕಾರಿಗಳ ಪಟ್ಟಿ
ಕೆಪಿಸಿಸಿ ಕಚೇರಿ
Follow us on

ಬೆಂಗಳೂರು, (ಏಪ್ರಿಲ್ 01): ಲೋಕಸಭಾ ಚುನಾವಣೆಯಲ್ಲಿ (Loksabha Elections 2024) ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ (KPCC) ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಕೆಪಿಸಿಸಿ ನೂತನ ತಂಡದ ಪದಾಧಿಕಾರಿಗಳ ಪಟ್ಟಿಯನ್ನು ಇಂದು (ಏಪ್ರಿಲ್ 01) ಎಐಸಿಸಿ ಪ್ರಕಟಿಸಿದೆ. 43 ರಾಜ್ಯ ಉಪಾಧ್ಯಕ್ಷರು ಮತ್ತು 138 ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಹಾಗೇ ಇದರ ಜೊತೆಗೆ ಏಳು ಜಿಲ್ಲೆಗಳ ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗಿದೆ. ಇನ್ನು ಕೆಪಿಸಿಸಿ ಖಜಾಂಚಿಯಾಗಿ ವಿನಯ್ ಕಾರ್ತಿಕ್ ಅವರನ್ನೇ ಮುಂದುವರೆಸಲಾಗಿದೆ. ಮಾಧ್ಯಮ ಮತ್ತು ಸಂವಹನ ಮುಖ್ಯಸ್ಥರಾಗಿ ರಮೇಶ್ ಬಾಬು ನೇಮಕ ಮಾಡಿದ್ದರೆ, ವಿನಯ್ ಮತ್ತಿಕಟ್ಟಿ ಅವರನ್ನು ಸಾಮಾಜಿಕ‌ ಜಾಲತಾಣ ಸಹ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಕೆಪಿಸಿಸಿ ನೂತನ ತಂಡ ರಚನೆ ಮಾಡಲಾಗಿದ್ದು, 43 ರಾಜ್ಯ ಉಪಾಧ್ಯಕ್ಷರು,138 ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಇದರ ಜೊತೆಗೆ ಮಾಧ್ಯಮ ಮತ್ತು ಸಂವಹನ ಮುಖ್ಯಸ್ಥರಾಗಿ ರಮೇಶ್ ಬಾಬು ನೇಮಕವಾಗಿದ್ದರೆ, ಸಾಮಾಜಿಕ‌ ಜಾಲತಾಣ ಸಹ – ಮುಖ್ಯಸ್ಥರಾಗಿ ವಿನಯ್ ಮತ್ತಿಕಟ್ಟಿ ಮತ್ತು ನಿಕೇತ್ ರಾಜ್ ಮೌರ್ಯ ಅವರನ್ನು ನೇಮಿಸಲಾಗಿದೆ. ಇನ್ನು ಕೆಪಿಸಿಸಿ ಪ್ರಚಾರ ಸಮಿತಿ ಸಹ- ಮುಖ್ಯಸ್ಥರಾಗಿ ಪಿ.ಟಿ ಪರಮೇಶ್ವರ್ ನಾಯಕ್ ಅವರನ್ನ ನೇಮಕ ಮಾಡಲಾಗಿದೆ.

ಏಳು ಜಿಲ್ಲೆಗಳ ಜಿಲ್ಲಾಧ್ಯಕ್ಷರ ನೇಮಿಸಿದ ಎಐಸಿಸಿ

  1. ಬಳ್ಳಾರಿ ನಗರ- ಪ್ರಶಾಂತ್ ಅಲ್ಲಂ ವೀರಭದ್ರಪ್ಪ
  2. ಬೆಂಗಳೂರು ಪೂರ್ವ – ಕೆ. ನಂದಕುಮಾರ್
  3. ಹಾವೇರಿ – ಸಂಜೀವ್ ಕುಮಾರ್ ನೀರಲಂಗಿ
  4. ಕೊಪ್ಪಳ – ಅಮರೇಗೌಡ ಬಯ್ಯಾಪುರ
  5. ಉಡುಪಿ – ಕಿಶನ್ ಹೆಗ್ಡೆ
  6. ರಾಯಚೂರು – ಬಸವರಾಜ ಇಟಗಿ
  7. ಶಿವಮೊಗ್ಗ – ಪ್ರಸನ್ನ ಕುಮಾರ್

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:17 pm, Mon, 1 April 24